Home
ಸುದ್ದಿಜಾಲ

ಇಂದು 'ರಿಯಲ್‌ ಮಿ 5i' ಸ್ಮಾರ್ಟ್‌ಫೋನಿನ ಫಸ್ಟ್‌ ಸೇಲ್!..ಬೆಲೆ ಜಸ್ಟ್ 8,999ರೂ.!

ಜನಪ್ರಿಯ 'ರಿಯಲ್ ಮಿ' ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಇತ್ತೀಚಿಗೆ 'ರಿಯಲ್‌ ಮಿ 5i' ಸ್ಮಾರ್ಟ್‌ಫೋನ್ ಲಾಂಚ್ ಮಾಡಿದ್ದು, ಈ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಹೊಸ ಅಲೆ ಎಬ್ಬಿಸಿದೆ. ಇನ್ನು ಈ ಸ್ಮಾರ್ಟ್‌ಫೋನಿನ ಫಸ್ಟ್‌ ಸೇಲ್ ಇಂದು (ಜು.15) ಮಧ್ಯಾಹ್ನ 12ಕ್ಕೆ ಇ-ಕಾಮರ್ಸ್‌ ತಾಣದಲ್ಲಿ ಆರಂಭವಾಗಲಿದೆ. ಅತ್ಯುತ್ತಮ ಫೀಚರ್ಸ್‌ಗಳಿರುವ ಈ ಸ್ಮಾರ್ಟ್‌ಫೋನಿನ ಆರಂಭಿಕ ಬೆಲೆಯು ಕೇವಲ 8,999ರೂ. ಆಗಿದೆ.

ರಿಯಲ್‌ ಮಿ 5i

ಹೌದು, ರಿಯಲ್‌ ಮಿ ಸಂಸ್ಥೆಯು ಹೊಸ 'ರಿಯಲ್‌ ಮಿ 5i' ಸ್ಮಾರ್ಟ್‌ಫೋನಿನ ಮೊದಲ ಸೇಲ್ ಫ್ಲಿಪ್‌ಕಾರ್ಟ್‌ನಲ್ಲಿ ಇಂದು ಶುರುವಾಗಲಿದೆ. ಇನ್ನು ಈ ಫೋನ್ 5,000mAh ಬ್ಯಾಟರಿ, ಕ್ವಾಡ್‌ ಕ್ಯಾಮೆರಾ, ಬಿಗ್ ಡಿಸ್‌ಪ್ಲೇ, ಅಟ್ರ್ಯಾಕ್ಟಿವ್ ಫೀಚರ್ಸ್‌ಗಳಿಂದ ಗ್ರಾಹಕರನ್ನು ಸೆಳೆದಿದೆ. ಗ್ರಾಹಕರೇನಾದರೂ ಮೊಬಿಕ್ವಿಕ್ ಮೂಲಕ ಫೋನ್ ಖರೀದಿಸಿದರೇ ಶೇ.10% ಕ್ಯಾಶ್‌ಬ್ಯಾಕ್ ಲಭ್ಯವಾಗಲಿದೆ. ಹಾಗಾದರೇ ರಿಯಲ್‌ ಮಿ 5i' ಸ್ಮಾರ್ಟ್‌ಫೋನಿನ ಇತರೆ ಪ್ರಮುಖ ಫೀಚರ್ಸ್‌ಗಳೆನು ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಡಿಸ್‌ಪ್ಲೇ ರಚನೆ ಮತ್ತು ಡಿಸೈನ್

ಡಿಸ್‌ಪ್ಲೇ ರಚನೆ ಮತ್ತು ಡಿಸೈನ್

ರಿಯಲ್‌ ಮಿ 5i ಸ್ಮಾರ್ಟ್‌ಫೋನ್ 720x1600 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.5 ಇಂಚಿನ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಹೊಂದಿದೆ. ಡಿಸ್‌ಪ್ಲೇಯು 480 nits ಬ್ರೈಟ್ನೆಸ್‌ ಹೊಂದಿದ್ದು, ಮಿನಿ ವಾಟರ್ ಡ್ರಾಪ್ ನಾಚ್ ಮಾದರಿಯನ್ನು ಪಡೆದಿದೆ. ಸ್ಕ್ರೀನ್‌ನಿಂದ ಬಾಹ್ಯ ಬಾಡಿಯ ನಡುವಿನ ಅಂತರವು ಶೇ.89% ಆಗಿದೆ. ಗೊರಿಲ್ಲಾ 3 ಗ್ಲಾಸ್‌ ಒದಗಿಸಲಾಗಿದೆ. ಗೇಮಿಂಗ್ ಮತ್ತು ವಿಡಿಯೊ ವೀಕ್ಷಣೆಗೆ ಪೂರಕವಾಗಿದೆ.

ಪ್ರೊಸೆಸರ್ ಕಾರ್ಯ

ಪ್ರೊಸೆಸರ್ ಕಾರ್ಯ

ರಿಯಲ್‌ ಮಿ 5i ಸ್ಮಾರ್ಟ್‌ಫೋನ್ ಆಕ್ಟಾ ಕೋರ್ ಸ್ನ್ಯಾಪ್‌ಡ್ರಾಗನ್ 665 ಪ್ರೊಸೆಸರ್ ಅನ್ನು ಒಳಗೊಂಡಿದೆ. ಇದಕ್ಕೆ ಬೆಂಬಲವಾಗಿ ಆಂಡ್ರಾಯ್ಡ್ 9 ಪೈ ಹಾಗೂ ಕಲರ್ ಓಎಸ್‌ 6.1 ಕೆಲಸ ಮಾಡಡುತ್ತವೆ. ಇನ್ನು ಈ ಸ್ಮಾರ್ಟ್‌ಫೋನ್ 4GB RAM ಸಾಮರ್ಥ್ಯ ಮತ್ತು 64GB ಆಂತರಿಕ ಸ್ಟೋರೇಜ್‌ನ ಆಯ್ಕೆಯನ್ನು ಹೊಂದಿದೆ. ಎಸ್‌ಡಿ ಕಾರ್ಡ್‌ ಮೂಲಕ ಮೆಮೊರಿ ಹೆಚ್ಚಿಸಲು ಅವಕಾಶ ಇದೆ.

ಕ್ವಾಡ್ ಕ್ಯಾಮೆರಾ ಸ್ಪೆಷಲ್

ಕ್ವಾಡ್ ಕ್ಯಾಮೆರಾ ಸ್ಪೆಷಲ್

ರಿಯಲ್‌ ಮಿ 5i ಸ್ಮಾರ್ಟ್‌ಫೋನ್ ಕ್ವಾಡ್ ಕ್ಯಾಮೆರಾ ಸೆಟ್‌ಅಪ್ ಪಡೆದಿದ್ದು, ಮುಖ್ಯ ಕ್ಯಾಮೆರಾವು f/1.8 ಅಪರ್ಚರ್ನೊಂದಿಗೆ 12ಎಂಪಿ ಸೆನ್ಸಾರ್ ನಲ್ಲಿರಲಿದೆ. ಇನ್ನು ಸೆಕೆಂಡರಿ ಕ್ಯಾಮೆರಾವು f/2.25 ಅಪರ್ಚರ್ನೊಂದಿಗೆ 8ಎಂಪಿ ಸೆನ್ಸಾರ್‌ನ ಅಲ್ಟ್ರಾ ವೈಲ್ಡ್ ಆಂಗಲ್ ಲೆನ್ಸ್‌ ಹಾಗೂ ತೃತೀಯ ಮತ್ತು ನಾಲ್ಕನೇ ಕ್ಯಾಮೆರಾಗಳು 2ಎಂಪಿ ಸೆನ್ಸಾರ್‌ನ ಡೆಪ್ತ್ ಹಾಗೂ ಮೈಕ್ರೋ ಲೆನ್ಸ್‌ ಸಾಮರ್ಥ್ಯದಲ್ಲಿರಲಿವೆ. 13ಎಂಪಿಯ ಸೆಲ್ಫಿ ಕ್ಯಾಮೆರಾ ಇರಲಿದೆ.

ಬ್ಯಾಟರಿ ಲೈಫ್

ಬ್ಯಾಟರಿ ಲೈಫ್

ರಿಯಲ್‌ ಮಿ 5i ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿ ಬಾಳಿಕೆಯನ್ನು ಒಳಗೊಂಡಿದ್ದು, ಅದಕ್ಕೆ ಪೂರಕವಾಗಿ 10W ಚಾರ್ಜಿಂಗ್ ಸೌಲಭ್ಯವನ್ನು ಒದಗಿಸಲಾಗಿದೆ. ಇದರೊಂದಿಗೆ ವೈಫೈ-802.11ac, ಜಿಪಿಎಸ್‌, ಬ್ಲೂಟೂತ್, ಫಿಂಗರ್‌ಪ್ರಿಂಟ್ ಸೆನ್ಸಾರ್, ಆಂಬಿಯಂಟ್ ಲೈಟ್ ಸೆನ್ಸಾರ್, ಆಡಿಯೊ ಜಾಕ್ ನಂತಹ ಇತ್ತೀಚಿನ ಫೀಚರ್ಸ್‌ಗಳನ್ನು ಒಳಗೊಂಡಿರಲಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಸದ್ಯ ಭಾರತದಲ್ಲಿ ಬಿಡುಗಡೆ ಆಗಿರುವ 'ರಿಯಲ್ ಮಿ 5i' ಸ್ಮಾರ್ಟ್‌ಫೋನ್ 4GB RAM ಮತ್ತು 64GB ವೇರಿಯಂಟ್ ಆಯ್ಕೆಯನ್ನು ಹೊಂದಿದ್ದು, ಬೆಲೆಯು 8,999ರೂ. ಆಗಿದೆ. ಫಾರೆಸ್ಟ್ ಗ್ರೀನ್ ಮತ್ತು ಅಕ್ವಾ ಬ್ಲೂ ಬಣ್ಣಗಳ ಆಯ್ಕೆ ಹೊಂದಿರುವ ಈ ಫೋನ್ ಇಂದು ಫ್ಲಿಪ್‌ಕಾರ್ಟ್‌ನಲ್ಲಿ ಫಸ್ಟ್‌ ಸೇಲ್ ಆರಂಭಿಸಲಿದೆ.

Best Mobiles in India

English summary
The Realme 5i is priced at Rs 8,999. The first sale will take place on tomorrow, January 15 at 12:00PM. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+