'ರಿಯಲ್ ಮಿ 5i' ಮತ್ತು 'ರೆಡ್ಮಿ ನೋಟ್ 8': ಖರೀದಿಗೆ ಯಾವುದು ಬೆಸ್ಟ್?
ದೇಶಿಯ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ನೂತನ ಸ್ಮಾರ್ಟ್‌ಫೋನ್‌ಗಳು ಲಗ್ಗೆ ಇಡುತ್ತಲೇ ಇರುತ್ತವೆ. ಅವುಗಳಲ್ಲಿ ಕೆಲವು ಫೋನ್‌ಗಳು ಗ್ರಾಹಕರನ್ನು ಸೆಳೆಯುತ್ತವೆ ಮತ್ತೆ ಇನ್ನ ಕೆಲವು ಫೋನ್‌ಗಳು ಗ್ರಾಹಕರ ಕೈ ಸೇರುವುದೇ ಇಲ್ಲ. ಆದರೆ ಹೊಸ ಫೋನ್‌ಗಳು ಅತ್ಯುತ್ತಮ ಫೀಚರ್ಸ್‌ಗಳೊಂದಿಗೆ ಬಜೆಟ್ ಬೆಲೆಯ ಪ್ರೈಸ್‌ಟ್ಯಾಗ್ ಹೊಂದಿದ್ದರೇ ಬಹುಬೇಗನೆ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತವೆ. ಆ ಪೈಕಿ ಸ್ಯಾ,ಮ್‌ಸಂಗ್, ಶಿಯೋಮಿ ಮತ್ತು ರಿಯಲ್ ಮಿ ಯ ಕೆಲವು ಫೋನ್‌ಗಳು ಸದ್ಯ ಟ್ರೆಂಡಿಂಗ್‌ನಲ್ಲಿವೆ.

ಹೌದು, ಶಿಯೋಮಿ ಸಂಸ್ಥೆಯು ಇತ್ತೀಚಿಗೆ ರೆಡ್ಮಿ ನೋಟ್ 8 ಫೋನ್ ಬಿಡುಗಡೆ ಮಾಡಿದ್ದು, ಗ್ರಾಹಕರನ್ನು ಅಟ್ರ್ಯಾಕ್ಟ್ ಮಾಡಿದೆ. ಅದೇ ರೀತಿ ಈ ಹೊಸ ವರ್ಷಕ್ಕೆ ರಿಯಲ್ ಮಿ ಸಂಸ್ಥೆಯು ರಿಯಲ್ ಮಿ 5i ಫೋನ್ ಅನ್ನು ಲಾಂಚ್ ಮಾಡಿದೆ. ಇವೆರಡು ಬಜೆಟ್ ಬೆಲೆಯ ಫೋನ್‌ಗಳೆ ಆಗಿದ್ದು, ಗ್ರಾಹಕರಲ್ಲಿ ಯಾವುದು ಖರೀದಿಗೆ ಯೋಗ್ಯ ಎನ್ನುವ ಪ್ರಶ್ನೆ ಮೂಡುವಂತೆ ಮಾಡಿವೆ. ಹಾಗಾದರೇ ರೆಡ್ಮಿ ನೋಟ್ 8 ಮತ್ತು ರಿಯಲ್ ಮಿ 5i ಫೋನ್‌ಗಳ ಫೀಚರ್ಸ್‌ಗಳೆನು? ಯಾವುದು ಯೋಗ್ಯ ಎನ್ನುವುದನ್ನು ತಿಳಿಯಲು ಮುಂದೆ ಓದಿರಿ.

ಡಿಸ್‌ಪ್ಲೇ ಮತ್ತು ಡಿಸೈನ್
ಆಕರ್ಷಕ ನೋಟವನ್ನು ಪಡೆದಿರುವ ಶಿಯೋಮಿ ರೆಡ್ಮಿ ನೋಟ್ 8 ಸ್ಮಾರ್ಟ್‌ಫೋನ್ 6.39-ಇಂಚಿನ ಪೂರ್ಣ-ಎಚ್‌ಡಿ + 1080x2340 ಪಿಕ್ಸೆಲ್‌ಗಳು ಪರದೆ ಹೊಂದಿದೆ, 90 ಪ್ರತಿಶತದಷ್ಟು ಸ್ಕ್ರೀನ್-ಟು -ಬಾಡಿ ಅನುಪಾತ ಮತ್ತು 19.5: 9 ಆಕಾರ ಅನುಪಾತ. ಸ್ಮಾರ್ಟ್‌ಫೋನ್ ಮುಂಭಾಗ ಮತ್ತು ಹಿಂಭಾಗದಲ್ಲಿ ಗೊರಿಲ್ಲಾ ಗ್ಲಾಸ್ 5 ಅನ್ನು ಒಳಗೊಂಡಿದೆ ಮತ್ತು ವಾಟರ್ ಡ್ರಾಪ್ ಶೈಲಿಯ ನಾಚ್ ಅಪ್ ಫ್ರಂಟ್ ಅನ್ನು ಹೊಂದಿದೆ.
ಅದೇ ರೀತಿ ರಿಯಲ್ ಮಿ 5i ಸ್ಮಾರ್ಟ್‌ಫೋನ್ 720x1600 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.5 ಇಂಚಿನ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇ ಹೊಂದಿದೆ. ಡಿಸ್‌ಪ್ಲೇಯು 480 nits ಬ್ರೈಟ್ನೆಸ್ ಹೊಂದಿದ್ದು, ಮಿನಿ ವಾಟರ್ ಡ್ರಾಪ್ ನಾಚ್ ಮಾದರಿಯನ್ನು ಪಡೆದಿದೆ. ಸ್ಕ್ರೀನ್‌ನಿಂದ ಬಾಹ್ಯ ಬಾಡಿಯ ನಡುವಿನ ಅಂತರವು ಶೇ.89% ಆಗಿದೆ. ಗೊರಿಲ್ಲಾ 3 ಗ್ಲಾಸ್ ಒದಗಿಸಲಾಗಿದೆ. ಗೇಮಿಂಗ್ ಮತ್ತು ವಿಡಿಯೊ ವೀಕ್ಷಣೆಗೆ ಪೂರಕವಾಗಿದೆ.

ಪ್ರೊಸೆಸರ್ ವೇಗ ಹೇಗಿದೆ
ರೆಡ್‌ಮಿ ನೋಟ್ 8 ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 665 ಚಿಪ್‌ಸೆಟ್‌ನಿಂದ ಕಾರ್ಯನಿರ್ವಹಿಸುತ್ತದೆ. ಇದು 6 ಜಿಬಿ RAM ಮತ್ತು 128 ಜಿಬಿ ಆನ್‌ಬೋರ್ಡ್ ಸಂಗ್ರಹ ಪಡೆದಿದೆ. ಹಾಗೂ 4GB ಆಯ್ಕೆಯು ಸಿಗಲಿದೆ. ಪ್ರೊಸೆಸರ್ ವೇಗ ಉತ್ತಮವಿದ್ದು, ಅದಕ್ಕೆ ಹೆಚ್ಚಿನ ಬೆಂಬಲ ನೀಡಲು ಆಂಡ್ರಾಯ್ಡ್ 9 ಪೈ ಒದಗಿಸಲಾಗಿದೆ. ಈ ಫೋನ್ ಅಧಿಕ ಡೇಟಾ ಬೇಡುವ ಗೇಮ್ಸ್ ಹಾಗೂ ಮಲ್ಟಿಟಾಸ್ಕ್ ಕೆಲಸಗಳಿಗೆ ಹೆಚ್ಚಿನ ಸಪೋರ್ಟ್ ನೀಡುತ್ತದೆ.
ಇನ್ನು ರಿಯಲ್ ಮಿ 5i ಸ್ಮಾರ್ಟ್‌ಫೋನ್ ಆಕ್ಟಾ ಕೋರ್ ಸ್ನ್ಯಾಪ್‌ಡ್ರಾಗನ್ 665 ಪ್ರೊಸೆಸರ್ ಅನ್ನು ಒಳಗೊಂಡಿದೆ. ಇದಕ್ಕೆ ಬೆಂಬಲವಾಗಿ ಆಂಡ್ರಾಯ್ಡ್ 9 ಪೈ ಹಾಗೂ ಕಲರ್ ಓಎಸ್ 6.1 ಕೆಲಸ ಮಾಡಡುತ್ತವೆ. ಇನ್ನು ಈ ಸ್ಮಾರ್ಟ್‌ಫೋನ್ 4GB RAM ಸಾಮರ್ಥ್ಯ ಮತ್ತು 64GB ಆಂತರಿಕ ಸ್ಟೋರೇಜ್‌ನ ಆಯ್ಕೆಯನ್ನು ಹೊಂದಿದೆ. ಎಸ್‌ಡಿ ಕಾರ್ಡ್ ಮೂಲಕ ಮೆಮೊರಿ ಹೆಚ್ಚಿಸಲು ಅವಕಾಶ ಇದೆ.

ಕ್ಯಾಮೆರಾ ಹೇಗಿವೆ
ರೆಡ್ಮಿ ನೋಟ್ 8 ಫೋನಿನ ಹಿಂಬದಿಯಲ್ಲಿ ನಾಲ್ಕು ಕ್ಯಾಮೆರಾಗಳನ್ನು ನೀಡಲಾಗಿದೆ. ಇದರಲ್ಲಿ ಪ್ರಥಮ ಕ್ಯಾಮೆರಾ 48 ಮೆಗಾಪಿಕ್ಸೆಲ್ ಸೆನ್ಸಾರ್ ಪಡೆದಿದೆ. ಎರಡನೇಯದು 8 ಮೆಗಾಪಿಕ್ಸೆಲ್ ವೈಡ್-ಆಂಗಲ್ ಸೆನ್ಸಾರ್ ಹೊಂದಿದೆ. ಮತ್ತು ಉಳಿದೆರಡು ಕ್ಯಾಮೆರಾಗಳು 2 ಮೆಗಾಪಿಕ್ಸೆಲ್ ನಲ್ಲಿವೆ. ಇನ್ನು ಸೆಲ್ಫಿಗಾಗಿ 13 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಒದಗಿಸಲಾಗಿದೆ.
ಹಾಗೆಯೇ ರಿಯಲ್ ಮಿ 5i ಸ್ಮಾರ್ಟ್‌ಫೋನ್ ಕ್ವಾಡ್ ಕ್ಯಾಮೆರಾ ಸೆಟ್‌ಅಪ್ ಪಡೆದಿದ್ದು, ಮುಖ್ಯ ಕ್ಯಾಮೆರಾವು f/1.8 ಅಪರ್ಚರ್ನೊಂದಿಗೆ 12ಎಂಪಿ ಸೆನ್ಸಾರ್ ನಲ್ಲಿರಲಿದೆ. ಇನ್ನು ಸೆಕೆಂಡರಿ ಕ್ಯಾಮೆರಾವು f/2.25 ಅಪರ್ಚರ್ನೊಂದಿಗೆ 8ಎಂಪಿ ಸೆನ್ಸಾರ್‌ನ ಅಲ್ಟ್ರಾ ವೈಲ್ಡ್ ಆಂಗಲ್ ಲೆನ್ಸ್ ಹಾಗೂ ತೃತೀಯ ಮತ್ತು ನಾಲ್ಕನೇ ಕ್ಯಾಮೆರಾಗಳು 2ಎಂಪಿ ಸೆನ್ಸಾರ್‌ನ ಡೆಪ್ತ್ ಹಾಗೂ ಮೈಕ್ರೋ ಲೆನ್ಸ್ ಸಾಮರ್ಥ್ಯದಲ್ಲಿರಲಿವೆ. 13ಎಂಪಿಯ ಸೆಲ್ಫಿ ಕ್ಯಾಮೆರಾ ಇರಲಿದೆ.

ಬ್ಯಾಟರಿ ಶಕ್ತಿ
ಪ್ರಸ್ತುತ 4,000mAh ಸಾಮರ್ಥ್ಯದ ಬ್ಯಾಟರಿ ಸಾಮನ್ಯವಾಗಿದ್ದು, ರೆಡ್ಮಿ ನೋಟ್ 8 ಸ್ಮಾರ್ಟ್‌ಫೋನಲ್ಲಿಯೂ ಸಹ 4000mAh ಬ್ಯಾಟರಿ ಲೈಫ್ ನೀಡಲಾಗಿದೆ. ಮತ್ತು 18W ವೇಗದ ಚಾರ್ಜಿಂಗ್‌ಗೆ ಬೆಂಬಲವನ್ನು ಒದಗಿಸಿದ್ದು, ಬೇಗನೆ ಚಾರ್ಜ್ ಪಡೆದುಕೊಳ್ಳಲು ನೆರವಾಗಲಿದೆ. ಇದರೊಂದಿಗೆ ಯುಎಸ್ಬಿ ಟೈಪ್-ಸಿ ಪೋರ್ಟ್, 3.5 ಎಂಎಂ ಆಡಿಯೊ ಜ್ಯಾಕ್ ಮತ್ತು ಐಆರ್ ಬ್ಲಾಸ್ಟರ್ ಅನ್ನು ಸ್ಮಾರ್ಟ್‌ಪೋನ್ ಒಳಗೊಂಡಿದೆ.
ಇನ್ನು ರಿಯಲ್ ಮಿ 5i ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿ ಬಾಳಿಕೆಯನ್ನು ಒಳಗೊಂಡಿದ್ದು, ಅದಕ್ಕೆ ಪೂರಕವಾಗಿ 10W ಚಾರ್ಜಿಂಗ್ ಸೌಲಭ್ಯವನ್ನು ಒದಗಿಸಲಾಗಿದೆ. ಇದರೊಂದಿಗೆ ವೈಫೈ-802.11ac, ಜಿಪಿಎಸ್, ಬ್ಲೂಟೂತ್, ಫಿಂಗರ್‌ಪ್ರಿಂಟ್ ಸೆನ್ಸಾರ್, 4G VoLTE, ಆಂಬಿಯಂಟ್ ಲೈಟ್ ಸೆನ್ಸಾರ್, ಆಡಿಯೊ ಜಾಕ್ ನಂತಹ ಇತ್ತೀಚಿನ ಫೀಚರ್ಸ್‌ಗಳನ್ನು ಒಳಗೊಂಡಿರಲಿದೆ.

ಬೆಲೆ ಎಷ್ಟು
ಈ ಎರಡು ಫೋನ್‌ಗಳ ಬೆಲೆಯಲ್ಲಿ ಹೆಚ್ಚಿನ ವ್ಯತ್ಯಾಸವೆನು ಇಲ್ಲ. ರೆಡ್ಮಿ ನೋಟ್ 8 ಫೋನಿನ ಆರಂಭಿಕ 4GB RAM + 64GB ವೇರಿಯಂಟ್ ಬೆಲೆಯು 9,999ರೂ.ಗಳಾಗಿದೆ. ಅದೇ ರೀತಿ 'ರಿಯಲ್ ಮಿ 5i' ಸ್ಮಾರ್ಟ್‌ಫೋನ್ 4GB RAM + 64GB ವೇರಿಯಂಟ್ ಬೆಲೆಯು 8,999ರೂ. ಆಗಿದೆ.

ಕೊನೆಯ ಮಾತು
ರೆಡ್ಮಿ ನೋಟ್ 8 ಮತ್ತು ರಿಯಲ್ ಮಿ 5i ಈ ಎರಡು ಫೋನ್‌ಗಳು ಬಜೆಟ್ ಬೆಲೆಯಲ್ಲಿ ಕಾಣಿಸಿಕೊಂಡಿವೆ. ಆದರೆ ರೆಡ್ಮಿ ನೋಟ್ 8 ಫೋನ್ ಉತ್ತಮ ಅನಿಸುತ್ತದೆ. ಏಕೆಂದರೇ ಬ್ಯಾಟರಿ, ಡಿಸ್‌ಪ್ಲೇ, ಬ್ಯಾಕ್‌ಅಪ್ ಹೊರತುಪಡಿಸಿ ರೆಡ್ಮಿ ನೋಟ್ 8 ಫೋನ್ ರಿಯಲ್ ಮಿ 5i ಫೋನ್‌ಗಿಂತ ಅಧಿಕ ಫೀಚರ್ಸ್‌ಗಳನ್ನು ಪಡೆದಿದೆ. ಇನ್ನು ಬಿಗ್ ಡಿಸ್‌ಪ್ಲೇ, ಬಿಗ್ ಬ್ಯಾಟರಿ ಬ್ಯಾಕ್‌ಅಪ್ ಬಯಸೊ ಗ್ರಾಹಕರಿಗೆ ರಿಯಲ್ ಮಿ 5i ಫೋನ್ ಉತ್ತಮ ಅನಿಸುತ್ತದೆ.


Click it and Unblock the Notifications








