Home
ಸುದ್ದಿಜಾಲ

ಭಾರತದಲ್ಲಿ 'ರಿಯಲ್‌ ಮಿ 5i' ಫೋನ್ ಬಿಡುಗಡೆ!..ಬೆಲೆ 8,999ರೂ!

'ರಿಯಲ್‌ ಮಿ' ಕಂಪನಿಯ ಹೊಸ ಬಜೆಟ್ ಸ್ಮಾರ್ಟ್‌ಫೋನ್ ಎಂದೇ ಬಿಂಬಿತವಾಗಿರುವ 'ರಿಯಲ್‌ ಮಿ 5i' ಸ್ಮಾರ್ಟ್‌ಫೋನ್ ಇಂದು (ಜ.10 ರಂದು) ಭಾರತದಲ್ಲಿ ಬಿಡುಗಡೆ ಆಗಿದೆ. ಸಂಸ್ಥೆಯ ರಿಯಲ್‌ ಮಿ 5 ಸರಣಿ ಈಗಾಗಲೇ ಜನಪ್ರಿಯವಾಗಿದ್ದು, ಅದೇ ಸರಣಿಯಲ್ಲಿ ಈ ಸ್ಮಾರ್ಟ್‌ಫೋನ್‌ ಅನ್ನು ಲಾಂಚ್ ಮಾಡಿದೆ. ಇನ್ನು ಈ ಫೋನ್ 5,000mAh ಬ್ಯಾಟರಿ, ಕ್ವಾಡ್‌ ಕ್ಯಾಮೆರಾ ಫೀಚರ್ಸ್‌ಗಳಿಂದ ಅಟ್ರ್ಯಾಕ್ಟಿವ್ ಆಗಿ ಗುರುತಿಸಿಕೊಂಡಿದೆ.

ರಿಯಲ್‌ ಮಿ 5i

ಹೌದು, ರಿಯಲ್‌ ಮಿ ಸಂಸ್ಥೆಯು ಹೊಸದಾಗಿ 'ರಿಯಲ್‌ ಮಿ 5i' ಸ್ಮಾರ್ಟ್‌ಫೋನ್‌ ಅನ್ನು ದೇಶಿಯ ಮಾರುಕಟ್ಟೆಗೆ ಲಾಂಚ್ ಮಾಡಿದೆ. ಈ ಸ್ಮಾರ್ಟ್‌ಫೋನ್ ಫೀಚರ್ಸ್‌ಗಳು ಬಹುತೇಕ ರಿಯಲ್ ಮಿ 5 ಫೋನಿನಂತೆ ಇವೆ. 4GB RAM + 64GB ವೇರಿಯಂಟ್ ಆಯ್ಕೆಯನ್ನು ಹೊಂದಿದ್ದು, ಸ್ನ್ಯಾಪ್‌ಡ್ರಾಗನ್ 665 AIE ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇನ್ನು ಈ ಫೋನ್ ಫ್ಲಿಪ್‌ಕಾರ್ಟ್‌ ತಾಣದಲ್ಲಿ ಸೇಲ್‌ ಆರಂಭಿಸಲಿದ್ದು, ಆರಂಭಿಕ ಬೆಲೆಯು 8,999ರೂ. ಆಗಿದೆ. ಹಾಗಾದರೇ 'ರಿಯಲ್‌ ಮಿ 5i' ಸ್ಮಾರ್ಟ್‌ಫೋನಿನ ಇತರೆ ಪ್ರಮುಖ ಫೀಚರ್ಸ್‌ಗಳೆನು ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಡಿಸ್‌ಪ್ಲೇ ರಚನೆ ಮತ್ತು ಡಿಸೈನ್

ಡಿಸ್‌ಪ್ಲೇ ರಚನೆ ಮತ್ತು ಡಿಸೈನ್

ರಿಯಲ್‌ ಮಿ 5i ಸ್ಮಾರ್ಟ್‌ಫೋನ್ 720x1600 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.5 ಇಂಚಿನ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಹೊಂದಿದೆ. ಡಿಸ್‌ಪ್ಲೇಯು 480 nits ಬ್ರೈಟ್ನೆಸ್‌ ಹೊಂದಿದ್ದು, ಮಿನಿ ವಾಟರ್ ಡ್ರಾಪ್ ನಾಚ್ ಮಾದರಿಯನ್ನು ಪಡೆದಿದೆ. ಸ್ಕ್ರೀನ್‌ನಿಂದ ಬಾಹ್ಯ ಬಾಡಿಯ ನಡುವಿನ ಅಂತರವು ಶೇ.89% ಆಗಿದೆ. ಗೊರಿಲ್ಲಾ 3 ಗ್ಲಾಸ್‌ ಒದಗಿಸಲಾಗಿದೆ. ಗೇಮಿಂಗ್ ಮತ್ತು ವಿಡಿಯೊ ವೀಕ್ಷಣೆಗೆ ಪೂರಕವಾಗಿದೆ.

ಪ್ರೊಸೆಸರ್ ಕಾರ್ಯ

ಪ್ರೊಸೆಸರ್ ಕಾರ್ಯ

ರಿಯಲ್‌ ಮಿ 5i ಸ್ಮಾರ್ಟ್‌ಫೋನ್ ಆಕ್ಟಾ ಕೋರ್ ಸ್ನ್ಯಾಪ್‌ಡ್ರಾಗನ್ 665 ಪ್ರೊಸೆಸರ್ ಅನ್ನು ಒಳಗೊಂಡಿದೆ. ಇದಕ್ಕೆ ಬೆಂಬಲವಾಗಿ ಆಂಡ್ರಾಯ್ಡ್ 9 ಪೈ ಹಾಗೂ ಕಲರ್ ಓಎಸ್‌ 6.1 ಕೆಲಸ ಮಾಡಡುತ್ತವೆ. ಇನ್ನು ಈ ಸ್ಮಾರ್ಟ್‌ಫೋನ್ 4GB RAM ಸಾಮರ್ಥ್ಯ ಮತ್ತು 64GB ಆಂತರಿಕ ಸ್ಟೋರೇಜ್‌ನ ಆಯ್ಕೆಯನ್ನು ಹೊಂದಿದೆ. ಎಸ್‌ಡಿ ಕಾರ್ಡ್‌ ಮೂಲಕ ಮೆಮೊರಿ ಹೆಚ್ಚಿಸಲು ಅವಕಾಶ ಇದೆ.

ಕ್ವಾಡ್ ಕ್ಯಾಮೆರಾ ಸ್ಪೆಷಲ್

ಕ್ವಾಡ್ ಕ್ಯಾಮೆರಾ ಸ್ಪೆಷಲ್

ರಿಯಲ್‌ ಮಿ 5i ಸ್ಮಾರ್ಟ್‌ಫೋನ್ ಕ್ವಾಡ್ ಕ್ಯಾಮೆರಾ ಸೆಟ್‌ಅಪ್ ಪಡೆದಿದ್ದು, ಮುಖ್ಯ ಕ್ಯಾಮೆರಾವು f/1.8 ಅಪರ್ಚರ್ನೊಂದಿಗೆ 12ಎಂಪಿ ಸೆನ್ಸಾರ್ ನಲ್ಲಿರಲಿದೆ. ಇನ್ನು ಸೆಕೆಂಡರಿ ಕ್ಯಾಮೆರಾವು f/2.25 ಅಪರ್ಚರ್ನೊಂದಿಗೆ 8ಎಂಪಿ ಸೆನ್ಸಾರ್‌ನ ಅಲ್ಟ್ರಾ ವೈಲ್ಡ್ ಆಂಗಲ್ ಲೆನ್ಸ್‌ ಹಾಗೂ ತೃತೀಯ ಮತ್ತು ನಾಲ್ಕನೇ ಕ್ಯಾಮೆರಾಗಳು 2ಎಂಪಿ ಸೆನ್ಸಾರ್‌ನ ಡೆಪ್ತ್ ಹಾಗೂ ಮೈಕ್ರೋ ಲೆನ್ಸ್‌ ಸಾಮರ್ಥ್ಯದಲ್ಲಿರಲಿವೆ. 13ಎಂಪಿಯ ಸೆಲ್ಫಿ ಕ್ಯಾಮೆರಾ ಇರಲಿದೆ.

ಬ್ಯಾಟರಿ ಲೈಫ್

ಬ್ಯಾಟರಿ ಲೈಫ್

ರಿಯಲ್‌ ಮಿ 5i ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿ ಬಾಳಿಕೆಯನ್ನು ಒಳಗೊಂಡಿದ್ದು, ಅದಕ್ಕೆ ಪೂರಕವಾಗಿ 10W ಚಾರ್ಜಿಂಗ್ ಸೌಲಭ್ಯವನ್ನು ಒದಗಿಸಲಾಗಿದೆ. ಇದರೊಂದಿಗೆ ವೈಫೈ-802.11ac, ಜಿಪಿಎಸ್‌, ಬ್ಲೂಟೂತ್, ಫಿಂಗರ್‌ಪ್ರಿಂಟ್ ಸೆನ್ಸಾರ್, 4G VoLTE, ಆಂಬಿಯಂಟ್ ಲೈಟ್ ಸೆನ್ಸಾರ್, ಆಡಿಯೊ ಜಾಕ್ ನಂತಹ ಇತ್ತೀಚಿನ ಫೀಚರ್ಸ್‌ಗಳನ್ನು ಒಳಗೊಂಡಿರಲಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಸದ್ಯ ಭಾರತದಲ್ಲಿ ಬಿಡುಗಡೆ ಆಗಿರುವ 'ರಿಯಲ್ ಮಿ 5i' ಸ್ಮಾರ್ಟ್‌ಫೋನ್ 4GB RAM ಮತ್ತು 64GB ವೇರಿಯಂಟ್ ಆಯ್ಕೆಯನ್ನು ಹೊಂದಿದ್ದು, 8,999ರೂ. ಆಗಿದೆ. ಫಾರೆಸ್ಟ್ ಗ್ರೀನ್ ಮತ್ತು ಅಕ್ವಾ ಬ್ಲೂ ಬಣ್ಣಗಳ ಆಯ್ಕೆ ಹೊಂದಿರುವ ಈ ಫೋನ್ ಫ್ಲಿಪ್‌ಕಾರ್ಟ್‌ನಲ್ಲಿ ಸೇಲ್ ಆರಂಭಿಸಲಿದೆ.

Best Mobiles in India

English summary
Realme 5i has been launched in India, and its price starts from Rs 8,999. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+