Just In
- 7 hrs ago
ಜಪಾನ್ನಲ್ಲಿ ಸಿದ್ದವಾಗ್ತಿದೆ 60 ಅಡಿ ಎತ್ತರದ ಗುಂಡಮ್ ರೋಬೋಟ್!..ಹೇಗಿದೆ ಗೊತ್ತಾ?
- 8 hrs ago
ವಾಟ್ಸಾಪ್ ಡೌನ್ಲೋಡ್ ಕಡ್ಡಾಯವಲ್ಲ!..ದೆಹಲಿ ಹೈಕೋರ್ಟ್ ಸ್ಪಷ್ಟನೆ!
- 10 hrs ago
ಭಾರತದಲ್ಲಿ ಒನ್ಪ್ಲಸ್ ಸಂಸ್ಥೆಯಿಂದ ಹೊಸ ಇಯರ್ಬಡ್ಸ್ ಲಾಂಚ್! ವಿಶೇಷತೆ ಏನು?
- 12 hrs ago
ವಾಟ್ಸಾಪ್ನಲ್ಲಿ ವಾಯ್ಸ್ ಕಾಲ್ಗಳನ್ನು ರೆಕಾರ್ಡ್ ಮಾಡುವುದು ಹೇಗೆ ಗೊತ್ತಾ?
Don't Miss
- Education
Republic Day Speech And Essay Ideas: ಗಣರಾಜ್ಯೋತ್ಸವ ಪ್ರಯುಕ್ತ ಭಾಷಣ ಮತ್ತು ಪ್ರಬಂಧ ಬರೆಯಲು ಇಲ್ಲಿದೆ ಮಾಹಿತಿ
- News
Republic Day 2021 Live Updates : ರಾಜಪಥದಲ್ಲಿ 72ನೇ ಗಣತಂತ್ರದಿನ ಸಂಭ್ರಮ
- Automobiles
ಗಣರಾಜ್ಯೋತ್ಸವದ ಸಂಭ್ರಮಕ್ಕಾಗಿ ಮ್ಯಾಗ್ನೈಟ್ ಕಾರಿನೊಂದಿಗೆ ನಿಸ್ಸಾನ್ ಹೊಸ ಅಭಿಯಾನ ಘೋಷಣೆ
- Lifestyle
ಗಣರಾಜ್ಯೋತ್ಸವ ಪರೇಡ್ನಲ್ಲಿ ಇತಿಹಾಸ ಸೃಷ್ಟಿಸಲಿದ್ದಾರೆ ಸ್ವಾತಿ ರಾಥೋಡ್
- Movies
ದಿಗ್ಗಜ ಗಾಯಕ ಎಸ್ಪಿ ಬಾಲಸುಬ್ರಹ್ಮಣ್ಯಂಗೆ ಪದ್ಮವಿಭೂಷಣ ಪ್ರಶಸ್ತಿ
- Sports
ಐಎಸ್ಎಲ್: ಬಾಗನ್ ಸೋಲಿಸುವ ಆತ್ಮವಿಶ್ವಾಸದಲ್ಲಿ ನಾರ್ಥ್ ಈಸ್ಟ್
- Finance
ಎಲ್&ಟಿ ತ್ರೈಮಾಸಿಕ ಆದಾಯ 5% ಏರಿಕೆ: ದಾಖಲೆಯ 2,467 ಕೋಟಿ ರೂಪಾಯಿ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಬಹುನಿರೀಕ್ಷಿತ 'Realme 5i' ಫೋನ್ ಬಜೆಟ್ ಬೆಲೆಯಲ್ಲಿ ಬಿಡುಗಡೆ!
ಚೀನಾ ಮೂಲದ ಜನಪ್ರಿಯ 'ರಿಯಲ್ ಮಿ' ಕಂಪನಿಯ ಬಹುನಿರೀಕ್ಷಿತ 'ರಿಯಲ್ ಮಿ 5i' ಸ್ಮಾರ್ಟ್‌ಫೋನ್ ಇಂದು(ಜ.7ರಂದು) ಬಿಡುಗಡೆ ಆಗಿದೆ. ಬಜೆಟ್ ಬೆಲೆಯಲ್ಲಿ ಲಾಂಚ್ ಆಗುವುದಾಗಿ ಮುನ್ಸೂಚನೆ ನೀಡಿದ್ದ ಕಂಪನಿಯು, ನಿರೀಕ್ಷೆಯಂತೆ ಬಜೆಟ್ ಪ್ರೈಸ್‌ನಲ್ಲಿಯೇ ಮಾರುಕಟ್ಟೆಗೆ ಪರಿಚಯ ಮಾಡಿದೆ. ಅಂದಹಾಗೇ ಈ ಸ್ಮಾರ್ಟ್‌ಫೋನ್ 5,000mAh ಬ್ಯಾಟರಿ, ಕ್ವಾಡ್ ಕ್ಯಾಮೆರಾ ಫೀಚರ್ ಪ್ರಮುಖ ಹೈಲೈಟ್ಸ್ ಆಗಿವೆ.

ಹೌದು, ರಿಯಲ್ ಮಿ ಸಂಸ್ಥೆಯು ಹೊಸದಾಗಿ 'ರಿಯಲ್ ಮಿ 5i' ಸ್ಮಾರ್ಟ್‌ಫೋನ್ ಅನ್ನು ವಿಯಟ್ನಂ ನಲ್ಲಿ ಇಂದು ಲಾಂಚ್ ಮಾಡಿದೆ. ಹಾಗೆಯೇ ಈ ಫೋನ್ ಅನ್ನು ಇದೇ ಜನವರಿ 9ರಂದು ಭಾರತೀಯ ಮಾರುಕಟ್ಟೆಗೂ ಬಿಡುಗಡೆ ಮಾಡುವುದು ಬಹುತೇಕ ಖಚಿತವಾಗಿದೆ. ಈ ಫೋನ್ 32GB ಮತ್ತು 64GB ಆಂತರಿಕ ಸಂಗ್ರಹದ ಎರಡು ವೇರಿಯಂಟ್ ಆಯ್ಕೆಗಳನ್ನು ಒಳಗೊಂಡಿದೆ. ಅಗ್ಗದ ಬೆಲೆಯಲ್ಲಿ ಗ್ರಾಹಕರನ್ನು ಸೆಳೆಯುವ ಲಕ್ಷಣಗಳನ್ನು ಹೊರಹಾಕಿದೆ. ಇನ್ನು 'ರಿಯಲ್ ಮಿ 5i' ಸ್ಮಾರ್ಟ್‌ಫೋನಿನ ಇತರೆ ಪ್ರಮುಖ ಫೀಚರ್ಸ್‌ಗಳೆನು ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಡಿಸ್‌ಪ್ಲೇ ರಚನೆ ಮತ್ತು ಡಿಸೈನ್
ರಿಯಲ್ ಮಿ 5i ಸ್ಮಾರ್ಟ್‌ಫೋನ್ 720x1600 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.5 ಇಂಚಿನ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇ ಹೊಂದಿದೆ. ಡಿಸ್‌ಪ್ಲೇಯು 480 nits ಬ್ರೈಟ್ನೆಸ್ ಹೊಂದಿದ್ದು, ಮಿನಿ ವಾಟರ್ ಡ್ರಾಪ್ ನಾಚ್ ಮಾದರಿಯನ್ನು ಪಡೆದಿದೆ. ಸ್ಕ್ರೀನ್‌ನಿಂದ ಬಾಹ್ಯ ಬಾಡಿಯ ನಡುವಿನ ಅಂತರವು ಶೇ.89% ಆಗಿದೆ. ಗೊರಿಲ್ಲಾ 3 ಗ್ಲಾಸ್ ಒದಗಿಸಲಾಗಿದೆ. ಗೇಮಿಂಗ್ ಮತ್ತು ವಿಡಿಯೊ ವೀಕ್ಷಣೆಗೆ ಪೂರಕವಾಗಿದೆ.

ಪ್ರೊಸೆಸರ್ ಕಾರ್ಯ
ರಿಯಲ್ ಮಿ 5i ಸ್ಮಾರ್ಟ್‌ಫೋನ್ ಆಕ್ಟಾ ಕೋರ್ ಸ್ನ್ಯಾಪ್‌ಡ್ರಾಗನ್ 665 ಪ್ರೊಸೆಸರ್ ಅನ್ನು ಒಳಗೊಂಡಿದೆ. ಇದಕ್ಕೆ ಬೆಂಬಲವಾಗಿ ಆಂಡ್ರಾಯ್ಡ್ 9 ಪೈ ಹಾಗೂ ಕಲರ್ ಓಎಸ್ 6.1 ಕೆಲಸ ಮಾಡಡುತ್ತವೆ. ಇನ್ನು ಈ ಫೋನ್ 4GB RAM ಸಾಮರ್ಥ್ಯವನ್ನು ಪಡೆದಿದ್ದು, 32GB ಮತ್ತು 64GB ಆಂತರಿಕ ಸ್ಟೋರೇಜ್‌ನ ಎರಡು ಆಯ್ಕೆಯನ್ನು ಹೊಂದಿದೆ. ಎಸ್‌ಡಿ ಕಾರ್ಡ್ ಮೂಲಕ ಮೆಮೊರಿ ಹೆಚ್ಚಿಸಲು ಅವಕಾಶ ಇದೆ.

ಕ್ವಾಡ್ ಕ್ಯಾಮೆರಾ ಸ್ಪೆಷಲ್
ರಿಯಲ್ ಮಿ 5i ಸ್ಮಾರ್ಟ್‌ಫೋನ್ ಕ್ವಾಡ್ ಕ್ಯಾಮೆರಾ ಸೆಟ್‌ಅಪ್ ಪಡೆದಿದ್ದು, ಮುಖ್ಯ ಕ್ಯಾಮೆರಾವು f/1.8 ಅಪರ್ಚರ್ನೊಂದಿಗೆ 12ಎಂಪಿ ಸೆನ್ಸಾರ್ ನಲ್ಲಿರಲಿದೆ. ಇನ್ನು ಸೆಕೆಂಡರಿ ಕ್ಯಾಮೆರಾವು f/2.25 ಅಪರ್ಚರ್ನೊಂದಿಗೆ 8ಎಂಪಿ ಸೆನ್ಸಾರ್‌ನ ಅಲ್ಟ್ರಾ ವೈಲ್ಡ್ ಆಂಗಲ್ ಲೆನ್ಸ್ ಹಾಗೂ ತೃತೀಯ ಮತ್ತು ನಾಲ್ಕನೇ ಕ್ಯಾಮೆರಾಗಳು 2ಎಂಪಿ ಸೆನ್ಸಾರ್‌ನ ಡೆಪ್ತ್ ಹಾಗೂ ಮೈಕ್ರೋ ಲೆನ್ಸ್ ಸಾಮರ್ಥ್ಯದಲ್ಲಿರಲಿವೆ. 13ಎಂಪಿಯ ಸೆಲ್ಫಿ ಕ್ಯಾಮೆರಾ ಇರಲಿದೆ.

ಬ್ಯಾಟರಿ ಲೈಫ್
ರಿಯಲ್ ಮಿ 5i ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿ ಬಾಳಿಕೆಯನ್ನು ಒಳಗೊಂಡಿದ್ದು, ಅದಕ್ಕೆ ಪೂರಕವಾಗಿ 10W ಚಾರ್ಜಿಂಗ್ ಸೌಲಭ್ಯವನ್ನು ಒದಗಿಸಲಾಗಿದೆ. ಇದರೊಂದಿಗೆ ವೈಫೈ-802.11ac, ಜಿಪಿಎಸ್, ಬ್ಲೂಟೂತ್, ಫಿಂಗರ್‌ಪ್ರಿಂಟ್ ಸೆನ್ಸಾರ್, ಆಂಬಿಯಂಟ್ ಲೈಟ್ ಸೆನ್ಸಾರ್, ಆಡಿಯೊ ಜಾಕ್ ನಂತಹ ಇತ್ತೀಚಿನ ಫೀಚರ್ಸ್‌ಗಳನ್ನು ಒಳಗೊಂಡಿರಲಿದೆ.

ಬೆಲೆ ಮತ್ತು ಲಭ್ಯತೆ
ರಿಯಲ್ ಮಿ 5i ಸ್ಮಾರ್ಟ್‌ಫೋನ್ ಸದ್ಯ ವಿಯಟ್ನಂನಲ್ಲಿ ಬಿಡುಗಡೆ ಆಗಿದ್ದು, 3GB+32GB ವೇರಿಯಂಟ್ ಬೆಲೆಯು VND 3,690,000 (ಅಂದಾಜು 11,500ರೂ) ಹಾಗೂ 4GB RAM ಮತ್ತು 64GB ವೇರಿಯಂಟ್ ಬೆಲೆಯು VND 4,290,000 (ಅಂದಾಜು 13,500ರೂ) ಆಗಿದೆ. ಇನ್ನು ಇದೇ ಜನವರಿ 9ರಂದು ಭಾರತಕ್ಕೆ ಈ ಸ್ಮಾರ್ಟ್‌ಫೋನ್ ಎಂಟ್ರಿ ಕೊಡುವುದು ಬಹುತೇಕ ಗ್ಯಾರಂಟಿ ಆಗಿದೆ.
-
92,999
-
17,999
-
39,999
-
29,400
-
38,990
-
29,999
-
16,999
-
23,999
-
18,170
-
21,900
-
14,999
-
17,999
-
42,099
-
16,999
-
23,999
-
29,495
-
18,580
-
64,900
-
34,980
-
45,900
-
17,999
-
54,153
-
7,000
-
13,999
-
38,999
-
29,999
-
20,599
-
43,250
-
32,440
-
16,190