Realme 5i India: ಬಜೆಟ್ ಬೆಲೆಯಲ್ಲಿ ಬಿಡುಗಡೆಗೆ ಸಿದ್ಧ!..ನಾಲ್ಕು ಕ್ಯಾಮೆರಾ!
ಚೀನಾ ಮೂಲದ ರಿಯಲ್ ಮಿ ಸ್ಮಾರ್ಟ್‌ಫೋನ್ ಕಂಪನಿಯು ಇತ್ತೀಚಿಗೆ ಹಲವು ಅತ್ಯುತ್ತಮ ಫೋನ್‌ಗಳನ್ನು ಪರಿಚಯಿಸಿದ್ದು, ಅವುಗಳಲ್ಲಿ 'ರಿಯಲ್ ಮಿ 5' ಫೋನ್ ಸರಣಿ ಅತೀ ಹೆಚ್ಚು ಟ್ರೆಂಡ್ ಸೃಷ್ಠಿಸೊವಲ್ಲಿ ಯಶಸ್ವಿ ಆಗಿದೆ. ಅದೇ ಸರಣಿಯಲ್ಲಿ ಮತ್ತೊಂದು ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲು ಸಂಸ್ಥೆಯು ಸಜ್ಜಾಗಿದ್ದು, ಹೊಸ ಫೋನ್ ಅನ್ನು 'ರಿಯಲ್ ಮಿ 5i' ಎಂದು ಕರೆದಿದೆ. ಈ ಫೋನ್ ಹಲವು ಕಾರಣಗಳಿಂದಾಗಿ ಸದ್ದು ಮಾಡುತ್ತಿದೆ.

ಹೌದು, ರಿಯಲ್ ಮಿ ಸಂಸ್ಥೆಯು ಹೊಸದಾಗಿ 'ರಿಯಲ್ ಮಿ 5i' ಫೋನ್ ಬಿಡುಗಡೆ ಮಾಡಲು ಸಜ್ಜಾಗಿದ್ದು, ಸಂಸ್ಥೆಯು ಇದೇ ಡಿಸೆಂಬರ್ 9 ರಂದು (12:30pm) ಫ್ಲಿಪ್‌ಕಾರ್ಟ್ ಮೂಲಕ ಅಧಿಕೃತವಾಗಿ ಮಾರುಕಟ್ಟೆಗೆ ಪರಿಚಯಿಸಲಿದೆ. ಇನ್ನು ಈ ಫೋನ್ ಸ್ನ್ಯಾಪ್‌ಡ್ರಾಗನ್ 665 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, ಕ್ವಾಡ್ ಕ್ಯಾಮೆರಾ ಆಯ್ಕೆಯನ್ನು ಪಡೆದಿದೆ. ಫೋನ್ ದೀರ್ಘಬಾಳಿಕೆಗಾಗಿ 5,000mAh ಬ್ಯಾಟರಿ ಒದಗಿಸಿದ್ದಾರೆ. ಹಾಗಾದರೇ ಬರಲಿರುವ ರಿಯಲ್ ಮಿ 5i ಸ್ಮಾರ್ಟ್‌ಫೋನ್ ಫೀಚರ್ಸ್‌ಗಳೆನು ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಡಿಸ್‌ಪ್ಲೇ ಹೇಗಿರಲಿದೆ
ರಿಯಲ್ ಮಿ 5i ಸ್ಮಾರ್ಟ್‌ಫೋನ್ 720x1600 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯೆದೊಂದಿಗೆ 6.5 ಇಂಚಿನ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇ ಹೊಂದಿರಲಿದೆ. ಡಿಸ್‌ಪ್ಲೇಯು ಮಿನಿ ವಾಟರ್ ಡ್ರಾಪ್ ನಾಚ್ ಮಾದರಿಯನ್ನು ಪಡೆದಿದ್ದು, ಗೇಮಿಂಗ್ ಮತ್ತು ವಿಡಿಯೊ ವೀಕ್ಷಣೆಗೆ ಪೂರಕವಾಗಿ ಇರಲಿದೆ.

ಪ್ರೊಸೆಸರ್ ಹೇಗೆ
ರಿಯಲ್ ಮಿ 5i ಸ್ಮಾರ್ಟ್‌ಫೋನ್ ಆಕ್ಟಾ ಕೋರ್ ಸ್ನ್ಯಾಪ್‌ಡ್ರಾಗನ್ 665 ಪ್ರೊಸೆಸರ್‌ನಲ್ಲಿ ಕಾರ್ಯ ನಿರ್ವಹಿಸಲಿದೆ. ಇದಕ್ಕೆ ಬೆಂಬಲವಾಗಿ ಆಂಡ್ರಾಯ್ಡ್ 9 ಪೈ ಹಾಗೂ ಕಲರ್ ಓಎಸ್ 6.1 ಕೆಲಸ ಮಾಡಲಿವೆ. ಇನ್ನು ಈ ಫೋನ್ 4GB RAM ಮತ್ತು 64GB ಆಂತರಿಕ ಸ್ಟೋರೇಜ್ ಆಯ್ಕೆಯನ್ನು ಹೊಂದಿರಲಿದೆ.

ಕ್ವಾಡ್ ಕ್ಯಾಮೆರಾ
ರಿಯಲ್ ಮಿ 5i ಸ್ಮಾರ್ಟ್‌ಫೋನ್ ಕ್ವಾಡ್ ಕ್ಯಾಮೆರಾ ಸೆಟ್‌ಅಪ್ ಹೊಂದಿರಲಿದ್ದು, ಮುಖ್ಯ ಕ್ಯಾಮೆರಾವು 12ಎಂಪಿ ಸೆನ್ಸಾರ್ ನಲ್ಲಿರಲಿದೆ. ಇನ್ನು ಸೆಕೆಂಡರಿ ಕ್ಯಾಮೆರಾವು 8ಎಂಪಿ ಸೆನ್ಸಾರ್‌ನ ಅಲ್ಟ್ರಾ ವೈಲ್ಡ್ ಆಂಗಲ್ ಲೆನ್ಸ್ ಹಾಗೂ ತೃತೀಯ ಮತ್ತು ನಾಲ್ಕನೇ ಕ್ಯಾಮೆರಾಗಳು 2ಎಂಪಿ ಸೆನ್ಸಾರ್‌ನ ಡೆಪ್ತ್ ಹಾಗೂ ಮೈಕ್ರೋ ಲೆನ್ಸ್ ಸಾಮರ್ಥ್ಯದಲ್ಲಿರಲಿವೆ. 13ಎಂಪಿಯ ಸೆಲ್ಫಿ ಕ್ಯಾಮೆರಾ ಇರಲಿದೆ.

ಬ್ಯಾಟರಿ ಲೈಫ್
ರಿಯಲ್ ಮಿ 5i ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿ ಬಾಳಿಕೆಯನ್ನು ಒಳಗೊಂಡಿದ್ದು, ಅದಕ್ಕೆ ಪೂರಕ ಚಾರ್ಜಿಂಗ್ ಸೌಲಭ್ಯವನ್ನು ಪರಿಚಯಿಸಲಿದೆ. ಇದರೊಂದಿಗೆ ವೈಫೈ, ಬ್ಲೂಟೂತ್, ಫಿಂಗರ್‌ಪ್ರಿಂಟ್, ಆಡಿಯೊ ಜಾಕ್ ನಂತಹ ಇತ್ತೀಚಿನ ಫೀಚರ್ಸ್‌ಗಳನ್ನು ಒಳಗೊಂಡಿರಲಿದೆ.

ಬೆಲೆ ಎಷ್ಟು
ರಿಯಲ್ ಮಿ 5i ಸ್ಮಾರ್ಟ್‌ಫೋನ್ 4GB RAM ಮತ್ತು 64GB ವೇರಿಯಂಟ್ ಬೆಲೆಯು ಸುಮಾರು 13,200ರೂ.ಗಳು ಎಂದು ಅಂದಾಜಿಸಲಾಗಿದೆ. ಈ ಸ್ಮಾರ್ಟ್‌ಫೋನ್ ಇದೇ ಜನವರಿ 9 ರಂದು ಇ-ಕಾಮರ್ಸ್ ದಿಗ್ಗಜ ಫ್ಲಿಪ್ ತಾಣದಲ್ಲಿ ಲಾಂಚ್ ಕಾರ್ಯಕ್ರಮ ನಡೆಯಲಿದೆ.


Click it and Unblock the Notifications








