Home
ಸುದ್ದಿಜಾಲ

9,999ರೂ.ಗೆ ಲಾಂಚ್‌ ಆಯ್ತು 'ರಿಯಲ್‌ ಮಿ 5S' ಫೋನ್!.ವಿಶೇಷತೆ ಏನು ಗೊತ್ತಾ?

ಚೀನಾ ಮೂಲದ 'ರಿಯಲ್‌ ಮಿ' ಕಂಪನಿಯು ಇತ್ತೀಚಿಗೆ ದೇಶಿಯ ಮೊಬೈಲ್‌ ಮಾರುಕಟ್ಟೆಯಲ್ಲಿ ಬಜೆಟ್‌ ಬೆಲೆಯಲ್ಲಿ 'ರಿಯಲ್‌ ಮಿ 5' ಸ್ಮಾರ್ಟ್‌ಫೋನ್ ಸರಣಿ ಬಿಡುಗಡೆ ಮಾಡಿ ಭಾರಿ ಸೌಂಡ್‌ ಮಾಡಿದೆ. ಇದೀಗ ಕಂಪನಿಯು 'ರಿಯಲ್‌ ಮಿ 5S' ಹೆಸರಿನ ಮತ್ತೊಂದು ಬಜೆಟ್‌ ಸ್ಮಾರ್ಟ್‌ಫೋನ್‌ ಅನ್ನು ಇಂದು ಭಾರತದಲ್ಲಿ ಅಧಿಕೃತವಾಗಿ ಲಾಂಚ್ ಮಾಡಿದ್ದು, ಈ ಫೋನ್ ಗ್ರಾಹಕರನ್ನು ಆಯಸ್ಕಾಂತದಂತೆ ಸೆಳೆಯುವ ಫೀಚರ್ಸ್‌ಗಳನ್ನು ಒಳಗೊಂಡಿದೆ.

ರಿಯಲ್‌ ಮಿ 5S

ಹೌದು, ರಿಯಲ್‌ ಮಿ ಸಂಸ್ಥೆಯು 'ರಿಯಲ್‌ ಮಿ 5S' ಸ್ಮಾರ್ಟ್‌ಫೋನ್‌ ಅನ್ನು ಭಾರತದ ಮಾರುಕಟ್ಟೆಗೆ ಇಂದು (ನವೆಂಬರ್ 20) ಬಿಡುಗಡೆ ಮಾಡಿದೆ. 5,000mAh ಬ್ಯಾಟರಿ ಪವರ್‌, ಸ್ನ್ಯಾಪ್‌ಡ್ರಾಗನ್ 665 ಪ್ರೊಸೆಸರ್‌ ಮತ್ತು 48ಎಂಪಿ ರಿಯರ್‌ ಕ್ಯಾಮೆರಾ ಫೀಚರ್ಸ್‌ಗಳು ಈ ಸ್ಮಾರ್ಟ್‌ಫೋನಿನ ಪ್ರಮುಖ ಹೈಲೈಟ್ಸ್‌ಗಳಾಗಿವೆ. ಹಾಗೆಯೇ 4GB RAM + 64GB ಮತ್ತು 4GB RAM + 128GB ವೇರಿಯಂಟ್ ಆಯ್ಕೆಗಳನ್ನು ಹೊಂದಿದೆ. ಆರಂಭಿಕ ಬೆಲೆಯು 9,999ರೂ.ಗಳಾಗಿದೆ.

ಸ್ಮಾರ್ಟ್‌ಫೋನ್

ಇನ್ನು ಈ ಸ್ಮಾರ್ಟ್‌ಫೋನ್ ಇದೇ ನವೆಂಬರ್ 29ರಂದು ಫ್ಲಿಪ್‌ಕಾರ್ಟ್‌ ಮತ್ತು ರಿಯಲ್‌ ಮಿ ವೆಬ್‌ ತಾಣಗಳಲ್ಲಿ ಮೊದಲ ಸೇಲ್ ಶುರುಮಾಡಲಿದೆ. ಕ್ರಿಸ್ಟಲ್ ಬ್ಲೂ, ಕ್ರಿಸ್ಟಲ್ ಪರ್ಪಲ್ ಮತ್ತು ಕ್ರಿಸ್ಟಲ್ ರೆಡ್‌ ಬಣ್ಣಗಳ ಆಯ್ಕೆಗಳನ್ನು ಹೊಂದಿದೆ. ಹಾಗಾದರೇ ರಿಯಲ್‌ ಮಿ ಸಂಸ್ಥೆಯ 'ರಿಯಲ್‌ ಮಿ 5S' ಸ್ಮಾರ್ಟ್‌ಫೋನ್ ಇತರೆ ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಡಿಸ್‌ಪ್ಲೇ ಡಿಸೈನ್

ಡಿಸ್‌ಪ್ಲೇ ಡಿಸೈನ್

'ರಿಯಲ್‌ ಮಿ 5S' ಸ್ಮಾರ್ಟ್‌ಫೋನ್‌ 720 x 1600 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.5 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಯನ್ನು ಹೊಂದಿದೆ. ಡಿಸ್‌ಪ್ಲೇಯು ಗೊರಿಲ್ಲಾ ಗ್ಲಾಸ್‌ 3+ ರಕ್ಷಣೆಯನ್ನು ಪಡೆದಿದೆ. ಡಿಸ್‌ಪ್ಲೇಯಿಂದ ಬಾಹ್ಯ ಬಾಡಿಯ ನಡುವಿನ ಅನುಪಾತವು 89% ಪರ್ಸೆಂಟ್ ಆಗಿದ್ದು, ಡಿಸ್‌ಪ್ಲೇಯ ಪ್ರಖರತೆಯು ಉತ್ತಮವಾಗಿದೆ. ವಿಡಿಯೊ ವೀಕ್ಷಣೆಗೆ ಮತ್ತು ಗೇಮ್ಸ್‌ಗೆ ಬೆಸ್ಟ್‌ ಅನಿಸುವಂತಿದೆ.

ಪ್ರೊಸೆಸರ್‌ ಸಾಮರ್ಥ್ಯ

ಪ್ರೊಸೆಸರ್‌ ಸಾಮರ್ಥ್ಯ

'ರಿಯಲ್‌ ಮಿ 5S' ಸ್ಮಾರ್ಟ್‌ಫೋನ್‌ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 665 ಪ್ರೊಸೆಸರ್‌ ಸಾಮರ್ಥ್ಯವನ್ನು ಪಡೆದಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 9 ಪೈ ಓಎಸ್‌ ಸಪೋರ್ಟ್‌ ನೀಡಲಾಗಿದೆ. ಹಾಗೂ ColorOS 6.1 ಬೆಂಬಲ ಸಹ ಇದೆ. ಹಾಗೆಯೇ ಈ ಸ್ಮಾರ್ಟ್‌ಫೋನ್ 4GB RAM + 64GB ಮತ್ತು 4GB RAM + 128GB ವೇರಿಯಂಟ್ ಸಾಮರ್ಥ್ಯದ ಎರಡು ಆಯ್ಕೆಗಳನ್ನು ಹೊಂದಿದೆ.

ಕ್ಯಾಮೆರಾ ಸ್ಪೆಷಲ್‌

ಕ್ಯಾಮೆರಾ ಸ್ಪೆಷಲ್‌

'ರಿಯಲ್‌ ಮಿ 5S' ಸ್ಮಾರ್ಟ್‌ಫೋನ್‌ ಕ್ವಾಡ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದ್ದು, ಮುಖ್ಯ ಕ್ಯಾಮೆರಾವು 48ಎಂಪಿ ಸೆನ್ಸಾರ್‌ ಸಾಮರ್ಥ್ಯದಲ್ಲಿದೆ. ಸೆಕೆಂಡರಿ ಕ್ಯಾಮೆರಾವು f/2.5 ಅಪರ್ಚರ್ನೊಂದಿಗೆ 8ಎಂಪಿ ಸೆನ್ಸಾರ್‌ನಲ್ಲಿದ್ದು, ತೃತೀಯ ಕ್ಯಾಮೆರಾ ಮತ್ತು ನಾಲ್ಕನೇ ಕ್ಯಾಮೆರಾಗಳು 2ಎಂಪಿಯ ಸೆನ್ಸಾರ್‌ ಪಡೆದಿದೆ. ಹಾಗೆಯೇ ಸೆಲ್ಫಿ ಕ್ಯಾಮೆರಾವು 13ಎಂಪಿ ಸೆನ್ಸಾರ್‌ ಸಾಮರ್ಥ್ಯದಲ್ಲಿದ್ದು, ಎಚ್‌ಆರ್‌ಡಿ, AI ಬ್ಯುಟಿಫಿಕೇಶನ್‌ನಂತಹ ಫೀಚರ್ಸ್‌ಗಳನ್ನು ಒಳಗೊಂಡಿದೆ.

ಬ್ಯಾಟರಿ ಪವರ್

ಬ್ಯಾಟರಿ ಪವರ್

'ರಿಯಲ್‌ ಮಿ 5S' ಸ್ಮಾರ್ಟ್‌ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿ ಬಾಳಿಕೆಯನ್ನು ಸಾಮರ್ಥ್ಯ ಪಡೆದಿದ್ದು, ಇದರೊಂದಿಗೆ ಅತ್ಯುತ್ತಮ ಚಾರ್ಜಿಂಗ್ ಸೌಲಭ್ಯವನ್ನು ನೀಡಲಾಗಿದೆ. ಈ ಪೋನ್ 12ಗಂಟೆಗಳ ವಿಡಿಯೊ ಪ್ಲೇಬ್ಯಾಕ್‌ ಮತ್ತು 718 ಗಂಟೆಗಳ ಬ್ಯಾಟರಿ ಸ್ಟ್ಯಾಂಡ್‌ಬೈ ಸಾಮರ್ಥ್ಯವನ್ನು ಪಡೆದಿದೆ ಎಂದು ಕಂಪನಿಯು ಹೇಳಿಕೊಂಡಿದೆ. ಹಾಗೆಯೇ ಫಿಂಗರ್‌ಪ್ರಿಂಟ್ ಸೆನ್ಸಾರ್, ಕಂಪಾಸ್‌, ಬ್ಲೂಟೂತ್, ವೈಫೈ, ಜಿಎಸ್‌ಪಿ, ಸೇರಿದಂತೆ ಅಗತ್ಯ ಫೀಚರ್ಸ್‌ಗಳನ್ನು ಹೊಂದಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಭಾರತದಲ್ಲಿ 'ರಿಯಲ್‌ ಮಿ 5S' ಸ್ಮಾರ್ಟ್‌ಫೋನ್ ಎರಡು ವೇರಿಯಂಟ್‌ಗಳಲ್ಲಿ ಬಿಡುಗಡೆ ಆಗಿದೆ. ಆರಂಭಿಕ 4GB RAM + 64GB ಸ್ಟೋರೇಜ್ ವೇರಿಯಂಟ್‌ ಬೆಲೆಯು 9,999ರೂ.ಗಳಾಗಿದ್ದು, ಹಾಗೂ 4GB RAM + 256GB ವೇರಿಯಂಟ್‌ ಬೆಲೆಯು 10,999.ಗಳಾಗಿದೆ. ಇನ್ನು ಈ ಫೋನ್ ಇದೇ ನವೆಂಬರ್ 29ರಂದು ಫ್ಲಿಪ್‌ಕಾರ್ಟ್‌ ಮತ್ತು ಕಂಪನಿಯ ತಾಣದಲ್ಲಿ ಲಭ್ಯವಾಗಲಿ ಮೊದಲ ಸೇಲ್ ನಡೆಸಲಿದೆ.

Best Mobiles in India

English summary
The Realme 5s has been launched in India. Realme 5s is the 48-megapixel quad rear camera setup. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+