ಜುಲೈ 24ರಂದು ರಿಯಲ್ ಮಿ 6i ಸ್ಮಾರ್ಟ್‌ಫೋನ್ ಬಿಡುಗಡೆ ಪಕ್ಕಾ!
ರಿಯಲ್ ಮಿ ಕಂಪನಿಯು ಈಗಾಗಲೇ ಹಲವು ಶ್ರೇಣಿಯಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿದೆ. ಅವುಗಳಲ್ಲಿ ಬಹುತೇಕ ಫೋನ್‌ಗಳು ಬಜೆಟ್ ದರದ ರೇಟ್ ಅನ್ನು ಪಡೆದಿದೆ. ಸಂಸ್ಥೆಯು ಇದೀಗ ರಿಯಲ್ ಮಿ 6i ಹೆಸರಿನ ಹೊಸದೊಂದು ಸ್ಮಾರ್ಟ್‌ಫೋನ್ ಅನ್ನು ತನ್ನ ಲಿಸ್ಟ್‌ಗೆ ಸೇರಿಸಲು ಸಜ್ಜಾಗಿದ್ದು, ಇದು ಸಹ ಬಜೆಟ್ ಕೆಟಗೇರಿಯ ಸ್ಮಾರ್ಟ್‌ಫೋನ್ ಆಗಿರಲಿದೆ.

ಹೌದು, ರಿಯಲ್ ಮಿ ಕಂಪನಿಯು ಹೊಸ ರಿಯಲ್ ಮಿ 6i ಸ್ಮಾರ್ಟ್‌ಫೋನ್ ಅನ್ನು ಇದೇ ಜುಲೈ 24 ರಂದು ಬಿಡುಗಡೆ ಮಾಡಲು ತಯಾರಾಗಿದೆ. ಸಾಮಾಜಿಕ ಜಾಲತಾಣಗಳ ಮೂಲಕ ಬಿಡುಗಡೆ ಕಾರ್ಯಕ್ರಮವು ನಡೆಯಲಿದ್ದು, ಫೇಸ್‌ಬುಕ್, ಟ್ವಿಟ್ಟರ್ ಹಾಗೂ ಯೂಟ್ಯೂಬ್ ಪ್ಲಾಟ್‌ಫಾರ್ಮ್ ತಾಣಗಳ ಮೂಲಕ ಕಾರ್ಯಕ್ರಮ ನೇರಪ್ರಸಾರಗೊಳ್ಳಲಿದೆ. ನಂತರ ಫ್ಲಿಪ್‌ಕಾರ್ಟ್ ತಾಣದಲ್ಲಿ ಖರೀದಿಗೆ ಲಭ್ಯವಾಗಲಿದೆ. ಇನ್ನು ಈ ಫೋನಿನ ನಿರೀಕ್ಷಿತ ಫೀಚರ್ಸ್‌ಗಳು ಬಗ್ಗೆ ಮುಂದೆ ನೋಡೋಣ ಬನ್ನಿರಿ.

ರಿಯಲ್ ಮಿ 6i ಡಿಸ್‌ಪ್ಲೇ
ರಿಯಲ್ ಮಿ 6i ಸ್ಮಾರ್ಟ್‌ಫೋನ್ 1080x2400 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.5 ಇಂಚಿನ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇ ಹೊಂದಿರಲಿದೆ. ಡಿಸ್‌ಪ್ಲೇಯು LCD ಮಾದರಿಯಲ್ಲಿರಲಿದ್ದು, ಪಂಚ್‌ಹೋಲ್ ವಿನ್ಯಾಸ ಪಡೆದಿರಲಿದೆ ಎಂದು ನಿರೀಕ್ಷಿಸಲಾಗುತ್ತಿದೆ.

ರಿಯಲ್ ಮಿ 6i ಪ್ರೊಸೆಸರ್
ರಿಯಲ್ ಮಿ 6i ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಹಿಲಿಯೊ G80 ಪ್ರೊಸೆಸರ್ ಅನ್ನು ಒಳಗೊಂಡಿರಲಿದ್ದು, ಇದಕ್ಕೆ ಬೆಂಬಲವಾಗಿ ಆಂಡ್ರಾಯ್ಡ್ 10 ಓಎಸ್ ಪಡೆದಿರಲಿದೆ. ಇನ್ನು ಈ ಸ್ಮಾರ್ಟ್‌ಫೋನ್ 4GB RAM ಸಾಮರ್ಥ್ಯ ಮತ್ತು 64GB ಆಂತರಿಕ ಸ್ಟೋರೇಜ್‌ನ ಆಯ್ಕೆಯನ್ನು ಹೊಂದಿರಲಿದೆ. ಎಸ್‌ಡಿ ಕಾರ್ಡ್ ಮೂಲಕ ಮೆಮೊರಿ ಹೆಚ್ಚಿಸಲು ಅವಕಾಶ ಇರಲಿದೆ.

ರಿಯಲ್ ಮಿ 6i ಕ್ಯಾಮೆರಾ
ರಿಯಲ್ ಮಿ 6i ಸ್ಮಾರ್ಟ್‌ಫೋನ್ ಕ್ವಾಡ್ ಕ್ಯಾಮೆರಾ ಸೆಟ್‌ಅಪ್ ಪಡೆದಿದ್ದು, ಮುಖ್ಯ ಕ್ಯಾಮೆರಾವು 48ಎಂಪಿ ಸೆನ್ಸಾರ್ ಇರಲಿದೆ. ಸೆಕೆಂಡರಿ ಕ್ಯಾಮೆರಾವು 8ಎಂಪಿ ಸೆನ್ಸಾರ್‌ನಲ್ಲಿರಲಿದ್ದು, ತೃತೀಯ ಮತ್ತು ನಾಲ್ಕನೇ ಕ್ಯಾಮೆರಾಗಳು 2ಎಂಪಿ ಸೆನ್ಸಾರ್‌ನಲ್ಲಿರಲಿವೆ. 16ಎಂಪಿಯ ಸೆಲ್ಫಿ ಕ್ಯಾಮೆರಾ ಸಹ ಇರಲಿದೆ.

ರಿಯಲ್ ಮಿ 6i ಬ್ಯಾಟರಿ
ರಿಯಲ್ ಮಿ 6i ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿ ಬಾಳಿಕೆಯನ್ನು ಒಳಗೊಂಡಿರಲಿದ್ದು, ಅದಕ್ಕೆ ಪೂರಕವಾಗಿ 30W ಚಾರ್ಜಿಂಗ್ ಸೌಲಭ್ಯವನ್ನು ಒದಗಿಸುವ ಸಾಧ್ಯತೆಗಳಿವೆ. ಇದರೊಂದಿಗೆ ವೈಫೈ-802.11ac, ಜಿಪಿಎಸ್, ಬ್ಲೂಟೂತ್, ಫಿಂಗರ್‌ಪ್ರಿಂಟ್ ಸೆನ್ಸಾರ್, 4G VoLTE, ಆಂಬಿಯಂಟ್ ಲೈಟ್ ಸೆನ್ಸಾರ್, ಆಡಿಯೊ ಜಾಕ್ ನಂತಹ ಇತ್ತೀಚಿನ ಫೀಚರ್ಸ್‌ಗಳನ್ನು ಒಳಗೊಂಡಿರಲಿದೆ.


Click it and Unblock the Notifications








