ರಿಯಲ್‌ ಮಿ 7 ಮತ್ತು ರಿಯಲ್‌ ಮಿ 7 ಪ್ರೊ ಲಾಂಚ್!.ಬೆಲೆ ಎಷ್ಟು?.ಫೀಚರ್ಸ್‌ ಏನು?

|

ರಿಯಲ್‌ ಮಿ ಮೊಬೈಲ್ ಸಂಸ್ಥೆಯು ತನ್ನ ಬಹುನಿರೀಕ್ಷಿತ ರಿಯಲ್ ಮಿ 7 ಸ್ಮಾರ್ಟ್‌ಫೋನ್ ಸರಣಿಯನ್ನು ಭಾರತದಲ್ಲಿ ಇಂದು (ಸೆ.3) ಲಾಂಚ್ ಮಾಡಿದೆ. ಈ ಸರಣಿಯು ರಿಯಲ್‌ಮಿ 7 ಮತ್ತು ರಿಯಲ್‌ ಮಿ 7 ಪ್ರೊ ಮಾಡೆಲ್‌ಗಳನ್ನು ಒಳಗೊಂಡಿದೆ. ಈ ಎರಡು ಸ್ಮಾರ್ಟ್‌ಫೋನ್‌ಗಳು ಕ್ವಾಡ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಪಡೆದಿದ್ದು, ಅದರೊಂದಿಗೆ ಬಜೆಟ್‌ ಪ್ರೈಸ್‌ಟ್ಯಾಗ್‌ನಲ್ಲಿ ಕಾಣಿಸಿಕೊಂಡಿವೆ.

ರಿಯಲ್ ಮಿ

ಹೌದು, ರಿಯಲ್ ಮಿ ಕಂಪನಿಯು ಇಂದು ದೇಶಿಯ ಮಾರುಕಟ್ಟೆಗೆ ರಿಯಲ್‌ ಮಿ 7 ಮತ್ತು ರಿಯಲ್‌ ಮಿ 7 ಪ್ರೊ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಅವುಗಳಲ್ಲಿ ರಿಯಲ್‌ ಮಿ 7 ಪ್ರೊ ಫೋನ್ ಸ್ನ್ಯಾಪ್‌ಡ್ರಾಗನ್ 720G SoC ಪ್ರೊಸೆಸರ್‌ ಹೊಂದಿದ್ದು, ರಿಯಲ್‌ ಮಿ 7 ಫೋನ್ ಮೀಡಿಯಾ ಟೆಕ್ ಹಿಲಿಯೊ G95 SoC ಪ್ರೊಸೆಸರ್‌ ಪಡೆದಿದೆ. ಇನ್ನು ಈ ಎರಡು ಫೋನ್‌ಗಳು ಆಂಡ್ರಾಯ್ಡ್‌ ಓಎಸ್‌ ಪಡೆದಿವೆ. ಹಾಗಾದರೇ ರಿಯಲ್‌ಮಿ 7 ಮತ್ತು ರಿಯಲ್‌ ಮಿ 7 ಪ್ರೊ ಸ್ಮಾರ್ಟ್‌ಫೋನ್‌ಗಳ ಫೀಚರ್ಸ್‌ಗಳೆನು ಹಾಗೂ ಬೆಲೆ ಎಷ್ಟು ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ರಿಯಲ್‌ ಮಿ 7 ಪ್ರೊ - ಫೀಚರ್ಸ್‌

ರಿಯಲ್‌ ಮಿ 7 ಪ್ರೊ - ಫೀಚರ್ಸ್‌

ರಿಯಲ್‌ ಮಿ 7 ಪ್ರೊ ಸ್ಮಾರ್ಟ್‌ಫೋನ್ 1,080x2,400 ಪಿಕ್ಸೆಲ್‌ ರೆಸಲ್ಯೂಶನ್ ಜೊತೆಗೆ 6.4-ಇಂಚಿನ ಪೂರ್ಣ-ಹೆಚ್‌ಡಿ ಪ್ಲಸ್‌ ಸೂಪರ್ AMOLED ಡಿಸ್‌ಪ್ಲೇ ಹೊಂದಿದೆ. ಡಿಸ್‌ಪ್ಲೇಯು 20: 9 ಆಕಾರ ಅನುಪಾತ ಹೊಂದಿದ್ದು, ಸ್ಕ್ರೀನ್ ನಿಂದ ಬಾಹ್ಯ ಬಾಡಿಯ ನಡುವಿನ ಅಂತರ ಶೇ.90.8 ಆಗಿದೆ. ಇನ್ನು ಈ ಫೋನ್ ಆಕ್ಟಾ-ಕೋರ್ ಸ್ನ್ಯಾಪ್‌ಡ್ರಾಗನ್ 720G SoC ಪ್ರೊಸೆಸರ್‌ ಅನ್ನು ಹೊಂದಿದ್ದು, ಜೊತೆಗೆ 6GB RAM+128GB ಸ್ಟೋರೇಜ್ ಅನ್ನು ಹೊಂದಿದೆ.

ಫೋನ್

ರಿಯಲ್‌ ಮಿ 7 ಪ್ರೊ ಫೋನ್ ಕ್ವಾಡ್‌ ಕ್ಯಾಮೆರಾ ಸೆಟ್‌ಅಪ್ ಹೊಂದಿದ್ದು, ಮುಖ್ಯ ಕ್ಯಾಮೆರಾವು 64ಎಂಪಿ ಸೆನ್ಸಾರ್‌ನಲ್ಲಿದೆ. ಸೆಕೆಂಡರಿ ಕ್ಯಾಮೆರಾವು 8 ಮೆಗಾಪಿಕ್ಸೆಲ್ ಸೆನ್ಸಾರ್‌ನಲ್ಲಿದೆ. ತೃತೀಯ ಹಾಗೂ ನಾಲ್ಕನೇ ಕ್ಯಾಮೆರಾ ಕ್ರಮವಾಗಿ 2 ಮೆಗಾಪಿಕ್ಸೆಲ್ ಸೆನ್ಸಾರ್ ಹೊಂದಿವೆ. ಇನ್ನು ಸೆಲ್ಫಿ ಕ್ಯಾಮೆರಾವು 16ಎಂಪಿ ಸೆನ್ಸಾರ್‌ ಪಡೆದಿದೆ. ಹಾಗೆಯೇ ಈ ಸ್ಮಾರ್ಟ್‌ಫೋನ್ 4500mAh ಬ್ಯಾಟರಿಯನ್ನು ಪಡೆದಿದ್ದು, 65W ಸೂಪರ್‌ ಡಾರ್ಟ್‌ ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನವನ್ನು ಹೊಂದಿದೆ.

ರಿಯಲ್‌ಮಿ 7 - ಫೀಚರ್ಸ್‌

ರಿಯಲ್‌ಮಿ 7 - ಫೀಚರ್ಸ್‌

ರಿಯಲ್‌ಮಿ 7 ಸ್ಮಾರ್ಟ್‌ಫೋನ್ 1,080x2,400 ಪಿಕ್ಸೆಲ್‌ ರೆಸಲ್ಯೂಶನ್ ಜೊತೆಗೆ 6.5 ಇಂಚಿನ ಪೂರ್ಣ-ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಹೊಂದಿದೆ. ಡಿಸ್‌ಪ್ಲೇಯು 20: 9 ಆಕಾರ ಅನುಪಾತ ಹೊಂದಿದ್ದು, ಸ್ಕ್ರೀನ್ ನಿಂದ ಬಾಹ್ಯ ಬಾಡಿಯ ನಡುವಿನ ಅಂತರ ಶೇ.90.8 ಆಗಿದೆ. ಇನ್ನು ಈ ಫೋನ್ ಮೀಡಿಯಾ ಟೆಕ್ ಹಿಲಿಯೊ G95 SoC ಪ್ರೊಸೆಸರ್‌ ಸಾಮರ್ಥ್ಯವನ್ನು ಹೊಂದಿದ್ದು, ಜೊತೆಗೆ 6GB/64GB ಹಾಗೂ 8GB + 128GB ಸ್ಟೋರೇಜ್ ಆಯ್ಕೆ ಹೊಂದಿದೆ.

ರಿಯಲ್‌ಮಿ 7 ಫೋನ್

ರಿಯಲ್ ‌ಮಿ 7 ಫೋನ್ ಸಹ ಕ್ವಾಡ್‌ ಕ್ಯಾಮೆರಾ ಸೆಟ್‌ಅಪ್ ಹೊಂದಿದ್ದು, ಮುಖ್ಯ ಕ್ಯಾಮೆರಾವು 64ಎಂಪಿ ಸೆನ್ಸಾರ್‌ನಲ್ಲಿದೆ. ಸೆಕೆಂಡರಿ ಕ್ಯಾಮೆರಾವು 8 ಮೆಗಾಪಿಕ್ಸೆಲ್ ಸೆನ್ಸಾರ್‌ನಲ್ಲಿದೆ. ತೃತೀಯ ಹಾಗೂ ನಾಲ್ಕನೇ ಕ್ಯಾಮೆರಾ ಕ್ರಮವಾಗಿ 2 ಮೆಗಾಪಿಕ್ಸೆಲ್ ಸೆನ್ಸಾರ್ ಹೊಂದಿವೆ. ಇನ್ನು ಸೆಲ್ಫಿ ಕ್ಯಾಮೆರಾವು 16ಎಂಪಿ ಸೆನ್ಸಾರ್‌ ಪಡೆದಿದೆ. ಹಾಗೆಯೇ ಈ ಸ್ಮಾರ್ಟ್‌ಫೋನ್ 5,000mAh ಬ್ಯಾಟರಿಯನ್ನು ಪಡೆದಿದ್ದು, 30W ಸೂಪರ್‌ ಡಾರ್ಟ್‌ ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನವನ್ನು ಹೊಂದಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ದೇಶಿಯ ಮಾರುಕಟ್ಟೆಗೆ ಹೊಸದಾಗಿ ಲಾಂಚ್ ಆಗಿರುವ ರಿಯಲ್‌ಮಿ 7 ಮತ್ತು ರಿಯಲ್‌ ಮಿ 7 ಪ್ರೊ ಸ್ಮಾರ್ಟ್‌ಫೋನ್ ಭಿನ್ನ ಬೆಲೆಯನ್ನು ಹೊಂದಿವೆ. ರಿಯಲ್‌ಮಿ 7 ಫೋನಿನ 6GB + 64GB ಸ್ಟೋರೇಜ್ ವೇರಿಯಂಟ್ ಬೆಲೆಯು 14,999ರೂ. ಆಗಿದೆ. ಇನ್ನು 8GB + 128GB ವೇರಿಯಂಟ್ ಬೆಲೆಯು 16,999ರೂ. ಆಗಿದೆ. ಅದೇ ರೀತಿ ರಿಯಲ್‌ ಮಿ 7 ಪ್ರೊ ಫೋನ್ 6GB + 128GB ಸ್ಟೋರೇಜ್ ಬೆಲೆಯು 19,999ರೂ. ಆಗಿದ್ದು, 8GB + 128GB ವೇರಿಯಂಟ್ ದರವು 21,999ರೂ. ಆಗಿದೆ. ಇನ್ನು ರಿಯಲ್‌ ಮಿ 7 ಪ್ರೊ ಫೋನ್ ಇದೇ ಸೆ.14 ಫ್ಲಿಪ್‌ಕಾರ್ಟ್‌ನಲ್ಲಿ ಫಸ್ಟ್ ಸೇಲ್ ಶುರು ಮಾಡಲಿದೆ. ಅದೇ ರೀತಿ ರಿಯಲ್‌ ಮಿ 7 ಫೋನ್ ಸೆ.10 ರಂದು ಮೊದಲ ಮಾರಾಟ ಆರಂಭಿಸಲಿದೆ.

Best Mobiles in India

English summary
Realme 7 Pro price in India starts at Rs. 19,999, while Realme 7 price starts at Rs. 14,999.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X