ಭಾರತದಲ್ಲಿ ರಿಯಲ್‌ಮಿ 8 ಮತ್ತು ರಿಯಲ್‌ಮಿ 8 ಪ್ರೊ ಫೋನ್‌ ಲಾಂಚ್!.ಬೆಲೆ ಎಷ್ಟು?

|

ರಿಯಲ್‌ಮಿ ಕಂಪನಿಯ ಬಹುನಿರೀಕ್ಷಿತ ರಿಯಲ್‌ಮಿ 8 ಸರಣಿಯು ಭಾರತದಲ್ಲಿ ಬಿಡುಗಡೆ ಆಗಿದೆ. ಈ ಸ್ಮಾರ್ಟ್‌ಫೋನ್ ಸರಣಿಯು ರಿಯಲ್‌ ಮಿ 8 ಮತ್ತು ರಿಯಲ್‌ ಮಿ 8 ಪ್ರೊ ಹೆಸರಿನ ಎರಡು ಮಾಡೆಲ್‌ಗಳನ್ನು ಒಳಗೊಂಡಿದೆ. ರಿಯಲ್‌ಮಿ 7 ಸರಣಿಯ ಉತ್ತರಾಧಿಕಾರಿ ಆಗಿರುವ ಈ ಸ್ಮಾರ್ಟ್‌ಫೋನ್‌ ಸರಣಿಯು ಆಕರ್ಷಕ ಫೀಚರ್ಸ್‌ಗಳನ್ನು ಹೊಂದಿದೆ. ಈ ಸರಣಿಯ ಎರಡು ಮಾಡೆಲ್‌ ಫೋನ್‌ಗಳು ಕ್ವಾಡ್‌ ಕ್ಯಾಮೆರಾ ರಚನೆಯನ್ನು ಪಡೆದಿವೆ.

ಭಾರತದಲ್ಲಿ ರಿಯಲ್‌ಮಿ 8 ಮತ್ತು ರಿಯಲ್‌ಮಿ 8 ಪ್ರೊ ಫೋನ್‌ ಲಾಂಚ್!.ಬೆಲೆ ಎಷ್ಟು?

ಹೌದು, ರಿಯಲ್‌ಮಿ ಸಂಸ್ಥೆಯು ನೂತನವಾಗಿ ರಿಯಲ್‌ ಮಿ 8 ಮತ್ತು ರಿಯಲ್‌ ಮಿ 8 ಪ್ರೊ ಸ್ಮಾರ್ಟ್‌ಫೋನ್‌ಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಲಾಂಚ್ ಮಾಡಿದೆ. ಇವುಗಳಲ್ಲಿ ರಿಯಲ್‌ ಮಿ 8 ಸ್ಮಾರ್ಟ್‌ಫೋನ್‌ ಮುಖ್ಯ ಕ್ಯಾಮೆರಾವು 64 ಮೆಗಾ ಪಿಕ್ಸಲ್‌ ಸೆನ್ಸಾರ್‌ನಲ್ಲಿದ್ದು, ರಿಯಲ್‌ ಮಿ 8 ಪ್ರೊ ಮುಖ್ಯ ಕ್ಯಾಮೆರಾವು 108 ಮೆಗಾ ಪಿಕ್ಸಲ್‌ ಸೆನ್ಸಾರ್‌ ಸಾಮರ್ಥ್ಯದಲ್ಲಿದೆ. ಹಾಗಾದರೇ ರಿಯಲ್‌ ಮಿ 8 ಮತ್ತು ರಿಯಲ್‌ ಮಿ 8 ಪ್ರೊ ಫೋನ್‌ಗಳ ಇತರೆ ಫೀಚರ್ಸ್‌ಗಳೆನು ಹಾಗೂ ಬೆಲೆ ಎಷ್ಟು ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ರಿಯಲ್‌ಮಿ 8-ಡಿಸ್‌ಪ್ಲೇ
ರಿಯಲ್‌ಮಿ 8 ಸ್ಮಾರ್ಟ್‌ಫೋನ್ 6.4 AMOLED ಡಿಸ್‌ಪ್ಲೇಯನ್ನು ಹೊಂದಿದ್ದು, ಡಿಸ್‌ಪ್ಲೇಯ ಅನುಪಾತವು 20:9 ಆಗಿದೆ. ಹಾಗೆಯೇ ಡಿಸ್‌ಪ್ಲೇಯು HDR 10+ ಸಫೋರ್ಟ್‌ ಸಹ ಪಡೆದುಕೊಂಡಿದೆ. ಜೊತೆಗೆ 3D ಗೊರಿಲ್ಲಾ ಗ್ಲಾಸ್‌ ರಕ್ಷಣೆಯನ್ನು ಒಳಗೊಂಡಿದ್ದು, 90Hz ಸ್ಕ್ರೀನ್‌ ರೀಫ್ರೇಶ್‌ ರೇಟ್ ಹೊಂದಿದೆ.

ಭಾರತದಲ್ಲಿ ರಿಯಲ್‌ಮಿ 8 ಮತ್ತು ರಿಯಲ್‌ಮಿ 8 ಪ್ರೊ ಫೋನ್‌ ಲಾಂಚ್!.ಬೆಲೆ ಎಷ್ಟು?

ರಿಯಲ್‌ಮಿ 8 ಪ್ರೊ- ಡಿಸ್‌ಪ್ಲೇ
ರಿಯಲ್‌ಮಿ 8 ಪ್ರೊ ಸ್ಮಾರ್ಟ್‌ಫೋನ್ 1,080x2,400 ಪಿಕ್ಸಲ್‌ ರೆಸಲ್ಯೂಶನ್‌ ನೊಂದಿಗೆ 6.6 ಇಂಚಿನ AMOLED ಡಿಸ್‌ಪ್ಲೇಯನ್ನು ಹೊಂದಿದ್ದು, ಡಿಸ್‌ಪ್ಲೇಯ ಅನುಪಾತವು 19.8:9 ಆಗಿದೆ. ಹಾಗೆಯೇ ಬಾಹ್ಯ ಬಾಡಿಯಿಂದ ಡಿಸ್‌ಪ್ಲೇಯ ನಡುವಿನ ಅಂತರ 90.8 ಆಗಿದೆ. ಇನ್ನು ಈ ಫೋನ್ 180Hz ಟಚ್‌ ರೀಫ್ರೇಶ್‌ ರೇಟ್ ಹೊಂದಿದೆ. ಇದರೊಂದಿಗೆ ಬ್ರೈಟ್ನೆಸ್‌ 1,000 ನಿಟ್ಸ್‌ ಹೊಂದಿದೆ.

ರಿಯಲ್‌ಮಿ 8 ಪ್ರೊಸೆಸರ್
ರಿಯಲ್‌ಮಿ 8 ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಹಿಲಿಯೋ G95 ಪ್ರೊಸೆಸರ್ ಅನ್ನು ಹೊಂದಿದೆ. ಅದರೊಂದಿಗೆ Adreno 618 GPU ಗ್ರಾಫಿಕ್ ಸಪೋರ್ಟ್‌ನ ಸೌಲಭ್ಯವನ್ನು ಪಡೆದಿದೆ. ಹಾಗೆಯೇ ಪ್ರೊಸೆಸರ್‌ ಇತ್ತೀಚಿನ ಆಂಡ್ರಾಯ್ಡ್‌ 11 ಓಎಸ್‌ ಬೆಂಬಲವನ್ನು ಪಡೆದುಕೊಂಡಿರಲಿದೆ. ಇನ್ನು ಈ ಫೋನ್‌ 4GB + 128GB ಮತ್ತು 8GB + 128GB ವೇರಿಯಂಟ್ ಮಾದರಿಗಳ ಆಯ್ಕೆ ಪಡೆದಿದೆ.

ರಿಯಲ್‌ಮಿ 8 ಪ್ರೊ ಪ್ರೊಸೆಸರ್
ರಿಯಲ್‌ಮಿ 8 ಸ್ಮಾರ್ಟ್‌ಫೋನ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್‌ 720G SoC ಪ್ರೊಸೆಸರ್ ಅನ್ನು ಹೊಂದಿರಲಿದೆ. ಅದರೊಂದಿಗೆ Adreno 618 GPU ಗ್ರಾಫಿಕ್ ಸಪೋರ್ಟ್‌ನ ಸೌಲಭ್ಯವನ್ನು ಪಡೆದಿರಲಿದೆ. ಹಾಗೆಯೇ ಪ್ರೊಸೆಸರ್‌ ಇತ್ತೀಚಿನ ಆಂಡ್ರಾಯ್ಡ್‌ 11 ಓಎಸ್‌ ಬೆಂಬಲವನ್ನು ಪಡೆದುಕೊಂಡಿದೆ. ಇನ್ನು ಈ ಫೋನ್‌ 6GB + 128GB ಮತ್ತು 8GB + 128GB ವೇರಿಯಂಟ್ ಮಾದರಿಗಳ ಆಯ್ಕೆ ಪಡೆದಿದೆ.

ಭಾರತದಲ್ಲಿ ರಿಯಲ್‌ಮಿ 8 ಮತ್ತು ರಿಯಲ್‌ಮಿ 8 ಪ್ರೊ ಫೋನ್‌ ಲಾಂಚ್!.ಬೆಲೆ ಎಷ್ಟು?

ರಿಯಲ್‌ಮಿ 8 - ಕ್ಯಾಮೆರಾ
ರಿಯಲ್‌ಮಿ 8 ಸ್ಮಾರ್ಟ್‌ಫೋನ್‌ ತ್ರಿವಳಿ ಕ್ಯಾಮೆರಾ ಸೆಟ್‌ಅಪ್ ಪಡೆದಿದ್ದು, ಮುಖ್ಯ ಕ್ಯಾಮೆರಾವು 64 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯವನ್ನು ಹೊಂದಿದೆ. ಸೆಕೆಂಡರಿ ಕ್ಯಾಮೆರಾವು 8 ಮೆಗಾ ಪಿಕ್ಸಲ್. ಇನ್ನು ತೃತೀಯ ಹಾಗೂ ನಾಲ್ಕನೇ ಕ್ಯಾಮೆರಾಗಳು ಕ್ರಮವಾಗಿ 2 ಮೆಗಾ ಪಿಕ್ಸಲ್ ಸೆನ್ಸಾರ್‌ ಹೊಂದಿದೆ. ಇದರೊಂದಿಗೆ ಮುಂಭಾಗದಲ್ಲಿ ಸೆಲ್ಫಿಗಾಗಿ 16 ಮೆಗಾ ಪಿಕ್ಸಲ್ ಸೆನ್ಸಾರ್ ಕ್ಯಾಮೆರಾ ಒದಗಿಸಲಾಗಿದೆ.

ರಿಯಲ್‌ಮಿ 8 ಪ್ರೊ- ಕ್ಯಾಮೆರಾ
ರಿಯಲ್‌ಮಿ 8 ಸ್ಮಾರ್ಟ್‌ಫೋನ್‌ ತ್ರಿವಳಿ ಕ್ಯಾಮೆರಾ ಸೆಟ್‌ಅಪ್ ಪಡೆದಿದ್ದು, ಮುಖ್ಯ ಕ್ಯಾಮೆರಾವು 108 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯವನ್ನು ಹೊಂದಿದೆ. ಸೆಕೆಂಡರಿ ಕ್ಯಾಮೆರಾವು 8 ಮೆಗಾ ಪಿಕ್ಸಲ್. ಇನ್ನು ತೃತೀಯ ಹಾಗೂ ನಾಲ್ಕನೇ ಕ್ಯಾಮೆರಾಗಳು ಕ್ರಮವಾಗಿ 2 ಮೆಗಾ ಪಿಕ್ಸಲ್ ಸೆನ್ಸಾರ್‌ ಹೊಂದಿದೆ. ಇದರೊಂದಿಗೆ ಮುಂಭಾಗದಲ್ಲಿ ಸೆಲ್ಫಿಗಾಗಿ 16 ಮೆಗಾ ಪಿಕ್ಸಲ್ ಸೆನ್ಸಾರ್ ಕ್ಯಾಮೆರಾ ಒದಗಿಸಲಾಗಿದೆ.

ರಿಯಲ್‌ಮಿ 8 - ಬ್ಯಾಟರಿ
ರಿಯಲ್‌ಮಿ 8 ಸ್ಮಾರ್ಟ್‌ಫೋನ್‌ 5,000mAh ಬ್ಯಾಟರಿ ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಪಡೆದಿದ್ದು, ಇದರೊಂದಿಗೆ 30W Dart ಸಾಮರ್ಥ್ಯದ ಚಾರ್ಜಿಂಗ್ ಸೌಲಭ್ಯವನ್ನು ಒಳಗೊಂಡಿರಲಿದೆ. ಹಾಗೂ ಇತ್ತೀಚಿನ ಅಗತ್ಯ ಕನೆಕ್ಟಿವಿಟಿ ಸೌಲಭ್ಯಗಳನ್ನು ಪಡೆದಿರಲಿದೆ. ಹಾಗೆಯೇ ಈ ಫೋನ್ ಸೈಬರ್ ಸಿಲ್ವರ್ ಹಾಗೂ ಸೈಬರ್ ಬ್ಲ್ಯಾಕ್ ಬಣ್ಣಗಳ ಆಯ್ಕೆ ಪಡೆದಿದೆ.

ಭಾರತದಲ್ಲಿ ರಿಯಲ್‌ಮಿ 8 ಮತ್ತು ರಿಯಲ್‌ಮಿ 8 ಪ್ರೊ ಫೋನ್‌ ಲಾಂಚ್!.ಬೆಲೆ ಎಷ್ಟು?

ರಿಯಲ್‌ಮಿ 8 ಪ್ರೊ- ಬ್ಯಾಟರಿ
ರಿಯಲ್‌ಮಿ 8 ಪ್ರೊ ಸ್ಮಾರ್ಟ್‌ಫೋನ್ 4,500mAh ಬ್ಯಾಟರಿ ಸಾಮರ್ಥ್ಯದ ಬ್ಯಾಕ್‌ಅಪ್‌ ಪಡೆದಿದೆ. ಹಾಗೆಯೇ ಈ ಫೋನ್ 50W SuperDart ಸಾಮರ್ಥ್ಯದ ಚಾರ್ಜಿಂಗ್ ಸೌಲಭ್ಯವನ್ನು ಒಳಗೊಂಡಿದೆ. ಹಾಗೂ ಇತ್ತೀಚಿನ ಅಗತ್ಯ ಕನೆಕ್ಟಿವಿಟಿ ಸೌಲಭ್ಯಗಳನ್ನು ಪಡೆದಿದೆ. ಈ ಫೋನ್ ಸೈಬರ್ ಸಿಲ್ವರ್ ಹಾಗೂ ಸೈಬರ್ ಬ್ಲ್ಯಾಕ್ ಬಣ್ಣಗಳ ಆಯ್ಕೆ ಪಡೆದಿದೆ.

ಬೆಲೆ ಎಷ್ಟು?
ರಿಯಲ್‌ಮಿ 8 ಫೋನಿನ 4GB + 128GB ವೇರಿಯಂಟ್ ಬೆಲೆಯು 14,999ರೂ. ಆಗಿದೆ. 6GB + 128GB ವೇರಿಯಂಟ್ ಬೆಲೆಯು 15,999ರೂ. ಆಗಿದೆ. ಇನ್ನು ಹೈ ಎಂಡ್‌ 8GB + 128GB ವೇರಿಯಂಟ್‌ ದರವು 16,999ರೂ. ಆಗಿದೆ. ಅದೇ ರೀತಿ ರಿಯಲ್‌ಮಿ 8 ಪ್ರೊ ಫೋನಿನ 6GB + 128GB ವೇರಿಯಂಟ್ ದರವು 17,999ರೂ. ಆಗಿದೆ ಮತ್ತು 8GB + 128GB ವೇರಿಯಂಟ್ ಬೆಲೆಯು 19,999ರೂ. ಆಗಿದೆ. ಇದೇ ಮಾರ್ಚ್ 25ರಿಂದ ಇ ಕಾಮರ್ಸ್‌ ತಾಣಗಳಲ್ಲಿ ಸೇಲ್ ಆರಂಭ ಆಗಲಿದೆ.

Best Mobiles in India

English summary
Realme 8 Pro packs a 4,500mAh battery and supports 50W fast charging but comes with a 65W charger in the box.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X