Home
ಸುದ್ದಿಜಾಲ

ರಿಯಲ್‌ಮಿಯ ಈ ಜನಪ್ರಿಯ ಫೋನ್‌ಗಳ ಬೆಲೆಯಲ್ಲಿ ಈಗ ಡಿಢೀರ್ ಏರಿಕೆ!

ಪ್ರಮುಖ ಸ್ಮಾರ್ಟ್‌ಫೋನ್ ತಯಾರಿಕಾ ಸಂಸ್ಥೆಗಳಲ್ಲಿ ಒಂದಾದ ರಿಯಲ್‌ಮಿ ಕಂಪನಿಯು ಈಗಾಗಲೇ ಹಲವು ಫೋನ್‌ಗಳ ಮೂಲಕ ಗ್ರಾಹಕರ ಗಮನ ಸೆಳೆದಿದೆ. ರಿಯಲ್‌ಮಿ C ಸರಣಿಯಲ್ಲಿನ ಫೋನ್‌ಗಳು ಬಜೆಟ್‌ ದರದಿಂದ ಆಕರ್ಷಿಸಿದ್ದವು. ಆದರೆ ಇದೀಗ ತನ್ನ ಕೆಲವು ಜನಪ್ರಿಯ ಸ್ಮಾರ್ಟ್‌ಫೋನ್‌ ಮಾಡೆಲ್‌ಗಳ ಬೆಲೆಯಲ್ಲಿ ದಿಢೀರ್ ಏರಿಕೆ ಮಾಡಿದ್ದು, ಗ್ರಾಹಕರಿಗೆ ಅಚ್ಚರಿ ತಂದಿದೆ.

ರಿಯಲ್‌ಮಿ

ಹೌದು, ರಿಯಲ್‌ಮಿ ಕಂಪನಿಯು ತನ್ನ ರಿಯಲ್‌ಮಿ 8, ರಿಯಲ್‌ಮಿ 8 5G, ರಿಯಲ್‌ಮಿ C21, ರಿಯಲ್‌ಮಿ C25s ಮತ್ತು ರಿಯಲ್‌ಮಿ C11 ಸ್ಮಾರ್ಟ್‌ಫೋನ್‌ಗಳ ಬೆಲೆಯಲ್ಲಿ 1,500ರೂ. ವರೆಗೂ ಏರಿಕೆ ಮಾಡಿದೆ. ರಿಯಲ್‌ಮಿ 8 ಮತ್ತು ರಿಯಲ್‌ಮಿ 8 5G ಫೋನ್‌ಗಳ ದರದಲ್ಲಿ 1,500ರೂ. ಏರಿಕೆ ಮಾಡಲಾಗಿದೆ. ರಿಯಲ್‌ಮಿ C21 (2021) ಮಾಡೆಲ್‌ ಬೆಲೆಯಲ್ಲಿ 300ರೂ. ಹೆಚ್ಚಳ ಮಾಡಲಾಗಿದೆ. ಅದೇ ರೀತಿ ರಿಯಲ್‌ಮಿ C25s ಮತ್ತು ರಿಯಲ್‌ಮಿ C11 ಸ್ಮಾರ್ಟ್‌ಫೋನ್‌ಗಳ ಬೆಲೆಯಲ್ಲಿ 500ರೂ.ಗಳ ಏರಿಕೆ ಮಾಡಲಾಗಿದೆ.

ವೇರಿಯಂಟ್

ಬೆಲೆ ಏರಿಕೆಯಿಂದಾಗಿ 4GB RAM + 128GB ವೇರಿಯಂಟ್‌ನ ರಿಯಲ್‌ಮಿ 8 ಫೋನ್ ಈಗ 15,999ರೂ.ಗಳ ದರದಲ್ಲಿ ಕಾಣಿಸಿಕೊಂಡಿದೆ. ಹಾಗೆಯೇ 6GB + 128GB ವೇರಿಯಂಟ್ 16,999ರೂ.ಗಳ ಪ್ರೈಸ್‌ನಲ್ಲಿದೆ. ಇನ್ನು 8GB + 128GB ಸ್ಟೋರೇಜ್ ವೇರಿಯಂಟ್ 17,999ರೂ. ದರದಲ್ಲಿ ಲಭ್ಯವಾಗಲಿದೆ. ಅದೇ ರೀತಿ ರಿಯಲ್‌ಮಿ 8 5G ಫೋನ್ 4GB + 64GB ವೇರಿಯಂಟ್ 15,499ರೂ.ಗಳ ದರದಲ್ಲಿ ಕಾಣಿಸಿಕೊಂಡಿದೆ. 4GB + 128GB ವೇರಿಯಂಟ್ 16,499ರೂ.ಗಳ ಪ್ರೈಸ್‌ ಪಡೆದಿದೆ. 8GB + 128GB ವೇರಿಯಂಟ್ ಬೆಲೆಯು 18,499ರೂ. ಆಗಿದೆ.

ರಿಯಲ್‌ಮಿ 8 ಫೋನ್‌ ಫೀಚರ್ಸ್‌

ರಿಯಲ್‌ಮಿ 8 ಫೋನ್‌ ಫೀಚರ್ಸ್‌

ರಿಯಲ್‌ಮಿ 8 ಸ್ಮಾರ್ಟ್‌ಫೋನ್ 6.4 AMOLED ಡಿಸ್‌ಪ್ಲೇಯನ್ನು ಹೊಂದಿದ್ದು, ಡಿಸ್‌ಪ್ಲೇಯ ಅನುಪಾತವು 20:9 ಆಗಿದೆ. ಮೀಡಿಯಾ ಟೆಕ್ ಹಿಲಿಯೋ G95 ಪ್ರೊಸೆಸರ್ ಅನ್ನು ಹೊಂದಿದೆ. ತ್ರಿವಳಿ ಕ್ಯಾಮೆರಾ ಸೆಟ್‌ಅಪ್ ಪಡೆದಿದ್ದು, ಮುಖ್ಯ ಕ್ಯಾಮೆರಾವು 64 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯವನ್ನು ಹೊಂದಿದೆ. ಸೆಕೆಂಡರಿ ಕ್ಯಾಮೆರಾವು 8 ಮೆಗಾ ಪಿಕ್ಸಲ್. ಇನ್ನು ತೃತೀಯ ಹಾಗೂ ನಾಲ್ಕನೇ ಕ್ಯಾಮೆರಾಗಳು ಕ್ರಮವಾಗಿ 2 ಮೆಗಾ ಪಿಕ್ಸಲ್ ಸೆನ್ಸಾರ್‌ ಹೊಂದಿದೆ. ಇದರೊಂದಿಗೆ ಮುಂಭಾಗದಲ್ಲಿ ಸೆಲ್ಫಿಗಾಗಿ 16 ಮೆಗಾ ಪಿಕ್ಸಲ್ ಸೆನ್ಸಾರ್ ಕ್ಯಾಮೆರಾ ಒದಗಿಸಲಾಗಿದೆ. ಸ್ಮಾರ್ಟ್‌ಫೋನ್‌ 5,000mAh ಬ್ಯಾಟರಿ ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಪಡೆದಿದೆ.

ರಿಯಲ್‌ಮಿ C25s ಸ್ಮಾರ್ಟ್‌ಫೋನ್ ಫೀಚರ್ಸ್‌

ರಿಯಲ್‌ಮಿ C25s ಸ್ಮಾರ್ಟ್‌ಫೋನ್ ಫೀಚರ್ಸ್‌

ರಿಯಲ್‌ಮಿ C25s ಸ್ಮಾರ್ಟ್‌ಫೋನ್ 720x1,600 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.55 ಇಂಚಿನ LCD ಪೂರ್ಣ ಹೆಚ್‌ಡಿ ಪ್ಲಸ್‌ ಹೊಂದಿದೆ. ಆಕ್ಟಾ ಕೋರ್ ಮೀಡಿಯಾ ಟೆಕ್ ಹಿಲಿಯೋ G85 ಪ್ರೊಸೆಸರ್‌ ಅನ್ನು ಹೊಂದಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 11 ಓಎಸ್‌ ಇದೆ. ಹಿಂಬದಿಯಲ್ಲಿ ಕ್ವಾಡ್‌ ಕ್ಯಾಮೆರಾ ರಚನೆಯನ್ನು ಹೊಂದಿದೆ. ಮುಖ್ಯ ಕ್ಯಾಮೆರಾವು 48ಎಂಪಿ ಸೆನ್ಸಾರ್ ಸಾಮರ್ಥ್ಯದಲ್ಲಿದ್ದು, ಸೆಕೆಂಡರಿ ಕ್ಯಾಮೆರಾವು 2ಎಂಪಿ ಸೆನ್ಸಾರ್‌ನ ಅಲ್ಟ್ರಾ ವೈಲ್ಡ್‌ ಆಂಗಲ್ ಲೆನ್ಸ್‌ ಹೊಂದಿರಲಿದೆ. ಇನ್ನು ತೃತೀಯ ಕ್ಯಾಮೆರಾ 2ಎಂಪಿ ಸೆನ್ಸಾರ್ ಹಾಗೂ ನಾಲ್ಕನೇ ಕ್ಯಾಮೆರಾವು ಬೇಸಿಕ್ ಸೆನ್ಸಾರ್ ಪಡೆದಿರಲಿದೆ. ಸೆಲ್ಫಿ ಕ್ಯಾಮೆರಾವು 8ಎಂಪಿ ಸೆನ್ಸಾರ್‌ನಲ್ಲಿರಲಿದೆ. 6000mAh ಸಾಮರ್ಥ್ಯವನ್ನು ಹೊಂದಿದ್ದು, 18W ಸಾಮರ್ಥ್ಯದ ಫ್ಲ್ಯಾಶ್‌ ಫಾಸ್ಟ್‌ ಚಾರ್ಜಿಂಗ್ ವ್ಯವಸ್ಥೆಯನ್ನು ಹೊಂದಿದೆ.

ರಿಯಲ್‌ಮಿ C11 (2021) ಸ್ಮಾರ್ಟ್‌ಫೋನ್‌ ಫೀಚರ್ಸ್‌

ರಿಯಲ್‌ಮಿ C11 (2021) ಸ್ಮಾರ್ಟ್‌ಫೋನ್‌ ಫೀಚರ್ಸ್‌

ರಿಯಲ್‌ಮಿ C11 (2021) ಸ್ಮಾರ್ಟ್‌ಫೋನ್‌ 720x1,600 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.5-ಇಂಚಿನ ಹೆಚ್‌ಡಿ+ ಡಿಸ್‌ಪ್ಲೇಯನ್ನು ಹೊಂದಿದೆ. ರಿಯಲ್‌ಮಿ C11 (2021) ಸ್ಮಾರ್ಟ್‌ಫೋನ್‌ ಆಕ್ಟಾ-ಕೋರ್ SoC ಪ್ರೊಸೆಸರ್‌ ಸಾಮರ್ಥ್ಯ ಪಡೆದುಕೊಂಡಿದೆ. 8 ಮೆಗಾ ಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸಿಂಗಲ್‌ ರಿಯರ್‌ ಕ್ಯಾಮೆರಾ ಹೊಂದಿದೆ. ಇದು ಎಲ್ಇಡಿ ಫ್ಲ್ಯಾಷ್ ಜೊತೆಗೆ ಬರಲಿದೆ. ಇದಲ್ಲದೆ 5 ಮೆಗಾ ಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಹೊಂದಿದೆ. 5,000mAh ಸಾಮರ್ಥ್ಯ ಬ್ಯಾಟರಿಯನ್ನು ಹೊಂದಿದೆ.

ರಿಯಲ್‌ಮಿ C21 ಸ್ಮಾರ್ಟ್‌ಫೋನ್‌ ಫೀಚರ್ಸ್‌

ರಿಯಲ್‌ಮಿ C21 ಸ್ಮಾರ್ಟ್‌ಫೋನ್‌ ಫೀಚರ್ಸ್‌

ರಿಯಲ್‌ಮಿ C21 ಸ್ಮಾರ್ಟ್‌ಫೋನ್‌ 720x1,600 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.5-ಇಂಚಿನ HD+ ಎಲ್‌ಸಿಡಿ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇಯ ಅನುಪಾತವು 20:9 ಆಗಿದೆ. ಅಲ್ಲದೆ ಈ ಡಿಸ್‌ಪ್ಲೇಯು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ಪ್ರೊಟೆಕ್ಷನ್ ಹೊಂದಿದೆ. ಈ ಫೋನ್ ಮೀಡಿಯಾ ಟೆಕ್ ಹಿಲಿಯೊ G35 ಆಕ್ಟಾ-ಕೋರ್ ಪ್ರೊಸೆಸರ್ ಹೊಂದಿದ್ದು, ಆಂಡ್ರಾಯ್ಡ್ 10 ಆಧಾರಿತ ರಿಯಲ್‌ಮಿ ಯುಐ ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತದೆ. ಹಾಗೇಯೇ ಈ ಸ್ಮಾರ್ಟ್‌ಫೋನ್‌ 3GB RAM + 32GB ಮತ್ತು 4GB RAM + 64GB ಆಂತರಿಕ ಸಂಗ್ರಹ ಸಾಮರ್ಥ್ಯದ ವೇರಿಯಂಟ್ ಆಯ್ಕೆಗಳನ್ನು ಹೊಂದಿದೆ. ಮೆಮೊರಿ ಕಾರ್ಡ್‌ ಮೂಲಕ ಬಾಹ್ಯ ಸಂಗ್ರಹ ಸಾಮರ್ಥ್ಯ ವಿಸ್ತರಣೆ ಮಾಡಿಕೊಳ್ಳುವುದಕ್ಕೆ ಅವಕಾಶವನ್ನು ಸಹ ನೀಡಲಾಗಿದೆ.

ರಿಯಲ್‌ಮಿ 8 5G ಸ್ಮಾರ್ಟ್‌ಫೋನ್‌ ಫೀಚರ್ಸ್‌

ರಿಯಲ್‌ಮಿ 8 5G ಸ್ಮಾರ್ಟ್‌ಫೋನ್‌ ಫೀಚರ್ಸ್‌

ರಿಯಲ್‌ಮಿ 8 5G ಸ್ಮಾರ್ಟ್‌ಫೋನ್‌ 1,080 × 2,400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.5-ಇಂಚಿನ ಫುಲ್‌-ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಆಕ್ಟಾ-ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 700 SoC ಪ್ರೊಸೆಸರ್‌ ಅನ್ನು ಹೊಂದಿದ್ದು, ಆಂಡ್ರಾಯ್ಡ್‌ 11 ನಲ್ಲಿ ರಿಯಲ್‌ಮಿ ಯುಐ 2.0 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 8GB RAM ಮತ್ತು 128 GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಒಳಗೊಂಡಿದೆ. ಇದಲ್ಲದೆ ಮೆಮೊರಿ ಕಾರ್ಡ್‌ ಬಳಸಿ 1TB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದು.

ಕ್ಯಾಮೆರಾ

ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಅಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 48 ಮೆಗಾಪಿಕ್ಸೆಲ್ ಸೆನ್ಸಾರ್‌ ಅನ್ನು ಹೊಂದಿದೆ. ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಸೆನ್ಸಾರ್‌ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ f/ 2.4 ಮ್ಯಾಕ್ರೋ ಲೆನ್ಸ್ ಅನ್ನು ಸಹ ಒಳಗೊಂಡಿದೆ. ರಿಯರ್‌ ಕ್ಯಾಮೆರಾ ಫೀಚರ್ಸ್‌ಗಳಲ್ಲಿ ಎಐ ಬ್ಯೂಟಿ ಫಿಲ್ಟರ್‌ಗಳ ಹೊರತಾಗಿ ಲೋ-ಲೈಟ್‌ ಫೋಟೋಗ್ರಫಿಗಾಗಿ ಸೂಪರ್ ನೈಟ್‌ಸ್ಕೇಪ್ ಮೋಡ್‌ ಅನ್ನು ನೀಡಲಾಗಿದೆ. ಇದಲ್ಲದೆ 16 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ಒಳಗೊಂಡಿದೆ. ಇದು ಸೂಪರ್ ನೈಟ್ಸ್ಕೇಪ್ ಮೋಡ್ ಅನ್ನು ಸಹ ಬೆಂಬಲಿಸುತ್ತದೆ. ಇದು 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 18W ಕ್ವಿಕ್ ಚಾರ್ಜ್ ಫಾಸ್ಟ್ ಚಾರ್ಜಿಂಗ್ ಟೆಕ್ನಾಲಜಿಯನ್ನು ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್-ಬ್ಯಾಂಡ್ ವೈ-ಫೈ, ಬ್ಲೂಟೂತ್ 5.1, ಚಾರ್ಜಿಂಗ್‌ಗಾಗಿ ಯುಎಸ್‌ಬಿ ಟೈಪ್-ಸಿ ಪೋರ್ಟ್ ಮತ್ತು 5G ಬೆಂಬಲವನ್ನು ಹೊರತುಪಡಿಸಿ 4G ಎಲ್ ಟಿಇ ಅನ್ನು ಸಹ ಬೆಂಬಲಿಸಲಿದೆ.

Best Mobiles in India

English summary
Realme 8, Realme 8 5G, Realme C11 (2021), Realme C21, Realme C25s Price in India Hike.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+