Home
ಸುದ್ದಿಜಾಲ

ಭಾರತದಲ್ಲಿ ರಿಯಲ್‌ ಮಿ 8 ಮತ್ತು ರಿಯಲ್‌ ಮಿ 8 ಪ್ರೊ ಪ್ರೀ-ಆರ್ಡರ್ ಆರಂಭ!

ಇತ್ತೀಚಿಗೆ ಬಿಡುಗಡೆ ಆಗಿರುವ ಹೊಸ ರಿಯಲ್‌ ಮಿ 8 ಸ್ಮಾರ್ಟ್‌ಫೋನ್ ಸರಣಿಯು ಈಗಾಗಲೆ ಗ್ರಾಹಕರ ಗಮನ ಸೆಳೆದಿದ್ದು, ಈ ಸರಣಿಯು ರಿಯಲ್‌ ಮಿ 8 ಮತ್ತು ರಿಯಲ್‌ ಮಿ 8 ಪ್ರೊ ಮಾದರಿಗಳನ್ನು ಹೊಂದಿದೆ. ಈ ಫ್ಲ್ಯಾಗ್‌ಶಿಪ್‌ ಸ್ಮಾರ್ಟ್‌ಫೋನ್‌ಗಳ ಖರೀದಿಗಾಗಿ ಎದುರುನೋಡುತ್ತಿರುವ ಗ್ರಾಹಕರಿಗೆ ಈಗ ಸಿಹಿಸುದ್ದಿ ಲಭ್ಯವಾಗಿದೆ. ದೇಶದಲ್ಲಿ ರಿಯಲ್‌ ಮಿ 8 ಸರಣಿಯ ಎರಡು ಫೋನ್‌ಗಳ ಪ್ರೀ ಆರ್ಡರ್ ಆರಂಭವಾಗಿದೆ.

ಭಾರತದಲ್ಲಿ ರಿಯಲ್‌ ಮಿ 8 ಮತ್ತು ರಿಯಲ್‌ ಮಿ 8 ಪ್ರೊ ಪ್ರೀ-ಆರ್ಡರ್ ಆರಂಭ!

ಹೌದು, ಇ-ಕಾಮರ್ಸ್ ದೈತ್ಯ ಫ್ಲಿಪ್‌ಕಾರ್ಟ್‌ ಹಾಗೂ ಅಧಿಕೃತ ರಿಯಲ್‌ಮಿ ವೆಬ್‌ಸೈಟ್‌ನಲ್ಲಿ ಇಂದು(ಮಾ.15) ರಿಯಲ್‌ ಮಿ 8 ಮತ್ತು ರಿಯಲ್‌ ಮಿ 8 ಪ್ರೊ ಫೋನ್‌ಗಳ ಪ್ರೀ ಆರ್ಡರ್ ಶುರುವಾಗಿದ್ದು, ಇದೇ ಮಾರ್ಚ್ 22ರ. ವರೆಗೂ ಬುಕಿಂಗ್‌ಗೆ ಅವಕಾಶ ಇರಲಿದೆ. ಇನ್ನು ಈ ರಿಯಲ್‌ ಮಿ 8 ಮತ್ತು ರಿಯಲ್‌ ಮಿ 8 ಪ್ರೊ ಫೋನ್‌ಗಳು ಇದೇ ಮಾರ್ಚ್ 24ರಂದು ಭಾರತದಲ್ಲಿ ಬಿಡುಗಡೆ ಆಗಲಿವೆ. ಫೋನ್ ಖರೀದಿಸುವ ಗ್ರಾಹಕರು 1,080ರೂ. ನೀಡಿ ಮುಂಗಡ ಬುಕಿಂಗ್ ಮಾಡಬಹುದಾಗಿದೆ. ಪ್ರೀ-ಬುಕಿಂಗ್ ಪ್ರೊಸೆಸ್‌ ವೇಳೆ ಗ್ರಾಹಕರು ಎಕ್ಸಿಸ್ಟಿಂಗ್ ಗಿಫ್ಟ್‌ ಪಡೆಯಲಿದ್ದಾರೆ ಎಂದು ಹೇಳಲಾಗುತ್ತಿದೆ.

ಫೋನ್ ಮುಂಗಡ ಬುಕ್ ಮಾಡುವ ಗ್ರಾಹಕರು ರಿಯಲ್‌ಮಿ 8 ಸ್ಮಾರ್ಟ್‌ಫೋನ್ ಸರಣಿ ಬ್ಯಾನರ್ ಕ್ಲಿಕ್ ಮಾಡಿ. 'Infinity Sale': Live Now' ಪ್ರದರ್ಶಿಸಲಾದ ಪುಟಕ್ಕೆ ಬಳಕೆದಾರರನ್ನು ಮರುನಿರ್ದೇಶಿಸಲಾಗುತ್ತದೆ. ಇನ್ಫಿನಿಟಿ ಸೇಲ್ ಅನ್ನು ಕ್ಲಿಕ್ ಮಾಡಿದ ನಂತರ, ಬಳಕೆದಾರರು ಮುಂಗಡ ಬುಕ್ ಮಾಡಲು 1,080ರೂ. ಪಾವತಿಸುವುದು. ರಿಯಲ್‌ ಮಿ 8 ಮತ್ತು ರಿಯಲ್‌ ಮಿ 8 ಪ್ರೊ ಫೋನ್‌ಗಳ ಫೀಚರ್ಸ್‌ಗಳು ಹೇಗಿವೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಭಾರತದಲ್ಲಿ ರಿಯಲ್‌ ಮಿ 8 ಮತ್ತು ರಿಯಲ್‌ ಮಿ 8 ಪ್ರೊ ಪ್ರೀ-ಆರ್ಡರ್ ಆರಂಭ!

ರಿಯಲ್‌ಮಿ 8-ಡಿಸ್‌ಪ್ಲೇ
ರಿಯಲ್‌ಮಿ 8 ಸ್ಮಾರ್ಟ್‌ಫೋನ್ 6.4 AMOLED ಡಿಸ್‌ಪ್ಲೇಯನ್ನು ಹೊಂದಿದ್ದು, ಡಿಸ್‌ಪ್ಲೇಯ ಅನುಪಾತವು 20:9 ಆಗಿರಲಿದೆ. ಹಾಗೆಯೇ ಡಿಸ್‌ಪ್ಲೇಯು HDR 10+ ಸಫೋರ್ಟ್‌ ಸಹ ಪಡೆದುಕೊಂಡಿರಲಿದೆ. ಜೊತೆಗೆ 3D ಗೊರಿಲ್ಲಾ ಗ್ಲಾಸ್‌ ರಕ್ಷಣೆಯನ್ನು ಒಳಗೊಂಡಿದ್ದು, 90Hz ಸ್ಕ್ರೀನ್‌ ರೀಫ್ರೇಶ್‌ ರೇಟ್ ಹೊಂದಿರಲಿದೆ.

ರಿಯಲ್‌ಮಿ 8 ಪ್ರೊ- ಡಿಸ್‌ಪ್ಲೇ
ರಿಯಲ್‌ಮಿ 8 ಪ್ರೊ ಸ್ಮಾರ್ಟ್‌ಫೋನ್ 6.6 ಇಂಚಿನ AMOLED ಡಿಸ್‌ಪ್ಲೇಯನ್ನು ಹೊಂದಿದ್ದು, ಡಿಸ್‌ಪ್ಲೇಯ ಅನುಪಾತವು 19.8:9 ಆಗಿರಲಿದೆ. ಹಾಗೆಯೇ ಡಿಸ್‌ಪ್ಲೇಯು HDR 10+ ಸಫೋರ್ಟ್‌ ಜೊತೆಗೆ QHD+ ಪಿಕ್ಸಲ್ ರೆಸಲ್ಯೂಶನ್ ಪಡೆದಿರಲಿದೆ. ಇನ್ನು ಈ ಫೋನ್ 120Hz ಸ್ಕ್ರೀನ್‌ ರೀಫ್ರೇಶ್‌ ರೇಟ್ ಹೊಂದಿರಲಿದೆ.

ರಿಯಲ್‌ಮಿ 8 ಪ್ರೊಸೆಸರ್
ರಿಯಲ್‌ಮಿ 8 ಸ್ಮಾರ್ಟ್‌ಫೋನ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್‌ 720G SoC ಪ್ರೊಸೆಸರ್ ಅನ್ನು ಹೊಂದಿರಲಿದೆ. ಅದರೊಂದಿಗೆ ಗ್ರಾಫಿಕ್ ಸಪೋರ್ಟ್‌ನ ಸೌಲಭ್ಯವನ್ನು ಪಡೆದಿರಲಿದೆ. ಹಾಗೆಯೇ ಪ್ರೊಸೆಸರ್‌ ಇತ್ತೀಚಿನ ಆಂಡ್ರಾಯ್ಡ್‌ ಓಎಸ್‌ ಬೆಂಬಲವನ್ನು ಪಡೆದುಕೊಂಡಿರಲಿದೆ. ಇನ್ನು ಈ ಫೋನ್‌ ಎರಡು ವೇರಿಯಂಟ್ ಮಾದರಿಗಳ ಆಯ್ಕೆ ಪಡೆದಿರಲಿದೆ.

ಭಾರತದಲ್ಲಿ ರಿಯಲ್‌ ಮಿ 8 ಮತ್ತು ರಿಯಲ್‌ ಮಿ 8 ಪ್ರೊ ಪ್ರೀ-ಆರ್ಡರ್ ಆರಂಭ!

ರಿಯಲ್‌ಮಿ 8 ಪ್ರೊ- ಪ್ರೊಸೆಸರ್
ರಿಯಲ್‌ಮಿ 8 ಪ್ರೊ ಸ್ಮಾರ್ಟ್‌ಫೋನ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್‌ 732G SoC ಪ್ರೊಸೆಸರ್ ಅನ್ನು ಹೊಂದಿರಲಿದ್ದು, ರಿಯಲ್‌ಮಿ 8 ಪ್ರೊ 5G ವೇರಿಯಂಟ್‌ ಮೀಡಿಯಾ ಟೆಕ್ ಹಿಲಿಯೋ ಪ್ರೊಸೆಸರ್‌ ಪಡೆದಿರಲಿದೆ. ಇದರೊಂದಿಗೆ ಗ್ರಾಫಿಕ್ ಸಪೋರ್ಟ್‌ನ ಸೌಲಭ್ಯವನ್ನು ಪಡೆದಿರಲಿದೆ. ಹಾಗೆಯೇ ಪ್ರೊಸೆಸರ್‌ ಇತ್ತೀಚಿನ ಆಂಡ್ರಾಯ್ಡ್‌ ಓಎಸ್‌ ಬೆಂಬಲಿಸಲಿದೆ ಎಂದು ಹೇಳಲಾಗ್ತಿದೆ. ಇನ್ನು ಈ ಫೋನ್ ಎರಡು ವೇರಿಯಂಟ್ ಮಾದರಿಗಳ (6 GB RAM / 128 GB) ಆಯ್ಕೆ ಪಡೆದಿರಲಿದೆ.

ರಿಯಲ್‌ಮಿ 8 - ಕ್ಯಾಮೆರಾ
ರಿಯಲ್‌ಮಿ 8 ಸ್ಮಾರ್ಟ್‌ಫೋನ್‌ ತ್ರಿವಳಿ ಕ್ಯಾಮೆರಾ ಸೆಟ್‌ಅಪ್ ಪಡೆದಿದ್ದು, ಮುಖ್ಯ ಕ್ಯಾಮೆರಾವು 64 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯವನ್ನು ಹೊಂದಿದೆ. ಸೆಕೆಂಡರಿ ಕ್ಯಾಮೆರಾವು 8 ಮೆಗಾ ಪಿಕ್ಸಲ್. ಇನ್ನು ತೃತೀಯ ಹಾಗೂ ನಾಲ್ಕನೇ ಕ್ಯಾಮೆರಾಗಳು ಕ್ರಮವಾಗಿ 2 ಮೆಗಾ ಪಿಕ್ಸಲ್ ಸೆನ್ಸಾರ್‌ ಹೊಂದಿರುವುದು ಬಹುತೇಕ ಖಚಿತವಾಗಿದೆ. ಇದರೊಂದಿಗೆ ಮುಂಭಾಗದಲ್ಲಿ ಸೆಲ್ಫಿಗಾಗಿ 16 ಮೆಗಾ ಪಿಕ್ಸಲ್ ಸೆನ್ಸಾರ್ ಕ್ಯಾಮೆರಾ ಒದಗಿಸಲಾಗಿರಲಿದೆ.

ರಿಯಲ್‌ಮಿ 8 ಪ್ರೊ- ಕ್ಯಾಮೆರಾ
ರಿಯಲ್‌ಮಿ 8 ಸ್ಮಾರ್ಟ್‌ಫೋನ್‌ ತ್ರಿವಳಿ ಕ್ಯಾಮೆರಾ ಸೆಟ್‌ಅಪ್ ಪಡೆದಿದ್ದು, ಮುಖ್ಯ ಕ್ಯಾಮೆರಾವು 108 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯವನ್ನು ಹೊಂದಿದೆ. ಸೆಕೆಂಡರಿ ಕ್ಯಾಮೆರಾವು 8 ಮೆಗಾ ಪಿಕ್ಸಲ್. ಇನ್ನು ತೃತೀಯ ಹಾಗೂ ನಾಲ್ಕನೇ ಕ್ಯಾಮೆರಾಗಳು ಕ್ರಮವಾಗಿ 2 ಮೆಗಾ ಪಿಕ್ಸಲ್ ಸೆನ್ಸಾರ್‌ ಹೊಂದಿರುವುದು ಬಹುತೇಕ ಖಚಿತವಾಗಿದೆ. ಇದರೊಂದಿಗೆ ಮುಂಭಾಗದಲ್ಲಿ ಸೆಲ್ಫಿಗಾಗಿ 32 ಮೆಗಾ ಪಿಕ್ಸಲ್ ಸೆನ್ಸಾರ್ ಕ್ಯಾಮೆರಾ ಒದಗಿಸಲಾಗಿರಲಿದೆ.

ಭಾರತದಲ್ಲಿ ರಿಯಲ್‌ ಮಿ 8 ಮತ್ತು ರಿಯಲ್‌ ಮಿ 8 ಪ್ರೊ ಪ್ರೀ-ಆರ್ಡರ್ ಆರಂಭ!

ರಿಯಲ್‌ಮಿ 8 - ಬ್ಯಾಟರಿ
ರಿಯಲ್‌ಮಿ 8 ಸ್ಮಾರ್ಟ್‌ಫೋನ್‌ 5,000mAh ಬ್ಯಾಟರಿ ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಪಡೆದಿರಲಿದ್ದು, ಇದರೊಂದಿಗೆ 65W ಸಾಮರ್ಥ್ಯದ ಫಾಸ್ಟ್‌ ಚಾರ್ಜಿಂಗ್ ಸೌಲಭ್ಯವನ್ನು ಒಳಗೊಂಡಿರಲಿದೆ. ಹಾಗೂ ಇತ್ತೀಚಿನ ಅಗತ್ಯ ಕನೆಕ್ಟಿವಿಟಿ ಸೌಲಭ್ಯಗಳನ್ನು ಪಡೆದಿರಲಿದೆ. ಹಾಗೆಯೇ ಈ ಫೋನ್ ಸೈಬರ್ ಸಿಲ್ವರ್ ಹಾಗೂ ಸೈಬರ್ ಬ್ಲ್ಯಾಕ್ ಬಣ್ಣಗಳ ಆಯ್ಕೆ ಪಡೆದಿರಲಿದೆ ಎನ್ನಲಾಗಿದೆ.

ರಿಯಲ್‌ಮಿ 8 ಪ್ರೊ- ಬ್ಯಾಟರಿ
ರಿಯಲ್‌ಮಿ 8 ಪ್ರೊ ಸ್ಮಾರ್ಟ್‌ಫೋನ್ 4,500mAh ಬ್ಯಾಟರಿ ಸಾಮರ್ಥ್ಯದ ಬ್ಯಾಕ್‌ಅಪ್‌ ನೀಡುವ ಸಾಧ್ಯತೆಗಳಿವೆ ಎನ್ನ;ಅಗಿದೆ. ಹಾಗೆಯೇ ಈ ಫೋನ್ ಸಹ ಸಾಮರ್ಥ್ಯದ ಫಾಸ್ಟ್‌ ಚಾರ್ಜಿಂಗ್ ಸೌಲಭ್ಯವನ್ನು ಒಳಗೊಂಡಿದೆ. ಹಾಗೂ ಇತ್ತೀಚಿನ ಅಗತ್ಯ ಕನೆಕ್ಟಿವಿಟಿ ಸೌಲಭ್ಯಗಳನ್ನು ಪಡೆದಿದೆ. ಈ ಫೋನ್ ಸೈಬರ್ ಸಿಲ್ವರ್ ಹಾಗೂ ಸೈಬರ್ ಬ್ಲ್ಯಾಕ್ ಬಣ್ಣಗಳ ಆಯ್ಕೆ ಪಡೆದಿರಲಿದೆ ಎನ್ನಲಾಗಿದೆ.

Best Mobiles in India

English summary
Realme 8 and Realme 8 Pro prices in India will be revealed on March 24th, while blind pre-order starts from today.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+