Home
ಸುದ್ದಿಜಾಲ

Realme: ರಿಯಲ್‌ಮಿಯ ಈ ಜನಪ್ರಿಯ ಫೋನ್‌ ಬೆಲೆಯಲ್ಲಿ ಭಾರೀ ಇಳಿಕೆ! 48 MP ಕ್ಯಾಮೆರಾ... 64 GB ಸ್ಟೋರೇಜ್‌

ರಿಯಲ್‌ಮಿಯ ಸ್ಮಾರ್ಟ್‌ಫೋನ್‌ಗಳು (Realme smartphone) ವಿವಿಧ ರೀತಿಯ ಫೀಚರ್ಸ್‌ ಆಯ್ಕೆಯೊಂದಿಗೆ ಕಾಣಿಸಿಕೊಳ್ಳುತ್ತಿದ್ದು, ಈ ನಡುವೆ ಭಾರತದಲ್ಲಿ ಈ ಫೋನ್‌ಗಳಿಗೆ ಬೇಡಿಕೆಯೂ ಸಹ ಹೆಚ್ಚಾಗುತ್ತಿದೆ. ಅದರಂತೆ ಹೆಚ್ಚಿನ ಜನಪ್ರಿಯತೆ ಪಡೆದುಕೊಂಡಿದ್ದ ಈ ರಿಯಲ್‌ಮಿ ಫೋನ್‌ಗೆ ಈಗ ರಿಯಾಯಿತಿ ನೀಡಲಾಗಿದೆ.

ಹೌದು, ಸ್ಮಾರ್ಟ್‌ಫೋನ್‌ಗಳ ವಿಭಾಗದಲ್ಲಿ ಕಡಿಮೆ ಬೆಲೆಯಲ್ಲಿ ಹೆಚ್ಚಿನ ಫೀಚರ್ಸ್‌ ನೀಡುವ ಫೋನ್‌ಗಳಾಗಿ ಈ ರಿಯಲ್‌ಮಿ ಗುರುತಿಸಿಕೊಂಡಿದೆ. ಈ ನಡುವೆ ರಿಯಲ್‌ಮಿ 9 5G (Realme 9 5G) ಸ್ಮಾರ್ಟ್‌ಫೋನ್‌ಗೆ ಬೃಹತ್ ಡಿಸ್ಕೌಂಟ್‌ ಘೋಷಣೆ ಮಾಡಲಾಗಿದ್ದು, ಈ ಸ್ಮಾರ್ಟ್‌ಫೋನ್ 48 ಮೆಗಾಪಿಕ್ಸೆಲ್‌ನ ಮುಖ್ಯ ಕ್ಯಾಮೆರಾ, 5,000mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದುಕೊಂಡಿದೆ. ಹಾಗಿದ್ರೆ, ಈ ಸ್ಮಾರ್ಟ್‌ಫೋನ್‌ನ ಪ್ರಮುಖ ಫೀಚರ್ಸ್‌ ಹಾಗೂ ಆಫರ್ ವಿವರಗಳನ್ನು ಗಮನಿಸೋಣ ಬನ್ನಿ.

 ರಿಯಲ್‌ಮಿಯ ಈ ಜನಪ್ರಿಯ ಫೋನ್‌ ಬೆಲೆಯಲ್ಲಿ ಭಾರೀ ಇಳಿಕೆ! 48 MP ಕ್ಯಾಮೆರಾ...

ರಿಯಲ್‌ಮಿ 9 5G ಡಿಸ್‌ಪ್ಲೇ ವಿವರ: ಈ ಸ್ಮಾರ್ಟ್‌ಫೋನ್ ಅನ್ನು ಆಫರ್ ಬೆಲೆಗೆ ಖರೀದಿ ಮಾಡುವ ಮುನ್ನ ಇದರ ಪ್ರಮುಖ ಫೀಚರ್ಸ್‌ ಕಡೆ ಕಣ್ಣಾಯಿಸೋಣ. ಅದರಂತೆ ಈ ಫೋನ್ 6.5 ಇಂಚಿನ ಐಪಿಎಸ್‌ ಎಲ್‌ಸಿಡಿ ಫುಲ್‌ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ (IPS LCD Full HD Plus display) ಆಯ್ಕೆ ಪಡೆದುಕೊಂಡಿದ್ದು, 1080x2400 ಪಿಕ್ಸೆಲ್‌ ಸ್ಕ್ರೀನ್ ರೆಸಲ್ಯೂಶನ್‌ ಸಾಮರ್ಥ್ಯ ಪಡೆದಿದೆ. ಇದರೊಂದಿಗೆ 405ppi ಪಿಕ್ಸೆಲ್ ಸಾಂದ್ರತೆ, 90Hz ರಿಫ್ರೆಶ್ ರೇಟ್‌ ಹಾಗೂ 600 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್ ಆಯ್ಕೆ ಹೊಂದಿದೆ.

ರಿಯಲ್‌ಮಿ 9 5G ಪ್ರೊಸೆಸರ್ ಮಾಹಿತಿ: ಈ ಫೋನ್ 6nm ಚಿಪ್‌ಸೆಟ್‌ನಲ್ಲಿ ಇರುವ ಆಕ್ಟಾ-ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 810 ಸಿಪಿಯು ಬಲ ಪಡೆದುಕೊಂಡಿದ್ದು, ಅತ್ಯುತ್ತಮವಾದ ಕಾರ್ಯಕ್ಷಮತೆಯನ್ನು ಈ ಮೂಲಕ ನಿರೀಕ್ಷೆ ಮಾಡಬಹುದಾಗಿದೆ. ಇದರೊಂದಿಗೆ ಮಾಲಿ G57 MC2 ಜಿಪಿಯು ಶಕ್ತಿ ಪಡೆದಿದ್ದು, ಗೇಮಿಂಗ್‌ ಪ್ರಿಯರಿಗೆ ಅತ್ಯುತ್ತಮ ಅನುಭವ ಸಿಗಲಿದೆ. ಉಳಿದಂತೆ ಈ ಫೋನ್ 4GB RAM ಹಾಗೂ 64 GB ಇಂಟರ್ ಸ್ಟೋರೇಜ್‌ ಆಯ್ಕೆಯಲ್ಲಿ ಇದು ಕಾಣಿಸಿಕೊಂಡಿದೆ.

 ರಿಯಲ್‌ಮಿಯ ಈ ಜನಪ್ರಿಯ ಫೋನ್‌ ಬೆಲೆಯಲ್ಲಿ ಭಾರೀ ಇಳಿಕೆ! 48 MP ಕ್ಯಾಮೆರಾ...

ರಿಯಲ್‌ಮಿ 9 5G ಕ್ಯಾಮೆರಾ ರಚನೆ: ಈ ಸ್ಮಾರ್ಟ್‌ಫೋನ್ ಎಲ್‌ಇಡಿ ಫ್ಲ್ಯಾಶ್‌ ಲೈಟ್‌ ಆಯ್ಕೆಯೊಂದಿಗೆ 48 ಮೆಗಾಪಿಕ್ಸೆಲ್‌ ರಿಯರ್‌ ಕ್ಯಾಮೆರಾದೊಂದಿಗೆ ಟ್ರಿಪಲ್‌ ರಿಯರ್‌ ಕ್ಯಾಮೆರಾ ಆಯ್ಕೆ ಪಡೆದಿದೆ. ಅಂದರೆ ಮುಖ್ಯ ಕ್ಯಾಮೆರಾದೊಂದಿಗೆ 2 ಮೆಗಾಪಿಕ್ಸೆಲ್‌ ಮ್ಯಾಕ್ರೋ ಮತ್ತು ಆಟೋಫೋಕಸ್ 2 ಮೆಗಾಪಿಕ್ಸೆಲ್‌ ಡೆಪ್ತ್ ಸೆನ್ಸಾರ್ ಆಯ್ಕೆ ಪಡೆದುಕೊಂಡಿದೆ. ಹಾಗೆಯೇ ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ 16 ಮೆಗಾಪಿಕ್ಸೆಲ್‌ ಕ್ಯಾಮೆರಾ ಆಯ್ಕೆ ಹೊಂದಿದೆ. ಅಂತಿಮವಾಗಿ ಈ ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿದ್ದು, 18W ಚಾರ್ಜಿಂಗ್‌ ಬೆಂಬಲ ಪಡೆದಿದೆ.

ರಿಯಲ್‌ಮಿ 9 5G ಆಫರ್ ವಿವರ: ಈ ಫೋನ್‌ನ ಸಾಮಾನ್ಯ ದರ 18,999ರೂ.ಗಳಾಗಿದ್ದು, ಇದನ್ನು ನೀವು ಈಗ ಕೇವಲ 13,999ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಯಾಕೆಂದರೆ ಈ ಫೋನ್‌ ಫ್ಲಿಪ್‌ಕಾರ್ಟ್‌ನಲ್ಲಿ (Flipkart) ಬರೋಬ್ಬರಿ 26% ರಿಯಾಯಿತಿ ನೀಡಲಾಗಿದೆ. ಇಷ್ಟೇ ಅಲ್ಲದೆ ನೀವು ಬ್ಯಾಂಕ್‌ ಆಫರ್ ಹಾಗೂ ವಿನಿಮಯ ಆಫರ್ ಮೂಲಕ ಇನ್ನೂ ಕಡಿಮೆ ಬೆಲೆಗೆ ಖರೀದಿ ಮಾಡಬಹುದು. ಈ ಮೂಲಕ 13,200ರೂ.ಗಳ ವರೆಗೆ ಉಳಿತಾಯ ಮಾಡಬಹುದಾಗಿದೆ.

 ರಿಯಲ್‌ಮಿಯ ಈ ಜನಪ್ರಿಯ ಫೋನ್‌ ಬೆಲೆಯಲ್ಲಿ ಭಾರೀ ಇಳಿಕೆ! 48 MP ಕ್ಯಾಮೆರಾ...

ಬ್ಯಾಂಕ್ ವಿಚಾರಕ್ಕೆ ಬರುವುದಾದರೆ ಫ್ಲಿಪ್‌ಕಾರ್ಟ್‌ ಆಕ್ಸಿಸ್‌ ಬ್ಯಾಂಕ್‌ ಕಾರ್ಡ್‌ (Flipkart Axis Bank Card) ಬಳಕೆ ಮಾಡಿ ಖರೀದಿ ಮಾಡಿದ್ರೆ 5% ಕ್ಯಾಶ್‌ಬ್ಯಾಕ್ ಸಿಗಲಿದೆ. ಇದರೊಂದಿಗೆ ವಿಶೇಷ ಬೆಲೆ ಹೆಚ್ಚುವರಿ 5000 ರಿಯಾಯಿತಿ ಸಹ ಸಿಗಲಿದೆ. ಅಷ್ಟೇ ಅಲ್ಲದೆ ಪಾಲುದಾರ ಆಫರ್‌ಗೆ ಸೈನ್ ಅಪ್ ಮಾಡಿ ಫ್ಲಿಪ್‌ಕಾರ್ಟ್‌ ಲೇಟರ್‌ ಪೇ ಆಯ್ಕೆ ಮೂಲಕ ಖರೀದಿ ಮಾಡಿದ್ರೆ 20,000 ಮೌಲ್ಯದ ಉಚಿತ ಟೈಮ್ಸ್ ಪ್ರೈಮ್ ಬೆನಿಫಿಟ್‌ಗಳನ್ನು ಪಡೆದುಕೊಳ್ಳಬಹುದು. ಅಷ್ಟೇ ಅಲ್ಲದೆ ತಿಂಗಳಿಗೆ 493ರೂ.ಗಳನ್ನು ಪಾವತಿ ಮಾಡುವ ಮೂಲಕವೂ ಖರೀದಿ ಮಾಡಬಹುದಾಗಿದೆ.

Best Mobiles in India

English summary
Realme 9 5G smartphone has been announced at a huge discount, this smartphone has got a 48 megapixel main camera, 5,000mAh capacity battery option.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+