Home
ಸುದ್ದಿಜಾಲ

ರಿಯಲ್‌ಮಿ 9 ಪ್ರೊ+ ಬಿಡುಗಡೆಗೆ ಸಜ್ಜು; ಇರಲಿದೆ ಹಾರ್ಟ್‌ ರೇಟ್ ಮಾನಿಟರ್ ಆಯ್ಕೆ!

ಮೊಬೈಲ್ ಮಾರುಕಟ್ಟೆಯಲ್ಲಿ ಭಿನ್ನ ಮಾದರಿಯ ಸ್ಮಾರ್ಟ್‌ಫೋನ್‌ಗಳಿಂದ ರಿಯಲ್‌ಮಿ ಹೆಸರುವಾಸಿಯಾಗಿದೆ. ಸಂಸ್ಥೆಯ ಕೆಲವೊಂದು ಸರಣಿಯ ಫೋನ್‌ಗಳು ಹೆಚ್ಚಿನ ಡಿಮ್ಯಾಂಡ್‌ ಪಡೆದಿವೆ. ಅದರ ಮುಂದುವರಿದ ಭಾಗವಾಗಿ ಕಂಪನಿಯು ಈಗ ರಿಯಲ್‌ಮಿ 9 ಸರಣಿಯಲ್ಲಿ ರಿಯಲ್‌ಮಿ 9 ಪ್ರೊ ಪ್ಲಸ್‌ ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಲು ಸಜ್ಜಾಗುತ್ತಿದೆ. ಈ ಸ್ಮಾರ್ಟ್‌ಫೋನ್ ಹಾರ್ಟ್‌ ರೇಟ್ ಮಾನಿಟರ್ ಆಯ್ಕೆ ಪಡೆದಿರುತ್ತದೆ ಎಂದು ರಿಯಲ್‌ಮಿ ಸಿಇಓ ಮಾಧವ್ ಶೇತ್ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.

ರಿಯಲ್‌ಮಿ 9 ಪ್ರೊ+ ಬಿಡುಗಡೆಗೆ ಸಜ್ಜು; ಇರಲಿದೆ ಹಾರ್ಟ್‌ ರೇಟ್ ಮಾನಿಟರ್ ಆಯ್ಕೆ!

ಹೌದು, ರಿಯಲ್‌ಮಿ ಕಂಪೆನಿ ತನ್ನ ಹೊಸ ರಿಯಲ್‌ಮಿ ಪ್ರೊ ಪ್ಲಸ್‌ (Realme 9+ pro) ಮತ್ತು ರಿಯಲ್‌ಮಿ 9 ಪ್ರೊ (Realme 9 Pro) ಸ್ಮಾರ್ಟ್‌ಫೋನ್‌ಗಳನ್ನು ಇದೇ ಫೆಬ್ರುವರಿ 15 ರಂದು ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ. ಆ ಪೈಕಿ ರಿಯಲ್‌ಮಿ 9ಪ್ರೊ + ಬಳಕೆದಾರರ ಹೃದಯ ಬಡಿತವನ್ನು ಮೇಲ್ವಿಚಾರಣೆ ಮಾಡುತ್ತದೆ ಎಂದು ಹೇಳಲಾಗಿದೆ. ಈ ಬಗ್ಗೆ ಕಂಪನಿಯ ಸಿಇಓ ಮಾಧವ್ ಶೇತ್ ಅವರು ತಮ್ಮ ಟ್ವೀಟ್‌ನಲ್ಲಿ ಡೆಮೊ ವೀಡಿಯೊವನ್ನು ಹಂಚಿಕೊಂಡಿದ್ದಾರೆ.

ರಿಯಲ್‌ಮಿ 9 ಪ್ರೊ+ ಬಿಡುಗಡೆಗೆ ಸಜ್ಜು; ಇರಲಿದೆ ಹಾರ್ಟ್‌ ರೇಟ್ ಮಾನಿಟರ್ ಆಯ್ಕೆ!

ಇನ್ನು ಹೃದಯ ಬಡಿತ ಮಾನಿಟರ್ ಹೊಂದಿರುವ ಕಂಪನಿಯ ಮೊದಲ ಸ್ಮಾರ್ಟ್‌ಫೋನ್ ಇದಾಗಿದೆ. ಸಿಇಓ ಮಾಧವ್ ಶೇತ್ ಅವರು ಹಂಚಿಕೊಂಡ ವಿಡಿಯೋ ಪ್ರಕಾರ, ರಿಯಲ್‌ಮಿ 9 ಪ್ರೊ + ಫೋನಿನ ಹೃದಯ ಬಡಿತ ಸಂವೇದಕವು ಸಾಧನದ ಫಿಂಗರ್‌ಪ್ರಿಂಟ್ ಸಂವೇದಕದ ಸಹಾಯದಿಂದ ಕಾರ್ಯನಿರ್ವಹಿಸುತ್ತದೆ. ವೀಡಿಯೊದಲ್ಲಿ, ಫೋನ್‌ನ ಇನ್ ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್‌ನ ಸಹಾಯದಿಂದ ಹೃದಯ ಬಡಿತವನ್ನು ಅಳೆಯಲಾಗುತ್ತದೆ.

ರಿಯಲ್‌ಮಿ 9 ಪ್ರೊ + ಫೋನ್ 6.43 ಇಂಚಿನ ಪೂರ್ಣ ಹೆಚ್‌ಡಿ + AMOLED ಸ್ಕ್ರೀನ್ ಹೊಂದಿರಲಿದ್ದು, ಡಿಸ್‌ಪ್ಲೇಯು 90Hz ರಿಫ್ರೆಶ್ ದರ ಹೊಂದಿರಲಿದೆ. ಇದರೊಂದಿಗೆ ಇನ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸಂವೇದಕ ಮತ್ತು ಪಂಚ್ ಹೋಲ್ ಕಟೌಟ್ ಅನ್ನು ಹೊಂದಿರುತ್ತದೆ. ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 920 ಚಿಪ್‌ಸೆಟ್‌ ಪ್ರೊಸೆಸರ್ ಸಾಮರ್ಥ್ಯದಲ್ಲಿ ಬರಬಹುದು ಎನ್ನಲಾಗಿದೆ. ಹಾಗೆಯೇ 8GB RAM ಮತ್ತು 256GB ವರೆಗೆ ವೇರಿಯಂಟ್ ಆಯ್ಕೆಗಳು ಇರಲಿವೆ.

ರಿಯಲ್‌ಮಿ 9 ಪ್ರೊ+ ಬಿಡುಗಡೆಗೆ ಸಜ್ಜು; ಇರಲಿದೆ ಹಾರ್ಟ್‌ ರೇಟ್ ಮಾನಿಟರ್ ಆಯ್ಕೆ!

ಈ ಫೋನ್ ಮುಂಭಾಗದಲ್ಲಿ 16MP ಸೆಲ್ಫಿ ಕ್ಯಾಮೆರಾವನ್ನು ಹೊಂದಿರಬಹುದು. ಸಾಧನದ ಹಿಂಭಾಗದಲ್ಲಿ 50 ಮೆಗಾ ಪಿಕ್ಸಲ್ ಪ್ರಾಥಮಿಕ ಸೆನ್ಸಾರ್ ಇರಲಿದೆ. ಹಾಗೆಯೇ ಸೆಕೆಂಡರಿ ಕ್ಯಾಮೆರಾ 8 ಮೆಗಾ ಪಿಕ್ಸಲ್ ಅಲ್ಟ್ರಾ ವೈಡ್ ಆಂಗಲ್ ಲೆನ್ಸ್ ಹೊಂದಿರಲಿದೆ ಮತ್ತು ತೃತೀಯ ಕ್ಯಾಮೆರಾ 2 ಮೆಗಾ ಪಿಕ್ಸಲ್ ಮ್ಯಾಕ್ರೋ ಸಂವೇದಕದೊಂದಿಗೆ ಜೋಡಿಸಬಹುದು. ಇನ್ನು ರಿಯಲ್‌ಮಿ 9 ಪ್ರೊ + ಫೋನ್ 65W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 4500mAh ಬ್ಯಾಟರಿಯನ್ನು ಹೊಂದಿದೆ ಎಂದು ಹೇಳಲಾಗುತ್ತದೆ. ಸಾಧನವು 5G ಸಂಪರ್ಕ, ಡ್ಯುಯಲ್-ಬ್ಯಾಂಡ್ Wi-Fi ಮತ್ತು USB ಟೈಪ್-C ಪೋರ್ಟ್ ಅನ್ನು ಒಳಗೊಂಡಿರಬಹುದು

ಹಾಗೆಯೇ ವರದಿಯ ಪ್ರಕಾರ, ರಿಯಲ್‌ಮಿ 9 ಪ್ರೊ + 5G ಸ್ಮಾರ್ಟ್‌ಫೋನ್ ಭಾರತದಲ್ಲಿ ಎರಡು ಸ್ಟೋರೇಜ್ ಆಯ್ಕೆಗಳಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಲಾಗಿದೆ. 6GB RAM ಮತ್ತು 128GB ಸ್ಟೋರೇಜ್ ವೇರಿಯಂಟ್ 20,999ರೂ.ಗಳ ಪ್ರೈಸ್‌ ಟ್ಯಾಗ್ ಹೊಂದಿರುವ ಸಾಧ್ಯತೆಗಳಿವೆ. ಹಾಗೆಯೇ 8GB + 128GB ಸ್ಟೋರೇಜ್ ವೇರಿಯಂಟ್ ಆಯ್ಕೆ ಸಹ ಇರಲಿದೆ. ಈ ವೇರಿಯಂಟ್ ಬೆಲೆಯನ್ನು ಕಂಪನಿಯು ಇನ್ನು ಬಹಿರಂಗಪಡಿಸಲಾಗಿಲ್ಲ. ಆದರೆ ಲೀಕ್ ಮಾಹಿತಿ ಪ್ರಕಾರ ರಿಯಲ್‌ಮಿ 9 ಪ್ರೊ ಸ್ಮಾರ್ಟ್‌ಫೋನ್ ಅನ್ನು ಭಾರತದಲ್ಲಿ 16,999ರೂ.ಗಳ ಆರಂಭಿಕ ಬೆಲೆಯಲ್ಲಿ ನೀಡಬಹುದು ಎಂದು ಹೇಳಲಾಗುತ್ತಿದೆ. ಇನ್ನು ರಿಯಲ್‌ಮಿ 9 ಪ್ರೊ ಸರಣಿಯ ಸ್ಮಾರ್ಟ್‌ಫೋನ್‌ಗಳನ್ನು ಮಿಡ್‌ನೈಟ್ ಬ್ಲಾಕ್, ಅರೋರಾ ಗ್ರೀನ್ ಮತ್ತು ಸನ್‌ರೈಸ್ ಬ್ಲೂ ಬಣ್ಣಗಳ ಆಯ್ಕೆ ಹೊಂದಿರಲಿವೆ.

Best Mobiles in India

English summary
Realme 9 Pro Plus to Feature Heart Rate Sensor: Details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+