Realme: ರಿಯಲ್‌ಮಿ ಎಂಥಾ ಸಾಧನೆ ಮಾಡಿದೆ ಗೊತ್ತಾ? ಈ ಸ್ಮಾರ್ಟ್‌ಫೋನ್‌ಗಳು ಗ್ರಾಹಕರಿಗೆ ಬಲು ಅಚ್ಚು ಮೆಚ್ಚು
ಸ್ಮಾರ್ಟ್‌ಫೋನ್ (Smartphone) ಮಾರುಕಟ್ಟೆಯಲ್ಲಿ ವಿಶೇಷವಾಗಿ ಗುರುತಿಸಿಕೊಳ್ಳುವ ಫೋನ್‌ಗಳೆಂದರೆ ರಿಯಲ್‌ಮಿ (Realme) ಫೋನ್‌ಗಳು. ಇವು ಅಗ್ಗದ ದರದಲ್ಲಿಯೂ ಅತ್ಯುತ್ತಮ ಫೀಚರ್ಸ್ ಅನ್ನು ನೀಡುವ ಮೂಲಕ ಮಾರುಕಟ್ಟೆಯಲ್ಲಿ ಅಗ್ರ ಸ್ಥಾನ ಪಡೆದಿವೆ. ಅದರಲ್ಲೂ ಪ್ರೀಮಿಯಂ ಫೋನ್‌ಗಳ ವಿಭಾಗದಲ್ಲಿ ದೊಡ್ಡ ಮಟ್ಟದ ಸೌಂಡ್ ಮಾಡಲು ಮುಂದಾಗಿದೆ.
ಹೌದು, ರಿಯಲ್‌ಮಿ ಫೋನ್‌ಗಳು (Realme phones) ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಭದ್ರವಾಗಿ ನೆಲೆಯೂರಿವೆ. ಈ ಕಾರಣಕ್ಕೆ ಚೀನಾದ ಸ್ಮಾರ್ಟ್‌ಫೋನ್ ತಯಾರಕ ರಿಯಲ್‌ಮಿ ಕೇವಲ ಐದು ವರ್ಷಗಳಲ್ಲಿ 200 ಮಿಲಿಯನ್ ಫೋನ್‌ಗಳನ್ನು ರವಾನಿಸಿದೆ. ಹಾಗಿದ್ರೆ, ಏನಿದು ಹೊಸ ವರದಿ?, ರಿಯಲ್‌ಮಿಯ ಮುಂದಿನ ಉದ್ದೇಶ ಏನು ಅನ್ನೋ ಅಗತ್ಯ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

200 ಮಿಲಿಯನ್ ರಿಯಲ್‌ಮಿ ಫೋನ್‌ಗಳು ಸಾಗಾಟ: 200 ಮಿಲಿಯನ್ ಫೋನ್‌ಗಳನ್ನು ರವಾನಿಸಲಾಗಿದೆ ಎಂದು ರಿಯಲ್‌ಮಿ ಅಧಿಕೃತವಾಗಿ ಘೋಷಣೆ ಮಾಡಿದೆ. ಈ ಮೂಲಕ ಈ ಮೈಲಿಗಲ್ಲನ್ನು ತಲುಪಿದ ಐದನೇ ವೇಗದ ಕಂಪನಿಯಾಗಿ ಇದು ಹೆಸರು ಪಡೆದುಕೊಂಡಿದೆ. ಅದರಲ್ಲೂ ಎರಡನೇ ತ್ರೈಮಾಸಿಕದಲ್ಲಿ ಬಹಿರಂಗಪಡಿಸಿದ ಈ ಸಾಧನೆಯು ಗಮನಾರ್ಹವಾಗಿದ್ದು, ಈ ಸಮಯದಲ್ಲಿ ಹೆಚ್ಚಿನ ಫೋನ್‌ಗಳು ಚೀನಾದ ಹೊರಗಡೆಯೇ ಸೇಲ್ ಆಗಿವೆ.
ಕೌಂಟರ್‌ಪಾಯಿಂಟ್ ರಿಸರ್ಚ್‌ನ ಮಾಹಿತಿಯ ಪ್ರಕಾರ, ಒಪ್ಪೋ ಮತ್ತು ವಿವೋ (Oppo, Vivo) ಜೊತೆಗೆ ಬಿಬಿಕೆ ಎಲೆಕ್ಟ್ರಾನಿಕ್ಸ್ ಕುಟುಂಬದ ಭಾಗವಾಗಿರುವ ರಿಯಲ್‌ಮಿಯು ಈ ಮೈಲಿಗಲ್ಲನ್ನು ಸಾಧಿಸಿದೆ. ಈ ಸಾಧನೆಯನ್ನು ವಿವೋ, ಹುವಾವೇ, ಸ್ಯಾಮ್‌ಸಂಗ್ ಹಾಗೂ ಆಪಲ್ (Vivo, Huawei, Samsung, Apple) ಮಾತ್ರ ಕಡಿಮೆ ಸಮಯದಲ್ಲಿ 200 ಮಿಲಿಯನ್ ಗೆರೆಯನ್ನು ಮುಟ್ಟಿ ಸಾಧನೆ ಮಾಡಿದ್ದವು. ಆದರೆ, ಈಗ ರಿಯಲ್‌ಮಿ ಸಹ ಈ ದಾಖಲೆ ಬರೆದಿದೆ. ಅದರಲ್ಲೂ ಜಾಗತಿಕವಾಗಿ ಇಲ್ಲಿಯವರೆಗೆ ಕೇವಲ 14 ಕಂಪನಿಗಳು ಮಾತ್ರ 200 ಮಿಲಿಯನ್ ಫೋನ್‌ಗಳನ್ನು ರವಾನಿಸಿವೆ.

ಇನ್ನು ರಿಯಲ್‌ಮಿ 100 ಮಿಲಿಯನ್ ಸ್ಮಾರ್ಟ್‌ಫೋನ್ ಸಾಗಣೆಯನ್ನು ಮಾಡಲು 3 ವರ್ಷಗಳನ್ನು ತೆಗೆದುಕೊಂಡಿತ್ತು. ಆದರೆ, 200 ಮಿಲಿಯನ್ ಗಡಿಯನ್ನು ದಾಟಲು ಕೇವಲ 2 ವರ್ಷಗಳನ್ನು ತೆಗೆದುಕೊಂಡು ದಾಖಲೆ ಬರೆದಿದೆ. ಈ ನಡುವೆ ಫೋನ್ ಬ್ರಾಂಡ್‌ಗಳ ಸಂಖ್ಯೆಯು 2017 ರಲ್ಲಿ 700 ಕ್ಕಿಂತ ಹೆಚ್ಚಿದ್ದು, ಸೆಪ್ಟೆಂಬರ್‌ನಲ್ಲಿ 250 ಕ್ಕೆ ಗಮನಾರ್ಹವಾಗಿ ಇಳಿಕೆ ಆಗಿವೆ. ಇತ್ತೀಚೆಗೆ, Q3 2023 ಗಾಗಿ ಐಡಿಸಿ ಯ ಶ್ರೇಯಾಂಕಗಳ ಪ್ರಕಾರ ರಿಯಲ್‌ಮಿ 3 ನೇ ಸ್ಥಾನದಿಂದ ಈಗ ಭಾರತದ ಟಾಪ್ 10 ಸ್ಮಾರ್ಟ್‌ಫೋನ್ ಬ್ರ್ಯಾಂಡ್‌ಗಳಲ್ಲಿ 2 ನೇ ಸ್ಥಾನಕ್ಕೆ ಏರಿದೆ.
ಇನ್ನು ರಿಯಲ್‌ಮಿ ತನ್ನ ಇತ್ತೀಚಿನ ಜಿಟಿ ಸರಣಿಯ ಸ್ಮಾರ್ಟ್‌ಫೋನ್, ರಿಯಲ್‌ಮಿ GT5 ಪ್ರೊ ಅನ್ನು ಡಿಸೆಂಬರ್ 7 ರಂದು ಚೀನಾದಲ್ಲಿ ಅನಾವರಣಗೊಳಿಸಲು ಮುಂದಾಗಿದೆ. ಈ ಮೂಲಕ ಕಂಪೆನಿಯು ಪ್ರೀಮಿಯಂ ಫೋನ್‌ಗಳೊಂದಿಗೆ ಸ್ಪರ್ಧಿಸಲು ಸಿದ್ಧವಾಗಿದೆ ಎಂದು ರಿಯಲ್‌ಮಿ ಸಿಎಮ್‌ಓ ಕ್ಸು ಮಾಹಿತಿ ನೀಡಿದ್ದಾರೆ. ಈ ಸ್ಮಾರ್ಟ್‌ಫೋನ್ ಸ್ನಾಪ್‌ಡ್ರಾಗನ್ 8 ಜನ್ 3 ಮೊಬೈಲ್ ಪ್ಲಾಟ್‌ಫಾರ್ಮ್, ಸೋನಿಯ ಹೊಸ ಲೈಟಿಯಾ ಕ್ಯಾಮೆರಾ ಸೆನ್ಸರ್ ಮತ್ತು IMX890 ಸೂಪರ್-ಲೈಟ್ ಪೆರಿಸ್ಕೋಪ್ ಟೆಲಿಫೋಟೋ ಲೆನ್ಸ್ ಅನ್ನು ಹೊಂದಿರಲಿದೆ.

2024 ರಲ್ಲಿ ರಿಯಲ್‌ಮಿ ಪ್ಲ್ಯಾನ್ ಏನು?: 2024 ರಲ್ಲಿ ರಿಯಲ್‌ಮಿ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ತನ್ನ ಹೂಡಿಕೆಯನ್ನು ಗಣನೀಯವಾಗಿ ಹೆಚ್ಚಿಸಲು ಮುಂದಾಗಿದೆ. ಅದರಂತೆ R&D ವೆಚ್ಚದಲ್ಲಿ ಯೋಜಿತ 470% ಹೆಚ್ಚಳದೊಂದಿಗೆ ಅದರ ತಾಂತ್ರಿಕ ಸಾಮರ್ಥ್ಯಗಳನ್ನು ಹೆಚ್ಚಿಗೆ ಮಾಡುವಲ್ಲಿ ಸಜ್ಜಾಗಿದೆ. ಇದರೊಂದಿಗೆ ಬ್ರ್ಯಾಂಡ್, ಇಮೇಜಿಂಗ್, ಗೇಮಿಂಗ್, ಡಿಸ್‌ಪ್ಲೇ ಮತ್ತು ಚಾರ್ಜಿಂಗ್‌ನಲ್ಲಿ ಪರಿಣತಿ ಹೊಂದಿರುವ ಲೀಪ್-ಫಾರ್ವರ್ಡ್ ತಂತ್ರಜ್ಞಾನಗಳಲ್ಲಿನ ಪ್ರಗತಿಗಳ ಮೇಲೆ ಕೇಂದ್ರೀಕರಿಸುತ್ತದೆ ಎಂದು ತಿಳಿದುಬಂದಿದೆ. ಇನ್ನು 33 ಕ್ಕೂ ಹೆಚ್ಚು ಪ್ರಮುಖ ಅಂತಾರಾಷ್ಟ್ರೀಯ ಟೆಕ್ ಪಾಲುದಾರರೊಂದಿಗೆ, ರಿಯಲ್‌ಮಿ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿದೆ.


Click it and Unblock the Notifications








