ರಿಯಲ್ ಮಿ ಬ್ಯಾಂಡ್ V/S ಶಿಯೋಮಿ ಮಿ ಬ್ಯಾಂಡ್ 4: ಖರೀದಿಗೆ ಯಾವುದು ಬೆಸ್ಟ್‌?

|

ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ಫೋನಿನಷ್ಟೇ ಸ್ಮಾರ್ಟ್‌ ಬ್ಯಾಂಡ್ ಮತ್ತು ಸ್ಮಾರ್ಟ್‌ ವಾಚ್ ಡಿವೈಸ್‌ಗಳು ಬೇಡಿಕೆ ಪಡೆಯುತ್ತಿವೆ. ಮುಖ್ಯವಾಗಿ ಫಿಟ್ನೆಸ್ ಪ್ರಿಯರು ಸ್ಮಾರ್ಟ್‌ ಬ್ಯಾಂಡ್‌ ಡಿವೈಸ್‌ಗಳನ್ನು ಹೆಚ್ಚು ಇಷ್ಟಪಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಜನಪ್ರಿಯ ಸ್ಮಾರ್ಟ್‌ಫೋನ್ ಕಂಪನಿಗಳು ಫಿಟ್ನೆಸ್‌ ಬ್ಯಾಂಡ್‌ಗಳನ್ನು ಲಾಂಚ್ ಮಾಡುತ್ತಿವೆ. ಇತ್ತೀಚಿಗಷ್ಟೆ ದೇಶಿಯ ಮಾರುಕಟ್ಟೆಗೆ 'ರಿಯಲ್‌ ಮಿ ಬ್ಯಾಂಡ್' ಬಿಡುಗಡೆ ಆಗಿದೆ. ಈ ಹೊಸ ರಿಯಲ್ ಮಿ ಬ್ಯಾಂಡ್ ಈಗಾಗಲೇ ಮಾರುಕಟ್ಟೆಯಲ್ಲಿ ಸದ್ದು ಮಾಡಿರುವ ರೆಡ್ಮಿ ಬ್ಯಾಂಡ್‌ 4 ಡಿವೈಸ್‌ಗಿಂತ ಉತ್ತಮವೇ?

ರೆಡ್ಮಿ ಬ್ಯಾಂಡ್ 4

ಕಲರ್ ಡಿಸ್‌ಪ್ಲೇಯಲ್ಲಿ ಫೀಚರ್‌ನಲ್ಲಿ ಬಿಡುಗಡೆ ಆಗಿರುವ ರೆಡ್ಮಿ ಬ್ಯಾಂಡ್ 4 ಡಿವೈಸ್‌ ಫಿಟ್ನೆಸ್‌ ಪ್ರಿಯರನ್ನು ಸೆಳೆದಿದೆ. ಅದೇ ಹಾದಿಯಲ್ಲಿ ರಿಯಲ್ ಮಿ ಸಹ ಕಲರ್ ಡಿಸ್‌ಪ್ಲೇಯನ್ನು ಹೊಂದಿದ್ದು, ಅಗ್ಗದ ಬೆಲೆಯಲ್ಲಿ ಕಾಣಿಸಿಕೊಂಡಿದೆ. ಈ ಎರಡು ಬ್ಯಾಂಡ್‌ಗಳ ಫೀಚರ್ಸ್‌ಗಳಲ್ಲಿ ಬಹುತೇಕ ಹೋಲಿಕೆ ಕಂಡು ಬಂದರು ಕೆಲವು ಅಂಶಗಳಲ್ಲಿ ಭಿನ್ನತೆಗಳಿವೆ. ಆದ್ರೆ ಅಗ್ಗದ ಬೆಲೆಯನ್ನು ಹೊಂದಿರುವ ರಿಯಲ್ ಮಿ ಅಬ್ಬರಿಸುವ ಲಕ್ಷಣಗಳು ಹೆಚ್ಚಿವೆ. ರಿಯಲ್ ಮಿ ಬ್ಯಾಂಡ್ ಮತ್ತು ಮಿ ಬ್ಯಾಂಡ್ 4 ನಡುವಿನ ವ್ಯತ್ಯಾಸಗಳೆನು? ಖರೀದಿಗೆ ಯಾವುದು ಬೆಸ್ಟ್ ? ಎಂಬುದನ್ನು ಈ ಲೇಖನದಲ್ಲಿ ತಿಳಿಸಲಾಗಿದೆ. ಮುಂದೆ ಓದಿರಿ.

ಡಿಸ್‌ಪ್ಲೇ ಹೇಗಿದೆ

ಡಿಸ್‌ಪ್ಲೇ ಹೇಗಿದೆ

ರಿಯಲ್ ಮಿ ಬ್ಯಾಂಡ್ 0.96 ಇಂಚಿನ ಕಲರ್ ಡಿಸ್‌ಪ್ಲೇಯನ್ನು ಹೊಂದಿದ್ದು, ಪಿಕ್ಸಲ್ ರೆಸಲ್ಯೂಶನ್ 80x160 ಆಗಿದೆ. ಹಾಗೆಯೇ 3D ಟೆಂಪರ್ ಗ್ಲಾಸ್ ಹೊಂದಿದೆ. ಅದೇ ರೀತಿ ಮಿ ಬ್ಯಾಂಡ್ 4 ಸಹ 0.96 ಇಂಚಿನ ಕಲರ್ ಡಿಸ್‌ಪ್ಲೇಯನ್ನು ಹೊಂದಿದ್ದು, ಪಿಕ್ಸಲ್ ರೆಸಲ್ಯೂಶನ್ 120×240 ಆಗಿದ್ದು, 2.5 ಟೆಂಪರ್ ಗ್ಲಾಸ್‌ ಹೊಂದಿದೆ. ಪಿಕ್ಸಲ್ ರೆಸಲ್ಯೂಶನ್‌ನಲ್ಲಿ ಮಿ ಬ್ಯಾಂಡ್ ಭಿನ್ನತೆ ಹೊಂದಿದೆ.

ಬ್ಯಾಟರಿ ಲೈಫ್

ಬ್ಯಾಟರಿ ಲೈಫ್

ರಿಯಲ್‌ ಮಿ ಬ್ಯಾಂಡ್ ಡಿವೈಸ್ 90mAh ಬ್ಯಾಟರಿ ಬ್ಯಾಕ್‌ಅಪ್ ಪಡೆದಿದ್ದು, ದೀರ್ಘ ಬಾಳಿಕೆ ಲಭ್ಯವಾಗಲಿದೆ. ಅದೇ ರೀತಿ ರೆಡ್ಮಿ ಮಿ ಬ್ಯಾಂಡ್ 4 ಡಿವೈಸ್ 135mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಒಳಗೊಂಡಿದ್ದು, ದೀರ್ಘ ಬಾಳಿಕೆ ನೀಡಲಿದೆ. ಮಿ ಬ್ಯಾಂಡ್ ಬ್ಯಾಟರಿ ರಿಯಲ್ ಮಿ ಬ್ಯಾಂಡ್‌ಗಿಂತ ಹೆಚ್ಚಾಗಿದೆ.

ಬೆಲೆ ಎಷ್ಟು

ಬೆಲೆ ಎಷ್ಟು

ಸದ್ಯ ಬ್ರ್ಯಾಂಡೆಡ್‌ ಸಂಸ್ಥೆಗಳ ಸ್ಮಾರ್ಟ್‌ ಬ್ಯಾಂಡ್‌ ಪೈಕಿ ರಿಯಲ್ ಮಿ ಸಂಸ್ಥೆಯ ಬ್ಯಾಂಡ್ ಅತೀ ಅಗ್ಗದ ಪ್ರೈಸ್‌ಟ್ಯಾಗ್ ಹೊಂದಿದೆ. ರಿಯಲ್ ಮಿ ಬ್ಯಾಂಡ್ ಡಿವೈಸ್ ಬೆಲೆಯು 1499ರೂ.ಗಳು ಆಗಿದೆ. ಇನ್ನು ಈ ಡಿವೈಸ್ ಇದೇ ಮಾರ್ಚ್ 9 ರಿಂದ ಖರೀದಿಗೆ ಲಭ್ಯವಾಗಲಿದ್ದು, ಯೆಲ್ಲೊ, ಬ್ಲ್ಯಾಕ್ ಮತ್ತು ಗ್ರೀನ್ ಬಣ್ಣಗಳ ಆಯ್ಕೆಯಲ್ಲಿ ದೊರೆಯಲಿದೆ. ಇನ್ನು ರೆಡ್ಮಿ ಮಿ ಬ್ಯಾಂಡ್ 4 ಡಿವೈಸ್ ಬೆಲೆಯು 2,299ರೂ.ಗಳಾಗಿದೆ.

ಕೊನೆಯ ಮಾತು

ಕೊನೆಯ ಮಾತು

ಸದ್ಯ ಸ್ಮಾರ್ಟ್‌ ಬ್ಯಾಂಡ್ ಡಿವೈಸ್‌ಗಳು ಹೆಚ್ಚು ಆಕರ್ಷಕ ಅನಿಸಿವೆ. ರಿಯಲ್‌ ಮಿ ಬ್ಯಾಂಡ್‌ ಗಿಂತ ಮೊದಲು ಮಾರುಕಟ್ಟೆಗೆ ಬಂದಿರುವ ಮಿ ಬ್ಯಾಂಡ್ 4 ಬ್ಯಾಟರಿ ಮತ್ತು ಸುಮಾರು 50 ಮೀಟರ್ ವರೆಗೂ ವಾಟರ್ ರೆಸಿಸ್ಟನ್ಸ್ ಸೌಲಭ್ಯಗಳಿಂದ ಆಕರ್ಷಿಸಿದೆ. ಹಾಗೂ ಬಜೆಟ್ ಬೆಲೆಯನ್ನು ಹೊಂದಿದೆ. ಇನ್ನು ನ್ಯೂ ಲುಕ್ ನೊಂದಿಗೆ ಹೊಸದಾಗಿ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿರುವ ರಿಯಲ್ ಮಿ ಬ್ಯಾಂಡ್ ಮೊದಲ ಅಗ್ಗದ ಬೆಲೆ ಹೊಂದಿರುವುದೇ ಮೊದಲ ಆಕರ್ಷಣೆ ಆಗಿದೆ. ಅಗ್ಗದ ಬೆಲೆಗೆ ಒಂದು ಸ್ಮಾರ್ಟ್ ಬ್ಯಾಂಡ್ ಖರೀದಿಸಬೇಕು ಎಂದಾದರೇ ರಿಯಲ್ ಮಿ ಬ್ಯಾಂಡ್ ಖರೀದಿಸಲು ಅಡ್ಡಿಯಿಲ್ಲ.

Best Mobiles in India

English summary
Realme Band vs Xiaomi Mi Band 4 Here we are comparing the two fitness trackers from Realme and Xiaomi.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X