ಜಸ್ಟ್ 1,499ರೂ.ಗೆ ಲಾಂಚ್ ಆಯ್ತು 'ರಿಯಲ್ ಮಿ ಬ್ಯಾಂಡ್'!

|

ರಿಯಲ್ ಮಿ ಸಂಸ್ಥೆಯು ಇಂದು ರಿಯಲ್‌ ಮಿ 6 ಸ್ಮಾರ್ಟ್‌ಫೋನ್ ಸರಣಿಯನ್ನು ಬಿಡುಗಡೆ ಮಾಡಿದ್ದು, ಅದರೊಂದಿಗೆ ಬಹುನಿರೀಕ್ಷಿತ ರಿಯಲ್ ಮಿ ಬ್ಯಾಂಡ್ ಡಿವೈಸ್‌ ಅನ್ನು ಬಿಡುಗಡೆ ಮಾಡಿದೆ. ಸದ್ಯ ಮಾರುಕಟ್ಟೆಯಲ್ಲಿ ಸ್ಮಾರ್ಟ್‌ ಬ್ಯಾಂಡ್‌ಗಳಿಗೆ ಹೆಚ್ಚಿನ ಬೇಡಿಕೆ ಇದ್ದು, ಶಿಯೋಮಿ, ಹಾನರ್ ಬಜೆಟ್‌ ಬೆಲೆಯಲ್ಲಿ ಬ್ಯಾಂಡ್‌ ಪರಿಚಯಿಸಿವೆ. ಈ ನಿಟ್ಟಿನಲ್ಲಿ ರಿಯಲ್‌ ಮಿ ಸಹ ತನ್ನ ರಿಯಲ್ ಮಿ ಬ್ಯಾಂಡ್‌ ಅನ್ನು 1,499ರೂ. ಪ್ರೈಸ್‌ಟ್ಯಾಗ್‌ನಲ್ಲಿ ಲಾಂಚ್ ಮಾಡಿದೆ.

ರಿಯಲ್ ಮಿ

ಹೌದು, ರಿಯಲ್ ಮಿ ಸಂಸ್ಥೆಯು ಇಂದು ದೇಶಿಯ ಮಾರುಕಟ್ಟೆಗೆ ರಿಯಲ್ ಮಿ ಬ್ಯಾಂಡ್‌ ಅನ್ನು ಲಾಂಚ್ ಮಾಡಿದೆ. ಈ ಡಿವೈಸ್ ಬಳಕೆದಾರ ದೈನಂದಿನ ಚಟುವಟಿಕೆಗಳ ಮೇಲೆ ನಿಗಾ ಇಡಲಿದೆ. ಉನ್ನತ ಮಟ್ಟದ ಹಾರ್ಟ್‌ ರೇಟ್ ಸೆನ್ಸಾರ್ ಸೌಲಭ್ಯ ಹೊಂದಿದ್ದು, ಗ್ರಾವಿಟಿ ಸೆನ್ಸಾರ್, ರಿಯಲ್ ಮಿ ಲಿಂಕ್ ಆಪ್, ಕ್ರಿಕೆಟ್ ಮೋಡ್ ಸೌಲಭ್ಯಗಳನ್ನು ಪಡೆದಿದೆ. ಇನ್ನು ಈ ಬ್ಯಾಂಡ್ ಬ್ಲ್ಯಾಕ್, ಗ್ರೀನ್ ಮತ್ತು ಯೆಲ್ಲೊ ಬಣ್ಣಗಳ ಆಯ್ಕೆಯನ್ನು ಹೊಂದಿದೆ. ರಿಯಲ್ ಮಿ ಬ್ಯಾಂಡ್ ಇನ್ನಷ್ಟು ಮಾಹಿತಿಗೆ ಮುಂದೆ ಓದಿರಿ.

ಬ್ಯಾಂಡ್ ರಚನೆ

ಬ್ಯಾಂಡ್ ರಚನೆ

ರಿಯಲ್ ಮಿ ಬ್ಯಾಂಡ್ 0.96 ಇಂಚಿನ ಕಲರ್ ಡಿಸ್‌ಪ್ಲೇಯನ್ನು ಹೊಂದಿದ್ದು, ಈ ಡಿಸ್‌ಪ್ಲೇಯ ಪಿಕ್ಸಲ್ ರೆಸಲ್ಯೂಶನ್ 80x160 ಆಗಿದೆ. ಡಿಸ್‌ಪ್ಲೇಯಲ್ಲಿ ನ್ಯಾವಿಗೇಶನ್ನಗಾಗಿ ಒಂದು ಬಟನ್ ನೀಡಲಾಗಿದೆ. ಇದರೊಂದಿಗೆ 5 ಡಯಲ್ ಫೇಸ್‌ ಅನ್ನು ಹೊಂದಿದೆ. ಡಿಸ್‌ಪ್ಲೇ ಬೆಳಕನ್ನು ಅಡ್ವಸ್ಟ್ ಮಾಡುವ ಆಯ್ಕೆ ಸಹ ಪಡೆದುಕೊಂಡಿದೆ.

ಫಿಟ್ನೆಸ್ ಫೀಚರ್ಸ್‌

ಫಿಟ್ನೆಸ್ ಫೀಚರ್ಸ್‌

ರಿಯಲ್ ಮಿ ಬ್ಯಾಂಡ್ ಡಿವೈಸ್ ಯೋಗಾ, ರನ್ನಿಂಗ್, ವಾಕಿಂಗ್, ಕ್ರಿಕೆಟ್ ಸೇರಿಂದತೆ ಒಟ್ಟು ಒಂಬತ್ತು ಮೋಡ್‌ ಆಯ್ಕೆಗಳನ್ನು ಒಳಗೊಂಡಿದೆ. ಇದರೊಂದಿಗೆ ಉನ್ನತ ಮಟ್ಟದ ಹಾರ್ಟ್‌ ರೇಟ್ ಸೆನ್ಸಾರ್ ಪಡೆದಿದೆ. 24*7 ಸ್ಲಿಪ್ ಟ್ರಾಕರ್ ಸೌಲಭ್ಯವನ್ನು ಹೊಂದಿದೆ. ನೀರು ಕುಡಿಯುವುದನ್ನು ನೆನಪಿಸೊ ಸೌಲಭ್ಯ ಸಹ ಇದರಲ್ಲಿದೆ. ಸಾಮಾಜಿಕ ತಾಣಗಳ ನೋಟಿಫಿಕೇಶನ್ ಡಿಸ್‌ಪ್ಲೇ ಮಾಡುತ್ತದೆ.

ರಿಯಲ್ ಮಿ ಲಿಂಕ್ ಆಪ್

ರಿಯಲ್ ಮಿ ಲಿಂಕ್ ಆಪ್

ರಿಯಲ್ ಮಿ ಬ್ಯಾಂಡ್ ಡಿವೈಸ್ ರಿಯಲ್ ಮಿ ಲಿಂಕ್ ಆಪ್ ಅನ್ನು ಹೊದಿದ್ದು, ಈ ಆಪ್ ಮೂಲಕ ಡಿವೈಸ್‌ ಅನ್ನು ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗೆ ಕನೆಕ್ಟ್ ಮಾಡಬಹುದಾಗಿದೆ. ಸ್ಮಾರ್ಟ್‌ಫೋನ್‌ಗೆ ಈ ಡಿವೈಸ್‌ ಅನ್ನು ಕನೆಕ್ಟ್ ಮಾಡುವುದರಿಂದ ಸ್ಮಾರ್ಟ್‌ಫೋನಿನ ನೋಟಿಫಿಕೇಶನ್‌ಗಳನ್ನು ಬ್ಯಾಂಡ್‌ನಲ್ಲಿಯೇ ನೋಡಬಹುದಾಗಿದೆ.

ಬ್ಯಾಟರಿ ಮತ್ತು ಇತರೆ

ಬ್ಯಾಟರಿ ಮತ್ತು ಇತರೆ

ರಿಯಲ್‌ ಮಿ ಬ್ಯಾಂಡ್ ಡಿವೈಸ್ 90mAh ಬ್ಯಾಟರಿ ಬ್ಯಾಕ್‌ಅಪ್ ಪಡೆದಿದ್ದು, ದೀರ್ಘ ಬಾಳಿಕೆ ಸಾಮರ್ಥ್ಯ ನೀಡಲಿದೆ ಎನ್ನಲಾಗಿದೆ. ಆಕ್ಸಲರೋಮೀಟರ್, ಬ್ಲೂಟೂತ್ 4.2, ಸೌಲಭ್ಯಗಳನ್ನು ಪಡೆದಿದೆ. ಇನ್ನು ಈ ಡಿವೈಸ್ ಆಂಡ್ರಾಯ್ಡ್ 5.0 ಲಾಲಿಪಾಪ್ ಓಎಸ್‌ ಮೇಲ್ಪಟ್ಟ ಸ್ಮಾರ್ಟ್‌ಫೋನ್‌ಗಳೊಂದಿಗೆ ಸಪೋರ್ಟ್‌ ಮಾಡಲಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಭಾರತದಲ್ಲಿ ಬಿಡುಗಡೆ ಆಗಿರುವ ರಿಯಲ್ ಮಿ ಬ್ಯಾಂಡ್ ಡಿವೈಸ್ ಬೆಲೆಯು 1499ರೂ.ಗಳು ಆಗಿದೆ. ಇನ್ನು ಈ ಬ್ಯಾಂಡ್ ಇದೇ ಮಾರ್ಚ್ 9ರಂದು ರಿಯಲ್ ಮಿ ತಾಣದಲ್ಲಿ ಸೇಲ್ ಆರಂಭಿಸಲಿದ್ದು, ಬ್ಲ್ಯಾಕ್, ಗ್ರೀನ್ ಮತ್ತು ಯೆಲ್ಲೊ ಬಣ್ಣಗಳ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಾಗಲಿದೆ.

Most Read Articles
Best Mobiles in India

English summary
Realme Band price in India has been set at Rs. 1,499.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X