ಒಂದು ಬ್ರಾಂಡ್‌ನಿಂದ ಕೋಟಿಗಟ್ಟಲೇ ಸಂಭಾವನೆ... ಮತ್ತೊಂದು ಬ್ರಾಂಡ್‌ನ ಫೋನ್ ಬಳಸಿ ಸಿಕ್ಕಿಬಿದ್ದ ಶಾರುಖ್!
ಭಾರತದಲ್ಲಿ ಸಿನಿಮಾ ಹಾಗೂ ಸಿನಿಮಾದ ನಟರು ಜನರ ಮೇಲೆ ತಮ್ಮದೇ ಆದ ಪ್ರಭಾವ ಬೀರುತ್ತಾರೆ. ಸಿನಿಮಾ ನಟರನ್ನೇ ಅನುಕರಣೆ ಮಾಡುವ ಅದೆಷ್ಟೋ ಮಂದಿ ನಮ್ಮ ನಡುವೆ ಇದ್ದಾರೆ. ಅಂದರೆ ಅವರು ಧರಿಸಿದ ರೀತಿಯ ಬಟ್ಟೆಗಳನ್ನೇ ಧರಿಸುವುದು, ಅವರು ಬಳಕೆ ಮಾಡುವ ವಾಹನಗಳನ್ನೇ ಬಳಸುವುದು, ಅಷ್ಟೇ ಯಾಕೆ ಅವರು ಯಾವ ಫೋನ್ ಬಳಕೆ ಮಾಡುತ್ತಾರೆ ಎಂದು ತಿಳಿದು ಅದೇ ರೀತಿಯ ಫೋನ್ ಖರೀದಿ ಮಾಡುವ ಅಭಿಮಾನಿಗಳು ನಮ್ಮಲ್ಲಿದ್ದಾರೆ.
ಹೌದು, ಸಿನಿಮಾ ಅತ್ಯಂತ ಪ್ರಭಾವಶಾಲಿ ಮಾಧ್ಯಮ. ಇದನ್ನೇ ಬಂಡವಾಳ ಮಾಡಿಕೊಳ್ಳುವ ಕೆಲವು ಕಂಪೆನಿಗಳು ನಟ-ನಟಿಯರನ್ನು ಬಳಕೆ ಮಾಡಿಕೊಂಡು ಜಾಹೀರಾತು ಮಾಡಿಸುತ್ತಾರೆ. ಈ ಮೂಲಕ ಅವರ ಪ್ರೊಡಕ್ಟ್‌ಗಳನ್ನು ಸೇಲ್ ಮಾಡುತ್ತಾರೆ. ಈ ಪೀಠಿಕೆ ಯಾಕೆ ಅಂದರೆ ಜವಾನ್‌ನಲ್ಲಿ ಶಾರುಖ್ ಖಾನ್ (Shahrukh Khan) ಸ್ಮಾರ್ಟ್‌ಫೋನ್‌ನೊಂದಿಗೆ ಕಾಣಿಸಿಕೊಂಡಿದ್ದು, ಇದು ಅಚ್ಚರಿ ಮೂಡಿಸಿದೆ. ಅರೇ... ಸ್ಮಾರ್ಟ್‌ಫೋನ್ ನೊಂದಿಗೆ ಕಾಣಿಸಿಕೊಂಡರೆ ಅದೇನು ಅಚ್ಚರಿ ಅಂತೀರಾ. ಹಾಗಿದ್ರೆ, ಈ ಸ್ಟೋರಿ ಓದಿ.

ಹದ್ದಿನ ಕಣ್ಣಿನ ವೀಕ್ಷಕರು: ಶಾರುಖ್ ಖಾನ್ ಏನು ಮಾಡಿದ್ರೂ ಸಹ ಅವರ ಅಭಿಮಾನಿಗಳಿಗೆ ಅನುಕರಣೀಯ ಹಾಗೂ ಸಂತಸ. ಅದರಂತೆ ವೀಕ್ಷಕರು ಜವಾನ್‌ನಲ್ಲಿ ಶಾರುಖ್ ಖಾನ್ ಬಗ್ಗೆ ಅಸಾಮಾನ್ಯವಾದುದನ್ನು ಗುರುತಿಸಿದ್ದಾರೆ. ಈ ಘಟನೆ ಕೆಲವರಿಗೆ ಕೋಪ ಉಂಟು ಮಾಡಿದ್ರೆ ಇನ್ನೂ ಕೆಲವರಿಗೆ ಗೊಂದಲ ಉಂಟು ಮಾಡಿದೆ. ವಿಷಯ ಏನೆಂದರೆ ಖಾನ್ ಅವರು ರಿಯಲ್‌ಮಿ ಫೋನ್‌ಗಳ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ. ಆದರೆ ಈಗ ಅವರು ಈ ಚಿತ್ರದಲ್ಲಿ ಪೊಕೊ X4 (Poco X4) ಫೋನ್ ಬಳಕೆ ಮಾಡಿರುವುದು.
ರಿಯಲ್‌ಮಿ ಫೋನ್‌ಗಳ ಬ್ರಾಂಡ್ ಅಂಬಾಸಿಡರ್ ಆದ ನಂತರ ಅದೆಷ್ಟೋ ಅಭಿಮಾನಿಗಳು ಇದೇ ಫೋನ್ ಅನ್ನು ಖರೀದಿ ಮಾಡಿದ್ದಾರೆ. ಈ ಕ್ಷಣಕ್ಕೂ ಅವರ ಹಲವಾರು ಅಭಿಮಾನಿಗಳು ಈ ಫೋನ್ ಕೊಂಡುಕೊಳ್ಳುತ್ತಿದ್ದಾರೆ. ಆದರೆ, ಈ ಚಿತ್ರದಲ್ಲಿ ಶಾರುಖ್ ಖಾನ್ ಪೊಕೊ X4 ಫೋನ್ ಬಳಕೆ ಮಾಡಿರುವುದರಿಂದಾಗಿ ಅಭಿಮಾನಿಗಳ ಆಕ್ರೋಶಕ್ಕೆ ಗುರಿಯಾಗಿದ್ದಾರೆ ಎನ್ನಲಾಗಿದೆ.ಇನ್ನು ಪೊಕೊ ಹಾಗೂ ರಿಯಲ್‌ಮಿ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಸ್ಪರ್ಧಿಗಳಾಗಿದ್ದು, ಒಂದಕ್ಕೊಂದು ತೀವ್ರ ರೀತಿಯಲ್ಲಿ ಹೋರಾಟ ಮಾಡಲಿವೆ.
ಶಾರುಖ್ ಖಾನ್ ಯಾವ ಫೋನ್ ಬಳಕೆ ಮಾಡಿದ್ರೆ ಯಾರಿಗೇನು ನಷ್ಟ?: ಜವಾನ್ ಸಿನಿಮಾ ಒಂದು ಕಡೆ ಜನರನ್ನು ಆಕರ್ಷಿಸಿದರೆ ಈ ನಟ ಬಳಕೆ ಮಾಡಿರುವ ಫೋನ್ ಜನರ ಕಣ್ಣುಗುಡ್ಡೆಯನ್ನು ಅಗಲ ಮಾಡಿಸಿದೆ. ಈ ಮೂಲಕ ಪೊಕೊ ತನ್ನದೇ ಆದ ರೀತಿಯಲ್ಲಿ ರಿಯಲ್‌ಮಿ ವಿರುದ್ಧ ಸಮರ ಸಾರಿದೆ ಎಂದು ಹೇಳಲಾಗಿದೆ. ಹಾಗಿದ್ರೆ, ಖಾನ್ ಅವರು ಯಾಕೆ ರಿಯಲ್‌ಮಿ ಫೋನ್ ಬಳಕೆ ಮಾಡಿಲ್ಲ ಎಂದು ನಿಮಗೆ ಅನಿಸಿರಬೇಕಲ್ಲವೇ.?
ರಿಯಲ್‌ಮಿ ಬ್ರ್ಯಾಂಡ್‌ನ ರಾಯಭಾರಿಯಾಗಿರುವ ಶಾರುಖ್ ಖಾನ್ ಜವಾನ್‌ನಲ್ಲಿ ಪೊಕೊ ಫೋನ್ ಅನ್ನು ಬಳಕೆ ಮಾಡಲು ಹಲವಾರು ಕಾರಣಗಳು ಇರಬಹುದು. ಅದರಲ್ಲಿ ಪ್ರಮುಖವಾಗಿ ಪೊಕೊ ಈ ಚಿತ್ರದ ನಿರ್ಮಾಪಕರೊಂದಿಗೆ ಉತ್ಪನ್ನದ ಉದ್ಯೋಗ ಒಪ್ಪಂದವನ್ನು ಹೊಂದಿರಬಹುದು ಎನ್ನಲಾಗಿದೆ. ನಟರು ಸಾಮಾನ್ಯವಾಗಿ ಚಲನಚಿತ್ರಗಳಲ್ಲಿ ಸ್ಮಾರ್ಟ್ ಡಿವೈಸ್‌ಗಳನ್ನು ವಿಶೇಷವಾಗಿ ಪ್ರದರ್ಶನ ಮಾಡುತ್ತಾರೆ. ಇದರ ಭಾಗವಾಗಿಯೇ ಈಗ ಖಾನ್ ಸಹ ಈ ಫೋನ್ ಬಳಕೆ ಮಾಡಿದ್ದಾರೆ ಎಂದು ತೋರುತ್ತದೆ.
ಇದನ್ನು ಉದಾಹರಣೆಗೆ ಸಹಿತ ಹೇಳುವುದಾದ್ರೆ, ರಾಕಿ ರಾಣಿ ಕಿ ಪ್ರೇಮ್ ಕಹಾನಿನಲ್ಲಿ ಗ್ಯಾಲಕ್ಸಿ Z ಫ್ಲಿಪ್ 4 ನೊಂದಿಗೆ ಕಾಣಿಸಿಕೊಂಡ ಆಲಿಯಾ ಭಟ್ ಅವರನ್ನು ನೀವು ನೋಡಿರಬಹುದು. ಈ ಮೂಲಕ ಸ್ಯಾಮ್‌ಸಂಗ್ ಅಧಿಕೃತವಾಗಿ ಆಲಿಯಾ ಭಟ್ ಅವರನ್ನು ಒಳಗೊಂಡ ಅಭಿಯಾನವನ್ನು ಘೋಷಣೆ ಮಾಡಿತ್ತು. ಈ ರೀತಿಯ ಪಾಲುದಾರಿಕೆಗಳು ಆನ್-ಸ್ಕ್ರೀನ್ ನಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುತ್ತಲೇ ಇರುತ್ತವೆ.
ಇನ್ನು ರಿಯಲ್‌ಮಿ ಈ ವರ್ಷದ ಮೇ ತಿಂಗಳಲ್ಲಿ ಶಾರುಖ್ ಖಾನ್ ಅವರನ್ನು ಬ್ರಾಂಡ್ ಅಂಬಾಸಿಡರ್ ಆಗಿ ನೇಮಿಸಿಕೊಂಡಿದೆ. ರಿಯಲ್‌ಮಿ ಸ್ಮಾರ್ಟ್‌ಫೋನ್ ವರ್ಗದ ಬ್ರಾಂಡ್ ಅಂಬಾಸಿಡರ್ ಆಗಿ ಶಾರುಖ್ ಖಾನ್ ಅವರನ್ನು ಪಡೆಯಲು ನಾವು ತುಂಬಾ ಉತ್ಸುಕರಾಗಿದ್ದೇವೆ. ಅವರ ಡೇರ್-ಟು-ಲೀಪ್ ಸ್ಪಿರಿಟ್ ನಮ್ಮ ಬ್ರ್ಯಾಂಡ್‌ನ ತತ್ವಶಾಸ್ತ್ರದೊಂದಿಗೆ ಸಂಪೂರ್ಣವಾಗಿ ಅನುರಣಿಸುತ್ತದೆ ಎಂದು ರಿಯಲ್‌ಮಿ ಹೇಳಿಕೊಂಡಿದೆ.

ಆದರೆ ಈಗ ಟ್ವಿಟರ್‌ನಲ್ಲಿ ಕೆಲವು ವೀಕ್ಷಕರು ಈ ಚಿತ್ರಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದು, ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ವಿಷಯ ಏನೆಂದರೆ 2022 ರಲ್ಲಿ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಫೋನ್ ಪೋಕೊ X4 ಪ್ರೊ ಅನ್ನು ಶಾರುಖ್ ಖಾನ್ ರಿಯಲ್‌ಮಿ ಜೊತೆ ಒಪ್ಪಂದ ಮಾಡಿಕೊಳ್ಳುವ ಮೊದಲೇ ಚಿತ್ರದಲ್ಲಿ ಬಳಕೆ ಮಾಡಲಾಗಿದೆ ಎಂದು ಸಹ ಹೇಳಲಾಗುತ್ತಿದೆ.


Click it and Unblock the Notifications








