Home
ಸುದ್ದಿಜಾಲ

Realme: ರಿಯಲ್‌ಮಿ ಬಡ್ಸ್ ಏರ್ 6 ಮತ್ತು ಏರ್ 6 ಫೀಚರ್ಸ್‌ ಘೋಷಣೆ! ಸಖತ್‌ ಬೇಸ್‌..

ರಿಯಲ್‌ಮಿ ಸ್ಮಾರ್ಟ್‌ಫೋನ್‌ಗಳು (Realme smartphone) ಮಾರುಕಟ್ಟೆಯಲ್ಲಿ ಹೇಗೆ ಜನಪ್ರಿಯತೆ ಪಡೆದುಕೊಂಡಿವೆಯೋ ಅದೇ ರೀತಿ ರಿಯಲ್‌ಮಿ ಇಯರ್‌ಬಡ್ಸ್‌ಗಳೂ (Realme Earbuds) ಸಹ ಭರ್ಜರಿ ಬೇಡಿಕೆ ಪಡೆದುಕೊಂಡಿವೆ. ಈ ಬೆಳವಣಿಗೆ ನಡುವೆ ಸೈಲೆಂಟ್‌ ಆಗಿ ರಿಯಲ್‌ಮಿ ಎರಡು ಇಯರ್‌ಬಡ್ಸ್‌ಗಳನ್ನು ಲಾಂಚ್‌ ಮಾಡಿದೆ.

ಹೌದು, ಇಂದು ರಿಯಲ್‌ಮಿ ತನ್ನ ಇತ್ತೀಚಿನ ಇಯರ್‌ಬಡ್‌ಗಳಾದ ರಿಯಲ್‌ಮಿ ಬಡ್ಸ್ ಏರ್ 6 ಮತ್ತು ಏರ್ 6 ಪ್ರೊನ (Realme Buds Air 6 and Realme Air 6 Pro) ಸಂಪೂರ್ಣ ಫೀಚರ್ಸ್‌ ಅನ್ನು ವೆಬ್‌ಸೈಟ್‌ನಲ್ಲಿ ಬಹಿರಂಗಪಡಿಸಿದೆ. ಎರಡೂ ಮಾದರಿಗಳು ಒಂದೇ ರೀತಿಯ ವಿನ್ಯಾಸವನ್ನು ಹೊಂದಿದ್ದು, ಫೀಚರ್ಸ್‌ ವಿಭಾಗದಲ್ಲಿ ಭಿನ್ನತೆಯನ್ನು ಕಾಣಬಹುದಾಗಿದೆ. ಹಾಗಿದ್ರೆ ಬನ್ನಿ ಈ ಎರಡೂ ಡಿವೈಸ್‌ಗಳು ಏನೆಲ್ಲಾ ಫೀಚರ್ಸ್‌ ಆಯ್ಕೆ ಪಡೆದುಕೊಂಡಿವೆ ನೋಡೋಣ.

ರಿಯಲ್‌ಮಿ ಬಡ್ಸ್ ಏರ್ 6 ಮತ್ತು ಏರ್ 6  ಫೀಚರ್ಸ್‌ ಘೋಷಣೆ! ಸಖತ್‌ ಬೇಸ್‌..

ರಿಯಲ್‌ಮಿ ಬಡ್ಸ್‌ ಏರ್ 6: ಬಡ್ಸ್ ಏರ್ 6 ಅನ್ನು 12.4 ಎಂಎಂ ಡೈನಾಮಿಕ್ ಡ್ರೈವರ್‌ನೊಂದಿಗೆ ಪ್ಯಾಕ್‌ ಮಾಡಲಾಗಿದ್ದು, ಇದು ಭರ್ಜರಿ ಬೇಸ್‌ ಮತ್ತು ಸ್ಪಷ್ಟ ಮತ್ತು ಪ್ರಕಾಶಮಾನವಾದ ಮಿಡ್‌ಗಳ ಆಯ್ಕೆಯನ್ನು ನೀಡಲಿದೆ. ಬಡ್ಸ್‌ಗಳು ಸುಧಾರಿತ ಸಾಮಾನ್ಯ ಮತ್ತು ಕಡಿಮೆ ಆವರ್ತನ ಕಾರ್ಯಕ್ಷಮತೆಗಾಗಿ ಇಂಡಿಪೆಂಡೆಂಟ್‌ ಬಯೋನಿಕ್ ಬ್ಯಾಕ್ ಕ್ಯಾವಿಟಿ ವಿನ್ಯಾಸ ವನ್ನು ಹೊಂದಿವೆ.

ಹೈ-ಫಿಡೆಲಿಟಿ ಆಡಿಯೋಗಾಗಿ LHDC 5.0 ಜೊತೆಗೆ TWS ಹೈ-ರೆಸ್ ಪ್ರಮಾಣೀಕರಣವನ್ನು ಹೊಂದಿರಲಿದ್ದು, 50 dB ವರೆಗೆ ಶಬ್ದವನ್ನು ಫಿಲ್ಟರ್ ಮಾಡಬಹುದಾದ ಸಕ್ರಿಯ ಶಬ್ದ ರದ್ದತಿ (ANC) ಫೀಚರ್ಸ್‌ ಅನ್ನು ಇದರಲ್ಲಿ ಪಡೆಯಬಹುದಾಗಿದೆ. ಈ ಮೂಲಕ ಮ್ಯೂಸಿಕ್‌ ಕೇಳುವಾದ ಅಥವಾ ಸಿನಿಮಾ ವೀಕ್ಷಣೆಯಲ್ಲಿ ವಿಶೇಷವಾದ ಅನುಭವವನ್ನು ಪಡೆದುಕೊಳ್ಳಬಹುದಾಗಿದೆ.
ಹೆಚ್ಚುವರಿಯಾಗಿ, ಬಡ್ಸ್‌ 4000Hz ಅಲ್ಟ್ರಾ-ವೈಡ್‌ಬ್ಯಾಂಡ್ ಶಬ್ದ ಕಡಿತ ಮತ್ತು ಹೊಂದಾಣಿಕೆ ದೃಶ್ಯ-ಆಧಾರಿತ ಶಬ್ದ ಕಡಿತ ಸೌಲಭ್ಯ ಪಡೆದಿರಲಿದ್ದು. ನಿಮ್ಮ ಸುತ್ತಮುತ್ತಲಿನ ಸೌಂಡ್‌ ಆಧಾರದ ಮೇಲೆ ಆಟೋಮ್ಯಾಟಿಕ್‌ ಆಗಿ ಶಬ್ದ ರದ್ದತಿಯನ್ನು ಸರಿಹೊಂದಿಸುತ್ತದೆ.

ರಿಯಲ್‌ಮಿ ಬಡ್ಸ್ ಏರ್ 6 ಮತ್ತು ಏರ್ 6  ಫೀಚರ್ಸ್‌ ಘೋಷಣೆ! ಸಖತ್‌ ಬೇಸ್‌..

ಸ್ಪಷ್ಟವಾದ ಸಂಭಾಷಣೆಗಳಿಗಾಗಿ ಎಐ ಶಬ್ದ ಕಡಿತವನ್ನು ಒಳಗೊಂಡಿರುವ ಆರು ಇನ್‌ಬಿಲ್ಟ್‌ ಮೈಕ್ರೊಫೋನ್‌ಗಳೊಂದಿಗೆ ಲಭ್ಯ ಇರಲಿದ್ದು, ಚಾರ್ಜಿಂಗ್ ಕೇಸ್‌ನೊಂದಿಗೆ 40 ಗಂಟೆಗಳವರೆಗೆ ಪ್ಲೇಬ್ಯಾಕ್ ಅನ್ನು ನೀಡಲಿದ್ದು, ಬಡ್ಸ್‌ಗಳು ಒಂದೇ ಚಾರ್ಜ್‌ನಲ್ಲಿ 6 ಗಂಟೆಗಳವರೆಗೆ ಬ್ಯಾಕಪ್‌ ನೀಡಲಿವೆ. ಅದರಲ್ಲೂ ಕೇವಲ 10 ನಿಮಿಷದ ಚಾರ್ಜ್‌ನೊಂದಿಗೆ 7 ಗಂಟೆಗಳ ಪ್ಲೇಬ್ಯಾಕ್ ಅನ್ನು ಒದಗಿಸುತ್ತದೆ. ಈ ಇಯರ್‌ಬಡ್ಸ್‌ ಸೆರಿನಿಟಿ ಗ್ರೀನ್, ಟೈಟಾನಿಯಂ ಸ್ಕೈ ಆರೆಂಜ್ ಮತ್ತು ಪರ್ಪಲ್ ಬಣ್ಣಗಳಲ್ಲಿ ಲಭ್ಯ ಇರಲಿದೆ.

ರಿಯಲ್‌ಮಿ ಬಡ್ಸ್‌ ಏರ್ 6 ಪ್ರೊ: ಈ ಏರ್ 6 ಪ್ರೊ 11 ಎಂಎಂ ವೂಫರ್ ಮತ್ತು 6 ಎಂಎಂ ಮೈಕ್ರೋ-ಪ್ಲಾನರ್ ಟ್ವೀಟರ್‌ನೊಂದಿಗೆ ಡ್ಯುಯಲ್-ಯೂನಿಟ್ ವಿನ್ಯಾಸವನ್ನು ಹೊಂದಿದ್ದು, ಹೈ-ರೆಸ್ ಪ್ರಮಾಣೀಕರಣವನ್ನು ಸಹ ಪಡೆದಿದೆ. 50dB ANC, 4000Hz ಅಲ್ಟ್ರಾ-ವೈಡ್‌ಬ್ಯಾಂಡ್ ಶಬ್ದ ಕಡಿತ ಮತ್ತು ಹೊಂದಾಣಿಕೆಯ ದೃಶ್ಯ-ಆಧಾರಿತ ಶಬ್ದ ರದ್ದತಿಯನ್ನು ಆಯ್ಕೆ ಪಡೆದಿದ್ದು, ಆರು-ಮೈಕ್ರೋಫೋನ್ ಸೌಲಭ್ಯ ಹಾಗೂ ಕರೆಗಳಿಗೆ ಎಐ ಶಬ್ದ ಕಡಿತ ಮತ್ತು 55ms ನ ಕಡಿಮೆ ಲೇಟೆನ್ಸಿ ಮೋಡ್‌ನೊಂದಿಗೆ ಈ ಬಡ್ಸ್‌ಗಳು ಸಜ್ಜಾಗಿವೆ.

ರಿಯಲ್‌ಮಿ ಬಡ್ಸ್ ಏರ್ 6 ಮತ್ತು ಏರ್ 6  ಫೀಚರ್ಸ್‌ ಘೋಷಣೆ! ಸಖತ್‌ ಬೇಸ್‌..

ಬಡ್ಸ್‌ಗಳು ಒಂದೇ ಚಾರ್ಜ್‌ನಲ್ಲಿ 7.5 ಗಂಟೆಗಳ ಬ್ಯಾಕಪ್‌ ಅನ್ನು ನೀಡಲಿದ್ದು, ಚಾರ್ಜಿಂಗ್ ಕೇಸ್ 40 ಗಂಟೆಗಳ ಪ್ಲೇಬ್ಯಾಕ್ ಸಮಯವನ್ನು ನೀಡಲಿದೆ. ಹಾಗೆಯೇ ಕೇವಲ 10 ನಿಮಿಷದ ಚಾರ್ಜ್‌ನೊಂದಿಗೆ 7 ಗಂಟೆಗಳ ಪ್ಲೇಬ್ಯಾಕ್‌ ಅನ್ನು ಪಡೆಯಬಹುದಾಗಿದೆ ಎಂದು ರಿಯಲ್‌ಮಿ ಹೇಳಿಕೊಂಡಿದೆ. ಇದರೊಂದಿಗೆ 3D ಪ್ರಾದೇಶಿಕ ಸೌಂಡ್‌ ಎಫೆಕ್ಟ್‌ ಎಂಬ ಫೀಚರ್ಸ್‌ ಅನ್ನು ಇದರಲ್ಲಿ ಕಾಣಬಹುದಾಗಿದ್ದು, ಇದು ಹೆಚ್ಚು ತಲ್ಲೀನಗೊಳಿಸುವ ಆಡಿಯೊ ನೇಚರ್ ಅನ್ನು ರಚಿಸುವ ಮೂಲಕ ಬಳಕೆದಾರರ ಆಲಿಸುವ ಅನುಭವವನ್ನು ಹೆಚ್ಚಿಗೆ ಮಾಡುತ್ತದೆ.

ರಿಯಲ್‌ಮಿ ಬಡ್ಸ್ ಏರ್ 6 ಮತ್ತು ಏರ್ 6 ಪ್ರೊ ಬೆಲೆ ಮತ್ತು ಲಭ್ಯತೆ: ರಿಯಲ್‌ಮಿ ಬಡ್ಸ್ ಏರ್ 6 ಮತ್ತು ಏರ್ 6 ಪ್ರೊ ಎರಡರ ವಿಶೇಷತೆಗಳನ್ನು ಬಹಿರಂಗಪಡಿಸಿದ್ದರೂ, ಕಂಪನಿಯು ಬೆಲೆ ಅಥವಾ ಲಭ್ಯತೆಯ ಬಗ್ಗೆ ಯಾವುದೇ ವಿವರಗಳನ್ನು ಬಹಿರಂಗ ಮಾಡಿಲ್ಲ. ಈ ಕುರಿತು ನಿಮಗೆ ಹೆಚ್ಚಿನ ಮಾಹಿತಿ ಅಗತ್ಯ ಎನಿಸಿದರೆ ನೀವು ಗಿಜ್‌ಬಾಟ್‌ನೊಂದಿಗೆ ಸಂಪರ್ಕದಲ್ಲಿ ಇರಬಹುದಾಗಿದೆ.

Best Mobiles in India

English summary
Today Realme has revealed the complete features of its latest Realme Buds Air 6 and Realme Air 6 Pro on the website.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+