ಭಾರತೀಯ ಮಾರುಕಟ್ಟೆಗೆ ಇಂದು ಎಂಟ್ರಿ ಕೊಡಲಿದೆ 'ರಿಯಲ್‌ ಮಿ ಬಡ್ಸ್ ಏರ್'!

|

ಸದ್ಯ ಮಾರುಕಟ್ಟೆಯಲ್ಲಿ ಇಯರ್‌ಫೋನ್‌, ಹೆಡ್‌ಫೋನ್‌ಗಳಿಂಗಿಂತಲೂ ವಾಯರ್‌ಲೆಸ್‌ ಇಯರ್‌ಫೋನ್‌ಗಳಿಗೆ ಹಾಗೂ ಇಯರ್‌ಬಡ್ಸ್‌ಗಳು ಹೆಚ್ಚಿನ ಜನಪ್ರಿಯತೆ ಪಡೆಯುತ್ತಿವೆ. ಈ ನಿಟ್ಟಿನಲ್ಲಿ ಇದೀಗ ರಿಯಲ್‌ ಮಿ ಕಂಪನಿಯು ದೇಶಿಯ ಮಾರುಕಟ್ಟೆಗೆ ತನ್ನ ರಿಯಲ್‌ ಮಿ ಬಡ್ಸ್‌ ಏರ್‌ ಡಿವೈಸ್‌ ಬಿಡುಗಡೆ ಮಾಡಲು ಸಜ್ಜಾಗಿದೆ. ರಿಯಲ್‌ ಮಿ'ಯ ಹೊಸ ಇಯರ್‌ಬಡ್ಸ್‌ ಆಪಲ್‌ ಇಯರ್‌ಬಡ್ಸ್ ಹೋಲಿಕೆ ಹೊಂದಿದ್ದು, ಸಾಕಷ್ಟು ನಿರೀಕ್ಷೆಗಳನ್ನು ಮೂಡಿಸಿದೆ.

ರಿಯಲ್‌ ಮಿ

ಹೌದು, ರಿಯಲ್‌ ಮಿ ಯ ಬಹುನಿರೀಕ್ಷಿತ ''ರಿಯಲ್‌ ಮಿ ಬಡ್ಸ್‌ ಏರ್‌'' ಡಿವೈಸ್‌ ಅನ್ನು ಇದೇ ಡಿಸೆಂಬರ್ 17ರಂದು (ಇಂದು) ಭಾರತೀಯ ಮಾರುಕಟ್ಟೆಗೆ ಲಾಂಚ್ ಮಾಡಲಿದೆ. ಈ ಬಡ್ಸ್‌ ಏರ್‌ ಡಿವೈಸ್‌ ಟ್ರೂಲಿ ವಾಯರ್‌ಲೆಸ್‌ ಮಾದರಿಯನ್ನು ಪಡೆದಿದೆ. ಇದರೊಂದಿಗೆ ಕೆಲವು ವಿಶೇಷ ಫೀಚರ್ಸ್‌ಗಳನ್ನು ಒಳಗೊಂಡಿರುವ ಲಕ್ಷಣಗಳನ್ನು ತಿಳಿಸಿದ್ದು, ಮ್ಯೂಸಿಕ್ ಪ್ರಿಯ ಗ್ರಾಹಕರಲ್ಲಿ ಭಾರಿ ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಹಾಗಾದರೇ ರಿಯಲ್‌ ಮಿ ಬಡ್ಸ್‌ ಏರ್‌ ಡಿವೈಸ್ ಹೊಂದಿರಲಿರುವ ಐದು ಪ್ರಮುಖ ಫೀಚರ್ಸ್‌ಗಳೆನು ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಬ್ಲೂಟೂತ್ 5.0

ಬ್ಲೂಟೂತ್ 5.0

ಹೊಸದಾಗಿ ಬಿಡುಗಡೆ ಆಗಲಿರುವ ರಿಯಲ್‌ ಮಿ ಬಡ್ಸ್‌ ಏರ್ ಡಿವೈಸ್ ಇತ್ತೀಚಿಗಿನ ಬ್ಲೂಟೂತ್ 5.0 ಆವೃತ್ತಿಯನ್ನು ಪಡೆದಿರಲಿದೆ. ಇದರ ನೆರವಿನಿಂದ ಈ ಡಿವೈಸ್‌ ಸ್ಮಾರ್ಟ್‌ಫೋನ್‌ಗಳೊಂದಿಗೆ ವೇಗವಾಗಿ ಕನೆಕ್ಟ್ ಆಗಲಿದೆ. ಜೊತೆಗೆ ಕನೆಕ್ಷನ್‌ನಲ್ಲಿ ಸ್ಥಿರತೆ ಇರುತ್ತದೆ, ಬ್ಯಾಟಿರಿ ಬಾಳಿಕೆಗೂ ಪೂರಕವಾಗಿರುತ್ತದೆ. ಆಡಿಯೊ ಗುಣಮಟ್ಟವು ಸಹ ಉತ್ತಮವಾಗಿರಲು ಸಹಕರಿಸುತ್ತದೆ.

ಪೇರಿಂಗ್ ಸರಳ

ಪೇರಿಂಗ್ ಸರಳ

ಸ್ಮಾರ್ಟ್‌ಫೋನ್‌ ಜೊತೆಗೆ ರಿಯಲ್‌ ಮಿ ಬಡ್ಸ್ ಏರ್ ಡಿವೈಸ್ ಪೇರಿಂಗ್ ಸರಳವಾಗಿದೆ. ಪೇರಿಂಗ್ ಮೋಡ್ ಆಯ್ಕೆಯಿಂದ ತ್ವರಿತವಾಗಿ ಕನೆಕ್ಟ್ ಮಾಡಬಹುದಾಗಿದೆ. ಆಪಲ್‌ ಏರ್‌ಬಡ್ಸ್‌ಗಳಂತೆ ಕ್ವಿಕ್ ಪೇರಿಂಗ್‌ಗೆ ಈ ಡಿವೈಸ್ ಸಹ ಸಹಕರಿಸಲಿದೆ. ಇದರಲ್ಲಿ ಆರ್1 ಚಿಪ್‌ ಇದ್ದು, ಇದು ಪೇರಿಂಗೆ ನೆರವಾಗಲಿದೆ ಎನ್ನಲಾಗಿದೆ.

ವಾಯರ್‌ಲೆಸ್‌ ಚಾರ್ಜಿಂಗ್‌

ವಾಯರ್‌ಲೆಸ್‌ ಚಾರ್ಜಿಂಗ್‌

ಕೇಲವು ಲೀಕ್ ಮಾಹಿತಿಗಳ ಪ್ರಕಾರ ರಿಯಲ್‌ ಮಿ ಬಡ್ಸ್ ಏರ್ ಡಿವೈಸ್ ವಾಯರ್‌ಲೆಸ್ ಚಾರ್ಜಿಂಗ್ ಸೌಲಭ್ಯವನ್ನು ಪಡೆದಿರುತ್ತದೆ ಎನ್ನಲಾಗದೆ. ಬಡ್ಸ್‌ ಡಿವೈಸ್‌ಗಳನ್ನು ಚಾರ್ಜಿಂಗ್ ಡಿವೈಸ್‌ ಮೇಲೆ ಇಟ್ಟು ಚಾರ್ಜ್ ಮಾಡಿಕೊಳ್ಳುವ ಸೌಲಭ್ಯವನ್ನು ಪಡೆದಿರಲಿವೆ ಎಂದು ನಿರೀಕ್ಷಿಸಲಾಗುತ್ತದೆ.

ಗೆಸ್ಚರ್ ಕಂಟ್ರೋಲ್

ಗೆಸ್ಚರ್ ಕಂಟ್ರೋಲ್

ರಿಯಲ್‌ ಮಿ ಬಡ್ಸ್ ಏರ್ ಡಿವೈಸ್‌ ಗೆಸ್ಚರ್ ಕಂಟ್ರೋಲ್ ಆಯ್ಕೆ ಒಳಗೊಂಡಿರಲಿದೆ ಎನ್ನಲಾಗಿದ್ದು, ಇದು ಪ್ರಮುಖ ಹೈಲೈಟ್‌ ಅನಿಸಿಕೊಳ್ಳಲಿದೆ. ಮ್ಯೂಸಿಕ್ ಪ್ಲೇ, ಕರೆಗಳ ರಿಸೀವ್, ಕರೆ ಕಟ್, ಎಲ್ಲ ಚಟುವಟಿಕೆಗಳನ್ನು (ಸನ್ನೆ) ಗೆಸ್ಚರ್ ಮೂಲಕವೇ ನಿಯಂತ್ರಿಸಬಹುದಾದ ಆಯ್ಕೆಗಳು ಇರಲಿವೆ ಎನ್ನಲಾಗಿದೆ.

ವಾಯಿಸ್‌ ಅಸಿಸ್ಟಂಟ್

ವಾಯಿಸ್‌ ಅಸಿಸ್ಟಂಟ್

ರಿಯಲ್‌ ಮಿ ಬಡ್ಸ್ ಏರ್ ಡಿವೈಸ್‌ ಬಿಲ್ಟ್‌ ಇನ್ ವಾಯಿಸ್‌ ಅಸಿಸ್ಟಂಟ್ ಸೌಲಭ್ಯವನ್ನು ಪಡೆದಿರುವ ನಿರೀಕ್ಷೆಗಳಿವೆ. ಬಳಕೆದಾರರು ಗೂಗಲ್ ಅಸಿಸ್ಟಂಟ್ ಬಳಕೆ ಮಾಡಿ ಕರೆ, ರಿಮೈಂಡರ್, ಮಾಹಿತಿ ಸರ್ಚ್ ಮಾಡಲು ಬೆಂಬಲ ನೀಡಲಿದೆ. ಹಾಗೆಯೇ ಈ ಡಿವೈಸ್ ಡ್ಯುಯಲ್ ಮೈಕ್ರೋಫೋನ್ ಆಯ್ಕೆ ಪಡೆದಿರಲಿದೆ.

Best Mobiles in India

English summary
The Realme Buds Air truly wireless earbuds are set to launch in India today. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X