Home
ಸುದ್ದಿಜಾಲ

ಅತೀ ಅಗ್ಗದ ಬೆಲೆಗೆ ರಿಯಲ್‌ಮಿ ಬಡ್ಸ್‌ ಕ್ಲಾಸಿಕ್ ಇಯರ್‌ಫೋನ್ ಬಿಡುಗಡೆ!

ರಿಯಲ್‌ಮಿ ಸಂಸ್ಥೆಯು ಹೊಸದಾಗಿ ರಿಯಲ್‌ಮಿ C15 ಮತ್ತು ರಿಯಲ್‌ಮಿ C12 ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಇವುಗಳೊಂದಿಗೆ ಅತೀ ಅಗ್ಗದ ದರದಲ್ಲಿ ನೂತನವಾಗಿ ರಿಯಲ್‌ಮಿ ಬಡ್ಸ್‌ ಕ್ಲಾಸಿಕ್ ಹೆಡ್‌ಫೋನ್‌ ಡಿವೈಸ್‌ ಸಹ ಬಿಡುಗಡೆ ಮಾಡಿದೆ. ಈ ಹೆಡ್‌ಫೋನ್‌ ಎಂಟ್ರಿ ಲೆವೆಲ್ ಮಾದರಿಯಲ್ಲಿದೆ. ಇದು ಹೆಚ್‌ಡಿ ಮೈಕ್ರೋಫೋನ್, ಹಾಗೂ 14.2mm ಆಡಿಯೋ ಡ್ರೈವರ್‌ಗಳನ್ನು ಒಳಗೊಂಡಿದೆ.

ರಿಯಲ್‌ಮಿ

ಹೌದು, ರಿಯಲ್‌ಮಿ ಕಂಪನಿಯು ಹೊಸದಾಗಿ ರಿಯಲ್‌ಮಿ ಬಡ್ಸ್‌ ಕ್ಲಾಸಿಕ್ ಹೆಡ್‌ಫೋನ್‌ ದೇಶಿಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಡಿವೈಸ್‌ ಬೆಲೆಯು 399ರೂ.ಗಳ ಅಗ್ಗದ ಪ್ರೈಸ್‌ಟ್ಯಾಗ್ ಹೊಂದಿದೆ. ಹಾಗೆಯೇ ಇಯರ್‌ಬಡ್‌ಗಳು ಬ್ಲ್ಯಾಕ್ ಅಂಡ್ ವೈಟ್ ಕಲರ್ ಆಯ್ಕೆಗಳನ್ನು ಪಡೆದಿದೆ. ಹಾಗೆಯೇ ಈ ಡಿವೈಸ್ 14.2 ಎಂಎಂ ಆಡಿಯೊ ಡ್ರೈವರ್ ಅನ್ನು ಒದಗಿಸಿದೆ. ಅದು ಮ್ಯೂಸಿಕ್ ಏರಿಳಿತದ ಸೂಕ್ಷ್ಮ ವ್ಯತ್ಯಾಸಗಳನ್ನು ಗ್ರಹಿಸಲಿದೆ ಎಂದು ಹೇಳಲಾಗಿದೆ.

ಇಯರ್‌ಬಡ್‌ಗಳು

ಈ ಇಯರ್‌ಬಡ್‌ಗಳು ಅಂತರ್ನಿರ್ಮಿತ ಹೈ-ಡೆಫಿನಿಷನ್ (ಎಚ್‌ಡಿ) ಮೈಕ್ರೊಫೋನ್ ಮತ್ತು ಸಂಗೀತ ಪ್ಲೇಬ್ಯಾಕ್ ಅನ್ನು ನಿಯಂತ್ರಿಸಲು ಬಟನ್ ಹೊಂದಿರುವ ರಿಮೋಟ್ ಅನ್ನು ಸಹ ಹೊಂದಿವೆ. ಹಾಗೆಯೇ ವಾಯಿಸ್ ಕರೆಗಳನ್ನು ಸುಲಭವಾಗಿ ಸ್ವೀಕರಿಸಲು ಉತ್ತಮವಾಗಿದೆ. ಹೊಸ ಇಯರ್‌ಬಡ್‌ಗಳ ವಿನ್ಯಾಸವೂ ವಿಭಿನ್ನವಾಗಿದ್ದು, ಕಿವಿಗಳಿಗೆ ಕಂಫರ್ಟ್‌ ಗ್ರಿಪ್ ನೀಡುವ ರಚನೆಯನ್ನು ಪಡೆದುಕೊಂಡಿದೆ ಎಂದು ಕಂಪನಿ ಹೇಳಿಕೊಂಡಿದೆ.

ಕ್ಲಾಸಿಕ್

ರಿಯಲ್‌ಮಿ ಬಡ್ಸ್ ಕ್ಲಾಸಿಕ್ ಶಿಯೋಮಿಯ ಮಿ ಬೇಸಿಕ್ ಇಯರ್‌ಫೋನ್ಸ್ ಡಿವೈಸ್‌ಗಳಿಗೆ ನೇರವಾಗಿ ಸ್ಪರ್ಧಿಸುವ ಲಕ್ಷಣಗಳನ್ನು ಪಡೆದಿದೆ. ಮಿ ಇಯರ್‌ಫೋನ್‌ಗಳು ಬೇಸಿಕ್ ಇಯರ್‌ಬಡ್‌ಗಳು ದರವು ಸಹ 399ರೂ. ಆಗಿದೆ. ಇದು ಮೆಟಲ್ ಸೌಂಡ್ ಚೇಂಬರ್ ಜೊತೆಗೆ ಆಂಟಿ-ಸ್ಲಿಪ್ ವಿನ್ಯಾಸವನ್ನು ಹೊಂದಿರುತ್ತದೆ. ಬಡ್ಸ್ ಕ್ಲಾಸಿಕ್ ಯಾವುದೇ ಆಯಸ್ಕಾಂತಗಳನ್ನು ಒಳಗೊಂಡಿಲ್ಲ.

ಮಾರಾಟ

ಇನ್ನು ಈ ಡಿವೈಸ್ ಇದೇ ಆಗಸ್ಟ್ 24 ರಿಂದ ಮಧ್ಯಾಹ್ನ 12 (ಮಧ್ಯಾಹ್ನ) ಭಾರತದಲ್ಲಿ ಮಾರಾಟ ಆರಂಭಿಸಲಿದೆ. ಇದಲ್ಲದೆ, ಅಮೆಜಾನ್ ಮತ್ತು ರಿಯಲ್‌ಮಿ ಇಂಡಿಯಾ ವೆಬ್‌ಸೈಟ್ ಮೂಲಕ ಮಾರಾಟ ನಡೆಯಲಿದೆ. ಹಾಗೆಯೇ ಈ ಡಿವೈಸ್‌ ಬ್ಲ್ಯಾಕ್ ಅಂಡ್ ವೈಟ್ ಕಲರ್ ಬಣ್ಣಗಳ ಆಯ್ಕೆಗಳಲ್ಲಿ ದೊರೆಯಲಿದೆ. ಇದರೊಂದಿಗೆ ಲಾಂಚ್ ಮಾಡಿರುವ ರಿಯಲ್‌ಮಿ C15 ಮತ್ತು ರಿಯಲ್‌ಮಿ C12 ಸ್ಮಾರ್ಟ್‌ಫೋನ್‌ಗಳು ಆಕರ್ಷಕ ಫೀಚರ್ಸ್‌ ಪಡೆದಿವೆ.

Best Mobiles in India

English summary
Realme Buds Classic In Black and White colour options.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+