ಭಾರತದಲ್ಲಿ ಕಡಿಮೆ ಬೆಲೆಗೆ ಲಾಂಚ್ ಆಯ್ತು 'ರಿಯಲ್ ಮಿ ವಾಯರ್‌ಲೆಸ್‌ ಬಡ್ಸ್'‌!

|

ಚೀನಾ ಮೂಲದ 'ರಿಯಲ್ ಮಿ' ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಹಲವು ಬಜೆಟ್‌ ಬೆಲೆಯ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸುವ ಮೂಲಕ ಗ್ರಾಹಕರಿಗೆ ಚಿರಪರಿಚಿತವಾಗಿದೆ. ಆದ್ರೆ, ಕಂಪನಿಯ ಇದೀಗ ಹೊಸದಾಗಿ ವಾಯರ್‌ಲೆಸ್‌ ಇಯರ್‌ಬಡ್ಸ್‌, ಪವರ್‌ಬ್ಯಾಂಕ್ ಮತ್ತು ಮೊಬೈಲ್ ಆಕ್ಸಸ್‌ರಿಸಗಳನ್ನು ಲಾಂಚ್ ಮಾಡಿದ್ದು, ಈ ಮೂಲಕ ತನ್ನ ಉತ್ಪನ್ನಗಳ ಪಟ್ಟಿಯನ್ನು ಮತ್ತಷ್ಟು ವಿಸ್ತರಿಸಿಕೊಂಡಿದೆ.

ರಿಯಲ್‌ ಮಿ ಬಡ್ಸ್‌

ಹೌದು, ರಿಯಲ್‌ ಮಿ ಕಂಪನಿಯು (ನೆನ್ನೆ) ಇದೇ ಸೆಪ್ಟೆಂಬರ್ 13ರಂದು ಭಾರತೀಯ ಮಾರುಕಟ್ಟೆಗೆ ಹೊಸದಾಗಿ ರಿಯಲ್‌ ಮಿ ಎಕ್ಸ್‌ಟಿ ಸ್ಮಾರ್ಟ್‌ಫೋನ್ ಜೊತೆಗೆ ರಿಯಲ್‌ ಮಿ ಬಡ್ಸ್‌, ಮತ್ತು ಪವರ್‌ಬ್ಯಾಂಕ್ ಡಿವೈಸ್‌ಗಳನ್ನು ಬಿಡುಗಡೆ ಮಾಡಿದೆ. ಭಾರೀ ಗಮನ ಸೆಳೆದಿದ್ದ, 'ರಿಯಲ್‌ ಮಿ XT' ಸ್ಮಾರ್ಟ್‌ಫೋನ್‌ ಫೀಚರ್ಸ್‌ ಮತ್ತು ಬೆಲೆ ಬಗ್ಗೆ ಹಿಂದಿನ ಲೇಖನದಲ್ಲಿ ತಿಳಿಸಲಾಗಿದೆ. ಹಾಗಾಗಿ ಇಂದಿನ ಲೇಖನದಲ್ಲಿ 'ರಿಯಲ್ ಮಿ ಬಡ್ಸ್'‌ ಡಿವೈಸ್‌ ಫೀಚರ್ಸ್‌ಗಳೆನು?.ಮತ್ತು ಬೆಲೆ ಎಷ್ಟು ಎಂಬುದನ್ನು ತಿಳಿಯೋಣ.

ಓದಿರಿ : ವಾಟ್ಸಪ್‌ ಚಾಟ್‌ಗೆ 'ಫಿಂಗರ್‌ಪ್ರಿಂಟ್ ಲಾಕ್‌' ಸೆಟ್‌ ಮಾಡುವುದು ಹೇಗೆ ಗೊತ್ತಾ!ಓದಿರಿ : ವಾಟ್ಸಪ್‌ ಚಾಟ್‌ಗೆ 'ಫಿಂಗರ್‌ಪ್ರಿಂಟ್ ಲಾಕ್‌' ಸೆಟ್‌ ಮಾಡುವುದು ಹೇಗೆ ಗೊತ್ತಾ!

ಡಿಸೈನ್ ಹೇಗಿದೆ

ಡಿಸೈನ್ ಹೇಗಿದೆ

ರಿಯಲ್‌ ಮಿ ಬಡ್ಸ್‌ ಮಿನಿಮಲಿಸ್ಟಿಕ್ (minimalistic) ಡಿಸೈನ್‌ನಲ್ಲಿದ್ದು, ಅತೀ ಹಗುರವಾಗದ ರಚನೆಯನ್ನು ಹೊಂದಿದೆ. ಈ ಡಿವೈಸ್‌ ಡ್ಯುಯಲ್ ಕಲರ್ ಕಾಂಬಿನೇಶನ್‌ನಲ್ಲಿದ್ದು, ಆಕರ್ಷಕ ಲುಕ್ ಪಡೆದಿದೆ. ನೆಕ್‌ಬ್ಯಾಂಡ್‌ ನಿಕಲ್-ಟೈಟಾನಿಮ್ ನಿಂದ ರಚಿತವಾಗಿದ್ದು, ಕೇವಲ 30ಗ್ರಾಂ ತೂಕವನ್ನು ಒಳಗೊಂಡಿದೆ. ಹಾಗೆಯೇ ಈ ಬಡ್ಸ್‌ಗಳು IPX4 ಸ್ಲಾಶ್‌ ಪ್ರೂಫ್ ರಚನೆಯನ್ನು ಸಹ ಹೊಂದಿವೆ.

ಫೀಚರ್ಸ್‌ಗಳೆನು

ಫೀಚರ್ಸ್‌ಗಳೆನು

ರಿಯಲ್‌ ಮಿ ಬಡ್ಸ್‌ ಡಿವೈಸ್‌ಗಳು 11.2mm ಆಡಿಯೋ ಡ್ರೈವರ್ಸ್‌ಗಳನ್ನು ಹೊಂದಿದ್ದು, ಅತ್ಯುತ್ತಮ ಬಾಸ್‌ ಬೂಸ್ಟ್ ಸಾಮರ್ಥ್ಯವನ್ನು ಹೊರಸೂಸಲಿವೆ. ಡೈನಾಮಿಕ್ ಮತ್ತು ಪವರ್‌ಫುಲ್ ಸೌಂಡ್‌ ಔಟ್‌ಪುಟ್‌ ನೀಡಲಿದ್ದು, ಅದಕ್ಕಾಗಿ ಬಡ್ಸ್‌ಗಳ ತಯಾರಿಕೆಯಲ್ಲಿ 'ನಾರ್ವೇಜಿಯನ್ ಡಿಜೆ ಅಲನ್ ವಾಕರ್ಸ್ನ ನೆರವು ಪಡೆಯಲಾಗಿದೆ. ಬಡ್ಸ್‌ಗಳು ಕಿವಿಗಳಿಗೆ ಕಂಫರ್ಟ್‌ ಗ್ರೀಪ್ ಎನಿಸಲಿವೆ.

ಓದಿರಿ : ಆಪಲ್‌ನ ಒಂದು ಸಣ್ಣ ಮಿಸ್ಟೇಕ್ 'ಐಫೋನ್‌ 11' ಬಗ್ಗೆ ಭಯ ಹುಟ್ಟಿಸುತ್ತಿದೆ!..ಏಕೆ?ಓದಿರಿ : ಆಪಲ್‌ನ ಒಂದು ಸಣ್ಣ ಮಿಸ್ಟೇಕ್ 'ಐಫೋನ್‌ 11' ಬಗ್ಗೆ ಭಯ ಹುಟ್ಟಿಸುತ್ತಿದೆ!..ಏಕೆ?

ಬ್ಯಾಟರಿ ಶಕ್ತಿ

ಬ್ಯಾಟರಿ ಶಕ್ತಿ

ರಿಯಲ್ ಮಿ ಬಡ್ಸ್‌ ಡಿವೈಸ್‌ ಅತ್ಯುತ್ತಮ ಬ್ಯಾಟರಿ ಬ್ಯಾಕ್‌ಅಪ್ ಪಡೆದಿದ್ದು, ಒಮ್ಮೆ ಚಾರ್ಜ್ ಮಾಡಿದರೇ ಸುಮಾರು 12 ಗಂಟೆಗಳ ಬ್ಯಾಟರಿ ಬಾಳಿಕೆ ಬರಲಿದೆ. ಕೇವಲ 10 ನಿಮಿಷದ ಚಾರ್ಜ್ ಸುಮಾರು 100 ನಿಮಿಷಗಳ ಬ್ಯಾಟರಿ ಬಾಳಿಕೆ ಒದಗಿಸಲಿದೆ. ಬ್ಲೂಟೂತ್ v5.0, IPX4 ಸ್ಲಾಶ್‌ ಪ್ರೂಫ್ ಸೌಲಭ್ಯಗಳು ಸೇರಿದಂತೆ ಇತ್ತೀಚಿನ ಅಗತ್ಯ ಫೀಚರ್ಸ್‌ಗಳನ್ನು ಸಹ ಒಳಗೊಂಡಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ರಿಯಲ್ ಮಿ ಬಡ್ಸ್‌ 1799ರೂ. ಬೆಲೆಯ ಪ್ರೈಸ್‌ಟ್ಯಾಗ್‌ ಅನ್ನು ಹೊಂದಿದ್ದು, ಅಮೆಜಾನ್ ತಾಣದಲ್ಲಿ ಖರೀದಿಸಬಹುದಾಗಿದೆ. ಈ ಬಡ್ಸ್‌ ಬೋಟ್‌ 225F, ಶಿಯೋಮಿ ವಾಯರ್‌ಲೆಸ್‌ ಇಯರ್‌ಫೋನ್‌ಗಳಿಗೆ ನೇರ ಫೈಟ್‌ ನೀಡಲಿದೆ. ರಿಯಲ್ ಮಿ ಬಡ್ಸ್‌ ಆರೆಂಜ್, ಗ್ರೀನ್ ಮತ್ತು ಬ್ಲ್ಯಾಕ್ ಮತ್ತು ಯೆಲ್ಲೊ ಮಿಕ್ಸ್ ಬಣ್ಣಗಳ ಆಯ್ಕೆಯನ್ನು ಹೊಂದಿದೆ.

ಓದಿರಿ : ದೇಶಿಯ ಮಾರುಕಟ್ಟೆಯಲ್ಲಿ ಲಾಂಚ್ ಆಯ್ತು 'ರಿಯಲ್‌ ಮಿ XT'!.ಬೆಲೆ 15,999ರೂ!ಓದಿರಿ : ದೇಶಿಯ ಮಾರುಕಟ್ಟೆಯಲ್ಲಿ ಲಾಂಚ್ ಆಯ್ತು 'ರಿಯಲ್‌ ಮಿ XT'!.ಬೆಲೆ 15,999ರೂ!

Best Mobiles in India

English summary
Realme Buds Wireless has been launched priced at 1,799. 12 hours of listening time on a full charge. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X