Home
ಸುದ್ದಿಜಾಲ

ರಿಯಲ್‌ ಮಿ ಬಡ್ಸ್‌ ವಾಯರ್‌ಲೆಸ್‌ ಪ್ರೊ ಡಿವೈಸ್‌ ಲಾಂಚ್!..ಬೆಲೆ?

ರಿಯಲ್ ಮಿ ಕಂಪನಿಯು ಸ್ಮಾರ್ಟ್‌ಫೋನ್‌ಗಳ ಜೊತೆಗೆ ಇಯರ್‌ಬಡ್ಸ್‌, ವಾಯರ್‌ಲೆಸ್‌ ಬಡ್ಸ್‌ ಡಿವೈಸ್‌ಗಳ ಮೂಲಕವು ಗ್ರಾಹಕರನ್ನು ಸೆಳೆದಿದೆ. ಈ ಲಿಸ್ಟ್‌ಗೆ ರಿಯಲ್‌ ಮಿ ಸಂಸ್ಥೆಯು ಹೊಸದಾಗಿ ರಿಯಲ್‌ ಮಿ ಬಡ್ಸ್‌ ವಾಯರ್‌ಲೆಸ್‌ ಪ್ರೊ ಡಿವೈಸ್‌ ಅನ್ನು ಸೇರ್ಪಡೆ ಮಾಡಿದೆ. ಈ ಡಿವೈಸ್‌ ಆಯಂಟಿ ನಾಯ್ಸ್‌ ಕ್ಯಾನ್ಸಲೇಶನ್ ಸೌಲಭ್ಯವನ್ನು ಪಡೆದುಕೊಂಡಿದೆ.

ವಾಯರ್‌ಲೆಸ್‌

ಹೌದು, ರಿಯಲ್‌ ಮಿ ಕಂಪನಿಯು ನೂತನವಾಗಿ ರಿಯಲ್‌ ಮಿ ಬಡ್ಸ್‌ ವಾಯರ್‌ಲೆಸ್‌ ಪ್ರೊ ಹಾಗೂ ರಿಯಲ್‌ ಮಿ ಬಡ್ಸ್‌ ಏರ್‌ ಪ್ರೊ ಡಿವೈಸ್‌ ಅನ್ನು ಲಾಂಚ್ ಮಾಡಿದೆ. ಇವುಗಳಲ್ಲಿ ಬಡ್ಸ್‌ ವಾಯರ್‌ಲೆಸ್‌ ಪ್ರೊ ಡಿವೈಸ್‌ ಬ್ಲೂಟೂತ್ ಬೆಂಬಲಿತವಾಗಿದ್ದು, ನೆಕ್‌ಬ್ಯಾಂಡ್‌ ಸ್ಟೈಲ್ ಮಾದರಿಯನ್ನು ಹೊಂದಿದೆ. ಇನ್ನು ಈ ಡಿವೈಸ್‌ ಬೆಲೆಯು 3,999ರೂ. ಗಳು ಆಗಿದ್ದು, ಆರಂಭಿಕ ಕೊಡುಗೆಯಾಗಿ 2,999ರೂ.ಗಳಿಗೆ ಲಭ್ಯ ವಿದೆ.

ಡಿವೈಸ್‌

ರಿಯಲ್‌ ಮಿ ಬಡ್ಸ್‌ ವಾಯರ್‌ಲೆಸ್‌ ಪ್ರೊ ಡಿವೈಸ್‌ ಹಗುರವಾಗದ ರಚನೆಯನ್ನು ಹೊಂದಿದ್ದು, ಡ್ಯುಯಲ್‌ ಕಲರ್ ಕಾಂಬಿನೇಶನ್‌ನಲ್ಲಿ ಆಕರ್ಷಕ ಲುಕ್ ಪಡೆದಿದೆ. ನೆಕ್‌ಬ್ಯಾಂಡ್‌ ನಿಕಲ್-ಟೈಟಾನಿಮ್ ನಿಂದ ರಚಿತವಾಗಿದ್ದು, ಈ ಬಡ್ಸ್‌ಗಳು IPX4 ಸ್ಲಾಶ್‌ ಪ್ರೂಫ್ ರಚನೆಯನ್ನು ಸಹ ಹೊಂದಿವೆ. ಫಾಸ್ಟ್‌ ಚಾರ್ಜಿಂಗ್ ಸೌಲಭ್ಯವನ್ನು ಒಳಗೊಂಡಿದೆ.

ಬ್ಲೂಟೂತ್

ರಿಯಲ್ ಮಿ ಬಡ್ಸ್‌ ವಾಯರ್‌ಲೆಸ್‌ ಪ್ರೊ ಡಿವೈಸ್‌ ತನ್ನ ವರ್ಗದಲ್ಲಿಯೇ ಬೆಸ್ಟ್‌ ಬ್ಯಾಟರಿ ಬ್ಯಾಕ್‌ಅಪ್ ಪಡೆದಿದ್ದು, ಒಮ್ಮೆ ಚಾರ್ಜ್ ಮಾಡಿದರೇ ಸುಮಾರು 22 ಗಂಟೆಗಳ ಬ್ಯಾಟರಿ ಬಾಳಿಕೆ ಒದಗಿಸಲಿದೆ. ಹಾಗೆಯೇ ಈ ಡಿವೈಸ್‌ 13.6mm ಆಡಿಯೋ ಡ್ರೈವರ್ಸ್‌ಗಳನ್ನು ಹೊಂದಿದ್ದು, ಅತ್ಯುತ್ತಮ ಬಾಸ್‌ ಬೂಸ್ಟ್ ಸಾಮರ್ಥ್ಯವನ್ನು ಔಟ್‌ಪುಟ್ ನೀಡಲಿದೆ. LDAC ಬ್ಲೂಟೂತ್ ಕೋಡೆಡ್‌ ಹೊಂದಿದೆ.

ಬಣ್ಣಗಳ

ರಿಯಲ್ ಮಿ ಬಡ್ಸ್‌ ವಾಯರ್‌ಲೆಸ್‌ ಪ್ರೊ ಬೆಲೆಯು3,999ರೂ.ಗಳಾಗಿದ್ದು, ಸದ್ಯ ಆಫರ್‌ನಲ್ಲಿ 2,999ರೂ.ಗಳಿಗೆ ಲಭ್ಯ. ಈ ಡಿವೈಸ್‌ ಪಾರ್ಟಿ ಯೆಲ್ಲೊ ಮತ್ತು ಡಿಸ್ಕ್ ಗ್ರೀನ್‌ ಬಣ್ಣಗಳ ಆಯ್ಕೆಯನ್ನು ಹೊಂದಿದೆ. ಇದೇ ಅಕ್ಟೋಬರ್ 16ರಂದು ಮಾರಾಟ ಆರಂಭಿಸಲಿದೆ.

Best Mobiles in India

English summary
Realme Buds Wireless Pro Earphones have a claimed battery life of up to 22 hours per charge, and are powered by 13.6mm dynamic drivers.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+