ರಿಯಲ್‌ಮಿ C25 ಸ್ಮಾರ್ಟ್‌ಫೋನ್ ಬಿಡುಗಡೆಗೆ ದಿನಾಂಕ ನಿಗದಿ!

|

ರಿಯಲ್‌ ಮಿ ಮೊಬೈಲ್ ತಯಾರಿಕಾ ಸಂಸ್ಥೆಯು ಈಗಾಗಲೇ ರಿಯಲ್‌ ಮಿ C ಸರಣಿಯಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿ ಸೈ ಅನಿಸಿಕೊಂಡಿದೆ. ಹಾಗೆಯೇ ರಿಯಲ್‌ ಮಿ C ಸರಣಿಯ ಫೋನ್‌ಗಳು ಬಜೆಟ್‌ ಬೆಲೆಯಿಂದ ಹೆಚ್ಚು ಗಮನ ಸೆಳೆದಿವೆ. ಇದೀಗ ರಿಯಲ್‌ ಮಿ ಕಂಪನಿಯು ನೂತನವಾಗಿ ರಿಯಲ್‌ಮಿ C25 ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಲು ಅಧಿಕೃತ ದಿನಾಂಕ ನಿಗದಿ ಮಾಡಿದೆ. ಈ ಸ್ಮಾರ್ಟ್‌ಫೋನ್ ಸಹ ಕಡಿಮೆ ಪ್ರೈಸ್‌ಟ್ಯಾಗ್‌ನಲ್ಲಿ ಅನಾವರಣ ಆಗುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.

ಮಾರ್ಚ್

ಹೌದು, ರಿಯಲ್ ಮಿ ಕಂಪನಿಯು ತನ್ನ ಬಹುನಿರೀಕ್ಷಿತ ರಿಯಲ್‌ ಮಿ C25 ಸ್ಮಾರ್ಟ್‌ಫೋನ್‌ ಅನ್ನು ಇದೇ ಮಾರ್ಚ್ 23 ರಂದು ಅಧಿಕೃತವಾಗಿ ಭಾರತೀಯ ಮಾರುಕಟ್ಟೆಯಲ್ಲಿ ಅನಾವರಣ ಮಾಡಲಿದೆ. ಈ ಸರಣಿಯು ಮೀಡಿಯಾ ಟೆಕ್‌ ಹಿಲಿಯೋ G70 SoC. ಚಿಪ್‌ಸೆಟ್‌ ಪ್ರೊಸೆಸರ್‌ ಹೊಂದಿರಲಿದ್ದು, ಉಳಿದಂತೆ ಈ ಫೋನ್ ಇತ್ತೀಚಿನ ಟ್ರೆಂಡಿಂಗ್‌ ಫೀಚರ್ಸ್‌ಗಳು ಇರಲಿವೆ ಎಂದು ಹೇಳಲಾಗಿದೆ. ಹಾಗಾದರೇ ಲೀಕ್ ಮಾಹಿತಿಯಂತೆ ರಿಯಲ್‌ ಮಿ C25 ಸ್ಮಾರ್ಟ್‌ಫೋನ್‌ ಯಾವೆಲ್ಲಾ ಫೀಚರ್ಸ್‌ಗಳನ್ನು ಹೊಂದಿರಲಿದೆ ಎಂಬುದನ್ನು ನೋಡೋಣ ಬನ್ನಿರಿ.

ಡಿಸ್‌ಪ್ಲೇ ಡಿಸೈನ್ ಮತ್ತು ರಚನೆ

ಡಿಸ್‌ಪ್ಲೇ ಡಿಸೈನ್ ಮತ್ತು ರಚನೆ

ರಿಯಲ್‌ ಮಿ C25 ಸ್ಮಾರ್ಟ್‌ಫೋನ್ 720 x 1600 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.55 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್‌ ಮಾದರಿಯ ಹೊಂದಿರಲಿದೆ. ಇದರೊಂದಿಗೆ ಡಿಸ್‌ಪ್ಲೇಯು ಉತ್ತಮ ರೀಫ್ರೇಶ್‌ ರೇಟ್ ಸಾಮರ್ಥ್ಯವನ್ನು ಪಡೆದಿರುವ ನಿರೀಕ್ಷೆಗಳಿವೆ. ಹಾಗೂ ಸ್ಕ್ರೀನ್‌ನಿಂದ ಬಾಹ್ಯ ಬಾಡಿಯ ನಡುವಿನ ಅಂತರ 89% ಇರಲಿದೆ ಎನ್ನಲಾಗಿದೆ.

ಪ್ರೊಸೆಸರ್ ಕಾರ್ಯ ವೈಖರಿ

ಪ್ರೊಸೆಸರ್ ಕಾರ್ಯ ವೈಖರಿ

ರಿಯಲ್‌ ಮಿ C25 ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್‌ನ ಹಿಲಿಯೋ G70 SoC ಚಿಪ್‌ಸೆಟ್‌ ಪ್ರೊಸೆಸರ್‌ ಅನ್ನು ಹೊಂದಿರುವುದು ಬಹುತೇಕ ಖಚಿತ ಎನ್ನಲಾಗಿದೆ. ಹಾಗೆಯೇ ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 10 ಓಎಸ್‌ ಇರುವ ಸಾಧ್ಯತೆಗಳು ಇವೆ. ಇದರೊಂದಿಗೆ 3GB RAM ಮತ್ತು 32GB ಸ್ಟೋರೇಜ್‌ನ ಬೇಸಿಕ್ ವೇರಿಯಂಟ್‌ ಇರಲಿದ್ದು, ಹಾಗೆಯೇ 4GB RAM ಮತ್ತು 64GB ಸ್ಟೋರೇಜ್ ವೇರಿಯಂಟ್ ಆಯ್ಕೆ ಹೊಂದಿರಲಿದೆ.

ಟ್ರಿಪಲ್ ಕ್ಯಾಮೆರಾ ರಚನೆ

ಟ್ರಿಪಲ್ ಕ್ಯಾಮೆರಾ ರಚನೆ

ರಿಯಲ್‌ ಮಿ C25 ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ಟ್ರಿಪಲ್ ಕ್ಯಾಮೆರಾ ರಚನೆಯನ್ನು ಹೊಂದಿರಲಿದೆ. ಮುಖ್ಯ ಕ್ಯಾಮೆರಾವು 48 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯದಲ್ಲಿದ್ದು, ಸೆಕೆಂಡರಿ ಕ್ಯಾಮೆರಾವು 2 ಮೆಗಾ ಪಿಕ್ಸಲ್ ಸೆನ್ಸಾರ್‌ನ ಅಲ್ಟ್ರಾ ವೈಲ್ಡ್‌ ಆಂಗಲ್ ಲೆನ್ಸ್‌ ಹೊಂದಿರಲಿದೆ. ಇನ್ನು ತೃತೀಯ ಕ್ಯಾಮೆರಾ 2 ಮೆಗಾ ಪಿಕ್ಸಲ್ ಸೆನ್ಸಾರ್ ಪಡೆದಿರಲಿದೆ. ಸೆಲ್ಫಿ ಕ್ಯಾಮೆರಾವು 8 ಮೆಗಾ ಪಿಕ್ಸಲ್ ಸೆನ್ಸಾರ್‌ನಲ್ಲಿರಲಿದೆ.

ಬ್ಯಾಟರಿ ಪವರ್ ಎಷ್ಟು?

ಬ್ಯಾಟರಿ ಪವರ್ ಎಷ್ಟು?

ರಿಯಲ್‌ ಮಿ C25 ಸ್ಮಾರ್ಟ್‌ಫೋನ್ 6,000mAh ಸಾಮರ್ಥ್ಯವನ್ನು ಹೊಂದಿದ್ದು, 18W ಸಾಮರ್ಥ್ಯದ ಫ್ಲ್ಯಾಶ್‌ ಫಾಸ್ಟ್‌ ಚಾರ್ಜಿಂಗ್ ವ್ಯವಸ್ಥೆಯನ್ನು ಹೊಂದಿರಲಿದೆ. ಇದರರೊಂದಿಗೆ ಕನೆಕ್ಟಿವಿಟಿಗಾಗಿ ವೈಫೈ, ಬ್ಲೂಟೂತ್, ಸೆನ್ಸಾರ್‌, ವಿಡಿಯೊ ಎಡಿಟಿಂಗ್ ಆಪ್ ನಂತಹ ಇತ್ತೀಚಿನ ಫೀಚರ್ಸ್‌ಗಳನ್ನು ಒಳಗೊಂಡಿರಲಿದೆ.

Best Mobiles in India

English summary
The Realme C25 will see its global debut on March 23, and the company has teased a few specifications of the phone on its official event page.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X