33W ಸೂಪರ್‌ವೂಕ್ ಚಾರ್ಜಿಂಗ್ ಇರುವ ಈ ಫೋನಿಗೆ ಆಕರ್ಷಕ ಡಿಸ್ಕೌಂಟ್!
ಲೀಡಿಂಗ್ ಫ್ಲಿಪ್‌ಕಾರ್ಟ್ ಇ ಕಾಮರ್ಸ್ ವೆಬ್‌ಸೈಟ್ ಎಲ್ಲ ವರ್ಗದ ಮೊಬೈಲ್‌ಗಳಿಗೂ ಆಕರ್ಷಕ ರಿಯಾಯಿತಿ ನೀಡುವ ಮೂಲಕ ಗ್ರಾಹಕರನ್ನು ತನ್ನತ್ತ ಸೆಳೆದಿದೆ. ಇದೀಗ ಫ್ಲಿಪ್‌ಕಾರ್ಟ್ ಪ್ಲಾಟ್‌ಫಾರ್ಮ್ ಆಯ್ದ ಕೆಲವು ಮೊಬೈಲ್‌ಗಳಿಗೆ ಭಾರೀ ರಿಯಾಯಿತಿ ಡಿಸ್ಕೌಂಟ್ ತಿಳಿಸಿದ್ದು, ಆ ಪೈಕಿ ರಿಯಲ್‌ಮಿ ಸಂಸ್ಥೆಯ ಎಂಟ್ರಿ ಲೆವೆಲ್ ಫೋನ್‌ಗಳಲ್ಲಿ ಒಂದಾದ ರಿಯಲ್‌ಮಿ C51 (realme C51) ಸ್ಮಾರ್ಟ್‌ಫೋನ್ ಗಮನಾರ್ಹ ಆಫರ್ ಪಡೆದಿದೆ. ಈ ಮೊಬೈಲ್ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಪಡೆದಿದ್ದು, ಇದರೊಂದಿಗೆ 50 ಮೆಗಾ ಪಿಕ್ಸೆಲ್ ಕ್ಯಾಮೆರಾ ರಚನೆಯನ್ನು ಪಡೆದುಕೊಂಡಿದೆ.
ಹೌದು, ರಿಯಲ್‌ಮಿ C51 ಮೊಬೈಲ್ ಫ್ಲಿಪ್‌ಕಾರ್ಟ್ ವೆಬ್‌ಸೈಟ್ ನಲ್ಲಿ ಶೇ. 18% ರಷ್ಟು ನೇರ ರಿಯಾಯಿತಿ ಬೆಲೆಯಲ್ಲಿ ಕಾಣಬಹುದಾಗಿದೆ. ಈ ಫೋನಿನ 4 GB RAM + 64 GB ಸ್ಟೋರೇಜ್ ವೇರಿಯಂಟ್‌ನ ಆಫರ್ ಬೆಲೆಯು 8,999ರೂ. ಗಳ ಬೆಲೆಯಲ್ಲಿ ಖರೀದಿಗೆ ಲಭ್ಯ ಇದೆ. ಅಂದಹಾಗೆ ಈ ಫೋನ್ UNISOC T612 ಚಿಪ್‌ಸೆಟ್ ಪ್ರೊಸೆಸರ್ ಪವರ್‌ನಲ್ಲಿ ಕೆಲಸ ಮಾಡಲಿದೆ.

ಇನ್ನು ಈ ಮೊಬೈಲ್ ಫೋನ್ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಸೌಲಭ್ಯವನ್ನು ಪಡೆದಿದ್ದು, ಇದರ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಆಗಿದೆ. ಆಸಕ್ತ ಖರೀದಿದಾರರು ಈ ಮೊಬೈಲ್ ಅನ್ನು ಫ್ಲಿಪ್‌ಕಾರ್ಟ್ ತಾಣದ ಮೂಲಕ ಖರೀದಿ ಮಾಡಬಹುದಾಗಿದೆ. ಹಾಗಾದರೇ ರಿಯಲ್‌ಮಿ ಈ ಫೋನಿನ ಇತರೆ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ರಿಯಲ್‌ಮಿ C51 ಮೊಬೈಲ್ ಫೀಚರ್ಸ್
ರಿಯಲ್‌ಮಿ C51 ಮೊಬೈಲ್ 6.7 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇ ಅನ್ನು ಪಡೆದಿದೆ. ಈ ಡಿಸ್‌ಪ್ಲೇ 1600 x 720 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದಿದ್ದು, ಇದು 90Hz ರಿಫ್ರೆಶ್ ರೇಟ್ ಸಪೋರ್ಟ್ ಜೊತೆಗೆ 180Hz ಟಚ್ ಸ್ಯಾಂಪ್ಲಿಂಗ್ ರೇಟ್ ಪಡೆದಿದೆ. ಇದಲ್ಲದೆ 560 ನೀಟ್ಸ್ ವರೆಗೆ ಗರಿಷ್ಠ ಬ್ರೈಟ್‌ನೆಸ್ ಅನ್ನು ಸಹ ಒದಗಿಸಲಿದೆ.
ರಿಯಲ್‌ಮಿ C51 ಮೊಬೈಲ್ UNISOC T612 ಚಿಪ್‌ಸೆಟ್ ಪ್ರೊಸೆಸರ್ ಅನ್ನು ಒಳಗೊಂಡಿದ್ದು, ಇದು ಆಂಡ್ರಾಯ್ಡ್ 13 ಓಎಸ್ ಸಪೋರ್ಟ್ ಜೊತೆಗೆ ಕಾರ್ಯ ನಿರ್ವಹಿಸಲಿದೆ. ಹಾಗೆಯೇ 4GB RAM ಮತ್ತು 64GB ಆಂತರೀಕ ಸ್ಟೋರೇಜ್ ಆಯ್ಕೆ ಪಡೆದಿದೆ. ಇದಲ್ಲದೆ ಮೆಮೊರಿ ಕಾರ್ಡ್ ಮೂಲಕ 2TB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸುವುದಕ್ಕೆ ಅವಕಾಶ ಲಭ್ಯ. ಅಲ್ಲದೇ 4GB ವರ್ಚುವಲ್ RAM ಸಪೋರ್ಟ್ ಸಹ ಇದೆ.
ರಿಯಲ್‌ಮಿ C51 ಮೊಬೈಲ್ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಅನ್ನು ಪಡೆದಿದ್ದು, ಪ್ರಾಥಮಿಕ ಕ್ಯಾಮೆರಾ 50 ಮೆಗಾಪಿಕ್ಸೆಲ್ AI ಸೆನ್ಸಾರ್ ಅನ್ನು ಸಾಮರ್ಥ್ಯದ ಒಳಗೊಂಡಿದೆ. ಮುಂಭಾಗದಲ್ಲಿ 5 ಮೆಗಾ ಪಿಕ್ಸೆಲ್ AI ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಅನ್ನು ಸಹ ಪಡೆದುಕೊಂಡಿದೆ. ಕ್ಯಾಮೆರಾಗೆ ಪೂರಕವಾಗಿ LED ಫ್ಲ್ಯಾಷ್ ಅನ್ನು ಸಹ ಒದಗಿಸಲಾಗಿದೆ.
ರಿಯಲ್‌ಮಿ C51 ಮೊಬೈಲ್ 5,000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಸೌಲಭ್ಯವನ್ನು ಪಡೆದುಕೊಂಡಿದೆ. ಇದಕ್ಕೆ ಪೂರಕವಾಗಿ 33W ಫಾಸ್ಟ್ ಚಾರ್ಜಿಂಗ್ ಅನ್ನು ಪಡೆದುಕೊಂಡಿದೆ. ಇನ್ನು ಕನೆಕ್ಟಿವಿಟಿ ಸೌಲಭ್ಯಗಳಲ್ಲಿ ಹಾಟ್‌ಸ್ಪಾಟ್, ವೈಫೈ, ಯುಎಸ್‌ಬಿ ಸಿ ಪೋರ್ಟ್, ಹೆಡ್‌ಫೋನ್ ಜ್ಯಾಕ್ ಮತ್ತು ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಸೌಲಭ್ಯ ಪಡೆದಿದೆ.
ಭಾರತದಲ್ಲಿ ರಿಯಲ್‌ಮಿ C51 ಮೊಬೈಲ್ 4GB + 64GB ಹಾಗೂ 4 GB RAM + 128GB ಸ್ಟೋರೇಜ್ ವೇರಿಯಂಟ್ ಆಯ್ಕೆಯಲ್ಲಿ ಖರೀದಿಗೆ ಲಭ್ಯ ಇದೆ. ಅಲ್ಲದೇ ಈ ಫೋನ್ ಅನ್ನು ಗ್ರಾಹಕರು ಮಿಂಟ್ ಗ್ರೀನ್ ಮತ್ತು ಕಾರ್ಬನ್ ಬ್ಲ್ಯಾಕ್ ಬಣ್ಣಗಳಲ್ಲಿ ಖರೀದಿ ಮಾಡಲು ಅವಕಾಶ ಪಡೆದಿದೆ.


Click it and Unblock the Notifications








