ಇಂದು ರಿಯಲ್‌ಮಿ C51 ಫಸ್ಟ್ ಸೇಲ್; ಆಫರ್ ತಿಳಿದ್ರೆ, ವಾರೆವ್ಹಾ ಅಂತೀರಾ ಬಿಡಿ!
ರಿಯಲ್‌ಮಿ ಮೊಬೈಲ್ ಕಂಪನಿಯು ಇತ್ತೀಚಿಗೆ ರಿಯಲ್‌ಮಿ C51 ಮೊಬೈಲ್ ಅನ್ನು ಬಿಡುಗಡೆ ಮಾಡಿದ್ದು, ಈ ಫೋನ್ ಅಗ್ಗದ ಬೆಲೆಯೊಂದಿಗೆ ಉತ್ತಮ ಫೀಚರ್ಸ್‌ಗಳಿಂದ ಗ್ರಾಹಕರನ್ನು ಆಕರ್ಷಿಸಿದೆ. ಈ ಸ್ಮಾರ್ಟ್‌ಫೋನ್ ಇಂದು (ಸೆಪ್ಟೆಂಬರ್ 6) ಜನಪ್ರಿಯ ಇ ಕಾಮರ್ಸ್ ತಾಣ ಫ್ಲಿಪ್‌ಕಾರ್ಟ್ ಹಾಗೂ ಅಧಿಕೃತ ರಿಯಲ್ ಮಿ ತಾಣದ ಮೂಲಕ ಮೊದಲ ಸೇಲ್ ಆರಂಭಿಸಲಿದೆ.
ಹೌದು, ರಿಯಲ್‌ಮಿ ಕಂಪನಿಯ ರಿಯಲ್‌ಮಿ C51 ಸ್ಮಾರ್ಟ್‌ಫೋನಿನ ಮೊದಲ ಮಾರಾಟ ಇಂದು ಸಂಜೆ 6 ಗಂಟೆಗೆ ಫ್ಲಿಪ್‌ಕಾರ್ಟ್ ಹಾಗೂ ಅಧಿಕೃತ ರಿಯಲ್ ಮಿ ವೆಬ್‌ಸೈಟ್ ಮೂಲಕ ಪ್ರಾರಂಭವಾಗಲಿದೆ. ಇನ್ನು ಈ ಫೋನಿನ ಓಪೆನ್ ಸೇಲ್ ಸೆಪ್ಟೆಂಬರ್ 11 ರಂದು ಶುರುವಾಗಲಿದೆ. ಎಸ್‌ಬಿಐ ಹಾಗೂ ಐಸಿಐಸಿಐ ಬ್ಯಾಂಕ್ ಕಾರ್ಡ್ ಮೂಲಕ ಖರೀದಿಸಿದರೆ, 500ರೂ. ಡಿಸ್ಕೌಂಟ್ ದೊರೆಯುತ್ತದೆ.

ಈ ಮೊಬೈಲ್ 5,000mAh ಬ್ಯಾಟರಿ ಬ್ಯಾಕ್‌ಅಪ್ ಸಾಮರ್ಥ್ಯವನ್ನು ಒಳಗೊಂಡಿದ್ದು, ಹಾಗೆಯೇ 4GB + 64GB ಸ್ಟೋರೇಜ್ ವೇರಿಯಂಟ್ ಆಯ್ಕೆಯನ್ನು ಪಡೆದುಕೊಂಡಿದೆ. ಇದರೊಂದಿಗೆ ಈ ಫೋನಿನ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದಲ್ಲಿ ಇರುವುದು ಪ್ರಮುಖ ಹೈಲೈಟ್ಸ್‌ಗಳಲ್ಲಿ ಒಂದಾಗಿದೆ. ಇನ್ನುಳಿದಂತೆ ರಿಯಲ್‌ಮಿ C51 ಸ್ಮಾರ್ಟ್‌ಫೋನ್ ಇತರೆ ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.
ರಿಯಲ್‌ಮಿ C51 ಡಿಸ್‌ಪ್ಲೇ ರಚನೆ ಹೀಗಿದೆ :
ರಿಯಲ್‌ಮಿ C51 ಮೊಬೈಲ್ 6.7 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 1600 x 720 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದಿದೆ. ಇದು 90Hz ರಿಫ್ರೆಶ್ ರೇಟ್ ಸಪೋರ್ಟ್ ಅನ್ನು ಒಳಗೊಂಡಿದ್ದು, 180Hz ಟಚ್ ಸ್ಯಾಂಪ್ಲಿಂಗ್ ರೇಟ್ ಹೊಂದಿದೆ. ಇದಲ್ಲದೆ 560 ನೀಟ್ಸ್ ವರೆಗೆ ಗರಿಷ್ಠ ಬ್ರೈಟ್‌ನೆಸ್ ಅನ್ನು ಸಹ ಒದಗಿಸಲಿದೆ.
ರಿಯಲ್‌ಮಿ C51 ಪ್ರೊಸೆಸರ್ ಕಾರ್ಯವೈಖರಿ :
ರಿಯಲ್‌ಮಿ C51 ಮೊಬೈಲ್ UNISOC T612 ಚಿಪ್‌ಸೆಟ್ ಪ್ರೊಸೆಸರ್ ಅನ್ನು ಒಳಗೊಂಡಿದ್ದು, ಇದು ಆಂಡ್ರಾಯ್ಡ್ 13 ಓಎಸ್ ಸಪೋರ್ಟ್‌ನೊಂದಿಗೆ ಕೆಲಸ ನಿರ್ವಹಿಸಲಿದೆ. ಹಾಗೆಯೇ 4GB RAM ಮತ್ತು 64GB ಆಂತರೀಕ ಸ್ಟೋರೇಜ್ ಅನ್ನು ಪಡೆದುಕೊಂಡಿದೆ. ಇದಲ್ಲದೆ ಮೆಮೊರಿ ಕಾರ್ಡ್ ಮೂಲಕ 2TB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸುವುದಕ್ಕೆ ಅವಕಾಶ ಲಭ್ಯ. ಅಲ್ಲದೇ 4GB ವರ್ಚುವಲ್ RAM ಸಪೋರ್ಟ್ ಲಭ್ಯ.
ರಿಯಲ್‌ಮಿ C51 ಕ್ಯಾಮೆರಾ ಸೆನ್ಸಾರ್ ಮಾಹಿತಿ :
ರಿಯಲ್‌ಮಿ C51 ಮೊಬೈಲ್ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಅನ್ನು ಪಡೆದಿದ್ದು, ಪ್ರಾಥಮಿಕ ಕ್ಯಾಮೆರಾ 50 ಮೆಗಾಪಿಕ್ಸೆಲ್ AI ಸೆನ್ಸಾರ್ ಅನ್ನು ಸಾಮರ್ಥ್ಯದಲ್ಲಿ ಇದೆ. ಇದಲ್ಲದೆ 5 ಮೆಗಾಪಿಕ್ಸೆಲ್ AI ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ಒದಗಿಸಲಾಗಿದೆ. ಇನ್ನು ಹಿಂಭಾಗದ ಕ್ಯಾಮೆರಾದೊಂದಿಗೆ ಎಲ್‌ಇಡಿ ಫ್ಲ್ಯಾಷ್ ಅನ್ನು ಸಹ ನೀಡಲಾಗಿದೆ.
ರಿಯಲ್‌ಮಿ C51 ಬ್ಯಾಟರಿ ಮತ್ತು ಇತರೆ ಆಯ್ಕೆಗಳು :
ರಿಯಲ್‌ಮಿ C51 ಮೊಬೈಲ್ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಪಡೆದುಕೊಂಡಿದೆ. ಇದಕ್ಕೆ ಬೆಂಬಲವಾಗಿ 33W ವೇಗದ ಚಾರ್ಜಿಂಗ್ ಅನ್ನು ಪಡೆದುಕೊಂಡಿದೆ. ಇನ್ನು ಕನೆಕ್ಟಿವಿಟಿ ಸೌಲಭ್ಯಗಳಲ್ಲಿ ಹಾಟ್‌ಸ್ಪಾಟ್, ವೈಫೈ, ಯುಎಸ್‌ಬಿ ಸಿ ಪೋರ್ಟ್, ಹೆಡ್‌ಫೋನ್ ಜ್ಯಾಕ್ ಮತ್ತು ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಪಡೆದುಕೊಂಡಿದೆ.
ರಿಯಲ್‌ಮಿ C51 ಬೆಲೆ ಮತ್ತು ಲಭ್ಯತೆ :
ರಿಯಲ್‌ಮಿ C51 ಭಾರತದಲ್ಲಿ 4GB + 64GB ಸ್ಟೋರೇಜ್ ವೇರಿಯಂಟ್ ಆಯ್ಕೆ ಪಡೆದಿದ್ದು, ಈ ವೇರಿಯಂಟ್ ಬೆಲೆಯು 8,999ರೂ. ಆಗಿದೆ. ಇನ್ನು ಈ ಮೊಬೈಲ್ ಅನ್ನು ಗ್ರಾಹಕರು ಮಿಂಟ್ ಗ್ರೀನ್ ಮತ್ತು ಕಾರ್ಬನ್ ಬ್ಲ್ಯಾಕ್ ಬಣ್ಣಗಳಲ್ಲಿ ಖರೀದಿ ಮಾಡಬಹುದಾಗಿದೆ. ಈ ಫೋನ್ ರಿಯಲ್‌ಮಿ.ಕಾಮ್ ಮತ್ತು ಫ್ಲಿಪ್‌ಕಾರ್ಟ್ ತಾಣಗಳಲ್ಲಿ ಖರೀದಿಗೆ ಲಭ್ಯ.


Click it and Unblock the Notifications








