Realme: ರಿಯಲ್‌ಮಿಯ ಈ ಬಜೆಟ್ ಬೆಲೆಯ ಫೋನ್ ಇನ್ನೂ ಅಗ್ಗದ ಬೆಲೆಗೆ: 64 GB ಸ್ಟೋರೇಜ್... 50MP ಕ್ಯಾಮೆರಾ!
ರಿಯಲ್‌ಮಿ (Realme) ಸ್ಮಾರ್ಟ್‌ಫೋನ್‌ಗಳ ವಿಭಾಗದಲ್ಲಿ ಬಜೆಟ್ ಬೆಲೆಯ ಫೋನ್‌ಗಳಿಗೆ ಭಾರತದಲ್ಲಿ ಅತಿಯಾದ ಬೇಡಿಕೆ ಇದೆ. ಯಾಕೆಂದರೆ ಈ ಫೋನ್‌ಗಳು ಅಗ್ಗದ ಬೆಲೆಯಲ್ಲಿ ಲಭ್ಯವಾದರೂ ಸಹ ತಮ್ಮ ಅತ್ಯುತ್ತಮ ಕಾರ್ಯಕ್ಷಮತೆಯಿಂದ ಜನರನ್ನು ಸೆಳೆದಿವೆ. ಈ ನಡುವೆ ರಿಯಲ್‌ಮಿಯ ಬಜೆಟ್ ಫೋನ್‌ಗೆ ಹಬ್ಬದ ಹಿನ್ನೆಲೆ ಆಫರ್ ನೀಡಲಾಗಿದೆ.
ಹೌದು, ಬಜೆಟ್ ಬೆಲೆಯಲ್ಲಿ ಫೋನ್ ಖರೀದಿ ಮಾಡುವವರಿಗೆ ಇದು ಮತ್ತೊಂದು ಹಬ್ಬದ ಸಂಭ್ರಮವಾಗಿದೆ. ಯಾಕೆಂದರೆ ಫ್ಲಿಪ್‌ಕಾರ್ಟ್ ದೀಪಾವಳಿ (Flipkart Diwali sale) ಹಿನ್ನೆಲೆ ರಿಯಲ್‌ಮಿ C51 (Realme C51) ಸ್ಮಾರ್ಟ್‌ಫೋನ್‌ಗೆ ಭಾರೀ ಆಫರ್ ಘೋಷಣೆ ಮಾಡಿದೆ. ಈ ಫೋನ್ 50MP ಕ್ಯಾಮೆರಾ ಹಾಗೂ 64 GB ಸ್ಟೋರೇಜ್ ಆಯ್ಕೆ ಮೂಲಕ ಉತ್ತಮ ಎನಿಸಿದೆ. ಹಾಗಿದ್ರೆ, ಈ ಫೋನ್‌ನ ಪ್ರಮುಖ ಫೀಚರ್ಸ್ ಹಾಗೂ ಇದರ ಆಫರ್ ವಿವರಗಳನ್ನು ನೋಡೋಣ ಬನ್ನಿ.

ರಿಯಲ್‌ಮಿ C51 ಆಫರ್ ವಿವರ: ಈ ಸ್ಮಾರ್ಟ್‌ಫೋನ್ 3000 ರೂ.ಗಳ ರಿಯಾಯಿತಿಯೊಂದಿಗೆ ಇದೀಗ 7,999 ರೂ.ಗಳ ಆಫರ್ ಬೆಲೆಗೆ ಲಭ್ಯ ಆಗುತ್ತಿದೆ. ಇದರ ಸಾಮಾನ್ಯ ದರ 10,999 ರೂ.ಗಳು. ಫ್ಲಿಪ್‌ಕಾರ್ಟ್ ಇದಕ್ಕೆ 27% ರಿಯಾಯಿತಿ ನೀಡಿದೆ. ಇಷ್ಟೇ ಅಲ್ಲದೆ ಈ ಫೋನ್ ಅನ್ನು ಬ್ಯಾಂಕ್ ಆಫರ್ ಮೂಲಕ ಖರೀದಿ ಮಾಡಿದ್ರೆ ಇನ್ನೂ ಕಡಿಮೆ ದರದಲ್ಲಿ ನಿಮ್ಮದಾಗಿಸಿಕೊಳ್ಳಬಹುದು.
ಈ ಫೋನ್ ಖರೀದಿ ವೇಳೆ ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕಾರ್ಡ್ ಬಳಕೆ ಮಾಡಿದ್ರೆ 5% ಕ್ಯಾಶ್‌ಬ್ಯಾಕ್, ಪಾಲುದಾರ ಆಫರ್‌ಗೆ ಸೈನ್ ಅಪ್ ಮಾಡಿ ಫ್ಲಿಪ್‌ಕಾರ್ಟ್ ಲೆಟರ್ ಪೇ ಮೂಲಕ ಪಾವತಿ ಮಾಡಿದ್ರೆ 20,000 ರೂ. ಮೌಲ್ಯದ ಉಚಿತ ಟೈಮ್ಸ್ ಪ್ರೈಮ್ ಬೆನಿಫಿಟ್‌ಗಳನ್ನು ಪಡೆದುಕೊಳ್ಳಬಹುದು. ಇದರೊಂದಿಗೆ ಡೆಬಿಟ್ ಕಾರ್ಡ್ ಇಎಮ್‌ಐ ಆಯ್ಕೆ ಸಹ ಇದ್ದು, ಪ್ರತಿ ತಿಂಗಳು ನೀವು 496ರೂ. ಗಳನ್ನು ಪಾವತಿ ಮಾಡಿದ್ರೆ ಸಾಕು.

ರಿಯಲ್‌ಮಿ C51 ಡಿಸ್‌ಪ್ಲೇ ವಿವರ: ಈ ಬಜೆಟ್ ಬೆಲೆಯ ಸ್ಮಾರ್ಟ್‌ಫೋನ್ ಅನ್ನು ಈ ಬೆಲೆಗೆ ಖರೀದಿ ಮಾಡುವುದೇನೋ ಖುಷಿಯ ವಿಚಾರ. ಆದರೆ, ಈ ಬೆಲೆಗೆ ಈ ಫೋನ್ ಎಷ್ಟು ಯೋಗ್ಯ ಎಂಬುದನ್ನು ಕಂಡುಕೊಳ್ಳಲು ಇದರ ಫೀಚರ್ಸ್ ಕಡೆ ಕಣ್ಣಾಯಿಸಬೇಕು. ಅದರಂತೆ ಈ ಫೋನ್ 6.74 ಇಂಚಿನ IPS LCD ಡಿಸ್‌ಪ್ಲೇ ಹೊಂದಿದ್ದು, ಇದು 90Hz ರಿಫ್ರೆಶ್ ರೇಟ್ ಹಾಗೂ 560 ನಿಟ್ಸ್ ಬ್ರೈಟ್‌ನೆಸ್ ಪಡೆದಿದೆ. ಜೊತೆಗೆ 720 x 1600 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಆಯ್ಕೆ ಇದರಲ್ಲಿದೆ.
ರಿಯಲ್‌ಮಿ C51 ಪ್ರೊಸೆಸರ್ ಮಾಹಿತಿ: ಈ ಸ್ಮಾರ್ಟ್‌ಫೋನ್ ಯೂನಿಸೋಕ್ ಟೈಗರ್ T612 ಚಿಪ್‌ಸೆಟ್ ನಿಂದ ಕಾರ್ಯನಿರ್ವಹಿಸಲಿದೆ. ಈ ಚಿಪ್ ಆಕ್ಟಾ-ಕೋರ್ CPU ಆಗಿದೆ (2x1.8 GHz ಕಾರ್ಟೆಕ್ಸ್-A75 & 6x1.8 GHz ಕಾರ್ಟೆಕ್ಸ್-A55) ಜೊತೆಗೆ ಮಾಲಿ- G57 ಜಿಪಿಯು ಬಲ ಹಾಗೂ 64GB - 4GB RAM ಮೂಲಕ ಉತ್ತಮ ಕಾರ್ಯಕ್ಷಮತೆ ನೀಡಲಿದೆ. ಇದರೊಂದಿಗೆ ಈ ಫೋನ್ ಓಎಸ್ 13 ನಲ್ಲಿ ರನ್ ಆಗಲಿದೆ.
ರಿಯಲ್‌ಮಿ C51 ಕ್ಯಾಮೆರಾ ರಚನೆ: ಈ ಫೋನ್‌ನ ಕ್ಯಾಮೆರಾ ವಿಚಾರಕ್ಕೆ ಬಂದರೆ ಈ ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದೆ. ಅದರಲ್ಲಿ ಪ್ರಮುಖವಾಗಿ 50 MP ಮುಖ್ಯ ಕ್ಯಾಮೆರಾ ಹಾಗೂ 0.08 MP ಸೆಕೆಂಡರಿ ಕ್ಯಾಮೆರಾ ಆಯ್ಕೆ ಪಡೆದಿದೆ. ಈ ಸೆನ್ಸರ್ ಎಲ್ಇಡಿ ಫ್ಲ್ಯಾಶ್, ಹೆಚ್‌ಡಿಆರ್, ಪನೋರಮಾ ಫೀಚರ್ಸ್ ಆಯ್ಕೆ ಪಡೆದಿದೆ. ಜೊತೆಗೆ ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾ 5 MP ಕ್ಯಾಮೆರಾ ಆಯ್ಕೆ ನೀಡಲಾಗಿದೆ.

ರಿಯಲ್‌ಮಿ C51 ಬ್ಯಾಟರಿ ಹಾಗೂ ಇತರೆ: ಕೊನೆಯದಾಗಿ ಈ ಫೋನ್ 5000 mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದುಕೊಂಡಿದ್ದು, 33W ವೈರ್ಡ್ ಚಾರ್ಜಿಂಗ್ ಮೂಲಕ 28 ನಿಮಿಷಗಳಲ್ಲಿ 0-50% ಚಾರ್ಜಿಂಗ್ ಆಗಲಿದೆ. ಉಳಿದಂತೆ ವೈ-ಫೈ 802.11 a/b/g/n/ac, ಡ್ಯುಯಲ್-ಬ್ಯಾಂಡ್, ಬ್ಲೂಟೂತ್ ಆವೃತ್ತಿ 5.0, A2DP, LE, ಯುಎಸ್‌ಬಿ ಟೈಪ್ ಸಿ 2.0, ಫಿಂಗರ್‌ಪ್ರಿಂಟ್ ಸೈಡ್-ಮೌಂಟೆಡ್ ಸೆನ್ಸರ್, ಅಕ್ಸೆಲೆರೊಮೀಟರ್ ಸೇರಿದಂತೆ ಅನೇಕ ಕನೆಕ್ಟಿವಿಟಿ ಹಾಗೂ ಇತರೆ ಸೌಲಭ್ಯ ಪಡೆದಿದೆ.


Click it and Unblock the Notifications