Home
ಸುದ್ದಿಜಾಲ

ಬಜೆಟ್‌ ಬೆಲೆಯ ಫೋನ್‌ ಖರೀದಿಸುವ ಗ್ರಾಹಕರಿಗೆ ಇದು ಬೆಸ್ಟ್‌ ಆಫರ್‌!

ಜನಪ್ರಿಯ ಮೊಬೈಲ್ ಕಂಪನಿಗಳಲ್ಲಿ ಒಂದಾದ ರಿಯಲ್‌ಮಿಯು ಭಿನ್ನ ರೇಂಜ್‌ನ ಸ್ಮಾರ್ಟ್‌ಫೋನ್‌ಗಳ ಆಯ್ಕೆಯನ್ನು ಗ್ರಾಹಕರಿಗೆ ನೀಡಿದೆ. ಆ ಪೈಕಿ ರಿಯಲ್‌ಮಿ C53 ಸ್ಮಾರ್ಟ್‌ಫೋನ್‌ ಬಜೆಟ್‌ ಪ್ರೈಸ್‌ಟ್ಯಾಗ್‌ ಜೊತೆಗೆ ಆಕರ್ಷಕ ಫೀಚರ್ಸ್‌ ಪಡೆದಿದೆ. ಸದ್ಯ ಈ ಮೊಬೈಲ್‌ ಸಖತ್‌ ರಿಯಾಯಿತಿ ಬೆಲೆಯಲ್ಲಿ ಖರೀದಿಗೆ ಲಭ್ಯ ಇದ್ದು, ಗ್ರಾಹಕರ ಇದರತ್ತ ದೃಷ್ಠಿ ಹರಿಸುವಂತೆ ಆಗಿದೆ.

ಹೌದು, ದೈತ್ಯ ಇ ಕಾಮರ್ಸ್‌ ತಾಣ ಫ್ಲಿಪ್‌ಕಾರ್ಟ್‌ ಪ್ಲಾಟ್‌ಫಾರ್ಮ್ ನಲ್ಲಿ ರಿಯಲ್‌ಮಿ C53 ಮೊಬೈಲ್‌ 15% ರಷ್ಟು ಡಿಸ್ಕೌಂಟ್‌ ಪಡೆದಿದೆ. 6 GB RAM + 64 GB ಸ್ಟೋರೇಜ್‌ ವೇರಿಯಂಟ್‌ 12,999ರೂ. ಬೆಲೆಯನ್ನು ಹೊಂದಿದ್ದು, ಇದೀಗ ಫ್ಲಿಪ್‌ಕಾರ್ಟ್‌ ಕೊಡುಗೆಯಲ್ಲಿ 10,999ರೂ. ಪ್ರೈಸ್‌ಟ್ಯಾಗ್‌ನಲ್ಲಿ ಕಾಣಿಸಿಕೊಂಡಿದೆ. ಇದರ ಜೊತೆಗೆ ಇತರೆ ಆಯ್ದ ಬ್ಯಾಂಕ್‌ಗಳಿಂದಲೂ ಡಿಸ್ಕೌಂಟ್‌ ಸಿಗಲಿದೆ.

ಬಜೆಟ್‌ ಬೆಲೆಯ ಫೋನ್‌ ಖರೀದಿಸುವ ಗ್ರಾಹಕರಿಗೆ ಇದು ಬೆಸ್ಟ್‌ ಆಫರ್‌!

ಅಂದಹಾಗೆ ರಿಯಲ್‌ಮಿ C53 ಮೊಬೈಲ್‌ ಡ್ಯುಯಲ್‌ ಕ್ಯಾಮೆರಾ ರಚನೆ ಅನ್ನು ಪಡೆದಿದ್ದು, ಮೇನ್‌ ಕ್ಯಾಮೆರಾವು 100 ಮೆಗಾಪಿಕ್ಸಲ್‌ ನಲ್ಲಿದೆ. ಇದಲ್ಲದೇ 5,000 mAh ಬ್ಯಾಟರಿ ಬ್ಯಾಕ್‌ಅಪ್‌ ಸಹ ಒಳಗೊಂಡಿದೆ. ಇನ್ನುಳಿದಂತೆ ರಿಯಲ್‌ಮಿ C53 ಮೊಬೈಲ್‌ನ ಇತರೆ ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ರಿಯಲ್‌ಮಿ C53 ಡಿಸ್‌ಪ್ಲೇ ರಚನೆ ಮತ್ತು ಡಿಸೈನ್‌ : ರಿಯಲ್‌ಮಿ C53 ಮೊಬೈಲ್‌ 6.74 ಇಂಚಿನ ಎಲ್‌ಸಿಡಿ ಡಿಸ್‌ಪ್ಲೇ ಅನ್ನು ಒಳಗೊಂಡಿದ್ದು, ಇದರ ಡಿಸ್‌ಪ್ಲೇ 1600 x 720 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಹೊಂದಿದೆ. ಇದರ ಜೊತೆಗೆ ಡಿಸ್‌ಪ್ಲೇ 90Hz ರಿಫ್ರೆಶ್ ರೇಟ್‌ ಸಪೋರ್ಟ್‌ ಹೊಂದಿದ್ದು, 180Hz ಟಚ್ ಸ್ಯಾಂಪ್ಲಿಂಗ್ ರೇಟ್‌ ಅನ್ನು ಪಡೆದುಕೊಂಡಿದೆ. ಅಲ್ಲದೇ ಡಿಸ್‌ಪ್ಲೇ 90.3% ಸ್ಕ್ರೀನ್-ಟು-ಬಾಡಿ ಅನುಪಾತ ಇದ್ದು, 560 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್‌ ಅನ್ನು ಸಪೋರ್ಟ್‌ ಇದೆ.

ರಿಯಲ್‌ಮಿ C53 ಪ್ರೊಸೆಸರ್‌ ಕಾರ್ಯವೈಖರಿ : ರಿಯಲ್‌ಮಿ C53 ಮೊಬೈಲ್‌ ಯುನಿಸೋಕ್‌ T612 SoC ಪ್ರೊಸೆಸರ್‌ನಲ್ಲಿ ಕಾರ್ಯ ನಿರ್ವಹಿಸುತ್ತದೆ. ಇದು ಆಂಡ್ರಾಯ್ಡ್‌ 13 ಓಎಸ್‌ ಆಧಾರಿತ ಸಪೋರ್ಟ್ ಮಾಡುತ್ತದೆ. ಇನ್ನು ಈ ಫೋನ್‌ 4GB RAM + 128GB ಮತ್ತು 6GB RAM + 64GB ಸ್ಟೋರೇಜ್‌ ಸಾಮರ್ಥ್ಯದ ಎರಡು ವೇರಿಯೆಂಟ್‌ ಆಯ್ಕೆ ಪಡೆದಿದೆ.

ಹಾಗೆಯೇ ರಿಯಲ್‌ಮಿ C53 ಫೋನ್‌ RAM ಅನ್ನು ವಾಸ್ತವಿಕವಾಗಿ 12GB ವರೆಗೆ ವಿಸ್ತರಿಸಬಹುದಾಗಿದೆ. ಹಾಗೆಯೇ ಮೆಮೊರಿ ಕಾರ್ಡ್‌ ಸಪೋರ್ಟ್ ನೊಂದಿಗೆ 2TB ವರೆಗೆ ಬಾಹ್ಯ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಲು ಅವಕಾಶ ಇದೆ.

ರಿಯಲ್‌ಮಿ C53 ಕ್ಯಾಮೆರಾ ಸೆನ್ಸಾರ್‌ ಎಷ್ಟಿದೆ : ರಿಯಲ್‌ಮಿ C53 ಮೊಬೈಲ್‌ ಡ್ಯುಯಲ್‌ ರಿಯರ್‌ ರಚನೆ ಅನ್ನು ಪಡೆದುಕೊಂಡಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 108 ಮೆಗಾಪಿಕ್ಸೆಲ್ ಸೆನ್ಸಾರ್‌ ಆಗಿದ್ದು, ಜೊತೆಗೆ 8 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒದಗಿಸಲಾಗಿದೆ. ಇನ್ನು ಕ್ಯಾಮೆರಾಗಳಿಗಾಗಿ ಹಿಂಭಾಗದಲ್ಲಿ ಮೂರು ಪ್ರತ್ಯೇಕ ವೃತ್ತಾಕಾರದ ಲೈಟ್‌ಗಳ ಮತ್ತು ಎಲ್ಇಡಿ ಫ್ಲ್ಯಾಷ್‌ಲೈಟ್ ಅನ್ನು ಸೌಲಭ್ಯ ನೀಡಿದೆ.

ರಿಯಲ್‌ಮಿ C53 ಬ್ಯಾಟರಿ ಮತ್ತು ಇತರೆ ಆಯ್ಕೆಗಳ ಮಾಹಿತಿ : ರಿಯಲ್‌ಮಿ C53 ಮೊಬೈಲ್‌ 5,000 mAh ಸಾಮರ್ಥ್ಯ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದುಕೊಂದಿದ್ದು, ಇದಕ್ಕೆ ಪೂರಕವಾಗಿ 18W ವೇಗದ ಚಾರ್ಜಿಂಗ್‌ ಅನ್ನು ಬೆಂಬಲ ಮಾಡಲಿದೆ. ಕನೆಕ್ಟಿವಿಟಿ ಸೌಲಭ್ಯಗಳಲ್ಲಿ 4G, GPS/AGPS, Wi-Fi, ಬ್ಲೂಟೂತ್ 5, 3.5mm ಹೆಡ್‌ಫೋನ್ ಜ್ಯಾಕ್ ಮತ್ತು USB ಟೈಪ್-C ಪೋರ್ಟ್ ಅನ್ನು ಆಯ್ಕೆಗಳು ಇವೆ.

ರಿಯಲ್‌ಮಿ C53 ಮೆಮೊರಿ ಮತ್ತು ಕಲರ್‌ ಮಾಹಿತಿ : ರಿಯಲ್‌ಮಿ C53 ಮೊಬೈಲ್‌ ಭಾರತದಲ್ಲಿ 4GB RAM + 128GB ಮತ್ತು 6GB RAM + 64GB ಸ್ಟೋರೇಜ್ ಆಯ್ಕೆ ಪಡೆದಿದೆ. ಇನ್ನು ಫೋನ್‌ ಚಾಂಪಿಯನ್ ಗೋಲ್ಡನ್ ಮತ್ತು ಚಾಂಪಿಯನ್ ಬ್ಲ್ಯಾಕ್ ಬಣ್ಣದ ಆಯ್ಕೆಗಳಲ್ಲಿ ಖರೀದಿ ಮಾಡಬಹುದಾಗಿದೆ.

Best Mobiles in India

English summary
realme C53 attractive price drop on flipkart. offer price and specifications and details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+