ರಿಯಲ್‌ಮಿಯ ಇತ್ತೀಚಿನ ಈ ಫೋನಿಗೆ ಭಾರೀ ರಿಯಾಯಿತಿ!..ಅಧಿಕ ಬ್ಯಾಟರಿ ಆಯ್ಕೆ!
ಆನ್‌ಲೈನ್ ಮಾರುಕಟ್ಟೆಯಲ್ಲಿ ಪ್ರಮುಖ ಇ ಕಾಮರ್ಸ್ ತಾಣ ಎನಿಸಿರುವ ಫ್ಲಿಪ್‌ಕಾರ್ಟ್ ಮೊಬೈಲ್‌ಗಳಿಗೆ ಭರ್ಜರಿ ಡಿಸ್ಕೌಂಟ್ ಲಭ್ಯ ಮಾಡಿದೆ. ಆ ಪೈಕಿ ರಿಯಲ್‌ಮಿ C53 ಸ್ಮಾರ್ಟ್‌ಫೋನ್ ಆಕರ್ಷಕ ರಿಯಾಯಿತಿ ಪಡೆದಿದ್ದು, ಗ್ರಾಹಕರನ್ನು ಸೆಳೆಯುವಂತಿದೆ.
ಹೌದು, ಫ್ಲಿಪ್‌ಕಾರ್ಟ್ ಇ ಕಾಮರ್ಸ್ ತಾಣದಲ್ಲಿ ರಿಯಲ್‌ಮಿ C53 ಮೊಬೈಲ್ ಶೇ. 16% ರಷ್ಟು ನೇರ ಡಿಸ್ಕೌಂಟ್ ಪಡೆದಿದ್ದು, ಗ್ರಾಹಕರು 4 GB RAM + 128 GB ಸ್ಟೋರೇಜ್ ವೇರಿಯಂಟ್ ಫೋನ್ 9,999ರೂ. ಗಳ ದರದಲ್ಲಿ ಖರೀದಿಸಬಹುದು. ಇದರೊಂದಿಗೆ ಕೆಲವು ಆಯ್ದ ಬ್ಯಾಂಕ್ ಆಫರ್, ಎಕ್ಸ್‌ಚೇಂಜ್ ಕೊಡುಗೆ ಕೂಡಾ ಖರೀದಿದಾರರಿಗೆ ಸಿಗಲಿದೆ.

ಅಂದಹಾಗೆ ಈ ಫೋನ್ ಯುನಿಸೋಕ್ T612 SoC ಪ್ರೊಸೆಸರ್‌ನಲ್ಲಿ ಕೆಲಸ ಮಾಡಲಿದ್ದು, 5,000mAh ಬ್ಯಾಟರಿ ಬ್ಯಾಕ್‌ಅಪ್ ಅನ್ನು ಪಡೆದುಕೊಂಡಿದೆ. ಹಾಗೆಯೇ ಡ್ಯುಯಲ್ ಕ್ಯಾಮೆರಾ ರಚನೆ ಅನ್ನು ಪಡೆದಿದ್ದು, ಪ್ರಾಥಮಿಕ ಕ್ಯಾಮೆರಾ 108 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯ ಆಗಿದೆ. ಹಾಗಾದರೇ ರಿಯಲ್‌ಮಿ C53 ಮೊಬೈಲ್‌ನ ಇತರೆ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ಡಿಸ್‌ಪ್ಲೇ ಡಿಸೈನ್ ಹಾಗೂ ರಚನೆ
ಈ ಫೋನ್ 6.74 ಇಂಚಿನ ಎಲ್‌ಸಿಡಿ ಡಿಸ್‌ಪ್ಲೇ ಅನ್ನು ಒಳಗೊಂಡಿದ್ದು, ಈ ಫೋನಿನ ಡಿಸ್‌ಪ್ಲೇ 1600 x 720 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಹೊಂದಿದೆ. ಇದಲ್ಲದೇ ಈ ಡಿಸ್‌ಪ್ಲೇ 90Hz ರಿಫ್ರೆಶ್ ರೇಟ್ ಸಪೋರ್ಟ್ ಪಡೆದಿದ್ದು, 180Hz ಟಚ್ ಸ್ಯಾಂಪ್ಲಿಂಗ್ ರೇಟ್ ಅನ್ನು ಒಳಗೊಂಡಿದೆ. ಅಲ್ಲದೇ ಡಿಸ್‌ಪ್ಲೇ 90.3% ಸ್ಕ್ರೀನ್-ಟು-ಬಾಡಿ ಅನುಪಾತ ಇದ್ದು, 560 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಅನ್ನು ಬೆಂಬಲಿಸಲಿದೆ.

ಪ್ರೊಸೆಸರ್ ಸಾಮರ್ಥ್ಯ ಏನಿದೆ
ರಿಯಲ್‌ಮಿ C53 ಫೋನ್ ಯುನಿಸೋಕ್ T612 SoC ಪ್ರೊಸೆಸರ್‌ನಲ್ಲಿ ಕೆಲಸ ಮಾಡುತ್ತದೆ. ಇದು ಆಂಡ್ರಾಯ್ಡ್ 13 ಓಎಸ್ ಆಧಾರಿತ ಸಪೋರ್ಟ್ ಪಡೆದಿದೆ. ಇನ್ನು ಈ ಫೋನ್ 4GB RAM + 128GB ಹಾಗೂ 6GB RAM + 64GB ಸ್ಟೋರೇಜ್ ಸಾಮರ್ಥ್ಯದ ಎರಡು ವೇರಿಯೆಂಟ್ ಆಯ್ಕೆ ಒಳಗೊಂಡಿದೆ. ಹಾಗೆಯೇ ರಿಯಲ್‌ಮಿ C53 ಫೋನ್ RAM ಅನ್ನು ವಾಸ್ತವಿಕವಾಗಿ 12GB ವರೆಗೆ ವಿಸ್ತರಿಸಬಹುದಾಗಿದೆ. ಅಲ್ಲದೇ ಎಸ್‌ಡಿ ಕಾರ್ಡ್ ಮೂಲಕ 2TB ವರೆಗೆ ಬಾಹ್ಯ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಲು ಅವಕಾಶ ಲಭ್ಯ.
ಡ್ಯುಯಲ್ ಕ್ಯಾಮೆರಾ ಸೆನ್ಸಾರ್ ಸೌಲಭ್ಯ
ರಿಯಲ್‌ಮಿ C53 ಫೋನ್ ಡ್ಯುಯಲ್ ರಿಯರ್ ರಚನೆ ಅನ್ನು ಒಳಗೊಂಡಿದ್ದು, ಇದರ ಮೊದಲ ಕ್ಯಾಮೆರಾ 108 ಮೆಗಾ ಪಿಕ್ಸೆಲ್ ಸೆನ್ಸಾರ್ ಆಗಿದೆ. ಹಾಗೆಯೇ ಮುಂಭಾಗದಲ್ಲಿ 8 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒದಗಿಸಲಾಗಿದೆ. ಇನ್ನು ಕ್ಯಾಮೆರಾಗಳಿಗಾಗಿ ಹಿಂಭಾಗದಲ್ಲಿ ಮೂರು ಪ್ರತ್ಯೇಕ ರೌಂಡ್ ಲೈಟ್‌ಗಳ ಮತ್ತು ಎಲ್ಇಡಿ ಫ್ಲ್ಯಾಷ್‌ಲೈಟ್ ಅನ್ನು ಸೌಲಭ್ಯ ಪಡೆದುಕೊಂಡಿದೆ.

ಬಿಗ್ ಬ್ಯಾಟರಿ ಮತ್ತು ಇತರೆ ಸೌಲಭ್ಯಗಳ
ರಿಯಲ್‌ಮಿ C53 ಫೋನ್ 5,000 mAh ಸಾಮರ್ಥ್ಯ ಬ್ಯಾಟರಿ ಬ್ಯಾಕ್‌ಅಪ್ ಸೌಲಭ್ಯ ಇದ್ದು, ಇದಕ್ಕೆ ಅನುಗುಣವಾಗಿ 18W ಫಾಸ್ಟ್ ಚಾರ್ಜಿಂಗ್ ಅನ್ನು ಸಪೋರ್ಟ್ ಮಾಡಲಿದೆ. ಕನೆಕ್ಟಿವಿಟಿ ಸೌಲಭ್ಯಗಳಲ್ಲಿ 4G, GPS/AGPS, Wi-Fi, ಬ್ಲೂಟೂತ್ 5, 3.5mm ಹೆಡ್‌ಫೋನ್ ಜ್ಯಾಕ್ ಮತ್ತು USB ಟೈಪ್-C ಪೋರ್ಟ್ ಆಯ್ಕೆ ಕಾಣಬಹುದಾಗಿದೆ.
ವೇರಿಯಂಟ್ ಆಯ್ಕೆ ಮತ್ತು ಕಲರ್ ಮಾಹಿತಿ
ರಿಯಲ್‌ಮಿ C53 ಮೊಬೈಲ್ 4GB RAM + 128GB ಮತ್ತು 6GB RAM + 64GB ಆಂತರೀಕ ಸ್ಟೋರೇಜ್ ಆಯ್ಕೆ ಪಡೆದಿದೆ. ಇನ್ನು ಗ್ರಾಹಕರು ಈ ಮೊಬೈಲ್ ಅನ್ನು ಚಾಂಪಿಯನ್ ಗೋಲ್ಡನ್ ಮತ್ತು ಚಾಂಪಿಯನ್ ಬ್ಲ್ಯಾಕ್ ಬಣ್ಣದ ಆಯ್ಕೆಗಳಲ್ಲಿ ಖರೀದಿ ಮಾಡಲು ಅವಕಾಶ ಇದೆ.


Click it and Unblock the Notifications








