Home
ಸುದ್ದಿಜಾಲ

ಇಂದು ರಿಯಲ್‌ಮಿ C55 ಫಸ್ಟ್‌ ಸೇಲ್‌!..ಬಿಗ್‌ ಡಿಸ್ಕೌಂಟ್‌, ಭಾರೀ ಉಳಿತಾಯ!

ರಿಯಲ್‌ಮಿ ಕಂಪನಿಯು ಇತ್ತೀಚಿಗೆ ಹೊಸದಾಗಿ 'ರಿಯಲ್‌ಮಿ C55 (Realme C55)' ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದ್ದು, ಭಿನ್ನ ಫೀಚರ್ಸ್‌ಗಳಿಂದ ಗ್ರಾಹಕರನ್ನು ಆಕರ್ಷಿಸಿದೆ. ಈ ಫೋನ್ ಇಂದು (ಮಾ. 28) ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ಮೂಲಕ ಭಾರತದಲ್ಲಿ ಮೊದಲ ಮಾರಾಟ ಪ್ರಾರಂಭಿಸಲಿದೆ. ಈ ಫೋನ್‌ ಮೀಡಿಯಾಟೆಕ್ ಹಿಲಿಯೋ G88 ಪ್ರೊಸೆಸರ್‌ ಅನ್ನು ಹೊಂದಿದೆ.

ಹೌದು, ರಿಯಲ್‌ಮಿ ಸಂಸ್ಥೆಯ ರಿಯಲ್‌ಮಿ C55 ಫೋನಿನ ಫಸ್ಟ್‌ ಸೇಲ್‌ ಇಂದು ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ತಾಣದಲ್ಲಿ ಶುರುವಾಗಿಲಿದೆ. ಇನ್ನು ಈ ಫೋನ್ ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಪಡೆದಿದ್ದು, ಮುಖ್ಯ ಕ್ಯಾಮೆರಾವು 64 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಪಡೆದಿದೆ. ಇನ್ನು ಈ ಫೋನಿನ ಆರಂಭಿಕ ವೇರಿಯಂಟ್‌ ಬೆಲೆಯು 10,999ರೂ. ಆಗಿದ್ದು, ಆರಂಭ ಕೊಡುಗೆಯಾಗಿ 9,999ರೂ. ಗೆ ಲಭ್ಯವಾಗಲಿದೆ.

ಇಂದು ರಿಯಲ್‌ಮಿ C55 ಫಸ್ಟ್‌ ಸೇಲ್‌!..ಬಿಗ್‌ ಡಿಸ್ಕೌಂಟ್‌, ಭಾರೀ ಉಳಿತಾಯ!

ರಿಯಲ್‌ಮಿ C55 ಡಿಸ್‌ಪ್ಲೇ : ರಿಯಲ್‌ಮಿ C55 ಸ್ಮಾರ್ಟ್‌ಫೋನ್ 6.7 ಇಂಚಿನ ಫುಲ್‌ ಹೆಚ್‌ಡಿ + ಎಲ್‌ಡಿಸಿ ಡಿಸ್‌ಪ್ಲೇ ಗೊಂಡಿದ್ದು, ಇದು 90Hz ರಿಫ್ರೆಶ್ ರೇಟ್‌ ಅನ್ನು ಪಡೆದುಕೊಂಡಿದೆ. ಜೊತೆಗೆ ಸೆಲ್ಫಿ ಕ್ಯಾಮೆರಾ ಉದ್ದೆಶಕ್ಕಾಗಿ ಪಂಚ್-ಹೋಲ್ ನಾಚ್ ಕಟೌಟ್ ಶೈಲಿಯನ್ನು ಇದು ಪಡೆದುಕೊಂಡಿದೆ. ಇದೆಲ್ಲದಕ್ಕೂ ಮಿಗಿಲಾಗಿ ಬ್ಯಾಟರಿ ಸ್ಥಿತಿ, ಡೇಟಾ ಬಳಕೆ ಮತ್ತು ಇನ್ನಿತರೆ ಮಾಹಿತಿಗಾಗಿ ಮಿನಿ ಕ್ಯಾಪ್ಸುಲ್ ಫೀಚರ್ಸ್‌ ನೀಡಲಾಗಿದೆ.

ರಿಯಲ್‌ಮಿ C55 ಪ್ರೊಸೆಸರ್‌ ಪವರ್: ರಿಯಲ್‌ಮಿ C55 ಸ್ಮಾರ್ಟ್‌ಫೋನ್ ಮೀಡಿಯಾಟೆಕ್ ಹಿಲಿಯೋ G88 ಪ್ರೊಸೆಸರ್‌ ಮೂಲಕ ಕಾರ್ಯನಿರ್ವಹಿಸುವ ಈ ಫೋನ್ ಆಂಡ್ರಾಯ್ಡ್‌ 13 ಆಧಾರಿತ ರಿಯಲ್‌ನಿ UI 4.0 ನಲ್ಲಿ ರನ್‌ ಆಗಲಿದೆ. ಇನ್ನುಳಿದಂತೆ ಇದು ಮೂರು ವೇರಿಯಂಟ್‌ನಲ್ಲಿ ಕಾಣಿಸಿಕೊಂಡಿದೆ. ಅಂದರೆ 4GB/6GB/8GB RAM ಹಾಗೂ 64GB/128GB ಇಂಟರ್ ಸ್ಟೋರೇಜ್ ಆಯ್ಕೆಗಳನ್ನು ಈ ಫೋನ್‌ ಹೊಂದಿದೆ.

ಇಂದು ರಿಯಲ್‌ಮಿ C55 ಫಸ್ಟ್‌ ಸೇಲ್‌!..ಬಿಗ್‌ ಡಿಸ್ಕೌಂಟ್‌, ಭಾರೀ ಉಳಿತಾಯ!

ರಿಯಲ್‌ಮಿ C55 ಕ್ಯಾಮೆರಾ : ರಿಯಲ್‌ಮಿ C55 ಸ್ಮಾರ್ಟ್‌ಫೋನ್ ಕ್ಯಾಮೆರಾ ವಿಚಾರಕ್ಕೆ ಬರುವುದಾದರೆ ಡ್ಯುಯಲ್‌ ರಿಯರ್‌ ಕ್ಯಾಮೆರಾ ರಚನೆ ಹೊಂದಿದ್ದು, ಅದರಲ್ಲಿ 64 ಮೆಗಾಪಿಕ್ಸೆಲ್‌ ಮುಖ್ಯ ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್‌ ಡೆಪ್ತ್ ಸೆನ್ಸಾರ್ ಆಯ್ಕೆ ನೀಡಲಾಗಿದೆ. ಹಾಗೆಯೇ ಸೆಲ್ಫಿಗಾಗಿ 8 ಮೆಗಾಪಿಕ್ಸೆಲ್‌ ಸೆನ್ಸರ್‌ ನೀಡಲಾಗಿದೆ.

ರಿಯಲ್‌ಮಿ C55 ಬ್ಯಾಟರಿ ಬಲ : ರಿಯಲ್‌ಮಿ C55 ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್‌ ಆಗಿದೆ. ಹಾಗೆಯೇ 33W ಫಾಸ್ಟ್ ಚಾರ್ಜಿಂಗ್ ಅನ್ನು ಇದು ಬೆಂಬಲಿಸಲಿದೆ. ಈ ಮೂಲಕ ವೇಗವಾಗಿ ಮೊಬೈಲ್‌ ಚಾರ್ಜ್‌‌ ಆಗಲಿದೆ ಎನ್ನಲಾಗಿದೆ.

ಇಂದು ರಿಯಲ್‌ಮಿ C55 ಫಸ್ಟ್‌ ಸೇಲ್‌!..ಬಿಗ್‌ ಡಿಸ್ಕೌಂಟ್‌, ಭಾರೀ ಉಳಿತಾಯ!

ರಿಯಲ್‌ಮಿ C55 ಬೆಲೆ ಹಾಗೂ ಲಭ್ಯತೆ : ರಿಯಲ್‌ಮಿ C55 ಯ 4GB RAM ಮತ್ತು 64GB ಸ್ಟೋರೇಜ್‌ನ ಮೂಲ ವೇರಿಯಂಟ್‌ಗೆ 10,999ರೂ. ಗಳ ಬೆಲೆ ನಿಗದಿ ಮಾಡಲಾಗಿದ್ದು, 6GB+64GB ವೇರಿಯಂಟ್‌ಗೆ 11,999ರೂ. ಗಳ ಬೆಲೆ ನಿಗದಿ ಮಾಡಲಾಗಿದೆ. ಹಾಗೆಯೇ 8GB+128GB ಸ್ಟೋರೇಜ್ ಆಯ್ಕೆಗೆ 13,999ರೂ. ಗಳ ಬೆಲೆಯನ್ನು ನಿಗದಿ ಮಾಡಲಾಗಿದೆ. ಇನ್ನು ಈ ಫೋನ್‌ ಸನ್-ಶವರ್ ಮತ್ತು ರೈನಿ ನೈಟ್ ಎಂಬ ಎರಡು ಬಣ್ಣದಲ್ಲಿ ಕಾಣಿಸಿಕೊಂಡಿದೆ.

ಈ ರಿಯಲ್‌ಮಿ C55 ಸ್ಮಾರ್ಟ್‌ಫೋನ್‌ ಅನ್ನು ಭಾರತದಲ್ಲಿ ಮಾರ್ಚ್ 28 ರಿಂದ ಮೊದಲ ಮಾರಾಟಕ್ಕೆ ಲಭ್ಯವಾಗಿಸುತ್ತಿದ್ದು, ಪ್ರಮುಖ ಇ ಕಾಮರ್ಸ್‌ ತಾಣವಾದ ಫ್ಲಿಪ್‌ಕಾರ್ಟ್‌ ಹಾಗೂ ರಿಯಲ್‌ಮಿಯ ಅಧಿಕೃತ ಸೈಟ್‌ ಮೂಲಕ ಖರೀದಿ ಮಾಡಬಹುದಾಗಿದೆ. ಹಾಗೆಯೇ HDFC ಮತ್ತು ICICI ಬ್ಯಾಂಕ್ ಗ್ರಾಹಕರಿಗೆ 1,000ರೂ. ಗಳ ಇನ್‌ಸ್ಟಂಟ್‌ ರಿಯಾಯಿತಿಯನ್ನು ಸಹ ಲಭ್ಯ.

Best Mobiles in India

English summary
Realme C55 comes in three configurations. Realme is offering up to Rs 1000 with ICICI Bank and HDFC Bank Card transactions.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+