Home
ಸುದ್ದಿಜಾಲ

ಕೆಲವೇ ದಿನಗಳಲ್ಲಿ ಲಾಂಚ್‌ ಆಗಲಿದೆ ರಿಯಲ್‌ಮಿ C55; ಮಾರುಕಟ್ಟೆ ಆಕ್ರಮಿಸೋದು ಪಕ್ಕಾ!

ಪ್ರತಿ ತಿಂಗಳು ಪ್ರಮುಖ ಬ್ರ್ಯಾಂಡ್‌ಗಳು ವಿವಿಧ ಫೀಚರ್ಸ್‌ ಇರುವ ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್‌ ಮಾಡಿಕೊಂಡು ಬರುತ್ತವೆ. ಅದರಲ್ಲೂ ಈ ತಿಂಗಳು 15 ಕ್ಕೂ ಹೆಚ್ಚು ಸ್ಮಾರ್ಟ್‌ಫೋನ್‌ಗಳು ಲಾಂಚ್‌ ಆಗಿದ್ದು, ಭಾರೀ ಸದ್ದು ಮಾಡುತ್ತಿವೆ. ಅದರಂತೆ ಸಧ್ಯದಲ್ಲೇ ರಿಯಲ್‌ಮಿಯ ಬಹು ನಿರೀಕ್ಷಿತ ಸ್ಮಾರ್ಟ್‌ಫೋನ್‌ ಲಾಂಚ್‌ ಆಗಲಿದೆ.

ಹೌದು, ಸ್ಮಾರ್ಟ್‌ಫೋನ್‌ ತಯಾರಿಕಾ ಸಂಸ್ಥೆಗಳಲ್ಲಿ ಒಂದಾಗಿರುವ ರಿಯಲ್‌ಮಿ ತನ್ನದೇ ಆದ ವಿಶೇಷ ಫೀಚರ್ಸ್‌ಗಳನ್ನು ಸ್ಮಾರ್ಟ್‌ಫೋನ್‌ಗಳಿಗೆ ನೀಡುವ ಮೂಲಕ ಹಲವಾರು ಗ್ರಾಹಕರನ್ನು ಸೆಳೆಯುತ್ತಿದೆ. ಅದರಲ್ಲೂ ಕೈಗೆಟಕುವ ದರದಲ್ಲಿ ಅತ್ಯುತ್ತಮ ಕಾರ್ಯಕ್ಷಮತೆ ಇರುವ ಫೋನ್‌ಗಳನ್ನು ಲಾಂಚ್‌ ಮಾಡುತ್ತಿರುವ ಬ್ರ್ಯಾಂಡ್‌ಗಳಲ್ಲಿ ಇದೂ ಪ್ರಮುಖವಾದ ಬ್ರ್ಯಾಂಡ್‌ ಎನಿಸಿಕೊಂಡಿದೆ. ಇದರ ನಡುವೆ ರಿಯಲ್‌ಮಿ C55 (Realme C55) ಸ್ಮಾರ್ಟ್‌ಫೋನ್ ಲಾಂಚ್‌ಗೆ ಕ್ಷಣಗಣನೆ ಆರಂಭ ಆಗಿದೆ.

ಕೆಲವೇ ದಿನಗಳಲ್ಲಿ ಲಾಂಚ್‌ ಆಗಲಿದೆ ರಿಯಲ್‌ಮಿ C55; ಮಾರುಕಟ್ಟೆ ಆಕ್ರಮಿಸೋದು ಪಕ್ಕಾ

ರಿಯಲ್‌ಮಿ C55 ಮಾರ್ಚ್‌ನಲ್ಲಿ ಲಾಂಚ್ ಆಗಲಿದ್ದು, ಈಗಾಗಲೇ ಈ ಫೋನ್‌ನ ಪ್ರಮುಖ ಫೀಚರ್ಸ್‌ ಹಾಗೂ ಇನ್ನಿತರೆ ಮಾಹಿತಿ ಲೀಕ್‌ ಆಗಿವೆ. ಅದರ ಪ್ರಕಾರ ಈ ಫೋನ್‌ ಮೀಡಿಯಾ ಟೆಕ್‌ ಹಿಲಿಯೋ G88 ಪ್ರೊಸೆಸರ್ ನಲ್ಲಿ ಕಾರ್ಯನಿರ್ವಹಿಸಲಿದೆ ಎನ್ನಲಾಗಿದ್ದು, 5000mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಹೊಂದಿರಲಿದೆ. ಹಾಗಿದ್ರೆ, ಲೀಕ್ ಆದ ಮಾಹಿತಿ ಪ್ರಕಾರ ಈ ಫೋನ್‌ನ ಇನ್ನಿತರೆ ಫೀಚರ್ಸ್‌ ಹಾಗೂ ಲಾಂಚ್‌ ಬಗೆಗಿನ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ರಿಯಲ್‌ಮಿ C55 ಡಿಸ್‌ಪ್ಲೇ ವಿವರ

ಸಿ ಸರಣಿಯ ಈ ಫೋನ್‌ ಅನ್ನು ಇತ್ತೀಚೆಗೆ ಗೀಕ್‌ಬೆಂಚ್ ಬೆಂಚ್‌ಮಾರ್ಕ್ ಡೇಟಾಬೇಸ್‌ನಲ್ಲಿ ಗುರುತಿಸಲಾಗಿದ್ದು, ಈ ಫೋನ್‌ ಲಾಂಚ್‌ ಆಗುವ ಮುನ್ನವೇ ಈ ಫೋನ್‌ನ ಅನ್‌ಬಾಕ್ಸಿಂಗ್ ವಿಡಿಯೋ ವೈರಲ್‌ ಆಗಿದೆ. ಅದರ ಪ್ರಕಾರ ಈ ಫೋನ್ 652 ಇಂಚಿನ ಎಲ್‌ಸಿಡಿ ಡಿಸ್‌ಪ್ಲೇ ಯೊಂದಿಗೆ 90Hz ರಿಫ್ರೆಶ್ ರೇಟ್ ಹೊಂದಿರಲಿದೆ ಎಂದು ತಿಳಿದುಬಂದಿದೆ. ಜೊತೆಗೆ ಕ್ಯಾಮೆರಾ ಉದ್ದೇಶಕ್ಕೆ ಪಂಚ್ ಹೋಲ್ ನಾಚ್‌ನೊಂದಿಗೆ ಕಾಣಿಸಿಕೊಳ್ಳಲಿದೆ.

ರಿಯಲ್‌ಮಿ C55 ಪ್ರೊಸೆಸರ್‌ ಯಾವುದು?

ಸಿ ಸರಣಿಯ ಈ ರಿಯಲ್‌ಮಿ C55 ಸ್ಮಾರ್ಟ್‌ಫೋನ್ ಆಕ್ಟಾ ಕೋರ್ ಮೀಡಿಯಾ ಟೆಕ್ ಹೆಲಿಯೊ ಜಿ 88 ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸಲಿದೆ ಎಂದು ಹೇಳಲಾಗುತ್ತಿದ್ದು, ಆಂಡ್ರಾಯ್ಡ್‌ 13 ಅನ್ನು ಆಧರಿಸಿದ ರಿಯಲ್‌ಮಿ UI 4.0 ಮೂಲಕ ರನ್‌ ಆಗಲಿದೆ. ಅದರಂತೆ 6GB RAM ಮತ್ತು 128GB ಇಂಟರ್ನಲ್‌ ಸ್ಟೋರೇಜ್‌ ಸಾಮರ್ಥ್ಯದಲ್ಲಿ ಕಂಡುಬರಲಿದೆ ಎಂದು ಲೀಕ್‌ ಆದ ಮಾಹಿತಿಯಿಂದ ತಿಳಿದುಬಂದಿದೆ.

ಕೆಲವೇ ದಿನಗಳಲ್ಲಿ ಲಾಂಚ್‌ ಆಗಲಿದೆ ರಿಯಲ್‌ಮಿ C55; ಮಾರುಕಟ್ಟೆ ಆಕ್ರಮಿಸೋದು ಪಕ್ಕಾ

ರಿಯಲ್‌ಮಿ C55 ಕ್ಯಾಮೆರಾ ರಚನೆ

ಇನ್ನು ಈ ಮುಂಬರುವ ರಿಯಲ್‌ಮಿ C55 ಸ್ಮಾರ್ಟ್‌ಫೋನ್ ಡ್ಯುಯಲ್ ರಿಯರ್‌ ಕ್ಯಾಮೆರಾ ಆಯ್ಕೆ ಹೊಂದಿದ್ದು, ಅದರಲ್ಲಿ 64MP ಪ್ರಾಥಮಿಕ ಕ್ಯಾಮೆರಾ ಹಾಗೂ 2MP ಸೆಕೆಂಡರಿ ಕ್ಯಾಮೆರಾ ಆಯ್ಕೆ ಪಡೆದುಕೊಂಡಿರಲಿದೆ ಎಂದು ಹೇಳಲಾಗುತ್ತಿದೆ. ಇದರೊಂದಿಗೆ ವಿಡಿಯೋ ಕರೆಗಳು ಮತ್ತು ಸೆಲ್ಫಿ ಫೋಟೋಗಾಗಿ 8MP ಸೆಲ್ಫಿ ಕ್ಯಾಮೆರಾ ಹೊಂದಿರಲಿದೆ ಎಂದು ತಿಳಿದುಬಂದಿದೆ.

ರಿಯಲ್‌ಮಿ C55 ಬ್ಯಾಟರಿ ಸಾಮರ್ಥ್ಯ ಹಾಗೂ ಇತರೆ

ಈ ರಿಯಲ್‌ಮಿ C55 ಸ್ಮಾರ್ಟ್‌ಫೋನ್ 5000mAh ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು, ಇದು 33Wಸೂಪರ್ ವೂಕ್‌ ಫಾಸ್ಟ್‌ ಚಾರ್ಜಿಂಗ್ ಬೆಂಬಲ ಪಡೆದಿದೆ ಎಂದು ಹೇಳಲಾಗುತ್ತಿದೆ. ಜೊತೆಗೆ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಆಯ್ಕೆ ಇರಲಿದೆ ಎಂದು ಭಾವಿಸಲಾಗಿದ್ದು, 3.5 ಎಂಎಂ ಆಡಿಯೊ ಜ್ಯಾಕ್ ಅನ್ನು ಸಹ ಹೊಂದಿರಬಹುದು ಎಂದು ನಂಬಲಾಗಿದೆ. ಇನ್ನು ಯುಎಸ್‌ಬಿ 2.0 ಟೈಪ್‌-ಸಿ ಪೋರ್ಟ್ ಮೂಲಕ ಈ ಫೋನ್ ಚಾರ್ಜ್ ಆಗುತ್ತದೆ.

Best Mobiles in India

English summary
Realme C series smartphone Realme C55 will be launched in a few days. Know about this phone features as per the leaked information.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+