ಹಬ್ಬದ ಅಂಗವಾಗಿ ಈ ಅಗ್ಗದ ಫೋನಿಗೆ ಈಗ ಭಾರೀ ರಿಯಾಯಿತಿ!
ರಿಯಲ್‌ಮಿ ಮೊಬೈಲ್ ಸಂಸ್ಥೆಯು ದೇಶಿಯ ಮಾರುಕಟ್ಟೆಯಲ್ಲಿ ಬಜೆಟ್ ದರದ ಫೋನ್‌ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಸಂಸ್ಥೆಯ ರಿಯಲ್‌ಮಿ C55 ಮೊಬೈಲ್ ಎಂಟ್ರಿ ಲೆವೆಲ್ ಮಾದರಿಯ ಫೋನ್ ಆಗಿ ಗುರುತಿಸಿಕೊಂಡಿದ್ದು, ಇದೀಗ ಫ್ಲಿಪ್‌ಕಾರ್ಟ್ ತಾಣದಲ್ಲಿ ಬಿಗ್ ರಿಯಾಯಿತಿ ಪಡೆದುಕೊಂಡಿದೆ.
ಹೌದು, ದೈತ್ಯ ಇ ಕಾಮರ್ಸ್ ಫ್ಲಿಪ್‌ಕಾರ್ಟ್ ತಾಣದಲ್ಲಿ ರಿಯಲ್‌ಮಿ C55 ಮೊಬೈಲ್ ಶೇ. 23% ರಷ್ಟು ನೇರ ರಿಯಾಯಿತಿ ಲಭ್ಯ ಮಾಡಲಾಗಿದೆ. 4 GB RAM + 64 GB ವೇರಿಯಂಟ್ ಫೋನ್ 9,999ರೂ. ಗಳ ಕೊಡುಗೆಯ ಬೆಲೆಯಲ್ಲಿ ಖರೀದಿಗೆ ಲಭ್ಯ ಇದೆ. ಇದರ ಜೊತೆಗೆ ಇ ಕಾಮರ್ಸ್ ತಾಣದಲ್ಲಿ ಲಭ್ಯ ಇರುವ ಇತರೆ ಆಯ್ದ ಬ್ಯಾಂಕ್ ಆಫರ್, ಎಕ್ಸ್‌ಚೇಂಜ್ ರಿಯಾಯಿತಿ ಪಡೆದುಕೊಂಡರೆ, ಈ ಮೊಬೈಲ್ ಇನ್ನಷ್ಟು ರಿಯಾಯಿತಿ ದರದಲ್ಲಿ ಖರೀದಿ ಮಾಡಬಹುದು.

ಅಂದಹಾಗೆ ಮೀಡಿಯಾ ಟೆಕ್ ಹಿಲಿಯೋ G88 ಪ್ರೊಸೆಸರ್ ಪವರ್ ಪಡೆದುಕೊಂಡಿದೆ. ಇದರ ಜೊತೆಗೆ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಪಡೆದಿದ್ದು, ಪ್ರಾಥಮಿಕ ಕ್ಯಾಮೆರಾವು 64 ಮೆಗಾ ಪಿಕ್ಸಲ್ ಸೆನ್ಸಾರ್ ಬಲದಲ್ಲಿ ಇದೆ. 5,000mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್ ಆಗಿದೆ. ಹಾಗಾದರೆ ರಿಯಲ್‌ಮಿ C55 ಫೋನಿನ ಇತರ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ಡಿಸ್‌ಪ್ಲೇ ಡಿಸೈನ್ ಹೇಗಿದೆ
ರಿಯಲ್‌ಮಿ C55 ಮೊಬೈಲ್ 6.7 ಇಂಚಿನ ಫುಲ್ ಹೆಚ್‌ಡಿ + ಎಲ್‌ಡಿಸಿ ಡಿಸ್‌ಪ್ಲೇ ಪಡೆದಿದುಕೊಂಡಿದ್ದು, ಇದು 90Hz ರಿಫ್ರೆಶ್ ರೇಟ್ ಅನ್ನು ಹೊಂದಿದೆ. ಜೊತೆಗೆ ಸೆಲ್ಫಿ ಕ್ಯಾಮೆರಾ ಕಾರಣಕ್ಕಾಗಿ ಪಂಚ್-ಹೋಲ್ ನಾಚ್ ಕಟೌಟ್ ಶೈಲಿಯ ಮಾದರಿಯನ್ನು ಇದು ಒಳಗೊಂಡಿದೆ. ಹಾಗೆಯೇ ಬ್ಯಾಟರಿ ಸ್ಥಿತಿ, ಡೇಟಾ ಬಳಕೆ ಮತ್ತು ಇನ್ನಿತರೆ ಮಾಹಿತಿಗಾಗಿ ಮಿನಿ ಕ್ಯಾಪ್ಸುಲ್ ಫೀಚರ್ಸ್ ಪಡೆದಿದೆ.

ಪ್ರೊಸೆಸರ್ ಸಾಮರ್ಥ್ಯ ಎಷ್ಟಿದೆ
ರಿಯಲ್‌ಮಿ C55 ಫೋನ್ ಮೀಡಿಯಾ ಟೆಕ್ ಹಿಲಿಯೋ G88 ಪ್ರೊಸೆಸರ್ ಪವರ್‌ನಲ್ಲಿ ಕಾರ್ಯ ನಿರ್ವಹಿಸುವ ಈ ಫೋನ್ ಆಂಡ್ರಾಯ್ಡ್ 13 ಆಧಾರಿತ ರಿಯಲ್‌ನಿ UI 4.0 ಸಪೋರ್ಟ್ ಪಡೆದಿದೆ. ಇನ್ನುಳಿದಂತೆ ಈ ಫೋನ್ ಮೂರು ವೇರಿಯಂಟ್‌ನಲ್ಲಿ ಕಾಣಿಸಿಕೊಂಡಿದ್ದು, ಅವುಗಳು ಕ್ರಮವಾಗಿ 4GB/6GB/8GB RAM ಹಾಗೂ 64GB/128GB ಆಂತರೀಕ ಸ್ಟೋರೇಜ್ ಆಯ್ಕೆಗಳನ್ನು ಈ ಫೋನ್ ಪಡೆದಿದೆ.
ಕ್ಯಾಮೆರಾ ಸೆನ್ಸಾರ್ ಕಥೆ ಏನು
ರಿಯಲ್‌ಮಿ C55 ಮೊಬೈಲ್ ಕ್ಯಾಮೆರಾ ಹಿಂಭಾಗದಲ್ಲಿ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಹೊಂದಿದ್ದು, ಅದರಲ್ಲಿ 64 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಆಯ್ಕೆ ಪಡೆದುಕೊಂಡಿದೆ. ಇದರೊಂದಿಗೆ ಸೆಲ್ಫಿಗಾಗಿ 8 ಮೆಗಾ ಪಿಕ್ಸೆಲ್ ಸೆನ್ಸರ್ ಸೌಲಭ್ಯ ಕೂಡಾ ಪಡೆದುಕೊಂಡಿದೆ.

ಬ್ಯಾಟರಿ ಬ್ಯಾಕ್‌ಅಪ್ ಪವರ್ ಮಾಹಿತಿ
ರಿಯಲ್‌ಮಿ C55 ಸ್ಮಾರ್ಟ್‌ಫೋನ್ 5,000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಪಡೆದುಕೊಂಡಿದ್ದು, ಇದಕ್ಕೆ ಪೂರಕವಾಗಿ 33W ಫಾಸ್ಟ್ ಚಾರ್ಜಿಂಗ್ ಅನ್ನು ಇದು ಸಪೋರ್ಟ್ ಮಾಡುತ್ತದೆ. ಇತ್ತೀಚಿನ ಅಗತ್ಯ ಕನೆಕ್ಟಿವಿಟಿ ಸೌಲಭ್ಯಗಳನ್ನು ಇದು ಪಡೆದುಕೊಂಡಿದೆ.
ಕಲರ್ ಹಾಗೂ ಮೆಮೊರಿ ಮಾಹಿತಿ
ರಿಯಲ್‌ಮಿ C55 ಮೊಬೈಲ್ 4 GB RAM ಮತ್ತು 64 GB ಸ್ಟೋರೇಜ್ ಹಾಗೂ 8GB + 128 GB ಸ್ಟೋರೇಜ್ ಆಯ್ಕೆ ಪಡೆದುಕೊಂಡಿದೆ. ಇನ್ನು ಈ ಫೋನ್ ಸನ್-ಶವರ್ ಮತ್ತು ರೈನಿ ನೈಟ್ ಎಂಬ ಎರಡು ಬಣ್ಣದಲ್ಲಿ ಖರೀದಿಗೆ ಲಭ್ಯ.


Click it and Unblock the Notifications








