ಭಾರತದಲ್ಲಿ ರಿಯಲ್‌ಮಿ C55 ಸ್ಮಾರ್ಟ್‌ಫೋನ್ ಲಾಂಚ್: ಫೀಚರ್ಸ್, ಬೆಲೆ ಬಗ್ಗೆ ತಿಳಿಯಿರಿ!
ಭಾರತದಲ್ಲಿ ರಿಯಲ್‌ಮಿ ಸ್ಮಾರ್ಟ್‌ಫೋನ್‌ಗಳಿಗೆ ಹೆಚ್ಚಿನ ಬೇಡಿಕೆ ಇದ್ದು, ಅದರಂತೆ ಇದೀಗ ರಿಯಲ್‌ಮಿ C55 ಸ್ಮಾರ್ಟ್‌ಫೋನ್ ಅನ್ನು ಅನಾವರಣ ಮಾಡಲಾಗಿದೆ. ಈ ಫೋನ್ 64 ಮೆಗಾಪಿಕ್ಸೆಲ್ ಕ್ಯಾಮೆರಾ ಸೇರಿದಂತೆ ನಿಬ್ಬೆರಗಾಗಿಸುವ ನೋಟವನ್ನು ಹೊಂದಿದೆ.
ಹೌದು, ರಿಯಲ್‌ಮಿ C55 (Realme C55) ಸ್ಮಾರ್ಟ್‌ಫೋನ್ ಅನ್ನು ಭಾರತದಲ್ಲಿ ಅಧಿಕೃತವಾಗಿ ಲಾಂಚ್ ಮಾಡಲಾಗಿದೆ. ಇದು ಕೈಗೆಟುಕುವ ದರದಲ್ಲಿ ಲಭ್ಯವಾಗುವ ಸಿ ಸರಣಿ ಫೋನ್ ಆಗಿದ್ದು, ಮೀಡಿಯಾಟೆಕ್ ಹಿಲಿಯೋ G88 ಚಿಪ್‌ಸೆಟ್ ಮೂಲಕ ಕಾರ್ಯನಿರ್ವಹಿಸಲಿದೆ. ಜೊತೆಗೆ ಹಗುರವಾದ ವಿನ್ಯಾಸವನ್ನು ಹೊಂದಿರುವುದು ಈ ಫೋನ್‌ನ ವಿಶೇಷತೆ. ಹಾಗಿದ್ರೆ ಇದರ ಇನ್ನಷ್ಟು ಫೀಚರ್ಸ್ ಹಾಗೂ ಭಾರತದಲ್ಲಿ ಈ ಫೋನ್ ಬೆಲೆ ಎಷ್ಟು ಎಂದು ತಿಳಿಯೋಣ.

ರಿಯಲ್‌ಮಿ C55 ಡಿಸ್‌ಪ್ಲೇ ಮಾಹಿತಿ: ರಿಯಲ್‌ಮಿ C55 ಸ್ಮಾರ್ಟ್‌ಫೋನ್ 6.7 ಇಂಚಿನ ಫುಲ್ ಹೆಚ್‌ಡಿ + ಎಲ್‌ಡಿಸಿ ಡಿಸ್‌ಪ್ಲೇ ಗೊಂಡಿದ್ದು, ಇದು 90Hz ರಿಫ್ರೆಶ್ ರೇಟ್ ಅನ್ನು ಪಡೆದುಕೊಂಡಿದೆ. ಜೊತೆಗೆ ಸೆಲ್ಫಿ ಕ್ಯಾಮೆರಾ ಉದ್ದೆಶಕ್ಕಾಗಿ ಪಂಚ್-ಹೋಲ್ ನಾಚ್ ಕಟೌಟ್ ಶೈಲಿಯನ್ನು ಇದು ಪಡೆದುಕೊಂಡಿದೆ. ಇದೆಲ್ಲದಕ್ಕೂ ಮಿಗಿಲಾಗಿ ಬ್ಯಾಟರಿ ಸ್ಥಿತಿ, ಡೇಟಾ ಬಳಕೆ ಮತ್ತು ಇನ್ನಿತರೆ ಮಾಹಿತಿಗಾಗಿ ಮಿನಿ ಕ್ಯಾಪ್ಸುಲ್ ಫೀಚರ್ಸ್ ನೀಡಲಾಗಿದೆ.
ರಿಯಲ್‌ಮಿ C55 ಪ್ರೊಸೆಸರ್ ಯಾವುದು?:ಮೀಡಿಯಾಟೆಕ್ ಹಿಲಿಯೋ G88 ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸುವ ಈ ಫೋನ್ ಆಂಡ್ರಾಯ್ಡ್ 13 ಆಧಾರಿತ ರಿಯಲ್‌ನಿ UI 4.0 ನಲ್ಲಿ ರನ್ ಆಗಲಿದೆ. ಇನ್ನುಳಿದಂತೆ ಇದು ಮೂರು ವೇರಿಯಂಟ್‌ನಲ್ಲಿ ಕಾಣಿಸಿಕೊಂಡಿದೆ. ಅಂದರೆ 4GB/6GB/8GB RAM ಹಾಗೂ 64GB/128GB ಇಂಟರ್ ಸ್ಟೋರೇಜ್ ಆಯ್ಕೆಗಳನ್ನು ಈ ಫೋನ್ ಹೊಂದಿದೆ.
ರಿಯಲ್‌ಮಿ C55 ಕ್ಯಾಮೆರಾ ರಚನೆ ಹೇಗಿದೆ? : ಈ ಫೋನ್ ಕ್ಯಾಮೆರಾ ವಿಚಾರಕ್ಕೆ ಬರುವುದಾದರೆ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಹೊಂದಿದ್ದು, ಅದರಲ್ಲಿ 64 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಆಯ್ಕೆ ನೀಡಲಾಗಿದೆ. ಹಾಗೆಯೇ ಸೆಲ್ಫಿಗಾಗಿ 8 ಮೆಗಾಪಿಕ್ಸೆಲ್ ಸೆನ್ಸರ್ ನೀಡಲಾಗಿದೆ.

ರಿಯಲ್‌ಮಿ C55 ಬ್ಯಾಟರಿ ಸಾಮರ್ಥ್ಯ : ಬ್ಯಾಟರಿ ವಿಚಾರದಲ್ಲಂತೂ ರಿಯಲ್‌ಮಿ ಹೆಚ್ಚಿನ ಸುಧಾರಣೆ ತರುತ್ತಿದ್ದು, ಅದರಂತೆ ಈ ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್ ಆಗಿದೆ. ಹಾಗೆಯೇ 33W ಫಾಸ್ಟ್ ಚಾರ್ಜಿಂಗ್ ಅನ್ನು ಇದು ಬೆಂಬಲಿಸಲಿದೆ. ಈ ಮೂಲಕ ಅತ್ಯಂತ ವೇಗವಾಗಿ ಮೊಬೈಲ್ ಚಾರ್ಜ್ ಆಗಲಿದೆ ಎಂದು ಕಂಪೆನಿ ತಿಳಿಸಿದೆ.
ರಿಯಲ್‌ಮಿ C55 ಬೆಲೆ ಹಾಗೂ ಲಭ್ಯತೆ : ರಿಯಲ್‌ಮಿ C55 ಯ 4GB RAM ಮತ್ತು 64GB ಸ್ಟೋರೇಜ್‌ನ ಮೂಲ ವೇರಿಯಂಟ್‌ಗೆ 10,999ರೂ. ಗಳ ಬೆಲೆ ನಿಗದಿ ಮಾಡಲಾಗಿದ್ದು, 6GB+64GB ವೇರಿಯಂಟ್‌ಗೆ 11,999ರೂ. ಗಳ ಬೆಲೆ ನಿಗದಿ ಮಾಡಲಾಗಿದೆ. ಹಾಗೆಯೇ 8GB+128GB ಸ್ಟೋರೇಜ್ ಆಯ್ಕೆಗೆ 13,999ರೂ. ಗಳ ಬೆಲೆಯನ್ನು ನಿಗದಿ ಮಾಡಲಾಗಿದೆ. ಇನ್ನು ಈ ಫೋನ್ ಸನ್-ಶವರ್ ಮತ್ತು ರೈನಿ ನೈಟ್ ಎಂಬ ಎರಡು ಬಣ್ಣದಲ್ಲಿ ಕಾಣಿಸಿಕೊಂಡಿದೆ.

ಈ ರಿಯಲ್‌ಮಿ C55 ಸ್ಮಾರ್ಟ್‌ಫೋನ್ ಅನ್ನು ಭಾರತದಲ್ಲಿ ಮಾರ್ಚ್ 28 ರಿಂದ ಮೊದಲ ಮಾರಾಟಕ್ಕೆ ಲಭ್ಯವಾಗಿಸುತ್ತಿದ್ದು, ಪ್ರಮುಖ ಇ ಕಾಮರ್ಸ್ ತಾಣವಾದ ಫ್ಲಿಪ್‌ಕಾರ್ಟ್ ಹಾಗೂ ರಿಯಲ್‌ಮಿಯ ಅಧಿಕೃತ ಸೈಟ್ ಮೂಲಕ ಖರೀದಿ ಮಾಡಬಹುದಾಗಿದೆ. ಇದರೊಂದಿಗೆ ರಿಟೇಲರ್ ಸ್ಟೋರ್‌ನಲ್ಲಿಯೂ ಈ ಫೋನ್ ಲಭ್ಯ ಇರಲಿದೆ ಎಂದು ಕಂಪೆನಿ ತಿಳಿಸಿದೆ. ಇದೆಲ್ಲದಕ್ಕಿಂತ ಮಿಗಿಲಾಗಿ HDFC ಮತ್ತು ICICI ಬ್ಯಾಂಕ್ ಗ್ರಾಹಕರಿಗೆ 1,000ರೂ. ಗಳ ತ್ವರಿತ ರಿಯಾಯಿತಿಯನ್ನು ಸಹ ಲಭ್ಯ.


Click it and Unblock the Notifications








