ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡಿರುವ ರಿಯಲ್‌ಮಿಯ ಈ ಫೋನ್ ಬೆಲೆಯಲ್ಲಿ ಇಳಿಕೆ!
ಆನ್‌ಲೈನ್ ಶಾಪಿಂಗ್ ಪ್ರಿಯರ ಹಾಟ್‌ಸ್ಪಾಟ್ ಎನಿಸಿರುವ ಫ್ಲಿಪ್‌ಕಾರ್ಟ್ ಇ ಕಾಮರ್ಸ್ ತಾಣವು ಸ್ಮಾರ್ಟ್‌ಫೋನ್‌ಗಳಿಗೆ ಒಂದಿಲ್ಲೊಂದು ಕೊಡುಗೆ ಲಭ್ಯ ಮಾಡಿರುತ್ತದೆ. ಈ ಮೂಲಕ ಹೆಚ್ಚಿನ ಗ್ರಾಹಕರನ್ನು ಸೆಳೆಯಲು ಮುಂದಾಗುತ್ತದೆ. ಇದೀಗ ರಿಯಲ್‌ಮಿ ಸಂಸ್ಥೆಯ ರಿಯಲ್‌ಮಿ C65 5G (realme C65 5G) ಸ್ಮಾರ್ಟ್‌ಫೋನ್ ಭಾರೀ ರಿಯಾಯಿತಿ ಬೆಲೆಯಲ್ಲಿ ಕಾಣಿಸಿಕೊಂಡಿದ್ದು, ಗ್ರಾಹಕರಿಗೆ ಖುಷಿ ತಂದಿದೆ. ಇನ್ನು ರಿಯಲ್‌ಮಿಯ ಈ ಮೊಬೈಲ್ ಮೀಡಿಯಾ ಟೆಕ್ ಡೈಮೆನ್ಸಿಟಿ 6300 SoC ಪ್ರೊಸೆಸರ್ ಪವರ್‌ನಲ್ಲಿ ಕೆಲಸ ಮಾಡುತ್ತದೆ.
ಹೌದು, ಫ್ಲಿಪ್‌ಕಾರ್ಟ್ ತಾಣದಲ್ಲಿ ಇತ್ತೀಚಿನ ರಿಯಲ್‌ಮಿ C65 5G ಮೊಬೈಲ್ ಶೇ. 25% ರಷ್ಟು ನೇರ ಡಿಸ್ಕೌಂಟ್ ಸೌಲಭ್ಯದಲ್ಲಿ ಕಾಣಿಸಿಕೊಂಡಿದೆ. ಈ ಮೊಬೈಲ್‌ನ 4 GB RAM + 64 GB ಸ್ಟೋರೇಜ್ ವೇರಿಯಂಟ್ ಈಗ ಕೊಡುಗೆಯಲ್ಲಿ 10,499ರೂ. ದರದಲ್ಲಿ ಖರೀದಿ ಮಾಡಲು ಅವಕಾಶ ಇದೆ. ಹಾಗೆಯೇ ಬ್ಯಾಂಕ್ ಆಫರ್ ಮತ್ತು ನೋ ಕಾಸ್ಟ್ ಇಎಮ್‌ಐ ಕೂಡಾ ಗ್ರಾಹಕರಿಗೆ ಲಭ್ಯ ಆಗಲಿದೆ.

ಇನ್ನು ಈ ಸ್ಟೈಲಿಶ್ ಮೊಬೈಲ್ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಪಡೆದಿದ್ದು, ಇದರಲ್ಲಿ ಪ್ರಾಥಮಿಕ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದಲ್ಲಿ ಇದೆ. ಹಾಗೆಯೇ 4GB + 64 GB, 4GB + 128 GB ಹಾಗೂ 6GB + 128 GB ಆಂತರೀಕ ಸ್ಟೋರೇಜ್ ಆಯ್ಕೆ ಪಡೆದಿದೆ. ಹಾಗಾದರೆ ರಿಯಲ್‌ಮಿ C65 5G ಫೋನಿನ ಇತರೆ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ರಿಯಲ್‌ಮಿ C65 5G - ಫೀಚರ್ಸ್ ಮಾಹಿತಿ
ರಿಯಲ್‌ಮಿ C65 5G ಮೊಬೈಲ್ ಈ ಡಿಸ್‌ಪ್ಲೇಯು 1604×720 ಪಿಕ್ಸಲ್ ರೆಸಲ್ಯೂಶನ್ ಸೌಲಭ್ಯ ಪಡೆದಿದ್ದು, 6.67 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇ ರಚನೆ ಅನ್ನು ಹೊಂದಿದೆ. ಹಾಗೆಯೇ ಈ ಡಿಸ್‌ಪ್ಲೇಯು 120Hz ರಿಫ್ರೆಶ್ ರೇಟ್ ಆಯ್ಕೆ ಒಳಗೊಂಡಿದ್ದು, 1500:1 ಅನುಪಾತವನ್ನು ಕೂಡಾ ಪಡೆದಿದೆ. ಹಾಗೆಯೇ ಈ ಫೋನ್ 625 nits HBM ಬ್ರೈಟ್ನೆಸ್ ಸಪೋರ್ಟ್ ಪಡೆದಿದೆ.
ರಿಯಲ್‌ಮಿ C65 5G ಮೊಬೈಲ್ ಮೀಡಿಯಾ ಟೆಕ್ ಡೈಮೆನ್ಸಿಟಿ 6300 SoC ಪ್ರೊಸೆಸರ್ ಸಾಮರ್ಥ್ಯ ಪಡೆದಿದ್ದು, ಇದಕ್ಕೆ ಬೆಂಬಲವಾಗಿ ಆಂಡ್ರಾಯ್ಡ್ 14 ಓಎಸ್ ಸಪೋರ್ಟ್ ನಲ್ಲಿ ಕೆಲಸ ಮಾಡುತ್ತದೆ. ಇದರೊಂದಿಗೆ 4GB + 64 GB, 4GB + 128 GB ಹಾಗೂ 6GB + 128 GB ಸ್ಟೋರೇಜ್ ವೇರಿಯಂಟ್ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ.
ರಿಯಲ್‌ಮಿ C65 5G ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಪಡೆದಿದ್ದು, ಇನ್ನು ಇದರ ಪ್ರಾಥಮಿಕ ಕ್ಯಾಮೆರಾವು 50 ಮೆಗಾ ಪಿಕ್ಸಲ್ ಸೆನ್ಸಾರ್ ಸೌಲಭ್ಯದಲ್ಲಿ ಇದೆ. ದ್ವಿತೀಯ ಕ್ಯಾಮೆರಾವು 2 ಮೆಗಾ ಪಿಕ್ಸಲ್ ಸೆನ್ಸಾರ್ ರಚನೆ ಕಾಣಬಹುದಾಗಿದೆ ಹಾಗೆಯೇ ಎಲ್‌ಇಡಿ ಫ್ಲ್ಯಾಶ್ ಲೈಟ್ ಸೌಲಭ್ಯ ಸಹ ಇದೆ. ಈ ಫೋನ್ ಮುಂಭಾಗದಲ್ಲಿ 8 ಮೆಗಾ ಪಿಕ್ಸಲ್ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ.
ರಿಯಲ್‌ಮಿ C65 5G ಫೋನ್ 5000 mAh ಬ್ಯಾಟರಿ ಬ್ಯಾಕ್‌ಅಪ್ ಸೌಲಭ್ಯ ಹೊಂದಿದ್ದು, ಇದಕ್ಕೆ ಅನುಗುಣವಾಗಿ 15W ಚಾರ್ಜಿಂಗ್ ಸಪೋರ್ಟ್ ಪಡೆದಿದೆ. ಇದರ ಜೊತೆಗೆ ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸೌಲಭ್ಯದ ಆಯ್ಕೆ ಲಭ್ಯ. ಇದರ ಜೊತೆಗೆ ಕನೆಕ್ಟಿವಿಟಿ ಸೌಲಭ್ಯದಲ್ಲಿ ಡ್ಯುಯಲ್ ಸಿಮ್, 5G, ವೈಫೈ 5 802.11 a/b/g/n/ac, ಬ್ಲೂಟೂತ್ 5.3 ಆಯ್ಕೆಗಳ ಆಯ್ಕೆಗಳನ್ನು ಪಡೆದುಕೊಂಡಿದೆ.


Click it and Unblock the Notifications








