Home
ಸುದ್ದಿಜಾಲ

ಅಗ್ಗದ ದರದಲ್ಲಿ ರಿಯಲ್‌ಮಿ C65 5G ಫೋನ್‌ ಲಾಂಚ್‌; ಬೊಂಬಾಟ್‌ ಫೀಚರ್ಸ್‌!

ರಿಯಲ್‌ಮಿ ಮೊಬೈಲ್‌ ಸಂಸ್ಥೆಯು ಅಗ್ಗದ ಬೆಲೆಯಲ್ಲಿ ಹೊಸದಾಗಿ ರಿಯಲ್‌ಮಿ C65 5G ಸ್ಮಾರ್ಟ್‌ಫೊನ್‌ ಇಂದು ಭಾರತದಲ್ಲಿ ಅಧಿಕೃತವಾಗಿ ಲಾಂಚ್ ಆಗಿದೆ. ಈ ನೂತನ ಫೋನ್‌ ಸ್ಟೈಲಿಶ್‌ ಡಿಸೈನ್‌ ಪಡೆದಿದ್ದು, ಇದು ಸಂಸ್ಥೆಯ ಅಗ್ಗದ 5G ಸ್ಮಾರ್ಟ್‌ಫೋನ್‌ ಎನಿಸಿಕೊಂಡಿದೆ. ಅಂದಹಾಗೆ ಈ ಫೋನ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 6300 SoC ಪ್ರೊಸೆಸರ್‌ ಸೌಲಭ್ಯ ಪಡೆದಿದೆ.

ಹೌದು, ರಿಯಲ್‌ಮಿ ಸಂಸ್ಥೆಯು ಇಂದು ರಿಯಲ್‌ಮಿ C65 5G (Realme C65 5G) ಮೊಬೈಲ್‌ ಅನ್ನು ಇಂದು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದು ಎಂಟ್ರಿ ಲೆವೆಲ್‌ 5G ಮೊಬೈಲ್‌ ಆಗಿದ್ದು, 5,000mAh ಸಾಮರ್ಥ್ಯದ ಬ್ಯಾಟರಿ ಸೌಲಭ್ಯ ಜೊತೆಗೆ 50 ಮೆಗಾ ಪಿಕ್ಸಲ್‌ ಸೌಲಭ್ಯ ಮುಖ್ಯ ಕ್ಯಾಮೆರಾ ಸೆನ್ಸಾರ್‌ ಪಡೆದಿದೆ. ಅಲ್ಲದೇ 15W ಚಾರ್ಜಿಂಗ್‌ ಇದರ ಆಯ್ಕೆ ಪಡೆದುಕೊಂಡಿದೆ.

ಅಗ್ಗದ ದರದಲ್ಲಿ ರಿಯಲ್‌ಮಿ C65 5G ಫೋನ್‌ ಲಾಂಚ್‌; ಬೊಂಬಾಟ್‌ ಫೀಚರ್ಸ್‌!

ಅಲ್ಲದೇ ಈ ಫೋನ್‌ 4GB + 64GB, 4GB + 128GB ಹಾಗೂ 6GB + 128GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆಗಳನ್ನು ಪಡೆದುಕೊಂಡಿದೆ. ಆರಂಭಿಕ ವೇರಿಯಂಟ್‌ ಬೆಲೆಯು 10,499ರೂ. ಗಳ ಪ್ರೈಸ್‌ಟ್ಯಾಗ್‌ನಲ್ಲಿ ಕಾಣಿಸಿಕೊಂಡಿದೆ. ಅಂದಹಾಗೆ ಇಂದು ಸಂಜೆ 4 ರಿಂದ ಮೊದಲ ಮಾರಾಟ ಪ್ರಾರಂಭ ಮಾಡಲಿದೆ. ಹಾಗಾದರೇ ರಿಯಲ್‌ಮಿ C65 5G ಫೋನಿನ ಇತರೆ ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ರಿಯಲ್‌ಮಿ C65 5G - ಫೀಚರ್ಸ್‌ ಹೀಗಿವೆ

ರಿಯಲ್‌ಮಿ C65 5G ಮೊಬೈಲ್‌ 6.67 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ರಚನೆ ಅನ್ನು ಪಡೆದಿದ್ದು, ಈ ಡಿಸ್‌ಪ್ಲೇಯು 1604×720 ಪಿಕ್ಸಲ್‌ ರೆಸಲ್ಯೂಶನ್‌ ಸೌಲಭ್ಯ ಪಡೆದಿದೆ. ಅಲ್ಲದೇ ಇದು 120Hz ರಿಫ್ರೆಶ್‌ ರೇಟ್‌ ಆಯ್ಕೆ ಒಳಗೊಂಡಿದ್ದು, 1500:1 ಅನುಪಾತವನ್ನು ಕೂಡಾ ಪಡೆದಿದೆ. ಹಾಗೆಯೇ ಈ ಫೋನ್ 625nits HBM ಬ್ರೈಟ್ನೆಸ್‌ ಸಪೋರ್ಟ್‌ ಪಡೆದಿದೆ.

ಅಗ್ಗದ ದರದಲ್ಲಿ ರಿಯಲ್‌ಮಿ C65 5G ಫೋನ್‌ ಲಾಂಚ್‌; ಬೊಂಬಾಟ್‌ ಫೀಚರ್ಸ್‌!

ಅದೇ ರೀತಿ ರಿಯಲ್‌ಮಿ C65 5G ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 6300 SoC ಪ್ರೊಸೆಸರ್‌ ಬಲವನ್ನು ಒಳಗೊಂಡಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 14 ಓಎಸ್‌ ಸಪೋರ್ಟ್‌ ಸಹ ಪಡೆದಿದೆ. ಅಲ್ಲದೇ 4GB + 64GB, 4GB + 128GB ಹಾಗೂ 6GB + 128GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ.

ರಿಯಲ್‌ಮಿ C65 5G ಫೋನ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಪಡೆದಿದ್ದು, ಇನ್ನು ಇದರ ಪ್ರಾಥಮಿಕ ಕ್ಯಾಮೆರಾವು 50 ಮೆಗಾ ಪಿಕ್ಸಲ್‌ ಸೆನ್ಸಾರ್‌ ಆಗಿದೆ. ಎರಡನೇ ಕ್ಯಾಮೆರಾವು 2 ಮೆಗಾ ಪಿಕ್ಸಲ್‌ ಸೆನ್ಸಾರ್‌ ರಚನೆ ಪಡೆದಿದ್ದು, ಜೊತೆಗೆ ಎಲ್‌ಇಡಿ ಫ್ಲ್ಯಾಶ್‌ ಲೈಟ್‌ ಸೌಲಭ್ಯ ಸಹ ಇದೆ. ಇನ್ನು ಮುಂಭಾಗದಲ್ಲಿ ಈ ಫೋನ್‌ 8 ಮೆಗಾ ಪಿಕ್ಸಲ್‌ ಸೆಲ್ಫಿ ಕ್ಯಾಮೆರಾವನ್ನು ಪಡೆದುಕೊಂಡಿದೆ.

ರಿಯಲ್‌ಮಿ C65 5G ಮೊಬೈಲ್‌ 5000 mAh ಬ್ಯಾಟರಿ ಬ್ಯಾಕ್‌ಅಪ್‌ ಸೌಲಭ್ಯ ಹೊಂದಿದ್ದು, ಇದಕ್ಕೆ ಪೂರಕವಾಗಿ 15W ಚಾರ್ಜಿಂಗ್‌ ಸಪೋರ್ಟ್‌ ಪಡೆದಿದೆ. ಹಾಗೆಯೇ ಸೈಡ್‌ ಮೌಂಟೆಡ್‌ ಫಿಂಗರ್‌ಪ್ರಿಂಟ್ ಸೌಲಭ್ಯ ಇದೆ ಜೊತೆಗೆ ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್-ಸಿಮ್, 5G, ವೈಫೈ 5 802.11 a/b/g/n/ac, ಬ್ಲೂಟೂತ್ 5.3 ಆಯ್ಕೆಗಳು ಇವೆ.

ಬೆಲೆ ಹಾಗೂ ಲಭ್ಯತೆ ಮಾಹಿತಿ

4GB + 64GB ವೇರಿಯಂಟ್‌ ಬೆಲೆ 10,499ರೂ. ಆಗಿದೆ
4GB + 128GB ವೇರಿಯಂಟ್‌ ಬೆಲೆ 11,499ರೂ. ಆಗಿದೆ
6GB + 128GB ವೇರಿಯಂಟ್‌ ಬೆಲೆ 12,499ರೂ. ಆಗಿದೆ

ಈ ಫೋನ್‌ ಇಂದು ಸಂಜೆ 4 ಗಂಟೆಗೆ ಫ್ಲಿಪ್‌ಕಾರ್ಟ್‌ ವೆಬ್‌ಸೈಟ್‌ ಹಾಗೂ ರಿಯಲ್‌ಮಿಯ ಅಧಿಕೃತ ತಾಣದಲ್ಲಿ ಖರೀದಿಗೆ ಲಭ್ಯ. ಇನ್ನು ಈ ಫೋನ್‌ ಫೆದರ್‌ ಗ್ರೀನ್‌ ಹಾಗೂ ಗ್ಲೋವಿಂಗ್ ಬ್ಲ್ಯಾಕ್‌ ಕಲರ್‌ ಆಯ್ಕೆಗಳನ್ನು ಪಡೆದಿದೆ.

Best Mobiles in India

English summary
Realme C65 5G with MediaTek Dimensity 6300 SoC Launched in India. check offer price, specifications and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+