Home
ಸುದ್ದಿಜಾಲ

ರಿಯಲ್‌ಮಿ ಸಂಸ್ಥೆಯಿಂದ ಮತ್ತೊಂದು ಅಗ್ಗದ ಸ್ಮಾರ್ಟ್‌ಫೋನ್‌ ಲಾಂಚ್‌!

ರಿಯಲ್‌ಮಿ ಮೊಬೈಲ್‌ ಕಂಪನಿಯು ಭಿನ್ನ ಫೋನ್‌ಗಳ ಮೂಲಕ ಮಾರುಕಟ್ಟೆಯಲ್ಲಿ ಸದ್ದು ಮಾಡಿದೆ. ಇದೀಗ ಸಂಸ್ಥೆಯು ನೂತನವಾಗಿ ರಿಯಲ್‌ಮಿ C65 ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಿದೆ. ಈ ಹೊಸ ಫೋನ್‌ ಮೀಡಿಯಾ ಟೆಕ್‌ ಹಿಲಿಯೋ G85 SOC ಪ್ರೊಸೆಸರ್‌ ಸೌಲಭ್ಯ ಪಡೆದುಕೊಂಡಿದೆ.

ಹೌದು, ರಿಯಲ್‌ಮಿ ಸಂಸ್ಥೆಯ ಹೊಸ ರಿಯಲ್‌ಮಿ C65 ಸ್ಮಾರ್ಟ್‌ಫೋನ್‌ ವಿಯೆಟ್ನಾಂ ಮಾರುಕಟ್ಟೆಯಲ್ಲಿ ಲಾಂಚ್ ಆಗಿದೆ. ಈ ಮೊಬೈಲ್‌ 45W ಫಾಸ್ಟ್‌ ಚಾರ್ಜಿಂಗ್‌ ಸೌಲಭ್ಯ ಒಳಗೊಂಡಿದ್ದು, 6GB + 128 GB ಹಾಗೂ 8GB + 256 GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆಗಳನ್ನು ಕೂಡಾ ಇದು ಪಡೆದುಕೊಂಡಿದೆ. ಹಾಗೆಯೇ ಇದು IP54 ರೇಟಿಂಗ್‌ ಕೂಡಾ ಪಡೆದುಕೊಂಡಿದೆ.

ರಿಯಲ್‌ಮಿ ಸಂಸ್ಥೆಯಿಂದ ಮತ್ತೊಂದು ಅಗ್ಗದ ಸ್ಮಾರ್ಟ್‌ಫೋನ್‌ ಲಾಂಚ್‌!

ಅಂದಹಾಗೆ ಈ ರಿಯಲ್‌ಮಿಯ ಈ ಹೊಸ ಫೋನ್‌ 5,000 mAh ಸಾಮರ್ಥ್ಯದ ಬ್ಯಾಟರಿ ಸೌಲಭ್ಯ ಪಡೆದಿದೆ. ಇನ್ನು ಈ ಫೋನಿನ ಪ್ರಾಥಮಿಕ ಕ್ಯಾಮೆರಾವು 50 ಮೆಗಾ ಪಿಕ್ಸಲ್‌ ಸೆನ್ಸಾರ್‌ ನಲ್ಲಿ ಇದೆ. ಜೊತೆಗೆ ಸೆಲ್ಫಿ ಕ್ಯಾಮೆರಾವು 8 ಮೆಗಾ ಪಿಕ್ಸಲ್‌ ಸೆನ್ಸಾರ್‌ ಆಗಿದೆ. ಹಾಗಾದರೇ ರಿಯಲ್‌ಮಿ C65 ಮೊಬೈಲ್‌ನ ಇತರೆ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ರಿಯಲ್‌ಮಿ ಸಂಸ್ಥೆಯಿಂದ ಮತ್ತೊಂದು ಅಗ್ಗದ ಸ್ಮಾರ್ಟ್‌ಫೋನ್‌ ಲಾಂಚ್‌!

ರಿಯಲ್‌ಮಿ C65 ಫೀಚರ್ಸ್‌

ರಿಯಲ್‌ಮಿ C65 ಸ್ಮಾರ್ಟ್‌ಫೋನ್‌ 6.67 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಅನ್ನು ಪಡೆದುಕೊಂಡಿದ್ದು, 1604 X 720 ಪಿಕ್ಸಲ್ಸ್‌ ರೆಸಲ್ಯೂಶನ್ ಸಹ ಪಡೆದಿದೆ. ಅಲ್ಲದೇ ಈ ಡಿಸ್‌ಪ್ಲೇ 90Hz ವರೆಗಿನ ರಿಫ್ರೆಶ್ ರೇಟ್‌ ಪಡೆದುಕೊಂಡಿದ್ದು, ಸ್ಕ್ರೀನ್‌ನಿಂದ ಫೋನ್‌ ಪ್ಯಾನೆಲ್‌ನ ಅನುಪಾತವು 89.97ರಷ್ಟು ಆಗಿದೆ. ಇದರೊಂದಿಗೆ 625nits ಬ್ರೈಟ್ನೆಸ್‌ ಸಪೋರ್ಟ್‌ ಇದ್ದು, 180Hz ಟಚ್‌ ಸ್ಯಾಪ್ಲಿಂಗ್ ಪಡೆದಿದೆ.

ರಿಯಲ್‌ಮಿ C65 ಸ್ಮಾರ್ಟ್‌ಫೋನ್‌ ಮೀಡಿಯಾ ಟೆಕ್‌ ಹಿಲಿಯೋ G85 SOC ಪ್ರೊಸೆಸರ್‌ ಪಡೆದಿದ್ದು, ಇದು ಆಂಡ್ರಾಯ್ಡ್‌ 14 ಓಎಸ್‌ ಸಪೋರ್ಟ್‌ ನೊಂದಿಗೆ ಕೆಲಸ ಮಾಡಲಿದೆ. ಹಾಗೆಯೇ 6GB/128GB ಹಾಗೂ 8GB/256GB ಸ್ಟೋರೇಜ್‌ ವೇರಿಯಂಟ್‌ ಸೌಲಭ್ಯದ ಆಯ್ಕೆ ಇವೆ. ಇದರೊಂದಿಗೆ ಮೈಕ್ರೋ ಎಸ್‌ಡಿ ಕಾರ್ಡ್ ಮೂಲಕ ಸ್ಟೋರೇಜ್‌ ಅನ್ನು ಹೆಚ್ಚಿಸಬಹುದು.

ರಿಯಲ್‌ಮಿ C65 ಮೊಬೈಲ್‌ ಸ್ಮಾರ್ಟ್‌ಫೋನ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟ್‌fಅಪ್‌ ಅನ್ನು ಪಡೆದಿದ್ದು, ಇದರಲ್ಲಿ ಮೊದಲ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್‌ ಮತ್ತು ಎರಡನೇ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಸೆನ್ಸಾರ್‌ ಸೌಲಭ್ಯ ಅನ್ನು ಒಳಗೊಂಡಿದೆ. ಇದರ ಜೊತೆಗೆ ಮುಂಭಾಗದಲ್ಲಿ 8 ಮೆಗಾ ಪಿಕ್ಸಲ್‌ ಸೆಲ್ಫಿ ಕ್ಯಾಮೆರಾ ಸಹ ನೀಡಲಾಗಿದೆ.

ಹಾಗೆಯೇ ರಿಯಲ್‌ಮಿ C65 ಸ್ಮಾರ್ಟ್‌ಫೋನ್‌ 5,000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಕೂಡಾ ಪಡೆದಿದ್ದು, ಇದಕ್ಕೆ ಪೂರಕವಾಗಿ 45W ವೈರ್ಡ್ ಫಾಸ್ಟ್ ಚಾರ್ಜಿಂಗ್ ಸಪೋರ್ಟ್‌ ಪಡೆದುಕೊಂಡಿದೆ. ಇದಲ್ಲದೆ 4G LTE, ಡ್ಯುಯಲ್-ಬ್ಯಾಂಡ್ Wi-Fi, ಬ್ಲೂಟೂತ್, GPS, ಮತ್ತು USB ಟೈಪ್‌ C ಸೌಲಭ್ಯಗಳನ್ನು ಇದು ಪಡೆದಿದೆ.

ರಿಯಲ್‌ಮಿ C65 ಸ್ಮಾರ್ಟ್‌ಫೋನ್‌ ಬೇಸ್‌ ಮಾಡೆಲ್‌ 6GB + 128GB ವೇರಿಯಂಟ್‌ ಬೆಲೆ ವಿಯೆಟ್ನಾಂನಲ್ಲಿ VND 3,690,000 (ಭಾರತದಲ್ಲಿ ಅಂದಾಜು 12,500ರೂ. ಎನ್ನಲಾಗಿದೆ). ಹಾಗೆಯೇ 8GB + 256GB ವೇರಿಯಂಟ್‌ ದರ ವಿಯೆಟ್ನಾಂನಲ್ಲಿ VND 4,790,000 (ಭಾರತದಲ್ಲಿ ಅಂದಾಜು 16,200ರೂ. ಎನ್ನಲಾಗಿದೆ). ಇನ್ನು ಈ ಫೋನ್‌ ಇತರ ರಾಷ್ಟ್ರಗಳಲ್ಲಿ ಯಾವಾಗ ಲಾಂಚ್‌ ಆಗಲಿದೆ ಎನ್ನುವ ಬಗ್ಗೆ ಸಂಸ್ಥೆ ಸ್ಪಷ್ಟ ಮಾಹಿತಿ ಹೊರಹಾಕಿಲ್ಲ.

Best Mobiles in India

English summary
Realme C65 with MediaTek Helio G85 Launched in Vietnam. Check Specifications, Price and more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+