Home
ಸುದ್ದಿಜಾಲ

ಇಂದು 'ರಿಯಲ್‌ಮಿ C67 5G' ಫೋನಿನ ಫಸ್ಟ್‌ ಸೇಲ್‌!..ವಾವ್‌ ಎನಿಸುವ ಆಫರ್‌!

ರಿಯಲ್‌ಮಿ ಸ್ಮಾರ್ಟ್‌ಫೋನ್‌ ಸಂಸ್ಥೆಯು ಭಿನ್ನ ದರದಲ್ಲಿ ಹಲವು ಫೋನ್‌ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಸಂಸ್ಥೆಯು ಹೊಸದಾಗಿ ಬಿಡುಗಡೆ ಮಾಡಿರುವ ರಿಯಲ್‌ಮಿ C67 5G ಫೋನ್‌ ಇಂದು (ಡಿಸೆಂಬರ್ 16 ರಂದು) ಇ ಕಾಮರ್ಸ್‌ ತಾಣ ಫ್ಲಿಪ್‌ಕಾರ್ಟ್‌ ಮೂಲಕ ಮಧ್ಯಾಹ್ನ 12 ಗಂಟೆಯಿಂದ ಮೊದಲ ಮಾರಾಟ ಪ್ರಾರಂಭಿಸಲಿದೆ.

ಹೌದು, ರಿಯಲ್‌ಮಿ C67 5G ಫೋನ್‌ ಇಂದು ಮೊದಲ ಸೇಲ್‌ ಅನ್ನು ಫ್ಲಿಪ್‌ಕಾರ್ಟ್‌ ಮೂಲಕ ಸೇಲ್‌ ಆರಂಭಿಸಲಿದ್ದು, ಗ್ರಾಹಕರಿಗೆ ಕೊಡುಗೆ ಸಹ ಸಿಗಲಿದೆ. ಈ ಫೋನ್‌ 4 GB RAM + 128 GB ಹಾಗೂ 6GB RAM ಮತ್ತು 128GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆ ಪಡೆದಿದ್ದು, ಆಯ್ದ ಬ್ರ್ಯಾಂಕ್‌ಗಳಯಿಂದ ಡಿಸ್ಕೌಂಟ್‌ ಸೌಲಭ್ಯ ಹಾಗೂ ಇಎಮ್‌ಐ ವಹಿವಾಟಿನ ಆಯ್ಕೆಗಳು ಕೂಡಾ ಖರೀದಿದಾರರಿಗೆ ಲಭ್ಯ ಆಗಲಿವೆ.

ಇಂದು 'ರಿಯಲ್‌ಮಿ C67 5G' ಫೋನಿನ ಫಸ್ಟ್‌ ಸೇಲ್‌!..ವಾವ್‌ ಎನಿಸುವ ಆಫರ್‌!

ಇನ್ನು ರಿಯಲ್‌ಮಿ C67 5G ಸ್ಮಾರ್ಟ್‌ಫೋನ್‌ 4 GB RAM + 128 GB ಸ್ಟೋರೇಜ್‌ ವೇರಿಯಂಟ್‌ ದರವು 13,999ರೂ. ಆಗಿದೆ. ಹಾಗೆಯೇ 6 GB RAM + 128 GB ಸ್ಟೋರೇಜ್‌ ವೇರಿಯಂಟ್‌ ಬೆಲೆಯು 14,999ರೂ. ಆಗಿದೆ. ಇನ್ನು ಈ ಫೋನ್‌ 5,000 mAh ಬ್ಯಾಟರಿ ಸಾಮರ್ಥ್ಯದ ಸೌಲಭ್ಯ ಸಹ ಪಡೆದುಕೊಂಡಿದೆ. ಹಾಗಾದರೆ ರಿಯಲ್‌ಮಿ C67 5G ಸ್ಮಾರ್ಟ್‌ಫೋನಿನ ಇತರೆ ಫೀಚರ್ಸ್‌ ಯಾವುವು ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ರಿಯಲ್‌ಮಿ C67 5G ಫೀಚರ್ಸ್‌ ಹೀಗಿವೆ

ರಿಯಲ್‌ಮಿ C67 5G ಮೊಬೈಲ್‌ 6.72 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಅನ್ನು ಹೊಂದಿದೆ. ಈ ಡಿಸ್‌ಪ್ಲೇ 120Hz ವರೆಗಿನ ರಿಫ್ರೆಶ್ ರೇಟ್‌ ಪಡೆದುಕೊಂಡಿದೆ. ಇದು 680 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಅನ್ನು ಹೊಂದಿದೆ. ಇದು ಸನ್ನಿ ಓಯಸಿಸ್ ವಿನ್ಯಾಸವನ್ನು ಹೊಂದಿದ್ದು, ಸೂರ್ಯನ ಬೆಳಕಿಗೆ ಒಡ್ಡಿಕೊಂಡಾಗ ರಿಯರ್‌ ಪ್ಯಾನಲ್‌ ಹೊಳೆಯುವಂತೆ ಮಾಡಲಿದೆ. ಹಾಗೆಯೇ ಈ ಫೋನ್‌ನಲ್ಲಿ ಮಿನಿ ಕ್ಯಾಪ್ಸುಲ್ 2.0 ಫೀಚರ್ಸ್‌ ಅನ್ನು ಸಹ ಅಳವಡಿಸಲಾಗಿದೆ.

ಇಂದು 'ರಿಯಲ್‌ಮಿ C67 5G' ಫೋನಿನ ಫಸ್ಟ್‌ ಸೇಲ್‌!..ವಾವ್‌ ಎನಿಸುವ ಆಫರ್‌!

ರಿಯಲ್‌ಮಿಯ ಈ ಫೋನ್‌ 6nm ಮೀಡಿಯಾ ಟೆಕ್ ಡೈಮೆನ್ಸಿಟಿ 6100+ SoC ಪ್ರೊಸೆಸರ್‌ ದಕ್ಷತೆಯನ್ನು ಪಡೆದಿದ್ದು, ಇದು ಆಂಡ್ರಾಯ್ಡ್‌ 14 ಓಎಸ್‌ ಸಪೋರ್ಟ್‌ ನೊಂದಿಗೆ ಕೆಲಸ ನಿರ್ವಹಿಸಲಿದೆ. ಹಾಗೆಯೇ 6GB RAM ಮತ್ತು 128GB ಆಂತರೀಕ ಸ್ಟೋರೇಜ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇದಲ್ಲದೆ RAM ಅನ್ನು ವಾಸ್ತವಿಕವಾಗಿ ಹೆಚ್ಚುವರಿ 6GB ವರೆಗೆ ವಿಸ್ತರಿಸಬಹುದು. ಇದರೊಂದಿಗೆ ಮೈಕ್ರೋ ಎಸ್‌ಡಿ ಕಾರ್ಡ್ ಮೂಲಕ 2TB ವರೆಗೆ ಸ್ಟೋರೇಜ್‌ ಅನ್ನು ಹೆಚ್ಚಿಸಬಹುದು.

ಈ ಸ್ಮಾರ್ಟ್‌ಫೋನ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ರಚನೆ ಅನ್ನು ಪಡೆದಿದ್ದು, ಇದರಲ್ಲಿ ಪ್ರಾಥಮಿಕ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್‌ ಮತ್ತು ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಪೋರ್ಟ್ರೇಟ್ ಲೆನ್ಸ್‌ ಅನ್ನು ಒಳಗೊಂಡಿದೆ. ಹಾಗೆಯೇ ಅತ್ಯುತ್ತಮ ಸೆಲ್ಫಿ ಕ್ಯಾಮೆರಾ ಸೌಲಭ್ಯ ಸಹ ಪಡೆದಿದೆ.

ಇಂದು 'ರಿಯಲ್‌ಮಿ C67 5G' ಫೋನಿನ ಫಸ್ಟ್‌ ಸೇಲ್‌!..ವಾವ್‌ ಎನಿಸುವ ಆಫರ್‌!

ರಿಯಲ್‌ಮಿ C67 5G ಮೊಬೈಲ್‌ 5,000mAh ಸಾಮರ್ಥ್ಯದ ಬ್ಯಾಟರಿ ಅನ್ನು ಪಡೆದಿದ್ದು, ಇದು ಯುಎಸ್‌ಬಿ ಟೈಪ್-ಸಿ ಪೋರ್ಟ್ ಮೂಲಕ 33W ವೈರ್ಡ್ ಫಾಸ್ಟ್ ಚಾರ್ಜಿಂಗ್ ಸಪೋರ್ಟ್‌ ಪಡೆದಿದೆ. ಇದಲ್ಲದೆ ವೇಗವಾಗಿ ಚಾರ್ಜಿಂಗ್ ಮಾಡುವುದರಿಂದ ಕೇವಲ 29 ನಿಮಿಷಗಳಲ್ಲಿ ಶೂನ್ಯದಿಂದ 50 ಪ್ರತಿಶತದವರೆಗೆ ಫೋನ್ ಅನ್ನು ಚಾರ್ಜ್ ಮಾಡಬಹುದು.

ಇನ್ನು ಈ ಸ್ಮಾರ್ಟ್‌ಫೋನ್‌ ಭಾರತದಲ್ಲಿ ಬೇಸ್‌ ಮಾಡೆಲ್‌ 4GB + 128GB ವೇರಿಯಂಟ್‌ ಆಯ್ಕೆಗೆ 13,999ರೂ ಬೆಲೆ ಪಡೆದಿದೆ. ಇನ್ನು ಇದರ 6GB + 128GB ವೇರಿಯಂಟ್‌ ಆಯ್ಕೆಯು 14,999ರೂ ಬೆಲೆಯನ್ನು ಹೊಂದಿದೆ. ಇದನ್ನು ಡಾರ್ಕ್ ಪರ್ಪಲ್ ಮತ್ತು ಸನ್ನಿ ಓಯಸಿಸ್ ಬಣ್ಣ ಆಯ್ಕೆಗಳಲ್ಲಿ ಲಭ್ಯ.

Best Mobiles in India

English summary
Realme C67 5G first sale today in india via Flipkart. offer price and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+