ಇಂದು 'ರಿಯಲ್‌ಮಿ C67 5G' ಫೋನ್ ಲಾಂಚ್!..ಫೀಚರ್ಸ್ ಹೀಗಿವೆ ನೋಡಿ!
ಜನಪ್ರಿಯ ಸ್ಮಾರ್ಟ್‌ಫೋನ್ ಬ್ರ್ಯಾಂಡ್‌ಗಳಲ್ಲಿ ಒಂದಾದ ರಿಯಲ್‌ಮಿ ತನ್ನ ಕೆಲವು ಬಜೆಟ್ ಸ್ಮಾರ್ಟ್‌ಫೋನ್‌ಗಳ ಮೂಲಕ ಮಾರುಕಟ್ಟೆಯಲ್ಲಿ ಗ್ರಾಹಕರ ಗಮನ ಸೆಳೆದಿದೆ. ಆ ಸಾಲಿಗೆ ಈಗ ನೂತನ ಫೋನ್ ಸೇರ್ಪಡೆ ಆಗಲಿದೆ. ಅದುವೇ ರಿಯಲ್‌ಮಿ ಸಂಸ್ಥೆಯ ಹೊಸ 'ರಿಯಲ್‌ಮಿ C67 5G' ಸ್ಮಾರ್ಟ್‌ಫೋನ್ ಆಗಿದ್ದು, ಈ ಫೋನ್ ಇಂದು ಲಾಂಚ್ ಆಗಲಿದೆ.
ಹೌದು, ರಿಯಲ್‌ಮಿ C67 5G ಸ್ಮಾರ್ಟ್‌ಫೋನ್ ಇಂದು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಆಗಲಿದೆ. ಬಜೆಟ್ ಮಾದರಿಯ ಫೀಚರ್ಸ್‌ಗಳನ್ನು ಒಳಗೊಂಡಿರುವ ಈ ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 6020 ಚಿಪ್‌ಸೆಟ್ ಪ್ರೊಸೆಸರ್ ಪವರ್ ನಲ್ಲಿ ಕೆಲಸ ಮಾಡಲಿದೆ. ಹಾಗೆಯೇ ಇದು ಡ್ಯುಯಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಹೊಂದಿದ್ದು, ಪ್ರಾಥಮಿಕ ಕ್ಯಾಮೆರಾವು 50 ಮೆಗಾ ಪಿಕ್ಸಲ್ ಸೆನ್ಸಾರ್ ಪಡೆದಿರಲಿದೆ.

ಹಾಗೆಯೇ ಈ ಮೊಬೈಲ್ 6GB RAM ಮತ್ತು 128GB ಸ್ಟೋರೇಜ್ ವೇರಿಯಂಟ್ ಆಯ್ಕೆ ಅನ್ನು ಒಳಗೊಂಡಿರುವ ನಿರೀಕ್ಷೆಗಳಿದ್ದು, ಬಿಗ್ ಬ್ಯಾಟರಿ ಬ್ಯಾಕ್‌ಅಪ್ ಸೌಲಭ್ಯದ ಜೊತೆಗೆ ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಪಡೆದಿರುವುದು ಬಹುತೇಕ ಖಚಿತ ಎನ್ನಲಾಗಿದೆ. ಹಾಗಾದರೆ ರಿಯಲ್‌ಮಿ C67 5G ಫೋನಿನ ಇತರೆ ಫೀಚರ್ಸ್‌ಗಳು ಹೇಗಿವೆ? ದೇಶಿಯ ಮಾರುಕಟ್ಟೆಯಲ್ಲಿ ಈ ಫೋನಿನ ನಿರೀಕ್ಷಿತ ಬೆಲೆ ಎಷ್ಟು ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.
ಡಿಸ್‌ಪ್ಲೇ ರಚನೆ ವಿನ್ಯಾಸದ ಮಾಹಿತಿ
ರಿಯಲ್‌ಮಿ C67 5G ಮೊಬೈಲ್ 6.78 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇ ಅನ್ನು ಹೊಂದಿರಲಿದೆ. ಇನ್ನು ಡಿಸ್‌ಪ್ಲೇ 1080 x 2400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದಲ್ಲಿರಲಿದೆ. ಈ ಡಿಸ್‌ಪ್ಲೇ 388 ಪಿಪಿಐ ಪಿಕ್ಸೆಲ್ ಸಾಂದ್ರತೆ ಅನ್ನು ಸಪೋರ್ಟ್ ಮಾಡಲಿದ್ದು, 240 Hz ಟಚ್ ಸ್ಯಾಂಪ್ಲಿಂಗ್ ರೇಟ್‌ನೊಂದಿಗೆ ಬರುವ ಸಾಧ್ಯತೆ ಇದೆ.
ಪ್ರೊಸೆಸರ್ ಯಾವುದು? ರಿಯಲ್‌ಮಿ C67 5G ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 6020 ಚಿಪ್‌ಸೆಟ್ ಪ್ರೊಸೆಸರ್‌ನಲ್ಲಿ ಬರಲಿದೆ. ಇದು ಆಂಡ್ರಾಯ್ಡ್ 14 ಓಎಸ್ ಬೆಂಬಲದೊಂದಿಗೆ ಕೆಲಸ ನಿರ್ವಹಿಸಲಿದೆ. ಹಾಗೆಯೇ 6GB RAM ಮತ್ತು 128 GB ಹಾಗೂ 8GB RAM ಮತ್ತು 128 GB ಸಂಗ್ರಹಣೆಯೊಂದಿಗೆ ಬರಲಿದೆ ಎಂದು ದೃಢಪಡಿಸಿದೆ. ಇದಲ್ಲದೆ ಮೆಮೊರಿ ಕಾರ್ಡ್ ಬೆಂಬಲದೊಂದಿಗೆ 1 TB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸುವುದಕ್ಕೆ ಅವಕಾಶವನ್ನು ಸಹ ನೀಡಲಿದೆ ಎಂದು ತಿಳಿದು ಬಂದಿದೆ.
ಕ್ಯಾಮೆರಾ ಸೆನ್ಸಾರ್ ರಚನೆ
ರಿಯಲ್‌ಮಿ C67 5G ಮೊಬೈಲ್ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆಯೊಂದಿಗೆ ಎಂಟ್ರಿ ಕೊಡಲಿದೆ. ಇದರಲ್ಲಿ ಪ್ರಾಥಮಿಕ ಕ್ಯಾಮೆರಾ 50 ಮೆಗಾ ಪಿಕ್ಸೆಲ್ AI ಲೆನ್ಸ್ ಅನ್ನು ಹೊಂದಿದೆ. ದ್ವಿತೀಯ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಸೆನ್ಸಾರ್ ಹೊಂದಿದ್ದು, LED ಫ್ಲ್ಯಾಷ್‌ನಿಂದ ಬೆಂಬಲಿತವಾಗಿದೆ. ಇದಲ್ಲದೆ 16 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ಪಡೆದಿದೆ.
ಬ್ಯಾಟರಿ ಬ್ಯಾಕ್‌ಅಪ್ ಮತ್ತು ಇತರೆ ಆಯ್ಕೆಗಳು
ರಿಯಲ್‌ಮಿ C67 5G ಮೊಬೈಲ್ 5,000mAh ಬ್ಯಾಟರಿ ಬ್ಯಾಕ್‌ಅಪ್ ಅನ್ನು ಹೊಂದಿದ್ದು, 33W ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನದ ಸಪೋರ್ಟ್‌ನೊಂದಿಗೆ ಲಗ್ಗೆ ಇಡುವುದು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಬ್ಲೂಟೂತ್, ವೈಫೈ, ಯುಎಸ್‌ಬಿ ಸಿ ಪೋರ್ಟ್, ಹೆಡ್‌ಫೋನ್ ಜ್ಯಾಕ್ ಅನ್ನು ಸಪೋರ್ಟ್ ಮಾಡಲಿದೆ. ಇದಲ್ಲದೆ ಪ್ರಾಕ್ಸಿಮಿಟಿ ಸೆನ್ಸಾರ್, ಅಕ್ಸಿಲೆರೋಮೀಟರ್, ಆಂಬಿಯೆಂಟ್ ಲೈಟ್ ಸೆನ್ಸಾರ್ ಅನ್ನು ಒಳಗೊಂಡಿದೆ.


Click it and Unblock the Notifications








