Home
ಸುದ್ದಿಜಾಲ

Realme: ರಿಯಲ್‌ಮಿ ಕ್ರಿಸ್ಮಸ್ ಸೇಲ್ 2023, ಈ ಪ್ರಮುಖ ಫೋನ್‌ಗಳಿಗೆ ಭರ್ಜರಿ ಆಫರ್.. ಮಿಸ್‌ ಮಾಡ್ಕೋಬೇಡಿ

ರಿಯಲ್‌ಮಿ (Realme) ಕ್ರಿಸ್ಮಸ್ ಹಿನ್ನೆಲೆ ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರೀ ಆಫರ್ ನೀಡುತ್ತಿದೆ. ಈ ಮೂಲಕ ಖರೀದಿದಾರರು ಭಾರೀ ಮೊತ್ತದ ಹಣ ಉಳಿತಾಯ ಮಾಡಬಹುದಾಗಿದೆ. ಇದರೊಂದಿಗೆ ಇತರೆ ಬ್ರ್ಯಾಂಡ್‌ಗಳು ಸಹ ಈ ವೇಳೆ ವಿಶೇಷ ಸೇಲ್‌ ಆಯೋಜನೆ ಮಾಡಿದ್ದು, ನಿಮ್ಮ ಅಗತ್ಯಕ್ಕೆ ತಕ್ಕಂತೆ ಹೊಸ ಸ್ಮಾರ್ಟ್‌ಫೋನ್‌ಗಳನ್ನು ಖರೀದಿ ಮಾಡಬಹುದಾಗಿದೆ.

ಹೌದು, ಈ ವೇಳೆ ನೀವು ಏನಾದರೂ ಹೊಸ ಸ್ಮಾರ್ಟ್‌ಫೋನ್‌ ಖರೀದಿ ಮಾಡಲು ಮುಂದಾದರೆ ರಿಯಲ್‌ ಕ್ರಿಸ್ಮಸ್ ಸೇಲ್ 2023 (Realme Christmas sale 2023) ನಿಮಗೆ ವಿವಿಧ ರೀತಿಯಲ್ಲಿ ಅನುಕೂಲ ಮಾಡಿಕೊಡಲಿದೆ. ಯಾಕೆಂದರೆ ರಿಯಲ್‌ಮಿಯ ಬಹುಬೇಡಿಕೆ ಇರುವ ಐದು ಫೋನ್‌ಗಳ ಮೇಲೆ ಆಫರ್ ಘೋಷಣೆ ಮಾಡಿದೆ. ಜೊತೆಗೆ ವಿವಿಧ ರೀತಿಯ ಬ್ಯಾಂಕ್‌ ಆಫರ್ ಸಹ ಇದ್ದು ಇನ್ನೂ ಕಡಿಮೆ ದರದಲ್ಲಿ ಈ ಫೋನ್‌ಗಳನ್ನು ಖರೀದಿ ಮಾಡಬಹುದಾಗಿದೆ. ಹಾಗಿದ್ರೆ, ಯಾವೆಲ್ಲಾ ಫೋನ್‌ಗಳಿಗೆ ಏನೆಲ್ಲಾ ಆಫರ್ ಇದೆ ಅನ್ನೋದನ್ನು ಗಮನಿಸೋಣ ಬನ್ನಿ.

ರಿಯಲ್‌ಮಿ ಕ್ರಿಸ್ಮಸ್ ಸೇಲ್ 2023, ಈ ಪ್ರಮುಖ ಫೋನ್‌ಗಳಿಗೆ ಭರ್ಜರಿ ಆಫರ್..

ರಿಯಲ್‌ ಕ್ರಿಸ್ಮಸ್ ಸೇಲ್ 2023 : ಈ ವಿಶೇಷ ಸೇಲ್‌ ಡಿಸೆಂಬರ್ 18 ರಂದು ಆರಂಭ ಆಗಿದ್ದು, ಇದು ಡಿಸೆಂಬರ್ 26 ರವರೆಗೆ ಮುಂದುವರಿಯುತ್ತದೆ. ಅದರಂತೆ ಕೆಳಗೆ ನೀಡಲಾದ ಸ್ಮಾರ್ಟ್‌ಫೋನ್ ಗಳನ್ನು ವಿವಿಧ ಕೊಡುಗೆಯೊಂದಿಗೆ ರಿಯಲ್‌ಮಿ ಹಾಗೂ ಅಮೆಜಾನ್‌ನ ಅಧಿಕೃತ ಸೈಟ್‌ (Realme, Amazon) ಮೂಲಕ ಖರೀದಿ ಮಾಡಬಹುದಾಗಿದೆ.

ರಿಯಲ್‌ಮಿ 11 5G : ಈ ಸ್ಮಾರ್ಟ್‌ಫೋನ್‌ (Realme 11 5G) ನ 8GB RAM + 128GB ಆಯ್ಕೆಯ ಮೇಲೆ 2000 ರೂ.ಗಳ ನೇರ ರಿಯಾಯಿತಿಯನ್ನು ಘೋಷಣೆ ಮಾಡಲಾಗಿದ್ದು, ಈ ಮೂಲಕ ನೀವು ಇದೀಗ ಇದನ್ನು 18,999 ರೂ. ಬದಲಿಗೆ 16,999 ರೂ.ಗಳಲ್ಲಿ ಖರೀದಿಗೆ ಲಭ್ಯವಿದೆ. ಇದೇ ಸ್ಮಾರ್ಟ್‌ಫೋನ್‌ನ 8GB RAM + 256GB ವೇರಿಯಂಟ್‌ಗೆ 18,999 ರೂ.ಗಳ ಆಫರ್ ಬೆಲೆ ನಿಗದಿ ಮಾಡಲಾಗಿದೆ. ಈ ಫೋನ್‌ನ ಸಾಮಾನ್ಯ ದರ 19,999 ರೂ.ಗಳು.

ರಿಯಲ್‌ಮಿ ಕ್ರಿಸ್ಮಸ್ ಸೇಲ್ 2023, ಈ ಪ್ರಮುಖ ಫೋನ್‌ಗಳಿಗೆ ಭರ್ಜರಿ ಆಫರ್..

ರಿಯಲ್‌ಮಿ 11 ಪ್ರೊ 5G: ಈ ಸ್ಮಾರ್ಟ್‌ಫೋನ್‌ನ (Realme 11 Pro 5G) 8GB RAM + 128GB ಆಯ್ಕೆಗೆ 2000 ರೂ.ಗಳ ರಿಯಾಯಿತಿ ನೀಡಲಾಗಿದ್ದು 23,999 ರೂ.ಗಳ ಸಾಮಾನ್ಯ ಬೆಲೆ ಹೊಂದಿರುವ ಫೋನ್‌ಗೆ 21,999 ರೂ.ಗಳನ್ನು ಪಾವತಿ ಮಾಡಿ ಖರೀದಿ ಮಾಡಬಹುದಾಗಿದೆ. ಅದೇ ರೀತಿ 8GB RAM + 256GB ವೇರಿಯಂಟ್‌ ಫೋನ್‌ ಅನ್ನು 24,999 ರೂ.ಗಳ ಬೆಲೆಗೆ ಖರೀದಿ ಮಾಡಬಹುದಾಗಿದೆ.

ರಿಯಲ್‌ಮಿ ಕ್ರಿಸ್ಮಸ್ ಸೇಲ್ 2023, ಈ ಪ್ರಮುಖ ಫೋನ್‌ಗಳಿಗೆ ಭರ್ಜರಿ ಆಫರ್..

ರಿಯಲ್‌ಮಿ ನಾರ್ಜೋ N55: ಈ ಸ್ಮಾರ್ಟ್‌ಫೋನ್‌ನ (Realme Narzo N55) 6GB RAM + 128GB ವೇರಿಯಂಟ್‌ಗೆ 3000 ರೂ.ಗಳ ರಿಯಾಯಿತಿ ನೀಡುವುದರ ಜೊತೆಗೆ 500 ಕೂಪನ್ ರಿಯಾಯಿತಿ ಸಹ ಇದೆ. ಈ ಮೂಲಕ ನೀವು ಕೇವಲ 9,499 ರೂ.ಗಳಿಗೆ ಈ ಫೋನ್‌ ಖರೀದಿ ಮಾಡಬಹುದಾಗಿದೆ. ಈ ಫೋನ್‌ ಸಾಮಾನ್ಯ ದರ 12,999 ರೂ.ಗಳಾಗಿದೆ. ಇದರೊಂದಿಗೆ 8GB RAM + 256GB ಸ್ಟೋರೇಜ್‌ ವೇರಿಯಂಟ್‌ ಫೋನ್ 24,999 ರೂ.ಗಳ ಬೆಲೆಯಲ್ಲಿ ಕಾಣಿಸಿಕೊಂಡಿದೆ.

ರಿಯಲ್‌ಮಿ ನಾರ್ಜೋ 60 5G: ಈ ಫೋನ್ (Realme narzo 60 5G) ನ 8GB RAM + 128GB ಆಯ್ಕೆಗೆ 2500 ರೂ.ಗಳ ಕೂಪನ್ ರಿಯಾಯಿತಿ ನೀಡಲಾಗಿದೆ. ಪರಿಣಾಮ 17,999 ರೂ.ಗಳ ಸಾಮಾನ್ಯ ಬೆಲೆ ಬದಲಿಗೆ 15,499 ರೂ.ಗಳ ಆಫರ್ ಬೆಲೆಯಲ್ಲಿ ಖರೀದಿ ಮಾಡಬಹುದಾಗಿದೆ. ಹಾಗೆಯೇ 8GB RAM + 256GB ಸ್ಟೋರೇಜ್‌ ಆಯ್ಕೆಯ ಫೋನ್‌ ಅನ್ನು 19,999 ರೂ.ಗಳ ಬದಲಿಗೆ 17,999 ರೂ.ಗಳಿಗೆ ಖರೀದಿ ಮಾಡಬಹುದಾಗಿದೆ.

ರಿಯಲ್‌ಮಿ ಕ್ರಿಸ್ಮಸ್ ಸೇಲ್ 2023, ಈ ಪ್ರಮುಖ ಫೋನ್‌ಗಳಿಗೆ ಭರ್ಜರಿ ಆಫರ್..

ರಿಯಲ್‌ಮಿ ನಾರ್ಜೋ 60 ಪ್ರೊ 5G : ಈ ಫೋನ್‌ನ (Realme narzo 60 Pro 5G) ​​8GB RAM + 128GB ಸ್ಟೋರೇಜ್‌ ಆಯ್ಕೆಗೆ 3000 ರೂ.ಗಳ ಕೂಪನ್ ರಿಯಾಯಿತಿ ನೀಡಲಾಗುತ್ತಿದ್ದು, 23,999 ರೂ.ಗಳ ಬದಲಿಗೆ 20,999 ರೂ.ಗಳಲ್ಲಿ ಈ ಫೋನ್ ಖರೀದಿ ಮಾಡಬಹುದಾಗಿದೆ. ಹಾಗೆಯೇ 12GB RAM + 256GB ಸ್ಟೋರೇಜ್‌ ಆಯ್ಕೆಯ ಫೋನ್‌ 26,999 ರೂ.ಗಳ ಸಾಮಾನ್ಯ ಬೆಲೆ ಹೊಂದಿದ್ದು, ನೀವೀಗ ಇದನ್ನು 23,999 ರೂ.ಗಳಿಗೆ ಖರೀದಿ ಮಾಡಬಹುದಾಗಿದೆ.

Best Mobiles in India

English summary
Realme Christmas sale 2023 has been announced, and in this special sale, Realme 11 5G, Realme 11 Pro 5G, Realme narzo N55, Realme narzo 60 5G, Realme narzo 60 Pro 5G phones are offered.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+