ಡಿಸ್ಕೌಂಟ್‌ನಲ್ಲಿ ರಿಯಲ್‌ಮಿ ಸ್ಮಾರ್ಟ್‌ಫೋನ್ ಖರೀದಿಸಲು ಇದುವೇ ಒಳ್ಳೆಯ ಟೈಮ್!
ಸದ್ಯ ಶಾಪಿಂಗ್ ಪ್ರಿಯರು ಹೆಚ್ಚಾಗಿ ಇ-ಕಾಮರ್ಸ್ ತಾಣಗಳಲ್ಲಿ ಖರೀದಿಸುವ ಉತ್ಸುಕತೆ ಹೆಚ್ಚಾಗಿದೆ. ಇನ್ನು ಗ್ರಾಹಕರನ್ನು ಸೆಳೆಯಲು ಇ-ಕಾಮರ್ಸ್ ತಾಣಗಳು ಸಹ ಆಕರ್ಷಕ ಡಿಸ್ಕೌಂಟ್ ಸೇಲ್‌ಗಳನ್ನು ಆಯೋಜಿಸುತ್ತವೆ. ಆ ಪೈಕಿ ಫ್ಲಿಪ್‌ಕಾರ್ಟ್ ಇದೀಗ ರಿಯಲ್ ಮಿ ಡೇಸ್ ಸೇಲ್ ಅನ್ನು ಪ್ರಾರಂಭಿಸಿದ್ದು, ಈ ವಿಶೇಷ ಸೇಲ್‌ನಲ್ಲಿ ರಿಯಲ್‌ಮಿ ಕಂಪನಿಯ ಹೊಸ ಹಾಗೂ ಜನಪ್ರಿಯ ಫೋನ್‌ಗಳಿಗೆ ಬಿಗ್ ರಿಯಾಯಿತಿ ಸಿಗಲಿದೆ.

ಹೌದು, ಜನಪ್ರಿಯ ಇ-ಕಾಮರ್ಸ್ ಫ್ಲಿಪ್‌ಕಾರ್ಟ್ ಇದೀಗ ರಿಯಲ್ ಮಿ ಡೇಸ್ ಸೇಲ್ ಆಯೋಜಿಸಿದೆ. ಐದು ದಿನಗಳ ಕಾಲ ನಡೆಯುವ ಈ ಸೇಲ್ ಇಂದಿನಿಂದ(ಜ.5) ಶುರುವಾಗಿದ್ದು, ಇದೇ ಜನೆವರಿ 9ರ ವರೆಗೂ ಚಾಲ್ತಿ ಇರಲಿದೆ. ಈ ಸೇಲ್‌ನಲ್ಲಿ ರಿಯಲ್‌ಮಿ ಸಂಸ್ಥೆಯ ನೂತನ ಸ್ಮಾರ್ಟ್‌ಫೋನ್‌ಗಳಿಗೂ ಭಾರೀ ಡಿಸ್ಕೌಂಟ್ ಘೋಷಿಸಲಾಗಿದೆ. ಹೀಗಾಗಿ ಹೊಸ ವರ್ಷದಲ್ಲಿ ರಿಯಲ್ ಮಿ ಕಂಪನಿಯ ಸ್ಮಾರ್ಟ್‌ಫೋನ್ ಖರೀದಿಸುವ ಯೋಚನೆ ಇದ್ರೇ ಈ ಚಾನ್ಸ್ ಮಿಸ್ ಮಾಡ್ಕೋಬೇಡಿ. ಹಾಗಾದರೇ ಫ್ಲಿಪ್‌ಕಾರ್ಟ್ ಆಯೋಜಿಸಿರುವ ಈ ಸೇಲ್‌ನಲ್ಲಿ ಆಫರ್ ಪಡೆದಿರುವ ಪ್ರಮುಖ ಸ್ಮಾರ್ಟ್‌ಫೋನ್‌ಗಳು ಯಾವುವು ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ರಿಯಲ್‌ಮಿ C15
ರಿಯಲ್‌ಮಿ C15 ಸ್ಮಾರ್ಟ್‌ಫೋನ್ ಪ್ರಸ್ತುತ ಫ್ಲಿಪ್‌ಕಾರ್ಟ್‌ನ ರಿಯಲ್‌ಮಿ ಡೇಸ್ ಸೇಲ್‌ನಲ್ಲಿ 9,999ರೂ.ಗಳಿಗೆ ಲಭ್ಯವಾಗಲಿದೆ. ಇನ್ನು ಈ ಫೋನ್ ಕ್ವಾಡ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಹೊಂದಿದ್ದು, ಪ್ರೈಮರಿ ಕ್ಯಾಮೆರಾ 13 ಮೆಗಾಪಿಕ್ಸೆಲ್ ಸೆನ್ಸಾರ್ ಅನ್ನು ಹೊಂದಿದೆ.

ರಿಯಲ್‌ಮಿ 6
ರಿಯಲ್‌ಮಿ 6 ಸ್ಮಾರ್ಟ್‌ಫೋನ್ ಕ್ವಾಡ್ ರಿಯರ್ ಕ್ಯಾಮೆರಾ ಹೊಂದಿದ್ದು, ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸೆನ್ಸಾರ್ ಅನ್ನು ಹೊಂದಿದೆ. ಫ್ಲಿಪ್‌ಕಾರ್ಟ್‌ನ ರಿಯಲ್‌ಮಿ ಡೇಸ್ ಸೇಲ್‌ನಲ್ಲಿ 6GB RAM + 64GB ವೇರಿಯಂಟ್ ಫೋನ್ ಬೆಲೆ 12,999ರೂ ಆಗಿದೆ..

ರಿಯಲ್ ಮಿ 7
ಜನಪ್ರಿಯ ರಿಯಲ್ ಮಿ 7 ಸ್ಮಾರ್ಟ್‌ಫೋನ್ ಸಹ ಡಿಸ್ಕೌಂಟ್ ಲಿಸ್ಟ್‌ನಲ್ಲಿ ಇದ್ದು, ಗ್ರಾಹಕರು ಈ ಫೋನ್ ಅನ್ನು 14,999ರೂ.ಗಳ ಪ್ರೈಸ್‌ಟ್ಯಾಗ್‌ನಲ್ಲಿ ಖರೀದಿಸಬಹುದಾಗಿದೆ.

ರಿಯಲ್ ಮಿ 7 ಪ್ರೊ
ರಿಯಲ್ ಮಿ 7 ಪ್ರೊ ಸ್ಮಾರ್ಟ್‌ಫೋನ್ 19,999 ರೂ.ಗಳ ಪ್ರೈಸ್‌ಟ್ಯಾಗ್‌ನಲ್ಲಿ ಕಾಣಿಸಿಕೊಂಡಿದೆ. ಇನ್ನು ಈ ಸ್ಮಾರ್ಟ್‌ಫೋನ್ 65W ಸೂಪರ್‌ಡಾರ್ಟ್ ಚಾರ್ಜ್ ಸೌಲಭ್ಯ ಪಡೆದಿದೆ.

ರಿಯಲ್ ಮಿ ನಾರ್ಜೋ 20A
ಇತ್ತೀಚಿಗಷ್ಟೆ ಬಿಡುಗಡೆ ಆಗಿರುವ ರಿಯಲ್ ಮಿ ನಾರ್ಜೋ 20A ಫೋನ್ ಅನ್ನು 8,499ರೂ.ಗಳ ರಿಯಾಯಿತಿ ದರದಲ್ಲಿ ಖರೀದಿಸಬಹುದಾಗಿದೆ. ಇನ್ನು ಈ ಫೋನ್ ಟ್ರಿಪಲ್ ಕ್ಯಾಮೆರಾ ಸೆಟ್‌ಅಪ್ ಪಡೆದಿದೆ.

ರಿಯಲ್ ಮಿ X50 ಪ್ರೊ 5G
ಫ್ಲ್ಯಾಗ್‌ಶಿಪ್ ಮಾದರಿಯ ರಿಯಲ್ ಮಿ X50 ಪ್ರೊ 5G ಫ್ಲಿಪ್‌ಕಾರ್ಟ್‌ನ ಸೇಲ್‌ನಲ್ಲಿ ಡಿಸ್ಕೌಂಟ್ ಪಡೆದಿದೆ. ಈ ಫೋನ್ 31,999ರೂ. ಪ್ರೈಸ್‌ಟ್ಯಾಗ್‌ನಲ್ಲಿ ಸಿಗಲಿದೆ. ಈ ಫೋನಿನ ಹಿಂಬದಿಯ ಮುಖ್ಯ ಕ್ಯಾಮೆರಾ 64ಎಂಪಿ ಆಗಿದೆ.


Click it and Unblock the Notifications








