ಭಾರತದಲ್ಲಿ ರಿಯಲ್‌ಮಿ ಡಿಜೊ ಬ್ರ್ಯಾಂಡ್‌ನಿಂದ ಎರಡು ಅಗ್ಗದ ಫೋನ್ ಲಾಂಚ್!

|

ಹಲವು ಮಾದರಿಗಳಲ್ಲಿ ಸ್ಮಾರ್ಟ್‌ಫೋನ್‌ ಪರಿಚಯಿಸಿರುವ ರಿಯಲ್‌ಮಿ ಕಂಪನಿಯು ಫೀಚರ್ ಫೋನ್ ಆವೃತ್ತಿಯತ್ತ ಕಣ್ಣಾಯಿಸಿದೆ. ರಿಯಲ್‌ಮಿಯು ಡಿಜೊ ಬ್ರ್ಯಾಂಡ್‌ನಲ್ಲಿ ನೂತನವಾಗಿ ಡಿಜೊ ಸ್ಟಾರ್ 300 ಮತ್ತು ಡಿಜೊ ಸ್ಟಾರ್ 500 ಹೆಸರಿನ ಎರಡು ಫೀಚರ್ ಫೋನ್‌ಗಳು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಎರಡು ಫೀಚರ್ ಫೋನ್‌ಗಳು ಆಕರ್ಷಕ ಡಿಸೈನ್ ಹಾಗೂ ಅಗ್ಗದ ಪ್ರೈಸ್‌ ಟ್ಯಾಗ್‌ನಿಂದ ಗ್ರಾಹಕರ ಗಮನ ಸೆಳೆದಿವೆ.

ಭಾರತದಲ್ಲಿ ರಿಯಲ್‌ಮಿ ಡಿಜೊ ಬ್ರ್ಯಾಂಡ್‌ನಿಂದ ಎರಡು ಅಗ್ಗದ ಫೋನ್ ಲಾಂಚ್!

ಹೌದು, ರಿಯಲ್‌ಮಿ ಸಬ್ ಬ್ರ್ಯಾಂಡ್‌ ಡಿಜೊ ನೂತನವಾಗಿ ಡಿಜೊ ಸ್ಟಾರ್ 300 ಮತ್ತು ಡಿಜೊ ಸ್ಟಾರ್ 500 ಫೋನ್‌ಗಳನ್ನು ದೇಶೀಯ ಮಾರುಕಟ್ಟೆಗೆ ಪರಿಚಯಿಸಿದೆ. ಡಿಜೊ ಸ್ಟಾರ್ 300 ದುಂಡಾದ ಅಂಚುಗಳನ್ನು ಹೊಂದಿದೆ ಮತ್ತು ಡಿಜೊ ಸ್ಟಾರ್ 500 ಹೆಚ್ಚು ತೀಕ್ಷ್ಣವಾಗಿ ಕಾಣುವ ಸೌಂದರ್ಯವನ್ನು ಹೊಂದಿದೆ. ಡಿಜೊ ಸ್ಟಾರ್ 300 ಫೋನ್ 2,550mAh ಬ್ಯಾಟರಿ ಬ್ಯಾಕ್‌ಅಪ್ ಪಡೆದಿದೆ. ಹಾಗೆಯೇ ಡಿಜೊ ಸ್ಟಾರ್ 500 ಫೋನ್ 1,900mAh ಬ್ಯಾಟರಿ ಬಲ ಹೊಂದಿದೆ. ಇನ್ನು ಈ ಎರಡು ಫೋನ್‌ಗಳು ಇನ್ನಿತರೆ ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿವೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಭಾರತದಲ್ಲಿ ರಿಯಲ್‌ಮಿ ಡಿಜೊ ಬ್ರ್ಯಾಂಡ್‌ನಿಂದ ಎರಡು ಅಗ್ಗದ ಫೋನ್ ಲಾಂಚ್!

ಡಿಜೊ ಸ್ಟಾರ್ 300 ಫೀಚರ್ಸ್‌
ಡಿಜೊ ಸ್ಟಾರ್ 300 ಫೋನ್ 1.77-ಇಂಚಿನ ಕ್ಯೂವಿಜಿಎ (160x120 ಪಿಕ್ಸೆಲ್‌ಗಳು) ಡಿಸ್‌ಪ್ಲೇ ಹೊಂದಿದೆ. ಡ್ಯುಯಲ್ ಸಿಮ್ (ಮೈಕ್ರೋ) ಜೊತೆಗೆ ಎಸ್‌ಸಿ 6531 ಇ ಪ್ರೊಸೆಸರ್ ಹೊಂದಿದೆ. ಇದು 32MB RAM ಮತ್ತು 32MB ಆಂತರಿಕ ಸಂಗ್ರಹಣೆಯನ್ನು ಹೊಂದಿದೆ. ಇದು ಮೈಕ್ರೊ SD ಕಾರ್ಡ್ ಮೂಲಕ (64GB ವರೆಗೆ) ಮೀಸಲಾದ ಸ್ಲಾಟ್ ಮೂಲಕ ವಿಸ್ತರಿಸಬಹುದಾಗಿದೆ. ಒಂದೇ ಹಿಂಬದಿಯ ಕ್ಯಾಮೆರಾ ಇದ್ದು ಅದು 0.08 ಮೆಗಾಪಿಕ್ಸೆಲ್ ರೆಸಲ್ಯೂಶನ್ ಹೊಂದಿದೆ. 2,550mAh ಬ್ಯಾಟರಿ ಬ್ಯಾಕ್‌ಅಪ್‌ ರಚನೆಯನ್ನು ಹೊಂದಿದ್ದು, ಇದರ ಸ್ಟ್ಯಾಂಡ್‌ಬೈ ಸಮಯ 18 ದಿನಗಳು ಮತ್ತು 21 ಗಂಟೆಗಳ ಕರೆ ಸಮಯವನ್ನು ಹೊಂದಿದೆ. ಆಯಾಮಗಳಿಗೆ ಸಂಬಂಧಿಸಿದಂತೆ, ಡಿಜೊ ಸ್ಟಾರ್ 300 119.5x52x13.4 ಮಿಮೀ ಅಳತೆ ಮತ್ತು 105.4 ಗ್ರಾಂ ತೂಗುತ್ತದೆ.

ಭಾರತದಲ್ಲಿ ರಿಯಲ್‌ಮಿ ಡಿಜೊ ಬ್ರ್ಯಾಂಡ್‌ನಿಂದ ಎರಡು ಅಗ್ಗದ ಫೋನ್ ಲಾಂಚ್!

ಡಿಜೊ ಸ್ಟಾರ್ 500 ಫೀಚರ್ಸ್‌
ಡಿಜೊ ಸ್ಟಾರ್ 500 ದೊಡ್ಡದಾದ 2.8-ಇಂಚಿನ ಕ್ಯೂವಿಜಿಎ (320x240 ಪಿಕ್ಸೆಲ್‌ಗಳು) ಎಲ್‌ಸಿಡಿ ಡಿಸ್ಪ್ಲೇಯನ್ನು ಹೊಂದಿದೆ. ಈ ಫೋನ್ ಡ್ಯುಯಲ್-ಸಿಮ್ (ಮೈಕ್ರೋ) ಹೊಂದಿದ್ದು, ಎಸ್‌ಸಿ 6531 ಇ ಪ್ರೊಸೆಸರ್ ಹೊಂದಿದೆ. RAM ಮತ್ತು ಶೇಖರಣಾ ಸಂರಚನೆಯು ಡಿಜೊ ಸ್ಟಾರ್ 300 ರಂತೆಯೇ ಇದೆ. ಆದರೆ ಡಿಜೊ ಸ್ಟಾರ್ 500 ನಲ್ಲಿ 0.3 ಮೆಗಾಪಿಕ್ಸೆಲ್ ಹಿಂಬದಿಯ ಕ್ಯಾಮೆರಾ ಸಂವೇದಕವಿದೆ. ಈ ಪೋನ್ 1,900mAh ಬ್ಯಾಟರಿ ಬೆಂಬಲಿತವಾಗಿದ್ದು, ಸ್ಟ್ಯಾಂಡ್‌ಬೈನಲ್ಲಿ 13 ದಿನಗಳವರೆಗೆ ಇರುತ್ತದೆ ಮತ್ತು 17 ಗಂಟೆಗಳ ಕರೆ ಸಮಯವನ್ನು ತಲುಪಿಸುತ್ತದೆ. ಡಿಜೊ ಸ್ಟಾರ್ 500 ಸಹ ಸ್ಟ್ರಿಪ್ ಟಾರ್ಚ್ ಅನ್ನು ಹೊಂದಿದೆ. ಆಯಾಮಗಳಿಗೆ ಸಂಬಂಧಿಸಿದಂತೆ, ಫೋನ್ 132.5x55.4x12mm ಅಳತೆ ಮತ್ತು 108 ಗ್ರಾಂ ತೂಗುತ್ತದೆ.

ಭಾರತದಲ್ಲಿ ಬೆಲೆ ಎಷ್ಟು ಮತ್ತು ಲಭ್ಯತೆ?
ಡಿಜೊ ಸ್ಟಾರ್ 300 ಫೋನಿನ ಬೆಲೆಯು 1,299ರೂ. ಆಗಿದೆ. ಈ ಫೋನ್ ಕಪ್ಪು, ನೀಲಿ ಮತ್ತು ಕೆಂಪು ಬಣ್ಣಗಳಲ್ಲಿ ದೊರೆಯಲಿದೆ. ಇನ್ನು ಡಿಜೊ ಸ್ಟಾರ್ 500 ಫೋನ್ 1,799ರೂ. ಬೆಲೆಯನ್ನು ಹೊಂದಿದ್ದು, ಕಪ್ಪು, ಹಸಿರು ಮತ್ತು ಬೆಳ್ಳಿ ಬಣ್ಣಗಳ ಆಯ್ಕೆಯನ್ನು ಪಡೆದಿದೆ. ಎರಡು ಫೋನ್‌ಗಳು ಫ್ಲಿಪ್‌ಕಾರ್ಟ್ ಮೂಲಕ ಖರೀದಿಸಲು ಲಭ್ಯವಿದೆ ಮತ್ತು ಆಫ್‌ಲೈನ್ ಮಳಿಗೆಗಳಲ್ಲಿಯೂ ಲಭ್ಯ.

Best Mobiles in India

English summary
Realme Dizo Star 300, Dizo Star 500 Feature Phones With 2G Connectivity Launched in India.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X