ರಿಯಲ್ ಫೆಸ್ಟ್ ಸೇಲ್: ರಿಯಲ್‌ಮಿ ಸ್ಮಾರ್ಟ್‌ಫೋನ್‌ಗಳಿಗೆ ಭರ್ಜರಿ ಡಿಸ್ಕೌಂಟ್!
ಇ-ಕಾಮರ್ಸ್ ತಾಣಗಳಂತೆ ಇತ್ತೀಚಿನ ದಿನಗಳಲ್ಲಿ ಮೊಬೈಲ್ ವೆಬ್‌ಸೈಟ್‌ಗಳು ತಮ್ಮ ಸ್ಮಾರ್ಟ್‌ಫೋನ್‌ಗಳಿಗೆ ಡಿಸ್ಕೌಂಟ್ ಸೇಲ್ ಮೇಳವನ್ನು ಆಯೋಜಿಸುತ್ತಿವೆ. ಈ ನಿಟ್ಟಿನಲ್ಲಿ ರಿಯಲ್‌ಮಿ ಫ್ಲಿಪ್‌ಕಾರ್ಟ್ ಸಹಬಾಗಿತ್ವದಲ್ಲಿ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ 'ದಿ ರಿಯಲ್ ಫೆಸ್ಟ್' ಮಾರಾಟವನ್ನು ಆಯೋಜಿಸಿದೆ. ಇ-ಕಾಮರ್ಸ್ ದೈತ್ಯ ಫ್ಲಿಪ್‌ಕಾರ್ಟ್‌ನಲ್ಲಿ ಎಸ್‌ಬಿಐ ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡ್ ಮೂಲಕ ಖರೀದಿಸಿದರೇ ವಿಶೇಷ ರಿಯಾಯಿತಿ ಲಭ್ಯ.

ಹೌದು, ರಿಯಲ್‌ಮಿ ಸಂಸ್ಥೆಯು ನಡೆಸುತ್ತಿರುವ ದಿ ರಿಯಲ್ ಫೆಸ್ಟ್ ಸೇಲ್ ಮೇಳದಲ್ಲಿ ಪ್ರಮುಖ ರಿಯಲ್ ಮಿ ಸ್ಮಾರ್ಟ್‌ಫೋನ್‌ಗಳಿಗೆ ಭಾರಿ ಡಿಸ್ಕೌಂಟ್ ಲಭ್ಯ. ಇನ್ನು ಈ ಸೇಲ್ ಮೇಳವು ಈಗಾಗಲೇ ಚಾಲ್ತಿಯಲ್ಲಿದ್ದು, ಇದೇ ಜುಲೈ 31ರ ವರೆಗೂ ಮುಂದುವರೆಯಲಿದೆ. ಆಯ್ದ ಫೋನ್‌ಗಳ ಮೇಲೆ ಎಕ್ಸ್‌ಚೇಂಜ್ ಕೊಡುಗೆಗಳು ಲಭ್ಯವಾಗಲಿವೆ ಹಾಗೂ ಎಸ್‌ಬಿಐ ಬ್ಯಾಂಕ್ ಕಾರ್ಡ್ ಬಳಕೆ ಮೂಲಕ ಖರೀದಿಸುವ ಗ್ರಾಹಕರಿಗೆ ಶೇ.5% ಇನ್‌ಸ್ಟಂಟ್ ಡಿಸ್ಕೌಂಟ್ ದೊರೆಯಲಿದೆ.

ಇನ್ನು ಸಂಸ್ಥೆಯ ಈ ದಿ ರಿಯಲ್ ಫೆಸ್ಟ್ ಸೇಲ್ ಮೇಳದಲ್ಲಿ ಬಜೆಟ್ ದರದ ಸ್ಮಾರ್ಟ್‌ಫೋನ್‌ಗಳು ಹಾಗೂ ಫ್ಲ್ಯಾಗ್‌ಶಿಪ್ ಮಾದರಿಯ ಸ್ಮಾರ್ಟ್‌ಫೋನ್‌ಗಳು ಡಿಸ್ಕೌಂಟ್ ಪಡೆದಿವೆ. ಹಾಗಾದರೇ ಯಾವೆಲ್ಲಾ ಸ್ಮಾರ್ಟ್‌ಫೋನ್‌ಗಳು ರಿಯಾಯಿತಿ ಪಡೆದಿವೆ. ಅವುಗಳ ಪ್ರಸ್ತುತ ಡಿಸ್ಕೌಂಟ್ ಬೆಲೆ ಎಷ್ಟು ಎನ್ನುವ ಬಗ್ಗೆ ತಿಳಿಯಲು ಮುಂದೆ ಓದಿರಿ.

ರಿಯಲ್‌ಮಿ 5i 4GB RAM + 64GB ಸ್ಟೋರೇಜ್ ವೇರಿಯಂಟ್ ಈ ಸೇಲ್‌ನಲ್ಲಿ 10,999ರೂ. ಬೆಲೆಗೆ ಲಭ್ಯ. ಹಾಗೆಯೇ ರಿಯಲ್‌ಮಿ X ಸ್ಮಾರ್ಟ್‌ಫೋನ್ 15,999ರೂ. ಗಳಿಗೆ ದೊರೆಯುತ್ತದೆ. ಅದೇ ರೀತಿ ರಿಯಲ್‌ಮಿ X2 ಪ್ರೊ ಬೆಲೆಯು 31,999ರೂ.ಗಳು ಆಗಿದ್ದು, ಆದರೆ ಈ ಸೇಲ್ ಫೆಸ್ಟ್‌ನಲ್ಲಿ 4,000ರೂ. ರಿಯಾಯಿತಿ ಯಿಂದಾಗಿ ಈಗ 27,999ರೂ. ಪ್ರೈಸ್‌ಟ್ಯಾಗ್ ಅನ್ನು ಪಡೆದುಕೊಂಡಿದೆ.

ರಿಯಲ್ ಫೆಸ್ಟ್ ಸೇಲ್‌ನಲ್ಲಿ ಬಜೆಟ್ ಫೋನ್‌ಗಳಿಗೂ ರಿಯಾಯಿತಿ ಲಭ್ಯವಿದೆ. ರಿಯಲ್‌ಮಿ C3 8,999ರೂ.ಗಳಿಗೆ ಖರೀದಿಸಬಹುದು. ರಿಯಲ್‌ಮಿ ಎಕ್ಸ್ 50 ಪ್ರೊ ಅನ್ನು ಫ್ಲಿಪ್‌ಕಾರ್ಟ್‌ನಲ್ಲಿ 39,999ರೂ.ಗಳ ಬೆಲೆಯಲ್ಲಿ ಕಾಣಿಸಿಕೊಂಡಿದೆ. ಇನ್ನು ರಿಯಲ್‌ಮಿ ಎಕ್ಸ್ 3 ಸರಣಿ ಆರಂಭಿಕ ಬೆಲೆ 24,999 ರೂ.ಗಳಾಗಿದೆ.


Click it and Unblock the Notifications








