Home
ಸುದ್ದಿಜಾಲ

ಹೈ ಎಂಡ್‌ ಫೀಚರ್ಸ್‌ನ ಈ ಫೋನಿಗೆ ಈಗ ಭಾರೀ ಡಿಸ್ಕೌಂಟ್‌!

ಜನಪ್ರಿಯ ಇ ಕಾಮರ್ಸ್‌ ತಾಣ ಫ್ಲಿಪ್‌ಕಾರ್ಟ್‌ನಲ್ಲಿ ಈಗ ಇಯರ್‌ ಎಂಡ್‌ ಸೇಲ್‌ ಚಾಲ್ತಿ ಇದೆ. ಈ ಮಾರಾಟ ಮೇಳದಲ್ಲಿ ಕೆಲವು ಆಯ್ದ ಫೋನ್‌ಗಳು ಬೊಂಬಾಟ್‌ ರಿಯಾಯಿತಿ ಪಡೆದಿದ್ದು, ಗ್ರಾಹಕರನ್ನು ಸೆಳೆಯುತ್ತಿವೆ. ಆ ಪೈಕಿ ರಿಯಲ್‌ ಸಂಸ್ಥೆಯು ರಿಯಲ್‌ಮಿ GT 2 ಪ್ರೊ ಸ್ಮಾರ್ಟ್‌ಫೋನ್‌ ಕೂಡಾ ವಾವ್‌ ಎನಿಸುವಂತಹ ಕೊಡುಗೆ ಪಡೆದಿದೆ.

ಹೌದು, ಫ್ಲಿಪ್‌ಕಾರ್ಟ್‌ ತಾಣದಲ್ಲಿ ಇಯರ್‌ ಎಂಡ್‌ ಮಾರಾಟ ಜೋರಾಗಿ ಸಾಗಿದೆ. ಈ ಮೇಳದಲ್ಲಿ ರಿಯಲ್‌ಮಿ GT 2 ಪ್ರೊ ಮೊಬೈಲ್‌ ಶೇ. 55% ರಷ್ಟು ನೇರ ರಿಯಾಯಿತಿ ಪಡೆದುಕೊಂಡಿದೆ. ಹೀಗಾಗಿ ಈ ಫೋನಿನ 12 GB RAM + 256 GB ವೇರಿಯಂಟ್‌ 29,999ರೂ. ಗಳ ಡಿಸ್ಕೌಂಟ್‌ ಬೆಲೆಯಲ್ಲಿ ಖರೀದಿಗೆ ಲಭ್ಯ ಇದೆ. ಅಂದಹಾಗೆ ಈ ಮೇಳವು ಇದೇ ಡಿಸೆಂಬರ್ 16 ರ ವರೆಗೂ ಇರಲಿದೆ.

ಹೈ ಎಂಡ್‌ ಫೀಚರ್ಸ್‌ನ ಈ ಫೋನಿಗೆ ಈಗ ಭಾರೀ ಡಿಸ್ಕೌಂಟ್‌!

ಇನ್ನು ರಿಯಲ್‌ಮಿ GT 2 ಪ್ರೊ ಮೊಬೈಲ್‌ ಸ್ನಾಪ್‌ಡ್ರಾಗನ್‌ 8 Gen 1 SoC ಪ್ರೊಸೆಸರ್‌ ಪವರ್‌ ಅನ್ನು ಪಡೆದುಕೊಂಡಿದೆ. ಇದರ ಜೊತೆಗೆ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಸೌಲಭ್ಯ ಸಹ ಪಡೆದಿದೆ. ಅಲ್ಲದೇ ತ್ರಿವಳಿ ಕ್ಯಾಮೆರಾ ರಚನೆ ಅನ್ನು ಕೂಡಾ ಪಡೆದುಕೊಂಡಿದೆ. ಇನ್ನುಳಿದಂತೆ ರಿಯಲ್‌ಮಿ GT 2 ಪ್ರೊ ಸ್ಮಾರ್ಟ್‌ಫೋನ್‌ನ ಇತರೆ ಫೀಚರ್ಸ್‌ ಏನು ಎಂಬುದನ್ನು ಈ ಲೇಖನದಲ್ಲಿ ತಿಳಿಸಲಾಗಿದೆ ಮುಂದೆ ಓದಿರಿ.

ಡಿಸ್‌ಪ್ಲೇ ರಚನೆ ಹಾಗೂ ವಿನ್ಯಾಸ ಹೀಗಿದೆ

ರಿಯಲ್‌ಮಿ GT 2 ಪ್ರೊ ಮೊಬೈಲ್‌ 6.7 ಇಂಚಿನ 2K LTPO 2.0 ಅಮೋಲೆಡ್‌ ಡಿಸ್‌ಪ್ಲೇ ಹೊಂದಿದೆ. ಇದು 1,440 x 3,216 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದಿದೆ. ಇನ್ನು ಈ ಡಿಸ್‌ಪ್ಲೇ 120Hz ಅಡಾಪ್ಟಿವ್ ರಿಫ್ರೆಶ್ ರೇಟ್ ಅನ್ನು ಹೊಂದಿದ್ದು, ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ ಸ್ಕ್ರೀನ್ ಪ್ರೊಟೆಕ್ಷನ್‌ ಅನ್ನು ಹೊಂದಿದೆ.

ಹೈ ಎಂಡ್‌ ಫೀಚರ್ಸ್‌ನ ಈ ಫೋನಿಗೆ ಈಗ ಭಾರೀ ಡಿಸ್ಕೌಂಟ್‌!

ಪ್ರೊಸೆಸರ್‌ ಪವರ್‌ ಯಾವುದು

ರಿಯಲ್‌ಮಿ GT 2 ಪ್ರೊ ಮೊಬೈಲ್‌ ಸ್ನಾಪ್‌ಡ್ರಾಗನ್ 8 Gen 1 SoC ಪ್ರೊಸೆಸರ್‌ ಸೌಲಭ್ಯ ಹೊಂದಿದೆ, ಇದು ಆಂಡ್ರಾಯ್ಡ್‌ 12 ಆಧಾರಿತ ರಿಯಲ್‌ಮಿ UI 3.0 ನಲ್ಲಿ ಕಾರ್ಯ ನಿರ್ವಹಿಸುತ್ತದೆ. ಹಾಗೆಯೇ 12GB RAM ಮತ್ತು 256GB ಆಂತರೀಕ ಸ್ಟೋರೇಜ್‌ ಸಾಮರ್ಥ್ಯವನ್ನು ಹೊಂದಿದೆ.

ಟ್ರಿಪಲ್‌ ಕ್ಯಾಮೆರಾ ಸೆನ್ಸಾರ್ ಸೌಲಭ್ಯ

ಇನ್ನು ಈ ಮೊಬೈಲ್‌ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್‌ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಅಲ್ಟ್ರಾ-ವೈಡ್ ಸೆನ್ಸಾರ್‌, ದ್ವಿತೀಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಮ್ಯಾಕ್ರೋ ಲೆನ್ಸ್‌ ಅನ್ನು ಪಡೆದಿದೆ. ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. ಇದಲ್ಲದೆ 32 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಪಡೆದಿದೆ.

ಹೈ ಎಂಡ್‌ ಫೀಚರ್ಸ್‌ನ ಈ ಫೋನಿಗೆ ಈಗ ಭಾರೀ ಡಿಸ್ಕೌಂಟ್‌!

ಬ್ಯಾಟರಿ ಮತ್ತು ಇತರೆ ಸೌಲಭ್ಯಗಳು

ರಿಯಲ್‌ಮಿ GT 2 ಪ್ರೊ ಮೊಬೈಲ್‌ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಹೊಂದಿದ್ದು, ಇದು 65W ಸೂಪರ್‌ಡಾರ್ಟ್ ಚಾರ್ಜ್ ವರ್ಧಿತ ವೇಗದ ಚಾರ್ಜಿಂಗ್‌ ಅನ್ನು ಒಳಗೊಂಡಿದೆ. ಇನ್ನು ಕನೆಕ್ಟಿವಿಟಿ ಸೌಲಭ್ಯಗಳಲ್ಲಿ 5G, 4G LTE, Wi-Fi 6, ಬ್ಲೂಟೂತ್ v5.2 ಮತ್ತು USB ಟೈಪ್-C ಪೋರ್ಟ್ ಬೆಂಬಲಿಸಲಿದೆ. ಇದು ಇನ್-ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್‌ ಅನ್ನು ಹೊಂದಿದೆ.

ಕಲರ್‌ ಹಾಗೂ ಮೆಮೊರಿ ಆಯ್ಕೆ

ರಿಯಲ್‌ಮಿ GT 2 ಪ್ರೊ ಸ್ಮಾರ್ಟ್‌ಫೋನ್‌ 8GB + 128GB ಸ್ಟೋರೇಜ್ ಹಾಗೂ 12GB + 256GB ಸ್ಟೋರೇಜ್ ಆಯ್ಕೆ ಪಡೆದಿದೆ. ಹಾಗೆಯೇ ಇದು ಪೇಪರ್ ಗ್ರೀನ್, ಪೇಪರ್ ವೈಟ್ ಮತ್ತು ಸ್ಟೀಲ್ ಬ್ಲ್ಯಾಕ್ ಬಣ್ಣದ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ.

Best Mobiles in India

English summary
realme GT 2 Pro now available at huge discount price on flipkart year end sale. offer price and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+