Home
ಸುದ್ದಿಜಾಲ

ರಿಯಲ್‌ಮಿ GT 3 ಲಾಂಚ್‌; ಬ್ಯಾಟರಿ ಭರ್ತಿಗೆ ಎಂಟು ನಿಮಿಷ ಸಾಕು!

ಪ್ರಮುಖ ಸ್ಮಾರ್ಟ್‌ಫೋನ್‌ ತಯಾರಿಕಾ ಸಂಸ್ಥೆಗಳಲ್ಲಿ ಒಂದಾದ ರಿಯಲ್‌ಮಿಯು ಇದೀಗ ಮತ್ತೊಂದು ಹೊಸ ಫೋನ್‌ ಮೂಲಕ ಮಾರುಕಟ್ಟೆಯಲ್ಲಿ ಸಂಚಲನ ಉಂಟು ಮಾಡಲು ಮುಂದಾಗಿದೆ. ಈ ಫೋನ್ ಸ್ನಾಪ್‌ಡ್ರಾಗನ್ 8+ ಜನ್ 1 SoC ಪ್ರೊಸೆಸರ್‌ ಮೂಲಕ ಕಾರ್ಯನಿರ್ವಹಿಸಲಿದೆ. ಜೊತೆಗೆ 144Hz ರಿಫ್ರೆಶ್‌ ರೇಟ್ ಹೊಂದಿದೆ.

ಹೌದು, ಟೆಕ್ ಶೋ ಮೊಬೈಲ್ ವರ್ಲ್ಡ್ ಕಾಂಗ್ರೆಸ್ (MWC) ನಲ್ಲಿ ರಿಯಲ್‌ಮಿ GT 3 (Realme GT 3) ಸ್ಮಾರ್ಟ್‌ಫೋನ್ ಬಗ್ಗೆ ಘೋಷಣೆ ಮಾಡಲಾಗಿದ್ದು, ಈ ಫೋನ್‌ನ ರಿಯರ್‌ ಭಾಗದಲ್ಲಿ ಆಯತಾಕಾರದ ಎಲ್‌ಇಡಿ ಲೈಟ್ ಆಯ್ಕೆ ನೀಡಲಾಗಿದ್ದು, ಈ ಮೂಲಕ ನಥಿಂಗ್ ಫೋನ್ (1) ನ್ನು ರೀತಿಯಲ್ಲೇ ಕಾಣಿಸುತ್ತದೆ. ಹಾಗಿದ್ರೆ, ಭಾರತದಲ್ಲಿ ಇದರ ಬೆಲೆ ಎಷ್ಟು?, ಪ್ರಮುಖ ಫೀಚರ್ಸ್‌ ಏನು? ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ರಿಯಲ್‌ಮಿ GT 3 ಲಾಂಚ್‌; ಬ್ಯಾಟರಿ ಭರ್ತಿಗೆ ಎಂಟು ನಿಮಿಷ ಸಾಕು!

ರಿಯಲ್‌ಮಿ GT 3 ಡಿಸ್‌ಪ್ಲೇ ವಿವರ

ರಿಯಲ್‌ಮಿ GT 3 ಫೋನ್‌ 6.74 ಇಂಚಿನ ಡಿಸ್‌ಪ್ಲೇ ಹೊಂದಿದ್ದು, 2772 x 1240 ನ ಪಿಕ್ಸೆಲ್ ರೆಸಲ್ಯೂಶನ್ ಹೊಂದಿದೆ. ಇದರಲ್ಲಿನ 144Hz ರಿಫ್ರೆಶ್ ರೇಟ್‌ ಆಯ್ಕೆ ಮಾತ್ರ ರೋಮಾಂಚನಗೊಳಿಸುವಂತಹುದು, ಯಾಕೆಂದರೆ ಆಟೋಮ್ಯಾಟಿಕ್‌ ಆಗಿ ಸಂದರ್ಭಕ್ಕೆ ತಕ್ಕಂತೆ ರಿಫ್ರೆಶ್ ರೇಟ್‌ ಬದಲಾಗಲಿದೆ. ಇದರೊಂದಿಗೆ 1,400nits ನ ಬ್ರೈಟ್‌ನೆಸ್‌ ಆಯ್ಕೆಯನ್ನು ಸಹ ಈ ಡಿಸ್‌ಪ್ಲೇ ಪಡೆದುಕೊಂಡಿದೆ.

ರಿಯಲ್‌ಮಿ GT 3 ಪ್ರೊಸೆಸರ್ ಯಾವುದು?

ರಿಯಲ್‌ಮಿ GT 3 ಸ್ಮಾರ್ಟ್‌ಫೋನ್ ಕ್ವಾಲ್ಕಮ್‌ ಸ್ನಾಪ್‌ಡ್ರಾಗನ್ 8+ ಜನ್‌ 1 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, ಇದು ಫೋನ್‌ನ ಎಂತಹುದೇ ಒತ್ತಡವನ್ನು ತಡೆದುಕೊಂಡು ಉತ್ತಮ ಕಾರ್ಯಕ್ಷಮತೆ ನೀಡಲಿದೆ. ಇದರೊಂದಿಗೆ 8GB RAM ಹಾಗೂ 128GB ಮತ್ತು 16GB RAM ಹಾಗೂ 1TB ಇಂಟರ್ನಲ್‌ ಸ್ಟೋರೇಜ್‌ ಸೇರಿದಂತೆ ಐದು ವೇರಿಯಂಟ್‌ನಲ್ಲಿ ಇದು ಕಾಣಿಸಿಕೊಂಡಿದೆ.

ರಿಯಲ್‌ಮಿ GT 3 ಲಾಂಚ್‌; ಬ್ಯಾಟರಿ ಭರ್ತಿಗೆ ಎಂಟು ನಿಮಿಷ ಸಾಕು!

ರಿಯಲ್‌ಮಿ GT 3 ಕ್ಯಾಮೆರಾ ರಚನೆ

ಈ ಹೊಸ ಸ್ಮಾರ್ಟ್‌ಫೋನ್‌ ಟ್ರಿಪಲ್ ರಿಯರ್‌ ಕ್ಯಾಮೆರಾ ರಚನೆ ಹೊಂದಿದ್ದು, 50 ಮೆಗಾಪಿಕ್ಸೆಲ್ ಸೋನಿ IMX890 ಸೆನ್ಸರ್‌ 8 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಆಂಗಲ್ ಲೆನ್ಸ್ ಮತ್ತು 2 ಮೆಗಾಪಿಕ್ಸೆಲ್ ಸೆನ್ಸರ್‌ ಆಯ್ಕೆಯ ಮೂಲಕ ಆಕರ್ಷಕ ನೋಟ ಪಡೆದುಕೊಂಡಿದೆ. ಜೊತೆಗೆ 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಆಯ್ಕೆ ಇದ್ದು, ಸೆಲ್ಫಿ ಪ್ರಿಯರಿಗೆ ಈ ಫೋನ್‌ ಉತ್ತಮ ಆಯ್ಕೆಯಾಗಿರಲಿದೆ.

ರಿಯಲ್‌ಮಿ GT 3 ಬ್ಯಾಟರಿ ಸಾಮರ್ಥ್ಯ ಹಾಗೂ ಇತರೆ

ರಿಯಲ್‌ಮಿ GT 3 ಫೋನ್ 240W ಚಾರ್ಜಿಂಗ್‌ಬೆಂಬಲದೊಂದಿಗೆ 4,600mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದುಕೊಂಡಿದ್ದು, ಈ ಮೂಲಕ ಕೇವಲ ನಾಲ್ಕು ನಿಮಿಷದಲ್ಲಿ ಅರ್ಧದಷ್ಟು ಬ್ಯಾಟರಿ ಭರ್ತಿ ಮಾಡಬಹುದಾಗಿದೆ. ಇನ್ನುಳಿದಂತೆ ಡಾಲ್ಬಿ ಅಟ್ಮಾಸ್‌ನೊಂದಿಗೆ ಡ್ಯುಯಲ್ ಸ್ಟಿರಿಯೊ ಸ್ಪೀಕರ್‌ಗಳು ಮತ್ತು ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಆಯ್ಕೆ ಈ ಫೋನ್‌ನ ಮತ್ತಷ್ಟು ಫೀಚರ್ಸ್‌ಗಳಲ್ಲಿ ಪ್ರಮುಖವಾದವು.

ರಿಯಲ್‌ಮಿ GT 3 ಲಾಂಚ್‌; ಬ್ಯಾಟರಿ ಭರ್ತಿಗೆ ಎಂಟು ನಿಮಿಷ ಸಾಕು!

ರಿಯಲ್‌ಮಿ GT 3 ಬೆಲೆ ಹಾಗೂ ಲಭ್ಯತೆ

ರಿಯಲ್‌ಮಿ GT 3 ಯ 8GB + 128GB ಮಾದರಿಗೆ $649 ( 53,700 ರೂ. ಗಳು) ಹೊಂದಿದ್ದು, ಇದು ಆರಂಭಿಕ ಬೆಲೆಯಾಗಿರಲಿದೆ. ಇದರೊಂದಿಗೆ ಈ ಫೋನ್ ಪಲ್ಸ್ ವೈಟ್ ಮತ್ತು ಬೂಸ್ಟರ್ ಬ್ಲ್ಯಾಕ್ ಬಣ್ಣದಲ್ಲಿ ಕಾಣಿಸಿಕೊಂಡಿದೆ. ಜಾಗತಿಕವಾಗಿ ಲಾಂಚ್‌ ಆದರೂ ಭಾರತದಲ್ಲಿ ಈ ಸ್ಮಾರ್ಟ್‌ಫೋನ್‌ ಎಂದಿನಿಂದ ಬಳಕೆದಾರರಿಗೆ ಲಭ್ಯ ಎಂಬ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಆದರೂ ಶೀಘ್ರದಲ್ಲೇ ಭಾರತದಲ್ಲಿ ಖರೀದಿಗೆ ವ್ಯವಸ್ಥೆ ಮಾಡಲಾಗುತ್ತದೆ ಎನ್ನುವ ಮಾತುಗಳು ಸಹ ಕೇಳಿಬರುತ್ತಿವೆ.

Best Mobiles in India

English summary
Realme GT 3 has been launched at MWC, this phone have 240W charging, 144Hz display, Snapdragon 8+ Gen 1 SoC and more features.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+