9 ನಿಮಿಷದಲ್ಲೇ ಫುಲ್ ಚಾರ್ಜ್, ಯಾವುದು ಈ ಹೊಸ ರಿಯಲ್‌ಮಿ ಫೋನ್? ಬೆಲೆ ಎಷ್ಟು?
ಸ್ಮಾರ್ಟ್‌ಫೋನ್ ವಿಭಾಗದಲ್ಲಿ ರಿಯಲ್‌ಮಿ (Realme) ಫೋನ್‌ಗಳಿಗೆ ಭಾರತದಲ್ಲಿ ವಿಶೇಷವಾದ ಬೇಡಿಕೆ ಇದೆ. ಈ ನಡುವೆ ರಿಯಲ್‌ಮಿ ಹೊಸ ಹೊಸ ಸ್ಮಾರ್ಟ್‌ಫೋನ್‌ಗಳನ್ನು ಅನಾವರಣ ಮಾಡಿಕೊಂಡು ಬರುತ್ತಿದ್ದು, ಈಗ ವಿಶೇಷವಾದ ಸ್ಮಾರ್ಟ್‌ಫೋನ್ (Smartphone) ಅನ್ನು ಲಾಂಚ್ ಮಾಡುವ ಮೂಲಕ ಮಾರುಕಟ್ಟೆಯಲ್ಲಿ ದೊಡ್ಡದಾಗಿ ಸದ್ದು ಮಾಡಿದೆ.
ಹೌದು, ರಿಯಲ್‌ಮಿ ಇದೀಗ ರಿಯಲ್‌ಮಿ GT5 (Realme GT5) ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡಿದೆ. ಈ ಫೋನ್ ಬರೋಬ್ಬರಿ 240W ಸೂಪರ್ ವೂಕ್ ಚಾರ್ಜಿಂಗ್‌ನೊಂದಿಗೆ ಕಾಣಿಸಿಕೊಂಡಿದ್ದು, ಇದರಲ್ಲೂ ಎರಡು ಆಯ್ಕೆಗಳನ್ನು ನೀಡಲಾಗಿದೆ. ಜೊತೆಗೆ 9 ನಿಮಿಷದಲ್ಲೇ ಬ್ಯಾಟರಿಯನ್ನು 100 ಪ್ರತಿಶತದಷ್ಟು ಚಾರ್ಜ್ ಮಾಡಬಹುದು. ಹಾಗಿದ್ರೆ, ಈ ಫೋನ್‌ನ ಪ್ರಮುಖ ಫೀಚರ್ಸ್ ಏನು?, ಬೆಲೆ ಎಷ್ಟು? ಎಂಬಿತ್ಯಾದಿ ಮಾಹಿತಿ ಇಲ್ಲಿದೆ ನೋಡಿ.

ರಿಯಲ್‌ಮಿ GT5 ಡಿಸ್‌ಪ್ಲೇ ವಿವರ: ಈ ಸ್ಮಾರ್ಟ್‌ಫೋನ್ 6.74 ಇಂಚಿನ OLED ಡಿಸ್‌ಪ್ಲೇನಲ್ಲಿ ಕಾಣಿಸಿಕೊಂಡಿದ್ದು, ಈ ಡಿಸ್ಪ್ಲೇ 144Hz ರಿಫ್ರೆಶ್ ರೇಟ್, 2160Hz ಹೈ-ಫ್ರೀಕ್ವೆನ್ಸಿ PWM ಮಬ್ಬಾಗಿಸುವಿಕೆ ಮತ್ತು 1450 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಆಯ್ಕೆ ಪಡೆದುಕೊಂಡಿದೆ. ಈ ಮೂಲಕ ಯಾವುದೇ ತರಹದ ವಿಡಿಯೋ ವೀಕ್ಷಣೆ ಮಾಡುವಾಗ, ಗೇಮಿಂಗ್ ನಲ್ಲಿರುವಾಗ ವಿಶೇಷವಾದ ಅನುಭವ ಸಿಗಲಿದೆ.
ರಿಯಲ್‌ಮಿ GT5 ಡಿಸ್‌ಪ್ಲೇ ಪ್ರೊಸೆಸರ್ ಮಾಹಿತಿ: ಈ ರಿಯಲ್‌ಮಿ GT5 ಸ್ಮಾರ್ಟ್‌ಫೋನ್ ಆಕ್ಟಾ ಕೋರ್ ಸ್ನಾಪ್‌ಡ್ರಾಗನ್ 8ಜನ್ 2 4nm ಚಿಪ್‌ಸೆಟ್ ಮೂಲಕ ಕಾರ್ಯನಿರ್ವಹಿಸಲಿದ್ದು, ರಿಯಲ್‌ಮಿ UI 4.0 ಓಎಸ್ ಮತ್ತು ಅಡ್ರಿನೋ 740 GPU ಗ್ರಾಫಿಕ್ಸ್ ಕಾರ್ಡ್ ಸಹ ಹೊಂದಿದೆ. ಇದರೊಂದಿಗೆ ಈ ಫೋನ್ ಆಂಡ್ರಾಯ್ಡ್ 13 ಆಪರೇಟಿಂಗ್ ಸಿಸ್ಟಮ್ ಅನ್ನು ಆಧರಿಸಿದೆ. ಇದರೊಂದಿಗೆ 12GB/16GB/24GB RAM ಮತ್ತು 256GB/512GB/1TB ಇಂಟರ್ಸ್ ಸ್ಟೋರೇಜ್‌ನಲ್ಲಿ ಕಂಡುಬಂದಿದೆ.
ರಿಯಲ್‌ಮಿ GT5 ಕ್ಯಾಮೆರಾ ರಚನೆ: ಇನ್ನು ಈ ವಿಶೇಷ ಸ್ಮಾರ್ಟ್‌ಫೋನ್ ಕ್ಯಾಮೆರಾ ವಿಚಾರಕ್ಕೆ ಬರುವುದಾದರೆ, ಟ್ರಿಪಲ್ ಕ್ಯಾಮೆರಾ ಆಯ್ಕೆ ಪಡೆದಿದ್ದು ಅದರಲ್ಲಿ 50MP ಸೋನಿ IMX890 ಸೆನ್ಸರ್ + 8MP ಅಲ್ಟ್ರಾ ವೈಡ್ ಲೆನ್ಸ್+ 2MP ಮ್ಯಾಕ್ರೋ ಸೆನ್ಸರ್ ಆಯ್ಕೆ ನೀಡಲಾಗಿದೆ. ಇದರೊಂದಿಗೆ ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 16MP ಕ್ಯಾಮೆರಾದೊಂದಿಗೆ ಈ ಫೋನ್ ಕಾಣಿಸಿಕೊಂಡಿದ್ದು, ಎಲ್ಇಡಿ ಫ್ಲ್ಯಾಶ್ ಮತ್ತು ವಿವಿಧ ಕ್ಯಾಮೆರಾ ಫೀಚರ್ಸ್ ಆಯ್ಕೆ ನೀಡಲಾಗಿದೆ.
ರಿಯಲ್‌ಮಿ GT5 ಬ್ಯಾಟರಿ : ಈ ಫೋನ್ 240W ಸೂಪರ್‌ವೂಕ್ ವೇಗದ ಚಾರ್ಜಿಂಗ್‌ನೊಂದಿಗೆ 4600mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 150W ಸೂಪರ್‌ವೂಕ್ ವೇಗದ ಚಾರ್ಜಿಂಗ್ ಮತ್ತು 5240mAh ಬ್ಯಾಟರಿಯೊಂದಿಗೆ ಎರಡು ವೇರಿಯಂಟ್ ಆಯ್ಕೆ ಪಡೆದುಕೊಂಡಿದೆ. ನಿರ್ದಿಷ್ಟವಾಗಿ ಹೇಳುವುದಾದರೆ 240 ವ್ಯಾಟ್‌ಗಳ ಸೂಪರ್‌ವುಕ್ ಫಾಸ್ಟ್ ಚಾರ್ಜಿಂಗ್ ಮಾದರಿಯನ್ನು ಖರೀದಿಸುವ ಬಳಕೆದಾರರು 9 ನಿಮಿಷಗಳಲ್ಲಿ ಫುಲ್ ಚಾರ್ಜ್ ಮಾಡಿಕೊಳ್ಳಬಹುದು. ಹಾಗೆಯೇ 150 ವ್ಯಾಟ್ ಸೂಪರ್‌ವೂಕ್ ಫಾಸ್ಟ್ ಚಾರ್ಜಿಂಗ್ ಆಯ್ಕೆಯಲ್ಲಿ 7 ನಿಮಿಷಗಳಲ್ಲಿ ಬ್ಯಾಟರಿಯನ್ನು 50% ಭರ್ತಿ ಮಾಡಿಕೊಳ್ಳಬಹುದು.
ರಿಯಲ್‌ಮಿ GT5 ಕನೆಕ್ಟಿವಿಟಿ ಹಾಗೂ ಇತರೆ: ಈ ಫೋನ್ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಬೆಂಬಲವನ್ನು ಹೊಂದಿದ್ದು, 5G, 4G VoltE, ವೈ-ಫೈ 7, ಬ್ಲೂಟೂತ್ ಆವೃತ್ತಿ 5.3, ಜಿಪಿಎಸ್, ಎನ್‌ಎಫ್‌ಸಿ, ಯುಎಸ್‌ಬಿ ಟೈಪ್-ಸಿ ಪೋರ್ಟ್ ಸೇರಿದಂತೆ ಅನೇಕ ಕನೆಕ್ಟಿವಿಟಿ ಬೆಂಬಲ ಪಡೆದಿದೆ. ಇದರೊಂದಿಗೆ ರಿಯರ್ ಕ್ಯಾಮೆರಾದ ಬಲಭಾಗದಲ್ಲಿ ಬಾಕ್ಸ್ ಎಲ್ಇಡಿ ಸ್ಟ್ರಿಪ್ ಲೈಟ್ನಿಂಗ್ ಆಯ್ಕೆ ಇದ್ದು, ಮ್ಯೂಸಿಕ್ ಪ್ಲೇ ಆಗುತ್ತಿರುವಾಗ ಎಲ್ಇಡಿಗಳು ಬೆಳಗುತ್ತವೆ.

ರಿಯಲ್‌ಮಿ GT5 ಬೆಲೆ ಹಾಗೂ ಲಭ್ಯತೆ: ರಿಯಲ್‌ಮಿಯ ಈ ಫೋನ್ ಬೆಲೆ 2,999 ಯುವಾನ್‌ನಿಂದ (ಸುಮಾರು 35,000ರೂ.ಗಳು) ನಿಂದ ಪ್ರಾರಂಭವಾಗುತ್ತದೆ. ಅದರಲ್ಲಿ 24GB RAM ಹೊಂದಿರುವ 1TB ಮಾಡೆಲ್‌ಗೆ 3,799 ಯುವಾನ್ (ಸುಮಾರು 43,500ರೂ.ಗಳು) ಹಾಗೂ 16GB RAM ಮತ್ತು 512GB ಸ್ಟೋರೇಜ್ (150W) ಹೊಂದಿರುವ ಮಿಡ್-ವೇರಿಯಂಟ್‌ಗಳ ಬೆಲೆ 3,299 ಯುವಾನ್ (ಸುಮಾರು 37,400ರೂ.ಗಳಾಗಿದೆ). ಈ ಫೋನ್ ಹಸಿರು ಮತ್ತು ಬೆಳ್ಳಿ ಬಣ್ಣದಲ್ಲಿ ಲಭ್ಯ. ಸದ್ಯಕ್ಕೆ ಈ ಫೋನ್ ಚೀನಾದಲ್ಲಿ ಮಾತ್ರ ಲಭ್ಯ ಇದೆ.


Click it and Unblock the Notifications








