ಇಂದು ರಿಯಲ್‌ಮಿ GT 5G ಸ್ಮಾರ್ಟ್‌ಫೋನ್ ಫಸ್ಟ್ ಸೇಲ್:..ಬೆಲೆ ಎಷ್ಟು?
ರಿಯಲ್ ಮಿ ಮೊಬೈಲ್ ಸಂಸ್ಥೆಯ ಬಹುನಿರೀಕ್ಷಿತ ರಿಯಲ್‌ಮಿ GT 5G ಸ್ಮಾರ್ಟ್‌ಫೋನ್ ಬಿಡುಗಡೆ ಆಗಿ ಈಗಾಗಲೇ ಗ್ರಾಹಕರ ಗಮನ ಸೆಳೆದಿದೆ. ಈ ಸ್ಮಾರ್ಟ್‌ಫೋನ್ ಇಂದು (ಆಗಷ್ಟ್ 25) ಜನಪ್ರಿಯ ಇ-ಕಾಮರ್ಸ್ ತಾಣ ಫ್ಲಿಪ್‌ಕಾರ್ಟ್ ಹಾಗೂ ಅಧಿಕೃತ ರಿಯಲ್ ಮಿ ತಾಣದ ಮೂಲಕ ಮೊದಲ ಸೇಲ್ ಆರಂಭಿಸಲಿದೆ. ಇನ್ನು ಈ ಸ್ಮಾರ್ಟ್‌ಫೋನ್ ಸ್ನ್ಯಾಪ್‌ಡ್ರಾಗನ್ 888 SoC ಪ್ರೊಸೆಸರ್ ಬಲವನ್ನು ಪಡೆದಿದೆ.

ಹೌದು, ರಿಯಲ್ ಮಿ ಕಂಪನಿಯ ರಿಯಲ್‌ಮಿ GT 5G ಸ್ಮಾರ್ಟ್‌ಫೋನಿನ ಮೊದಲ ಮಾರಾಟ ಇಂದು ನಡೆಯಲಿದೆ. ಈ ಸ್ಮಾರ್ಟ್‌ಫೋನ್ 4,500mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಸಾಮರ್ಥ್ಯವನ್ನು ಒಳಗೊಂಡಿದೆ. ಇದರೊಂದಿಗೆ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಅಪ್ ಹೊಂದಿದೆ. ಹಾಗೆಯೇ 120Hz ರೀಫ್ರೇಶ್ ರೇಟ್ ಜೊತೆಗೆ AMOLED ಡಿಸ್‌ಪ್ಲೇಯನ್ನು ಪಡೆದಿದೆ. ಇನ್ನುಳಿದಂತೆ ರಿಯಲ್‌ಮಿ GT 5G ಸ್ಮಾರ್ಟ್‌ಫೋನ್ ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ ಮತ್ತು ಬೆಲೆ ಎಷ್ಟು ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಡಿಸ್‌ಪ್ಲೇ ವಿನ್ಯಾಸ
ರಿಯಲ್‌ಮಿ GT 5G ಸ್ಮಾರ್ಟ್‌ಫೋನ್ 1080 x 2400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.43 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಅಮೋಲೆಡ್ ಡಿಸ್‌ಪ್ಲೇ ಹೊಂದಿದೆ. ಇನ್ನು ಈ ಡಿಸ್‌ಪ್ಲೇ 120Hz ರಿಫ್ರೆಶ್ ದರ, 360Hz ಟಚ್ ಸ್ಯಾಂಪ್ಲಿಂಗ್ ದರ ಹೊಂದಿದೆ. ಇದಲ್ಲದೆ ಈ ಡಿಸ್‌ಪ್ಲೇ 91.7% ಸ್ಕ್ರೀನ್-ಟು-ಬಾಡಿ ಅನುಪಾತವನ್ನು ಒಳಗೊಂಡಿದೆ.

ಪ್ರೊಸೆಸರ್ ಯಾವುದು
ರಿಯಲ್‌ಮಿ GT 5G ಸ್ಮಾರ್ಟ್‌ಫೋನ್ ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 888 SoC ಪ್ರೊಸೆಸರ್ ಹೊಂದಿದೆ. ಇದು ಆಂಡ್ರಾಯ್ಡ್ 11 ನಲ್ಲಿ ರಿಯಲ್‌ಮಿ ಯುಐ 2.0 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಜೊತೆಗೆ 12GB RAM ಮತ್ತು 256GB ಇಂಟರ್ ಸ್ಟೋರೇಜ್ ಸಾಮರ್ಥ್ಯವನ್ನು ಪಡೆದುಕೊಂಡಿದೆ.

ಕ್ಯಾಮೆರಾ ವಿಶೇಷ
ರಿಯಲ್‌ಮಿ GT 5G ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸೋನಿ ಐಎಂಎಕ್ಸ್ 682 ಸೆನ್ಸಾರ್, ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಸೆನ್ಸಾರ್ ವೈಡ್ ಆಂಗಲ್ ಲೆನ್ಸ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಶೂಟರ್ ಹೊಂದಿದೆ. ಇದಲ್ಲದೆ 16 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಹೊಂದಿದೆ.

ಬ್ಯಾಟರಿ ಮತ್ತು ಇತರೆ
ರಿಯಲ್‌ಮಿ GT 5G ಸ್ಮಾರ್ಟ್‌ಫೋನ್ 4,500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, ಇದು 65W ಸೂಪರ್‌ಡಾರ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಚಾರ್ಜಿಂಗ್ ತಂತ್ರಜ್ಞಾನವು 35 ನಿಮಿಷಗಳಲ್ಲಿ ಅಂತರ್ನಿರ್ಮಿತ ಬ್ಯಾಟರಿಯನ್ನು ಶೂನ್ಯದಿಂದ 100 ಪ್ರತಿಶತದವರೆಗೆ ಚಾರ್ಜ್ ಮಾಡುತ್ತದೆ ಎಂದು ಹೇಳಲಾಗಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G ಎಲ್ ಟಿಇ, ವೈ-ಫೈ 6, ಬ್ಲೂಟೂತ್, ಜಿಪಿಎಸ್ / ಎ-ಜಿಪಿಎಸ್, ಯುಎಸ್ಬಿ ಟೈಪ್-ಸಿ, ಮತ್ತು 3.5 ಎಂಎಂ ಹೆಡ್‌ಫೋನ್ ಜ್ಯಾಕ್ ಅನ್ನು ಬೆಂಬಲಿಸಲಿದೆ. ಇದು ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್‌ಟ್ ಸೆನ್ಸಾರ್ ಹೊಂದಿದೆ.

ಬೆಲೆ ಮತ್ತು ಲಭ್ಯತೆ
ರಿಯಲ್‌ಮಿ GT 5G 8GB RAM + 128GB ಸ್ಟೋರೇಜ್ ವೇರಿಯಂಟ್ ಆಯ್ಕೆಯ ಬೆಲೆ 37,999ರೂ. ಆಗಿದೆ. ಹಾಗೆಯೇ 12GB + 256GB ಸ್ಟೋರೇಜ್ ವೇರಿಯಂಟ್ ಆಯ್ಕೆಯ 41,999ರೂ.ಗಳು ಆಗಿದೆ. ಇನ್ನು ಈ ಫೋನ್ ಡ್ಯಾಶಿಂಗ್ ಬ್ಲೂ ಮತ್ತು ಡ್ಯಾಶಿಂಗ್ ಸಿಲ್ವರ್ ಬಣ್ಣಗಳ ಆಯ್ಕೆ ಪಡೆದಿದೆ. ಸೇಲ್‌ನಲ್ಲಿ ಆಯ್ದ ಬ್ಯಾಂಕ್‌ಗಳಿಂದ ಆಕರ್ಷಕ ರಿಯಾಯಿತಿ ಸಹ ಸಿಗಲಿದೆ.


Click it and Unblock the Notifications








