ಸ್ನ್ಯಾಪ್‌ಡ್ರಾಗನ್ 7+ ಜೆನ್ 3 ಪ್ರೊಸೆಸರ್ ಇರುವ ಈ ಫೋನ್ ಬೆಲೆಯಲ್ಲಿ ಭಾರೀ ಇಳಿಕೆ!
ಜನಪ್ರಿಯ ಇ ಕಾಮರ್ಸ್ ತಾಣ ಅಮೆಜಾನ್‌ನಲ್ಲಿ ಮೊಬೈಲ್‌ಗಳಿಗೆ ಒಂದಲ್ಲೊಂದು ಡಿಸ್ಕೌಂಟ್ ಲಭ್ಯ ಇರುತ್ತದೆ. ಸದ್ಯ ರಿಯಲ್‌ಮಿ ಮೊಬೈಲ್ ಸಂಸ್ಥೆಯಯ ರಿಯಲ್‌ಮಿ GT 6T (realme GT 6T 5G) ಮೊಬೈಲ್ ಈಗ ಸಖತ್ ರಿಯಾಯಿತಿ ಪಡೆದಿದ್ದು, ಮೀಡ್‌ರೇಂಜ್ ಸ್ಮಾರ್ಟ್‌ಫೋನ್ ಖರೀದಿಸಬೇಕು ಎನ್ನುವ ಗ್ರಾಹಕರಿಗೆ ಭಾರೀ ಸಂತಸ ನೀಡಿದೆ. ಇನ್ನು ಈ ಮೊಬೈಲ್ ಸ್ನ್ಯಾಪ್‌ಡ್ರಾಗನ್ 7+ ಜೆನ್ 3 ಚಿಪ್‌ಸೆಟ್ ಪ್ರೊಸೆಸರ್‌ನಲ್ಲಿ ಕೆಲಸ ಮಾಡಲಿದೆ.
ಹೌದು, ರಿಯಲ್‌ಮಿ GT 6T (realme GT 6T 5G) ಮೊಬೈಲ್ ಶೇ. 9% ರಷ್ಟು ಡಿಸ್ಕೌಂಟ್ ಬೆಲೆಯಲ್ಲಿ ಕಾಣಿಸಿಕೊಂಡಿದೆ. ಈ ಫೋನಿನ 8GB + 128GB ವೇರಿಯಂಟ್ 30,998ರೂ. ಗಳ ಕೊಡುಗೆಯ ದರದಲ್ಲಿ ಖರೀದಿಗೆ ಲಭ್ಯ ಇದೆ. ಇದಲ್ಲದೇ ಆಯ್ದ ಬ್ಯಾಂಕ್‌ಗಳಿಂದ ಇತರೆ ಡಿಸ್ಕೌಂಟ್ ಕೂಡಾ ಲಭ್ಯ ಆಗಲಿದೆ.

ಹಾಗೆಯೇ ರಿಯಲ್‌ಮಿ GT 6T ಮೊಬೈಲ್ ಡ್ಯುಯಲ್ ಕ್ಯಾಮೆರಾ ರಚನೆ ಅನ್ನು ಪಡೆದಿದ್ದು, ಇದರ ಪ್ರಾಥಮಿಕ ಕ್ಯಾಮೆರಾವು 50 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದಲ್ಲಿ ಇದೆ. ಇದರ ಜೊತೆಗೆ 8GB + 128GB, 8GB + 256GB ಹಾಗೂ 12GB + 256GB ಸ್ಟೋರೇಜ್ ವೇರಿಯಂಟ್ ಆಯ್ಕೆಗಳನ್ನು ಪಡೆದಿದೆ. ಇನ್ನುಳಿದಂತೆ ರಿಯಲ್‌ಮಿ GT 6T ಮೊಬೈಲ್‌ನ ಇತರೆ ಫೀಚರ್ಸ್ ಹಾಗೂ ಬೆಲೆ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ರಿಯಲ್‌ಮಿ GT 6T - ಫೀಚರ್ಸ್ ಮಾಹಿತಿ
ರಿಯಲ್‌ಮಿ GT 6T ಫೋನ್ 6.78 ಇಂಚಿನ 3D LTPO AMOLED ಡಿಸ್‌ಪ್ಲೇ ಅನ್ನು ಒಳಗೊಂಡಿದ್ದು, ಇದರ ಡಿಸ್‌ಪ್ಲೇಯು 2,789 x 1,264 ಪಿಕ್ಸಲ್ ರೆಸಲ್ಯೂಶನ್ ಸೌಲಭ್ಯ ಪಡೆದಿದೆ. ಹಾಗೆಯೇ ಈ ಫೋನಿನ 6000 nits ಪೀಕ್ ಬ್ರೈಟ್ನೆಸ್, 120Hz ರಿಫ್ರೆಶ್ ರೇಟ್ ಸೌಲಭ್ಯ ಜೊತೆಗೆ ಗೊರಿಲ್ಲಾ ಗ್ಲಾಸ್ ವಿಕ್ಟಸ್ ಪ್ರೊಟೆಕ್ಷನ್ ಸೌಲಭ್ಯ ಸಹ ಕಾಣಬಹುದಾಗಿದೆ
ರಿಯಲ್‌ಮಿ GT 6T ಮೊಬೈಲ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 7+ ಜೆನ್ 3 ಚಿಪ್‌ಸೆಟ್ ಪ್ರೊಸೆಸರ್ ಬಲದಲ್ಲಿ ಕೆಲಸ ಮಾಡಲಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 14 ಓಎಸ್ ಸಪೋರ್ಟ್ ಸಹ ಇದೆ. ಅಲ್ಲದೇ ಈ ಫೋನ್ 8GB + 128GB, 8GB + 256GB ಹಾಗೂ 12GB + 256GB ಸ್ಟೋರೇಜ್ ವೇರಿಯಂಟ್ ಆಯ್ಕೆ ಪಡೆದಿದೆ. ಜೊತೆಗೆ Adreno 732 GPU ಸಪೋರ್ಟ್ ಸಹ ಇದೆ.
ರಿಯಲ್‌ಮಿ GT 6T ಫೋನ್ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ರಚನೆ ಅನ್ನು ಹೊಂದಿದ್ದು, ಇದರ ಮುಖ್ಯ ಕ್ಯಾಮೆರಾವು 50 ಮೆಗಾ ಪಿಕ್ಸೆಲ್ ಸೆನ್ಸಾರ್ ಸೌಲಭ್ಯ ಪಡೆದಿದೆ. ಇನ್ನು ದ್ವಿತೀಯ ಕ್ಯಾಮೆರಾವು 8 ಮೆಗಾ ಪಿಕ್ಸೆಲ್ ಸೆನ್ಸಾರ್ ಸೌಲಭ್ಯ ಒಳಗೊಂಡಿದೆ. ಇನ್ನು ಈ ಫೋನಿನ ಸೆಲ್ಫಿ ಕ್ಯಾಮೆರಾ 32 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯ ಪಡೆದುಕೊಂಡಿದೆ.
ರಿಯಲ್‌ಮಿ GT 6T ಮೊಬೈಲ್ 5,500mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಸೌಲಭ್ಯ ಹೊಂದಿದ್ದು, ಇದರ ಜೊತೆಗೆ 120W ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಹೊಂದಿದೆ. ಹಾಗೆಯೇ 5G, GPS, Wi-Fi 6, ಬ್ಲೂಟೂತ್ 5.2, ಮತ್ತು USB 2.0 ಟೈಪ್ - C ಪೋರ್ಟ್ ಆಯ್ಕೆಗಳು ಕೂಡಾ ಲಭ್ಯ. ಇನ್ನು ಈ ಫೋನ್ ರೇಜರ್ ಗ್ರೀನ್ ಹಾಗೂ ಸಿಲ್ವರ್ ಕಲರ್ ಆಯ್ಕೆಯಲ್ಲಿ ಖರೀದಿಗೆ ಲಭ್ಯ.


Click it and Unblock the Notifications








