ಇನ್ನು ಕೆಲವೇ ದಿನಗಳಲ್ಲಿ ರಿಯಲ್‌ಮಿ GT 6T ಖರೀದಿಗೆ ಲಭ್ಯ; ಆಫರ್ ಸಹ ಸಿಗುತ್ತೆ?
ರಿಯಲ್‌ಮಿ ಮೊಬೈಲ್ ಮೀಡ್‌ರೇಂಜ್‌ನಲ್ಲಿ ಹೊಸದಾಗಿ ಬಿಡುಗಡೆ ಮಾಡಿರುವ ರಿಯಲ್‌ಮಿ GT 6T ಮೊಬೈಲ್ ಆಕರ್ಷಕ ಫೀಚರ್ಸ್‌ಗಳಿಂದ ಗಮನ ಸೆಳೆದಿದೆ. ಅಂದಹಾಗೆ ಈ ಫೋನಿನ ಪ್ರಥಮ ಮಾರಾಟ ಇದೇ ಮೇ 29 ರಂದು ಮಧ್ಯಾಹ್ನ 12 ಗಂಟೆಗೆ ಅಮೆಜಾನ್ ಇ ಕಾಮರ್ಸ್ ತಾಣದ ಮೂಲಕ ಪ್ರಾರಂಭ ಆಗಲಿದೆ.
ಹೌದು, ರಿಯಲ್‌ಮಿ ಸಂಸ್ಥೆಯ ರಿಯಲ್‌ಮಿ GT 6T ಸ್ಮಾರ್ಟ್‌ಫೋನ್ ಅಮೆಜಾನ್ ಇ ಕಾಮರ್ಸ್ ಮೂಲಕ ಮೇ 29 ರಂದು ಸೇಲ್ ಶುರು ಆಗಲಿದೆ. ಈ ಫೋನ್ ಸ್ನ್ಯಾಪ್‌ಡ್ರಾಗನ್ 7+ ಜೆನ್ 3 ಚಿಪ್‌ಸೆಟ್ ಪ್ರೊಸೆಸರ್ ಪವರ್ ಪಡೆದಿದ್ದು, ಇದರೊಂದಿಗೆ 50 ಮೆಗಾ ಪಿಕ್ಸೆಲ್ ಸೆನ್ಸಾರ್ ಮುಖ್ಯ ಕ್ಯಾಮೆರಾ ರಚನೆ ಸಹ ಒಳಗೊಂಡಿದೆ.

ಇನ್ನು ಹೊಸ 5G ಮೊಬೈಲ್ 5,500mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಸೌಲಭ್ಯ ಪಡೆದಿದ್ದು, 8GB + 128GB, 8GB + 256GB ಹಾಗೂ 12GB + 256GB ಸ್ಟೋರೇಜ್ ವೇರಿಯಂಟ್ ಆಯ್ಕೆಗಳನ್ನು ಪಡೆದುಕೊಂಡಿದೆ. ಇನ್ನುಳಿದಂತೆ ರಿಯಲ್‌ಮಿ GT 6T ಮೊಬೈಲ್ ಇತರೆ ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ ಓದಿರಿ.
ರಿಯಲ್‌ಮಿ GT 6T ಫೀಚರ್ಸ್ ಹೀಗಿವೆ
ರಿಯಲ್‌ಮಿ GT 6T ಫೋನ್ 6.78 ಇಂಚಿನ 3D LTPO AMOLED ಡಿಸ್‌ಪ್ಲೇ ಅನ್ನು ಒಳಗೊಂಡಿದ್ದು, ಇದರ ಡಿಸ್‌ಪ್ಲೇಯು 2,789 x 1,264 ಪಿಕ್ಸಲ್ ರೆಸಲ್ಯೂಶನ್ ಸೌಲಭ್ಯ ಪಡೆದಿದೆ. ಹಾಗೆಯೇ ಈ ಫೋನಿನ 6000 nits ಪೀಕ್ ಬ್ರೈಟ್ನೆಸ್, 120Hz ರಿಫ್ರೆಶ್ ರೇಟ್ ಸೌಲಭ್ಯ ಜೊತೆಗೆ ಗೊರಿಲ್ಲಾ ಗ್ಲಾಸ್ ವಿಕ್ಟಸ್ ಪ್ರೊಟೆಕ್ಷನ್ ಸೌಲಭ್ಯ ಸಹ ಕಾಣಬಹುದಾಗಿದೆ
ರಿಯಲ್‌ಮಿ GT 6T ಮೊಬೈಲ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 7+ ಜೆನ್ 3 ಚಿಪ್‌ಸೆಟ್ ಪ್ರೊಸೆಸರ್ ಪವರ್‌ನಲ್ಲಿ ಕೆಲಸ ಮಾಡಲಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 14 ಓಎಸ್ ಸಪೋರ್ಟ್ ಕೂಡಾ ಇದೆ. ಅಲ್ಲದೇ ಈ ಫೋನ್ 8GB + 128GB, 8GB + 256GB ಹಾಗೂ 12GB + 256GB ಸ್ಟೋರೇಜ್ ವೇರಿಯಂಟ್ ಆಯ್ಕೆ ಒಳಗೊಂಡಿದೆ. ಜೊತೆಗೆ Adreno 732 GPU ಸಪೋರ್ಟ್ ಕಾಣಬಹುದಾಗಿದೆ
ರಿಯಲ್‌ಮಿ GT 6T ಫೋನ್ ಡ್ಯುಯಲ್ ಕ್ಯಾಮೆರಾ ರಚನೆ ಅನ್ನು ಹೊಂದಿದ್ದು, ಇದರ ಮೊದಲ ಕ್ಯಾಮೆರಾವು 50 ಮೆಗಾ ಪಿಕ್ಸೆಲ್ ಸೆನ್ಸಾರ್ ಸೌಲಭ್ಯದಲ್ಲಿ ಇದೆ. ಇನ್ನು ಎರಡನೇ ಕ್ಯಾಮೆರಾವು 8 ಮೆಗಾ ಪಿಕ್ಸೆಲ್ ಸೆನ್ಸಾರ್ ಸೌಲಭ್ಯ ಒಳಗೊಂಡಿದೆ. ಇನ್ನು ಈ ಫೋನಿನ ಸೆಲ್ಫಿ ಕ್ಯಾಮೆರಾ 32 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯ ಪಡೆದುಕೊಂಡಿದೆ.
ರಿಯಲ್‌ಮಿ GT 6T ಮೊಬೈಲ್ 5,500mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಸೌಲಭ್ಯ ಹೊಂದಿದ್ದು, ಇದಕ್ಕೆ ಸಪೋರ್ಟ್ ಆಗಿ 120W ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಹೊಂದಿದೆ. ಹಾಗೆಯೇ 5G, GPS, Wi-Fi 6, ಬ್ಲೂಟೂತ್ 5.2, ಮತ್ತು USB 2.0 ಟೈಪ್ - C ಪೋರ್ಟ್ ಆಯ್ಕೆಗಳು ಕೂಡಾ ಲಭ್ಯ.
ಬೆಲೆ ಎಷ್ಟು
8GB + 128GB ಬೆಲೆ 30,999ರೂ. ಆಗಿದೆ
8GB + 256GB ಬೆಲೆ 32,999ರೂ. ಆಗಿದೆ
12GB + 256GB ಬೆಲೆ 35,999ರೂ. ಆಗಿದೆ
12GB + 512GB ಬೆಲೆ 39,999ರೂ. ಆಗಿದೆ
ಲಾಂಚ್ ಆಫರ್: ಬ್ಯಾಂಕ್ ಆಫರ್ ಹೀಗಿದೆ
8GB + 128GB ವೇರಿಯಂಟ್ 24,999ರೂ. ಗಳಿಗೆ ಲಭ್ಯ
8GB + 256GB ವೇರಿಯಂಟ್ 26,999ರೂ. ಗಳಿಗೆ ಲಭ್ಯ
12GB + 256GB ವೇರಿಯಂಟ್ 29999ರೂ. ಗಳಿಗೆ ಲಭ್ಯ
12GB + 512GB ವೇರಿಯಂಟ್ 33999ರೂ. ಗಳಿಗೆ ಲಭ್ಯ


Click it and Unblock the Notifications








