ಇದೇ ಆಗಷ್ಟ 26ರಂದು ರಿಯಲ್‌ಮಿ GT ಮಾಸ್ಟರ್ ಎಡಿಷನ್ ಫೋನಿನ ಫಸ್ಟ್ ಸೇಲ್!
ಪ್ರತಿಷ್ಠಿತ ಮೊಬೈಲ್ ಬ್ರ್ಯಾಂಡ್‌ಗಳ ಪೈಕಿ ಒಂದಾದ ರಿಯಲ್ ಮಿ ಸಂಸ್ಥೆಯು ಭಿನ್ನ ಶ್ರೇಣಿಯ ಫೋನ್‌ಗಳ ಮೂಲಕ ಗ್ರಾಹಕರನ್ನು ಸೆಳೆದಿದೆ. ಕಂಪನಿಯು ಇತ್ತೀಚಿಗಷ್ಟೆ ಬಿಡುಗಡೆ ಮಾಡಿರುವ ಹೊಸ ರಿಯಲ್‌ಮಿ GT ಮಾಸ್ಟರ್ ಎಡಿಷನ್ ಫೋನ್ ಉನ್ನತ ಫೀಚರ್ಸ್‌ಗಳಿಂದ ಗ್ರಾಹಕರನ್ನು ಆಕರ್ಷಿಸಿದೆ. ಇದೇ ಆಗಷ್ಟ 26ರಂದು ರಿಯಲ್‌ಮಿ GT ಮಾಸ್ಟರ್ ಎಡಿಷನ್ ಫೋನಿನ ಫಸ್ಟ್ ಸೇಲ್ ಪ್ರಾರಂಭಿಸುವುದಾಗಿ ಕಂಪನಿಯು ಟ್ವಿಟ್ಟ್ ಮೂಲಕ ತಿಳಿಸಿದೆ.

ಹೌದು, ರಿಯಲ್ ಮಿ ಕಂಪನಿಯ ರಿಯಲ್‌ಮಿ GT ಮಾಸ್ಟರ್ ಎಡಿಷನ್ ಫೋನ್ ಮೊದಲ ಮಾರಾಟ ಇದೇ ಆ.26ರಂದು ನಡೆಯಲಿದೆ. ಸೂಟ್‌ಕೇಸ್ ಶೈಲಿಯ ಲೆದರ್ ಬ್ಯಾಕ್ ಪ್ಯಾನೆಲ್ ರಚನೆ ಹೊಂದಿರುವ ಈ ಸ್ಮಾರ್ಟ್‌ಫೋನ್ ಹೈ ಎಂಡ್ ಫೀಚರ್ಸ್‌ಗಳನ್ನು ಹೊಂದಿದೆ. ಸ್ನ್ಯಾಪ್‌ಡ್ರಾಗನ್ 778G 5G ಪ್ರೊಸೆಸರ್ ಇದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 11 ಓಎಸ್ ಸಪೋರ್ಟ್ ಪಡೆದಿದೆ. ಹಾಗಾದರೇ ರಿಯಲ್‌ಮಿ GT ಮಾಸ್ಟರ್ ಎಡಿಷನ್ ಫೋನಿನ ಬೆಲೆ ಎಷ್ಟು?..ಇತರೆ ಫೀಚರ್ಸ್‌ಗಳೆನು ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ
ರಿಯಲ್‌ಮಿ GT ಮಾಸ್ಟರ್ ಎಡಿಶನ್ ಫೋನ್ ಅಧಿಕ ಪಿಕ್ಸಲ್ ರೆಸಲ್ಯೂಶನ್ ಬೆಂಬಲದೊಂದಿಗೆ 6.43-ಇಂಚಿನ ಫುಲ್ ಹೆಚ್‌ಡಿ+ಡಿಸ್‌ಪ್ಲೇ ಹೊಂದಿದೆ. ಹಾಗೆಯೇ ಇದು 120Hz ರಿಫ್ರೆಶ್ ರೇಟ್ ಅನ್ನು ಹೊಂದಿದೆ.

ಪ್ರೊಸೆಸರ್ ಯಾವುದು
ರಿಯಲ್‌ಮಿ GT ಮಾಸ್ಟರ್ ಎಡಿಷನ್ ಫೋನ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 778 SoC ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 11 ಓಎಸ್ ಸಪೋರ್ಟ್ ಇದೆ. ಹಾಗೆಯೇ 8GB ವರೆಗೆ RAM ಮತ್ತು 256GB ವರೆಗೆ ಸಂಗ್ರಹವನ್ನು ಹೊಂದಿದೆ.

ಕ್ಯಾಮೆರಾ ಸೆನ್ಸಾರ್
ರಿಯಲ್‌ಮಿ GT ಮಾಸ್ಟರ್ ಎಡಿಷನ್ ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಪಡೆದಿದೆ. ಮುಖ್ಯ ಕ್ಯಾಮೆರಾವು 64 ಮೆಗಾ ಪಿಕ್ಸೆಲ್ ಪ್ರಾಥಮಿಕ ಸಂವೇದಕ, ಸೆಕೆಂಡರಿ ಕ್ಯಾಮೆರಾವು ಎಫ್ / 2.2 ಲೆನ್ಸ್ ಹೊಂದಿರುವ 8 ಮೆಗಾ ಪಿಕ್ಸೆಲ್ ಸಂವೇದಕ ಮತ್ತು ತೃತೀಯ ಕ್ಯಾಮೆರಾವು 2 ಮೆಗಾ ಪಿಕ್ಸೆಲ್ ಸಂವೇದಕ ಪಡೆದಿದೆ. ಮುಂಭಾಗದಲ್ಲಿ 32 ಮೆಗಾ ಪಿಕ್ಸೆಲ್ ಸೆಲ್ಫಿ ಶೂಟರ್ ಅನ್ನು ಎಫ್ / 2.5 ಅಪರ್ಚರ್ ಹೊಂದಿದೆ.

ಬ್ಯಾಟರಿ ಪವರ್
ರಿಯಲ್‌ಮಿ GT ಮಾಸ್ಟರ್ ಎಡಿಷನ್ ಫೋನ್ 4,300mAh ಬ್ಯಾಟರಿ ಬ್ಯಾಕ್‌ಅಪ್ ಅನ್ನು ಪಡೆದಿದೆ. ಹಾಗೆಯೇ ಇದರೊಂದಿಗೆ 65W ಸೂಪರ್ ಡಾರ್ಟ್ ಚಾರ್ಜ್ ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi 6, ಬ್ಲೂಟೂತ್, GPS/ A-GPS, NFC, ಮತ್ತು USB Type-C ಪೋರ್ಟ್ ಅನ್ನು ಬೆಂಬಲಿಸಲಿದೆ.

ಬೆಲೆ ಮತ್ತು ಲಭ್ಯತೆ
ರಿಯಲ್‌ಮಿ GT ಮಾಸ್ಟರ್ ಎಡಿಶನ್ ಸ್ಮಾರ್ಟ್‌ಫೋನ್ 6GB + 128GB ಸ್ಟೋರೇಜ್ ರೂಪಾಂತರಕ್ಕೆ 25,999.ರೂ ಹಾಗೂ 8GB + 128GB ಆಯ್ಕೆಗೆ 27,999 ರೂ, ಮತ್ತು 8GB + 256GB ಸ್ಟೋರೇಜ್ ಆಯ್ಕೆಗೆ 29,999ರೂ, ಬೆಲೆಯನ್ನು ಹೊಂದಿದೆ. ಈ ಫೋನ್ ಕಾಸ್ಮೋಸ್ ಬ್ಲೂ ಮತ್ತು ಲೂನಾ ವೈಟ್ ಬಣ್ಣಗಳನ್ನು ಹೊಂದಿದೆ.


Click it and Unblock the Notifications








