ರಿಯಲ್‌ಮಿ GT ಮಾಸ್ಟರ್ ಎಡಿಷನ್‌ ಫೋನ್ ಲಾಂಚ್!..ಬೆಲೆ ಎಷ್ಟು?

|

ರಿಯಲ್‌ ಮಿ ಸಂಸ್ಥೆಯು ತನ್ನ ಇತ್ತೀಚಿಗಿನ GT ಸರಣಿಯಲ್ಲಿ ಈಗ ಹೊಸದಾಗಿ ರಿಯಲ್‌ಮಿ GT ಮಾಸ್ಟರ್ ಎಕ್ಸ್‌ಪ್ಲೋರರ್ ಎಡಿಷನ್‌ ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಿದೆ. ಈ ಫೋನ್ ಸೂಟ್‌ಕೇಸ್ ಶೈಲಿಯ ಲೆದರ್ ಬ್ಯಾಕ್ ಪ್ಯಾನೆಲ್‌ನೊಂದಿಗೆ ಬರುತ್ತದೆ. ಹಾಗೆಯೇ 65W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ಈ ಫೋನ್ 4,500mAh ಸಾಮರ್ಥ್ಯದ ಬ್ಯಾಟರಿ ಬಾಳಿಕೆಯನ್ನು ಪಡೆದಿದ್ದು, ಪ್ರಮುಖ ಹೈಲೈಟ್‌ ಆಗಿದೆ.

ರಿಯಲ್‌ಮಿ

ಹೌದು, ರಿಯಲ್‌ ಮಿ ಕಂಪನಿಯು ರಿಯಲ್‌ಮಿ GT ಮಾಸ್ಟರ್ ಎಕ್ಸ್‌ಪ್ಲೋರರ್ ಎಡಿಷನ್‌ ಹಾಗೂ ರಿಯಲ್‌ಮಿ GT ಮಾಸ್ಟರ್ ಎಡಿಷನ್‌ ಮಾಡೆಲ್‌ಗಳಲ್ಲಿ ಸ್ಮಾರ್ಟ್‌ಫೋನ್‌ ಅನ್ನು ಚೀನಾದಲ್ಲಿ ಲಾಂಚ್ ಮಾಡಿದೆ. ಈ ಮಾಡೆಲ್‌ಗಳು 6GB + 128GB, 8GB + 128GB ಮತ್ತು 12GB + 256GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆಗಳನ್ನು ಒಳಗೊಂಡಿವೆ. ಹಾಗೆಯೇ ಈ ಫೋನ್‌ಗಳು ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ ಪ್ರೊಸೆಸರ್‌ ಜೊತೆಗೆ ಆಂಡ್ರಾಯ್ಡ್‌ 11 ಓಎಸ್‌ ಸಪೋರ್ಟ್‌ ಪಡೆದಿವೆ. ಹಾಗಾದರೇ ರಿಯಲ್‌ಮಿ GT ಹೊಸ ಎಡಿಷನ್‌ಗಳ ಇತರೆ ಫೀಚರ್ಸ್‌ಗಳು ಹೇಗಿವೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ರಿಯಲ್‌ಮಿ GT ಮಾಸ್ಟರ್ ಎಕ್ಸ್‌ಪ್ಲೋರರ್ ಎಡಿಷನ್ ಫೀಚರ್ಸ್‌

ರಿಯಲ್‌ಮಿ GT ಮಾಸ್ಟರ್ ಎಕ್ಸ್‌ಪ್ಲೋರರ್ ಎಡಿಷನ್ ಫೀಚರ್ಸ್‌

ರಿಯಲ್‌ಮಿ GT ಮಾಸ್ಟರ್ ಎಕ್ಸ್‌ಪ್ಲೋರರ್ ಎಡಿಷನ್ ಆಂಡ್ರಾಯ್ಡ್ 11 ಅನ್ನು ರಿಯಲ್‌ಮಿ ಯುಐ 2.0 ನೊಂದಿಗೆ ಚಾಲನೆ ಮಾಡುತ್ತದೆ. ಇದು 120Hz ರಿಫ್ರೆಶ್ ದರ ಮತ್ತು 480Hz ಟಚ್ ಸ್ಯಾಂಪ್ಲಿಂಗ್ ದರವನ್ನು ಹೊಂದಿದೆ. ಇನ್ನು ಈ ಫೋನ್ 6.55-ಇಂಚಿನ ಪೂರ್ಣ ಹೆಚ್‌ಡಿ + ಸೂಪರ್ ಅಮೋಲೆಡ್ ಡಿಸ್‌ಪ್ಲೇಯನ್ನು ಹೊಂದಿದೆ. ಹಾಗೆಯೇ 1,100 ನಿಟ್‌ಗಳ ಗರಿಷ್ಠ ಬ್ರೈಟ್ನೆಸ್‌ ಪಡೆದಿದೆ. ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 870 SoC ಪ್ರೊಸೆಸರ್‌ ಹೊಂದಿದೆ. 12GB RAM ಮತ್ತು 256GB ವೇರಿಯಂಟ್ ಆಯ್ಕೆ ಪಡೆದಿದೆ.

ಎಕ್ಸ್‌ಪ್ಲೋರರ್

ರಿಯಲ್‌ಮಿ GT ಮಾಸ್ಟರ್ ಎಕ್ಸ್‌ಪ್ಲೋರರ್ ಎಡಿಷನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಅಪ್‌ನೊಂದಿಗೆ ಬರುತ್ತದೆ. ಇದರಲ್ಲಿ 50 ಮೆಗಾಪಿಕ್ಸೆಲ್ ಸೋನಿ ಐಎಂಎಕ್ಸ್ 766 ಪ್ರಾಥಮಿಕ ಸಂವೇದಕ, 16 ಮೆಗಾಪಿಕ್ಸೆಲ್ ಸೋನಿ ಐಎಂಎಕ್ಸ್ 481 ಸಂವೇದಕ ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಮತ್ತು ಮ್ಯಾಕ್ರೋ ಶೂಟರ್ ಒಳಗೊಂಡಿದೆ. ಮುಂಭಾಗದಲ್ಲಿ, ಸೆಲ್ಫಿಗಾಗಿ ಮತ್ತು ವೀಡಿಯೊ ಕರೆಗಳಿಗಾಗಿ 32 ಮೆಗಾಪಿಕ್ಸೆಲ್ ಸೋನಿ ಐಎಂಎಕ್ಸ್ 615 ಸಂವೇದಕವಿದೆ. ಹಾಗೆಯೇ 4,500mAh ಬ್ಯಾಟರಿ ಬ್ಯಾಕ್‌ಅಪ್‌ ಪಡೆದಿದ್ದು, 65W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.

ರಿಯಲ್‌ಮಿ GT ಮಾಸ್ಟರ್ ಎಡಿಷನ್‌ ಫೀಚರ್ಸ್‌

ರಿಯಲ್‌ಮಿ GT ಮಾಸ್ಟರ್ ಎಡಿಷನ್‌ ಫೀಚರ್ಸ್‌

ರಿಯಲ್‌ಮಿ GT ಮಾಸ್ಟರ್ ಎಡಿಷನ್‌ ಆಂಡ್ರಾಯ್ಡ್ 11 ಅನ್ನು ರಿಯಲ್ಮೆ ಯುಐ 2.0 ನೊಂದಿಗೆ ಚಾಲನೆ ಮಾಡುತ್ತದೆ. ಇದು 120Hz ರಿಫ್ರೆಶ್ ದರ, 360Hz ಟಚ್ ಸ್ಯಾಂಪ್ಲಿಂಗ್ ದರ ಹೊಂದಿದೆ. 6.43-ಇಂಚಿನ ಪೂರ್ಣ ಹೆಚ್‌ಡಿ + ಸೂಪರ್ ಅಮೋಲೆಡ್ ಡಿಸ್ಪ್ಲೇ ಹೊಂದಿದೆ. ಈ ಫೋನ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 778 SoC ನಿಂದ ನಿಯಂತ್ರಿಸಲ್ಪಡುತ್ತದೆ. ಹಾಗೆಯೇ 8GB ವರೆಗೆ RAM ಮತ್ತು 256GB ವರೆಗೆ ಸಂಗ್ರಹವನ್ನು ಹೊಂದಿದೆ.

ಮೆಗಾಪಿಕ್ಸೆಲ್

ಫೋಟೋಗಳು ಮತ್ತು ವೀಡಿಯೊಗಳಿಗಾಗಿ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್‌ ಪಡೆದಿದೆ. ಮುಖ್ಯ ಕ್ಯಾಮೆರಾವು 64 ಮೆಗಾಪಿಕ್ಸೆಲ್ ಪ್ರಾಥಮಿಕ ಸಂವೇದಕ, ಸೆಕೆಂಡರಿ ಕ್ಯಾಮೆರಾವು ಎಫ್ / 2.2 ಲೆನ್ಸ್ ಹೊಂದಿರುವ 8 ಮೆಗಾಪಿಕ್ಸೆಲ್ ಸಂವೇದಕ ಮತ್ತು ತೃತೀಯ ಕ್ಯಾಮೆರಾವು 2 ಮೆಗಾಪಿಕ್ಸೆಲ್ ಸಂವೇದಕ ಪಡೆದಿದೆ. ಮುಂಭಾಗದಲ್ಲಿ 32 ಮೆಗಾಪಿಕ್ಸೆಲ್ ಸೆಲ್ಫಿ ಶೂಟರ್ ಅನ್ನು ಎಫ್ / 2.5 ಅಪರ್ಚರ್ ಹೊಂದಿದೆ. ಇದರೊಂದಿಗೆ 65W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುವ 4,300mAh ಬ್ಯಾಟರಿಯಿಂದ ಫೋನ್ ಬೆಂಬಲಿತವಾಗಿದೆ.

Best Mobiles in India

English summary
Realme GT Master Explorer Edition features a 50-megapixel Sony IMX766 primary sensor that is accompanied by an ultra-wide and a macro shooter.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X