Realmeಯಿಂದ ಎರಡು ಹೊಸ ಫೋನ್ ಲಾಂಚ್!..ಟ್ರಿಪಲ್ ಕ್ಯಾಮೆರಾ ಹೈಲೈಟ್!
ಇತ್ತೀಚಿಗಷ್ಟೆ ರಿಯಲ್ ಮಿ ಸಂಸ್ಥೆಯು ತನ್ನ 'ರಿಯಲ್‌ಮಿ GT ನಿಯೋ' ಸ್ಮಾರ್ಟ್‌ಫೋನ್ ಸರಣಿ ಬಿಡುಗಡೆ ಮಾಡಿ ಭಾರೀ ಸದ್ದು ಮಾಡಿತ್ತು. ಅದರ ಬೆನ್ನಲ್ಲೇ ಈಗ ಹೊಸದಾಗಿ ಮತ್ತೆರಡು ಸ್ಮಾರ್ಟ್‌ಫೋನ್ ಲಾಂಚ್ ಮಾಡಿದೆ. ಅವುಗಳು ಕ್ರಮವಾಗಿ 'ರಿಯಲ್‌ಮಿ GT ನಿಯೋ 2T' ಮತ್ತು 'ರಿಯಲ್‌ಮಿ Q3s' ಸ್ಮಾರ್ಟ್‌ಫೋನ್ ಆಗಿವೆ. ಈ ಎರಡು ಫೋನ್‌ಗಳು ಆಕರ್ಷಕ ಫೀಚರ್ಸ್‌ಗಳನ್ನು ಒಳಗೊಂಡಿದ್ದು, ಗ್ರಾಹಕರನ್ನು ಸೆಳೆದಿವೆ.

ಹೌದು, ರಿಯಲ್‌ಮಿ ಕಂಪನಿಯು ಚೀನಾ ಮಾರುಕಟ್ಟೆಯಲ್ಲಿ ತನ್ನ 'ರಿಯಲ್‌ಮಿ GT ನಿಯೋ 2T' ಮತ್ತು 'ರಿಯಲ್‌ಮಿ Q3s' ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡಿದೆ. ರಿಯಲ್‌ಮಿ GT ನಿಯೋ 2T ಫೋನ್ ಮೀಡಿಯಾ ಟೆಕ್ Dimensity 1200 SoC ಪ್ರೊಸೆಸರ್ ಹೊಂದಿದ್ದು, ರಿಯಲ್‌ಮಿ Q3s ಫೋನ್ ಸ್ನ್ಯಾಪ್‌ಡ್ರಾಗನ್ 778G SoC ಪ್ರೊಸೆಸರ್ ಬಲ ಪಡೆದಿದೆ. ಇನ್ನುಳಿದಂತೆ ಈ ಎರಡು ಸ್ಮಾರ್ಟ್‌ಫೋನ್ ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ರಿಯಲ್‌ಮಿ GT ನಿಯೋ 2T ಫೀಚರ್ಸ್
ರಿಯಲ್‌ಮಿ GT ನಿಯೋ 2T ಸ್ಮಾರ್ಟ್‌ಫೋನ್ ಅಧಿಕ ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದಿದೆ. ಹಾಗೆಯೇ 6.43 ಇಂಚಿನ OLED ಡಿಸ್‌ಪ್ಲೇಯನ್ನು ಹೊಂದಿದೆ. ಡಿಸ್‌ಪ್ಲೇ 120Hz ರೀಫ್ರೇಶ್ ರೇಟ್ ಹೊಂದಿದ್ದು, DCI-P3 ವೈಡ್ ಕಲರ್ ಹರವು ಹೊಂದಿದೆ. ಹಾಗೆಯೇ ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 1200 SoC ಪ್ರೊಸೆಸರ್ ಬಲವನ್ನು ಒಳಗೊಂಡಿದ್ದು, ಆಂಡ್ರಾಯ್ಡ್ 11 ಓಎಸ್ ಸಪೋರ್ಟ್ ಪಡೆದಿದೆ. ಜೊತೆಗೆ 8GB RAM + 128GB, 8GB RAM + 256GB ಮತ್ತು 12GB RAM + 256GB ಸ್ಟೋರೇಜ್ ವೇರಿಯಂಟ್ ಆಯ್ಕೆಗಳನ್ನು ಹೊಂದಿದೆ. ಈ ಫೋನ್ ಟ್ರಿಪಲ್ ಕ್ಯಾಮೆರಾ ರಚನೆಯನ್ನು ಹೊಂದಿದ್ದು, ಮುಖ್ಯ ಕ್ಯಾಮೆರಾವು 64 ಮೆಗಾ ಪಿಕ್ಸಲ್ ಸೆನ್ಸಾರ್ ಪಡೆದಿದೆ. ಹಾಗೆಯೇ ಈ ಫೋನ್ 4,500mAh ಬ್ಯಾಟರಿ ಬ್ಯಾಕ್‌ಅಪ್ ಅನ್ನು ಹೊಂದಿದ್ದು, ಅದಕ್ಕೆ ಪೂರಕವಾಗಿ 65W ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಒಳಗೊಂಡಿದೆ.

ರಿಯಲ್‌ಮಿ Q3s ಫೀಚರ್ಸ್
ರಿಯಲ್‌ಮಿ Q3s ಸ್ಮಾರ್ಟ್‌ಫೋನ್ 1,080x2,412 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದಿದೆ. ಹಾಗೆಯೇ 6.6 ಇಂಚಿನ ಪೂರ್ಣ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದೆ. ಡಿಸ್‌ಪ್ಲೇ 144Hz ರೀಫ್ರೇಶ್ ರೇಟ್ ಹೊಂದಿದ್ದು, 600 ನಿಟ್ಸ್ ಬ್ರೈಟ್ನೆಸ್ ಒಳಗೊಂಡಿದೆ. ಹಾಗೆಯೇ ಇದು ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 778G SoC ಪ್ರೊಸೆಸರ್ ಬಲವನ್ನು ಒಳಗೊಂಡಿದ್ದು, ಆಂಡ್ರಾಯ್ಡ್ 11 ಓಎಸ್ ಸಪೋರ್ಟ್ ಪಡೆದಿದೆ. ಜೊತೆಗೆ 6GB RAM + 128GB, 8GB RAM + 128GB ಮತ್ತು 8GB RAM + 256GB ಸ್ಟೋರೇಜ್ ವೇರಿಯಂಟ್ ಆಯ್ಕೆಗಳನ್ನು ಹೊಂದಿದೆ. ಈ ಫೋನ್ ಟ್ರಿಪಲ್ ಕ್ಯಾಮೆರಾ ರಚನೆಯನ್ನು ಹೊಂದಿದ್ದು, ಮುಖ್ಯ ಕ್ಯಾಮೆರಾವು 48 ಮೆಗಾ ಪಿಕ್ಸಲ್ ಸೆನ್ಸಾರ್ ಪಡೆದಿದೆ. ಹಾಗೆಯೇ ಈ ಫೋನ್ 5,000mAh ಬ್ಯಾಟರಿ ಬ್ಯಾಕ್‌ಅಪ್ ಅನ್ನು ಹೊಂದಿದ್ದು, ಅದಕ್ಕೆ ಪೂರಕವಾಗಿ 30W ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಒಳಗೊಂಡಿದೆ. ಇದು 5G ಸಪೋರ್ಟ್ ಪಡೆದಿದೆ.
ಬೆಲೆ ಎಷ್ಟು?
ರಿಯಲ್‌ಮಿ GT ನಿಯೋ 2T ಮತ್ತು ರಿಯಲ್‌ಮಿ Q3s ಈ ಎರಡು ಫೋನ್‌ಗಳು ಮೂರು ವೇರಿಯಂಟ್ ಆಯ್ಕೆಗಳನ್ನು ಪಡೆದಿವೆ. ರಿಯಲ್‌ಮಿ GT ನಿಯೋ 2T ಫೋನಿನ 8GB RAM + 128GB ಸ್ಟೋರೇಜ್ ಆಯ್ಕೆಗೆ CNY 1,899 (ಭಾರತದಲ್ಲಿ ಅಂದಾಜು 22,200ರೂ), 8GB RAM + 256GB ಸ್ಟೋರೇಜ್ ಮಾಡೆಲ್‌ಗೆ CNY 2,099 (ಭಾರತದಲ್ಲಿ ಅಂದಾಜು 24,500ರೂ), ಇನ್ನು 12GB RAM + 256GB ಸ್ಟೋರೇಜ್ ಆಯ್ಕೆಗೆ CNY 2,399 (ಭಾರತದಲ್ಲಿ ಅಂದಾಜು 28,100ರೂ) ಎನ್ನಲಾಗಿದೆ. ಇನ್ನು ಈ ಫೋನ್ ಕಪ್ಪು ಮತ್ತು ಬಿಳಿ ಬಣ್ಣದ ಆಯ್ಕೆಗಳಲ್ಲಿ ಲಭ್ಯ.
ಅದೇ ರೀತಿ ರಿಯಲ್‌ಮಿ Q3s ಫೋನಿನ 6GB RAM + 128GB ವೇರಿಯಂಟ್‌ಗೆ CNY 1,499 (ಭಾರತದಲ್ಲಿ ಅಂದಾಜು 17,500ರೂ), 8GB RAM + 128GB ವೇರಿಯಂಟ್‌ಗೆ CNY 1,599 (ಭಾರತದಲ್ಲಿ ಅಂದಾಜು 18,700ರೂ) ಇನ್ನು 8GB RAM + 256GB ವೇರಿಯಂಟ್ ಬೆಲೆ CNY 1,999 (ಭಾರತದಲ್ಲಿ ಅಂದಾಜು 23,400ರೂ) ಎನ್ನಲಾಗಿದೆ. ಇನ್ನು ಈ ಫೋನ್ ನೀಲಿ ಮತ್ತು ಬಿಳಿ ಬಣ್ಣದ ಆಯ್ಕೆಗಳಲ್ಲಿ ಲಭ್ಯ.


Click it and Unblock the Notifications








